1983 World Cup: ಕಪಿಲ್, ನಾವು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದೇವೆ! 1983ರ ವಿಶ್ವಕಪ್ ಘಟನೆ ನೆನೆದ ಕಿರ್ಮಾನಿ

| Updated By: Digi Tech Desk

Updated on: Dec 24, 2021 | 9:57 AM

1983 World Cup: ಕ್ಯಾಪ್‌ (ಕಪಿಲ್) ನಾನು ಹೇಳುವುದನ್ನು ಆಲಿಸಿ, ನಾವು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದೇವೆ. ಈ ರೀತಿ ನಿಂತು ಸಾಯಬೇಡಿ ಎಂದು ಅವರಿಗೆ ಸ್ಫೂರ್ತಿ ನೀಡಲು ಪ್ರಯತ್ನಿಸಿದೆ.

1983 World Cup: ಕಪಿಲ್, ನಾವು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದೇವೆ! 1983ರ ವಿಶ್ವಕಪ್ ಘಟನೆ ನೆನೆದ ಕಿರ್ಮಾನಿ
ಕಪಿಲ್ ದೇವ್
Follow us on

ಕಪಿಲ್ ದೇವ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು 1983 ರಲ್ಲಿ ತನ್ನ ಮೊದಲ ODI ವಿಶ್ವಕಪ್ ಗೆದ್ದಿತು. ಈ ತಂಡವು ವಿಶ್ವ ಚಾಂಪಿಯನ್ ಆಗಿ ಮರಳುತ್ತದೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ವೆಸ್ಟ್ ಇಂಡೀಸ್‌ನಂತಹ ಶ್ರೇಷ್ಠ ತಂಡಗಳ ಮುಂದೆ ಭಾರತ ಆ ಸಮಯದಲ್ಲಿ ತುಂಬಾ ದುರ್ಬಲವಾಗಿ ಕಾಣುತ್ತಿತ್ತು. ಆದರೆ, ಅಂತಹ ವೆಸ್ಟ್ ಇಂಡೀಸ್ ಅನ್ನು ಭಾರತ ಸೋಲಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಜೊತೆಗೆ ವಿಶ್ವಕಪ್ ಗೆದ್ದುಕೊಂಡಿತು. ಆದಾಗ್ಯೂ ಈ ವಿಶ್ವಕಪ್ ಯಶಸ್ಸಿನ ಕಥೆ ಅಷ್ಟು ಸುಲಭವಲ್ಲ. ಭಾರತ ಹಲವು ಏರಿಳಿತಗಳನ್ನು ಅನುಭವಿಸಿದೆ. ಭಾರತ ಯಾತ್ರೆ ಮುಗಿಯಿತು ಎಂದು ಹಲವು ಬಾರಿ ಅನಿಸಿತ್ತು. ಇಂತಹ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 17 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಆದರೆ, ಅಂದು ನಡೆದದ್ದು ಇಂದಿಗೂ ನೆನಪಿದೆ. ಭಾರತ ತಂಡದ ನಾಯಕ ಕಪಿಲ್ ದೇವ್ ಇಂತಹದೊಂದು ಪವಾಡ ಮಾಡಿದ್ದರು.

ಕಪಿಲ್ ತಂಡವನ್ನು ಅತ್ಯಂತ ಕಠಿಣ ಪರಿಸ್ಥಿತಿಯಿಂದ ಹೊರತಂದು ಅಜೇಯ 175 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಇನ್ನಿಂಗ್ಸ್ ಅನ್ನು ಇಂದಿಗೂ ODI ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅದ್ಭುತವಾದ ಇನ್ನಿಂಗ್ಸ್ ಎಂದು ಕರೆಯಲಾಗುತ್ತದೆ. ತಂಡ ಸಂಕಷ್ಟದಲ್ಲಿದ್ದಾಗ ಕಪಿಲ್ ಜತೆ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಕ್ರೀಸ್​ನಲ್ಲಿದ್ದರು. ಆ ಪಂದ್ಯದಲ್ಲಿ ಮೈದಾನದಲ್ಲಿ ಇಬ್ಬರ ನಡುವೆ ಏನಾಯಿತು ಮತ್ತು ಆ ಅಚ್ಚರಿಯ ಇನ್ನಿಂಗ್ಸ್‌ನಲ್ಲಿ ಕಪಿಲ್ ಹೇಗೆ ಗೆದ್ದರು ಎಂಬುದನ್ನು ಕಿರ್ಮಾನಿ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಚಿತ್ರ ’83 ಕೂಡ 1983 ರ ವಿಶ್ವಕಪ್ ಯಶಸ್ಸಿಗೆ ಹೆಸರುವಾಸಿಯಾಗಿದೆ. ಬುಧವಾರ ಮುಂಬೈನಲ್ಲಿ ಚಿತ್ರದ ಪ್ರಥಮ ಪ್ರದರ್ಶನ ನಡೆಯಿತು.

ವಿಕೆಟ್‌ಗಳು ಬೀಳುತ್ತಿವೆ.. ಕಪಿಲ್ ಬಾತ್‌ರೂಮ್‌ನಲ್ಲಿದ್ದರು
ಭಾರತ ತಂಡ ಬ್ಯಾಟಿಂಗ್‌ಗೆ ಇಳಿದಿತ್ತು. ಬಳಿಕ ಕಪಿಲ್ ಸ್ನಾನಕ್ಕೆ ತೆರಳಿದ್ದರು. ಆದರೆ, ವಿಕೆಟ್‌ಗಳು ವೇಗವಾಗಿ ಬೀಳುತ್ತಿದ್ದವು. ಆಗ ನಾನು ಕಪಿಲ್‌ಗೆ ಹೇಳಿದೆ, “ಕ್ಯಾಪ್ಸ್ (ಕಪಿಲ್ ಅನ್ನು ಆ ಹೆಸರಿನಿಂದ ಕರೆಯಲಾಗುತ್ತದೆ.) ಎರಡು ವಿಕೆಟ್‌ಗಳು ಬಿದ್ದವು. ಇದಕ್ಕೆ ಉತ್ತರಿಸಿದ ಕಪಿಲ್ “ನನ್ನ ಸ್ನಾನ ಮಾಡಲು ಬಿಡು” ಎಂದರು. ತಕ್ಷಣವೇ ಸ್ಕೋರ್ ನಾಲ್ಕು ವಿಕೆಟ್​ಗೆ ಒಂಬತ್ತು ರನ್ ಆಯಿತು, ನಂತರ 17 ರನ್​ಗಳಿಗೆ ಭಾರತದ ಐದು ವಿಕೆಟ್ ಉರುಳಿದವು.

83 ಸಿನಿಮಾದ ಮೊದಲ ಪ್ರದರ್ಶನದ ನಂತರ ಅಂದು ಕಪಿಲ್ ಜತೆ ನಡೆಸಿದ ಚರ್ಚೆಯನ್ನು ಕಿರ್ಮಾನಿ ನೆನಪಿಸಿಕೊಂಡರು. ಮೈದಾನದಲ್ಲಿ ಕಪಿಲ್​ಗೆ ನಾನು ಹೇಳಿದ್ದೇನು ಎಂದರೆ, “ತಲೆ ಬಾಗಿ ನಿಂತಿದ್ದ ಕಪಿಲ್ ಬಳಿ ಹೋಗಿದ್ದೆ. ಅದು 60 ಓವರ್‌ಗಳ ಪಂದ್ಯವಾಗಿತ್ತು. ಇನ್ನೂ 35 ಓವರ್‌ಗಳು ಆಡಲು ಬಾಕಿ ಇದೆ. ನಾನು ಕಪಿಲ್‌ಗೆ ಹೇಳಿದೆ, ‘ಕ್ಯಾಪ್‌ ನಾನು ಹೇಳುವುದನ್ನು ಆಲಿಸಿ, ನಾವು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದೇವೆ. ಈ ರೀತಿ ನಿಂತು ಸಾಯಬೇಡಿ ಎಂದು ಅವರಿಗೆ ಸ್ಫೂರ್ತಿ ನೀಡಲು ಪ್ರಯತ್ನಿಸಿದೆ. ನೀವು ಭಾರತ ತಂಡದಲ್ಲಿ ಅತ್ಯುತ್ತಮ ಹಿಟ್ಟರ್ ಎಂದು ನಾನು ಹೇಳಿದೆ. ನಾನು ಪ್ರತಿ ರನ್ ತೆಗೆದುಕೊಳ್ಳುತ್ತೇನೆ ಮತ್ತು ನಿಮಗೆ ಸ್ಟ್ರೈಕಿಂಗ್ ನೀಡುತ್ತೇನೆ. ನೀವು ಪ್ರತಿ ಚೆಂಡನ್ನು ಹೊಡೆಯಲು ಪ್ರಯತ್ನಿಸುತ್ತೀರಿ ಎಂದೆ. ಆಗ ಕಪಿಲ್ ನನಗೆ ‘ಕಿರಿ ಭಾಯ್, ನಮಗೆ ಇನ್ನೂ 35 ಓವರ್‌ಗಳು ಆಡಲು ಬಾಕಿ ಇದೆ. ನನ್ನ ಪಾಲಿನ ಕೆಲಸ ಮಾಡುತ್ತೇನೆ ಎಂದಿದ್ದರು.

ಕಿರ್ಮಾನಿ ಅಜೇಯರಾಗಿ ಹಿಂತಿರುಗಿದರು
ಇದಾದ ಬಳಿಕ ಕಪಿಲ್ ಅವರ ಬ್ಯಾಟಿಂಗ್ ಇಂದಿಗೂ ನಿದರ್ಶನವಾಗಿದೆ. ಕಪಿಲ್ 175 ರನ್​ಗಳ ಇನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಕಪಿಲ್ ಕೇವಲ 138 ಎಸೆತಗಳನ್ನು ಎದುರಿಸಿ 16 ಬೌಂಡರಿಗಳ ಜೊತೆಗೆ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಭಾರತ ಎಂಟು ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿ ಜಿಂಬಾಬ್ವೆಯನ್ನು 57 ಓವರ್‌ಗಳಲ್ಲಿ 235 ರನ್‌ಗಳಿಗೆ ಸಿಮೀತಗೊಳಿಸಿತು. ರೋಜರ್ ಬಿನ್ನಿ ಕಪಿಲ್ ಜೊತೆ 50 ರನ್ ಜೊತೆಯಾಟ ನಡೆಸಿದರು. ರೋಜರ್ 22 ರನ್ ಗಳಿಸಿದರು. ರವಿಶಾಸ್ತ್ರಿ ಒಂದು ರನ್ ಮಾಡಿ ಔಟಾದರು. ಮದನ್ ಲಾಲ್ ಕಪಿಲ್ ಜೊತೆ 62 ರನ್ ಜೊತೆಯಾಟ ನಡೆಸಿದರು. ಮದನ್ ಲಾಲ್ 17 ರನ್ ಗಳಿಸಿದರು. ತಂಡವು 140 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದರ ನಂತರ ಕಪಿಲ್ ಜೊತೆ ಕಿರ್ಮಾನಿ ಔಟಾಗದೆ ಉಳಿದರು. ಅವರು 56 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 24 ರನ್ ಗಳಿಸಿದರು. ಕಪಿಲ್ ಮತ್ತು ಕಿರ್ಮಾನಿ 126 ರನ್ ಜೊತೆಯಾಟವಾಡಿದರು.

Published On - 8:50 pm, Thu, 23 December 21