
ಚೆನ್ನೈ: ಐಪಿಎಲ್ 2021ರ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರೋಚಕ ಜಯ ದಾಖಲಿಸಿದೆ. ಗೆಲುವಿನ ಸನಿಹಕ್ಕೆ ತಲುಪಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕೊನೆಯ ಹಂತದಲ್ಲಿ ಎಡವಿದೆ.
ಕೋಲ್ಕತ್ತಾ ಪರ ಆರಂಭಿಕರಾದ ನಿತೀಶ್ ರಾಣಾ 57 (47) ಹಾಗೂ ಶುಬ್ಮನ್ ಗಿಲ್ 33 (24) ದಾಖಲಿಸಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕ ತಕ್ಷಣಕ್ಕೆ ಕುಸಿತ ಕಂಡು ಹೀನಾಯ ಸೋಲು ಕಾಣುವಂತಾಗಿದೆ. ಮುಂಬೈ ಪರ ರಾಹುಲ್ ಚಹರ್ 4 ಓವರ್ ಗೆ 27 ರನ್ ನೀಡಿ, 4 ವಿಕೆಟ್ ಕಬಳಿಸಿದ್ದಾರೆ. ಬೋಲ್ಟ್ 2 ವಿಕೆಟ್ ಪಡೆದಿದ್ದಾರೆ.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ಗೆ 153 ಮೊತ್ತದ ಟಾರ್ಗೆಟ್ TV ನೀಡಿತ್ತು. ಕೋಲ್ಕತ್ತಾ ಪರ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರು. ರಸ್ಸೆಲ್ 2 ಓವರ್ ಬೌಲ್ ಮಾಡಿ 15 ರನ್ ನೀಡಿ ಬರೋಬ್ಬರಿ 5 ವಿಕೆಟ್ ಕಬಳಿಸಿದ್ದರು. ಕಮಿನ್ಸ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದರು.
ಮುಂಬೈ ಪರ ಸೂರ್ಯಕುಮಾರ್ ಯಾದವ್ 56 (36) ಹಾಗೂ ನಾಯಕ ರೋಹಿತ್ ಶರ್ಮಾ 43 (32) ಹೊರತುಪಡಿಸಿ ಉಳಿದೆಲ್ಲರೂ ಎರಡಂಕಿ ದಾಟಲು ಪರದಾಡಿದ್ದರು. ಜಾನ್ಸೆನ್, ಬುಮ್ರಾ, ಬೋಲ್ಟ್ ಡಕ್ಗೆ ಔಟ್ ಆಗಿದ್ದರು. ಮುಂಬೈ ದಾಂಡಿಗ ಸಮೂಹ ಪೆವಿಲಿಯನ್ ಪರೇಡ್ ನಡೆಸಿ ಕೋಲ್ಕತ್ತಾಗೆ ಕಡಿಮೆ ಮೊತ್ತದ ಟಾರ್ಗೆಟ್ ನೀಡಿತ್ತು.
ಮುಂಬೈ ಇಂಡಿಯನ್ಸ್ ಈ ಸೀಸನ್ನಿನ ತನ್ನ ಎರಡನೇ ಪಂದ್ಯವನ್ನು 10 ರನ್ಗಳಿಂದ ಗೆದ್ದಿದೆ, ಗೆಲ್ಲಲು 153 ರನ್ ಗಳಿಸಬೇಕಿದ್ದ ಕೆಕೆಅರ್ ನಿಗದಿತ 20 ಓವರ್ಗಳಲ್ಲಿ 142/7 ಗಳಿಸಲು ಮಾತ್ರ ಶಕ್ತವಾಯಿತು
ಟ್ರೆಂಟ್ ಬೌಲ್ಟ್ ಮತ್ತೊಂದು ವಿಕೆಟ್ ಪಡೆದಿದ್ದಾರೆ, ಪ್ಯಾಟ್ ಕಮ್ಮಿನ್ಸ್ ಅವರು ಕ್ಲೀನ್ ಬೌಲ್ಡ್ ಆಗಿದ್ದಾರೆ
ಆಂದ್ರೆ ರಸೆಲ್ ಅವರು ಟ್ರೆಂಟ್ ಬೌಲ್ಟ್ ಅವರಿಗೆ ಕಾಟ್ ಅಂಡ್ ಬೌಲ್ಡ್ ಆಗಿದ್ದಾರೆ, ಕೆಕೆಆರ್ 140/6
ಜಸ್ಪ್ರೀತ್ ಬುಮ್ರಾ ಸಹ ಅದ್ಭುತವಾಗಿ ಬೌಲ್ ಮಾಡಿ 19ನೇ ಓವರ್ನಲ್ಲಿ ಕೇವಲ 4 ರನ್ ನೀಡಿದರು, ಕೊನೆಯ ಓವರ್ನಲ್ಲಿ ಕೆಕೆಆರ್ಗೆ 15 ರನ್ ಬೇಕು
ಕೃಣಾಲ್ ಪಾಂಡೆ 18 ನೇ ಓವರ್ನಲ್ಲಿ ಕೇವಲ 3 ರನ್ ನೀಡಿದರು, ಕೊನೆಯ 12 ಎಸೆತಗಳಲ್ಲಿ ಕೆಕೆಆರ್ಗೆ 18 ರನ್ ಬೇಕು
ಆಂದ್ರೆ ರಸ್ಸೆಲ್ ನೀಡಿದ ಕ್ಯಾಚನ್ನು ಬುಮ್ರಾ ಬಿಟ್ಟಿದ್ದಾರೆ, ಇದು ದುಬಾರಿಯಾಗಬಹುದು
ಕೆಕೆಆರ್ ತಂಡಕ್ಕೆ ಕೊನೆಯ ಮೂರು ಓವರ್ಗಳಲ್ಲಿ 22 ರನ್ ಬೇಕು. ಆಂದ್ರೆ ರಸ್ಸೆಲ್ ಮತ್ತು ದಿನೇಶ್ ಕಾರ್ತಿಕ್ ಆಡುತ್ತಿದ್ದಾರೆ
ಕೋಲ್ಕತ್ತಾಗೆ ಗೆಲ್ಲಲು 24 ಬಾಲ್ಗೆ 30 ರನ್ ಬೇಕಿದೆ. ಕೋಲ್ಕತ್ತಾ 16 ಓವರ್ಗೆ 123 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ಮುಂಬೈ ಪರ ಚಹರ್ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 28 ಬಾಲ್ಗೆ 31 ರನ್ ಬೇಕಾಗಿದೆ. ದಿನೇಶ್ ಕಾರ್ತಿಕ್ ಹಾಗೂ ರಸ್ಸೆಲ್ ಕ್ರೀಸ್ನಲ್ಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಆಟವಾಡಿ ಗೆಲುವು ಸಾಧಿಸುತ್ತದೆ ಎಂಬ ವೇಳೆ ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿ ದಾಂಡಿಗರು ನಿರ್ಗಮಿಸುತ್ತಿದ್ದಾರೆ. ರಾಣಾ ಬಳಿಕ ಶಕೀಬ್ ಅಲ್ ಹಸನ್ ಕೆಟ್ಟ ಶಾಟ್ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಶಕೀಬ್ 9 ಬಾಲ್ಗೆ 9 ರನ್ ನೀಡಿ ನಿರ್ಗಮಿಸಿದ್ದಾರೆ. ಕೃನಾಲ್ ಪಾಂಡ್ಯ ಬಾಲ್ನ್ನು ಸೂರ್ಯಕುಮಾರ್ ಯಾದವ್ ಕ್ಯಾಚ್ ಹಿಡಿದಿದ್ದಾರೆ.
ನಿತೀಶ್ ರಾಣಾ 47 ಬಾಲ್ಗೆ 57 ರನ್ ದಾಖಲಿಸಿ ನಿರ್ಗಮಿಸಿದ್ದಾರೆ. ಚಹರ್ ಎಸೆತಕ್ಕೆ ಕ್ರೀಸ್ ಬಿಟ್ಟು ಹೊಡೆಯಲು ಬಂದ ರಾಣಾರನ್ನು ಡಿ ಕಾಕ್ ಸ್ಟಂಪ್ ಔಟ್ ಮಾಡಿದ್ದಾರೆ. ಚಹರ್ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸದ್ಯ, ಕೋಲ್ಕತ್ತಾ ಮೊತ್ತ 15 ಓವರ್ಗೆ 122 ಆಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ 14 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 113 ರನ್ ದಾಖಲಿಸಿದೆ. ರಾಣಾ ಅರ್ಧಶತಕ ಬಾರಿಸಿ ಕ್ರೀಸ್ನಲ್ಲಿದ್ದಾರೆ. ಶಕೀಬ್ ಅಲ್ ಹಸನ್ ಕೂಡ ಬ್ಯಾಟ್ ಮಾಡುತ್ತಿದ್ದಾರೆ. ಚಹರ್ ಹೊರತಾಗಿ ಉಳಿದ ಬೌಲರ್ಗಳು ವಿಕೆಟ್ ಪಡೆಯಲು ವಿಫಲರಾಗುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 13 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ. ತಂಡ ಗೆಲ್ಲಲು 42 ಬಾಲ್ಗೆ 49 ರನ್ ಬೇಕಾಗಿದೆ. ರಾಣಾ ಜೊತೆ ಶಕೀಬ್ ಅಲ್ ಹಸನ್ ಕ್ರೀಸ್ನಲ್ಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಇಯಾನ್ ಮೋರ್ಗನ್ ಚಹರ್ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಣಾ ಅರ್ಧಶತಕದ ಸಂಭ್ರಮದ ಬೆನ್ನಲ್ಲೇ ಮೋರ್ಗನ್ ಔಟ್ ಆಗಿದ್ದಾರೆ. 7 ಬಾಲ್ಗೆ 7 ರನ್ ಪೇರಿಸಿ, ಜಾನ್ಸೆನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಿತೀಶ್ ರಾಣಾ ಅರ್ಧಶತಕ ದಾಖಲಿಸಿದ್ದಾರೆ. 40 ಬಾಲ್ಗೆ 2 ಸಿಕ್ಸರ್, 6 ಬೌಂಡರಿ ಸಹಿತ 51 ರನ್ ಕಲೆಹಾಕಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 12 ಓವರ್ಗಳ ಅಂತ್ಯ್ಕಕೆ 2 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿದೆ. ಕೋಲ್ಕತ್ತಾ ಪರ ನಾಯಕ ಮಾರ್ಗನ್ ಹಾಗೂ ರಾಣಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೋಲ್ಕತ್ತಾಗೆ ಗೆಲ್ಲಲು 48 ಬಾಲ್ಗೆ 56 ರನ್ ಬೇಕಿದೆ. ರಾಣಾ 45 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿ ಇದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 11 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 85 ರನ್ ದಾಖಲಿಸಿದೆ. ಕೋಲ್ಕತ್ತಾ ಪರ ರಾಣಾ ಹಾಗೂ ನಾಯಕ ಮೋರ್ಗನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ದಾಂಡಿಗ ರಾಹುಲ್ ತ್ರಿಪಾಠಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. 5 ಬಾಲ್ಗೆ 5 ರನ್ ಗಳಿಸಿ ರಾಹುಲ್ ನಿರ್ಗಮಿಸಿದ್ದಾರೆ. ಈ ಮೂಲಕ ಕೋಲ್ಕತ್ತಾದ 2ನೇ ವಿಕೆಟ್ ನಷ್ಟವಾಗಿದೆ. ಎರಡೂ ವಿಕೆಟ್ಗಳನ್ನು ರಾಹುಲ್ ಚಹರ್ ಪಡೆದಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ 9 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 73 ರನ್ ದಾಖಲಿಸಿದೆ. ಕೋಲ್ಕತ್ತಾ ಪರ ಆರಂಭಿಕ ನಿತೀಶ್ ರಾಣಾ ಹಾಗೂ ಈಗ ಬಂದ ತ್ರಿಪಾಠಿ ಬ್ಯಾಟ್ ಮಾಡುತ್ತಿದ್ದಾರೆ. ಕೋಲ್ಕತ್ತಾ ಗೆಲ್ಲಲು 66 ಬಾಲ್ಗೆ 80 ರನ್ ಬೇಕಿದೆ.
ಕೋಲ್ಕ್ತತಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್ ಗಿಲ್ 24 ಬಾಲ್ಗೆ 33 ರನ್ ಗಳಿಸಿ ಚಹರ್ಗೆ ವಿಕೆಟ್ ಒಪ್ಪಿಸಿದ್ದಾರೆ. ಚಹರ್ ಎಸೆತವನ್ನು ಸಿಕ್ಸರ್ಗೆ ಎತ್ತಿದ ಗಿಲ್, ಪೊಲಾರ್ಡ್ಗೆ ಕ್ಯಾಚ್ ನೀಡಿದ್ದಾರೆ.
ಕೋಲ್ಕತ್ತಾ ಪರ ನಿತೀಶ್ ರಾಣಾ ಅಬ್ಬರದ ಆಟಕ್ಕೆ ಮುಂದಾಗಿದ್ದಾರೆ. ಪೊಲಾರ್ಡ್ ಓವರ್ನ ಸತತ ಎರಡು ಬಾಲ್ಗಳನ್ನು ಸಿಕ್ಸರ್ ಹಾಗೂ ಫೋರ್ ಬಾರಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 8 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 62 ರನ್ ದಾಖಲಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ 7 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 50 ರನ್ ಕಲೆಹಾಕಿದೆ. ಕೋಲ್ಕತ್ತಾ ಗೆಲುವಿಗೆ 78 ಬಾಲ್ಗೆ 103 ರನ್ ಬೇಕಾಗಿದೆ. ಯಾವುದೇ ಅವಸರವಿಲ್ಲದ ಸುಲಭ ಆಟವನ್ನು ಕೋಲ್ಕತ್ತಾ ಆಡುತ್ತಿದ್ದು ಗೆಲ್ಲುವ ನಿರೀಕ್ಷೆಗಳು ದಟ್ಟವಾಗಿದೆ.
ಪವರ್ ಪ್ಲೇ ಅಂತ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ನಷ್ಟವಿಲ್ಲದೆ 45 ರನ್ ಕಲೆಹಾಕಿದೆ. ಕೋಲ್ಕತ್ತಾ ಪರ ರಾಣಾ 24 (21) ಹಾಗೂ ಗಿಲ್ 20 (16) ಬಾಲ್ ಆಟವಾಡುತ್ತಿದ್ದಾರೆ. ಕೋಲ್ಕತ್ತಾಗೆ ಗೆಲ್ಲಲು 84 ಬಾಲ್ಗೆ 108 ರನ್ ಬೇಕಿದೆ.
ಇನ್ನಿಂಗ್ಸ್ ಮುಗಿಸಿರುವ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ಗೆ 153 ರನ್ಗಳ ಗುರಿ ನೀಡಿದೆ.
ರಸ್ಸೆಲ್ ಮತ್ತೊಂದು ವಿಕೆಟ್ ಕಿತ್ತುಕೊಂಡು ಮ್ಯಾಜಿಕ್ ಮಾಡಿದ್ದಾರೆ. 2 ಓವರ್ ಎಸೆದ ರಸ್ಸೆಲ್ 15 ರನ್ ನೀಡಿ ಬರೋಬ್ಬರಿ 5 ವಿಕೆಟ್ ಕಬಳಿಸಿದ್ದಾರೆ.
ಬುಮ್ರಾ ಬಂದಂತೆ ಹೋಗಿದ್ದಾರೆ. ರಸ್ಸೆಲ್ ಈ ಪಂದ್ಯದಲ್ಲಿ ಎರಡನೇ ಬಾರಿಗೆ ಸತತ 2 ವಿಕೆಟ್ ಒಟ್ಟೊಟ್ಟಿಗೆ ಪಡೆದುಕೊಂಡಿದ್ದಾರೆ. ಮುಂಬೈ ಪರ ಅತ್ಯುತ್ತಮ ಪ್ರದರ್ಶನ ತೋರಿದ ರಸ್ಸೆಲ್ 4 ವಿಕೆಟ್ ಕಿತ್ತಿದ್ದಾರೆ.
ರಸ್ಸೆಲ್ ಮತ್ತೊಂದು ವಿಕೆಟ್ ಕಿತ್ತುಕೊಂಡಿದ್ದಾರೆ. ಕೃನಾಲ್ ಪಾಂಡ್ಯ 9 ಬಾಲ್ಗೆ 15 ರನ್ ಗಳಿಸಿ ನಿರ್ಗಮಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 19 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 142 ರನ್ ಕಲೆಹಾಕಿದೆ. ಮುಂಬೈ ಪರ ಕೃನಾಲ್ ಹಾಗೂ ಚಹರ್ ಬ್ಯಾಟ್ ಬೀಸುತ್ತಿದ್ದಾರೆ. ಕೋಲ್ಕತ್ತಾ ಉತ್ತಮ ಬೌಲಿಂಗ್ ಮೂಲಕ ಮುಂದಿನ ಇನ್ನಿಂಗ್ಸ್ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡ 18 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 130 ರನ್ ಕಲೆಹಾಕಿದ್ದಾರೆ. ಕೋಲ್ಕತ್ತಾ ಪರ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹರ್ಭಜನ್ ಸಿಂಗ್, ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ ಉಳಿದ ಎಸೆತಗಾರರು 6ಕ್ಕಿಂತ ಕಡಿಮೆ ಎಕನಮಿಯಲ್ಲಿ ಬಾಲ್ ಮಾಡಿದ್ದಾರೆ. ರಸ್ಸೆಲ್, ಕಮಿನ್ಸ್ ತಲಾ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದಿದ್ದಾರೆ.
ಜಾನ್ಸೆನ್ ಮೊದಲ ಎಸೆತವನ್ನು ಮೇಲಕ್ಕೆ ಬಾರಿಸಿ ಕ್ಯಾಚ್ ನೀಡಿ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ರಸೆಲ್ ಸತತ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಮುಂಬೈ ಪರ ಕೃನಾಲ್ ಪಾಂಡ್ಯಗೆ, ಚಹರ್ ಜೊತೆಯಾಗಿದ್ದಾರೆ.
ಮುಂಬೈ ತಂಡದಲ್ಲಿ ಯಾವುದೇ ಚೇತರಿಕೆಯ ಆಟ ಕಂಡುಬರುತ್ತಿಲ್ಲ. ಪೊಲಾರ್ಡ್ ಕೂಡ ಬಂದಂತೆಯೇ ಔಟ್ ಆಗಿದ್ದಾರೆ. 17. 2 ಓವರ್ಗೆ ಮುಂಬೈ 125 ರನ್ಗೆ 6 ವಿಕೆಟ್ ಕಳೆದುಕೊಂಡಿದೆ. ರಸ್ಸೆಲ್ ಎಸೆತವನ್ನು ಕೀಪರ್ ಕಾರ್ತಿಕ್ಗೆ ಕ್ಯಾಚ್ ನೀಡಿ ಪೊಲಾರ್ಡ್ ಔಟ್ ಆಗಿದ್ದಾರೆ. ಪೊಲಾರ್ಡ್ 8 ಬಾಲ್ಗೆ 5 ರನ್ ಬಾರಿಸಿ ನಿರ್ಗಮಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 7 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 125 ರನ್ ದಾಖಲಿಸಲಷ್ಟೇ ಶಕ್ತವಾಗಿದೆ. ರೋಹಿತ್ ಹಾಗೂ ಹಾರ್ದಿಕ್ ಪಾಂಡ್ಯ ಔಟಾದ ಬಳಿಕ, ರಸ್ಸೆಲ್ ಹಾಗೂ ಕೃನಾಲ್ ಪಾಂಡ್ಯ ಕ್ರೀಸ್ಗೆ ಇಳಿದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಮೇಲಿಂದ ಮೇಲೆ ಏಟು ಬೀಳುತ್ತಿದೆ. ನೀರಸ ಆಟ ತೋರುತ್ತಿರುವ ಮುಂಬೈ ಇಂಡಿಯನ್ಸ್ನ ಮತ್ತೊಂದು ವಿಕೆಟ್ ಪತನವಾಗಿದೆ. ಮುಂಬೈ ಪರ ದಾಂಡಿಗ ಹಾರ್ದಿಕ್ ಪಾಂಡ್ಯ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದ್ದಾರೆ. ಅವರು 17 ಬಾಲ್ಗೆ 15 ರನ್ ಬಾರಿಸಿ ನಿರ್ಗಮಿಸಿದ್ದಾರೆ.
ಆರಂಭಿಕರಾಗಿ ಆಗಮಿಸಿದ ರೋಹಿತ್ ಶರ್ಮಾ 15 ಓವರ್ಗಳ ವರೆಗೆ ಆಟವಾಡಿ, 43 ರನ್ ದಾಖಲಿಸಿ ಔಟ್ ಆಗಿದ್ದಾರೆ. ಕಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ. ಮೇಲಿಂದ ಮೇಲೆ ವಿಕೆಟ್ ಪತನವಾಗುತ್ತಿರುವ ಕಾರಣ ಮುಂಬೈ ಇಂಡಿಯನ್ಸ್ ಸುಸ್ತಾಗಿದೆ. ವಿಕೆಟ್ ಉಳಿಸಿಕೊಂಡು ರನ್ ಮೊತ್ತ ಸುಧಾರಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡ 15 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 114 ರನ್ ದಾಖಲಿಸಿದೆ. ನಾಯಕ ರೋಹಿತ್ ಶರ್ಮಾ 43 ರನ್ ಗಳಿಸಿ ಆಡುತ್ತಿದ್ದಾರೆ. ನಿಧಾನ ಗತಿಯ ಆಟವನ್ನು ಮುಂಬೈ ನೆಚ್ಚಿಕೊಂಡಿದ್ದು, ಯಾವುದೇ ಭರ್ಜರಿ ಪ್ರದರ್ಶನ ಕಂಡುಬರುತ್ತಿಲ್ಲ.
ಮುಂಬೈ ಇಂಡಿಯನ್ಸ್ ತಂಡ 14 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿದೆ. ತಂಡದ ಪರ ರೋಹಿತ್ ಶರ್ಮಾ 36 (27) ಹಾಗೂ ಹಾರ್ದಿಕ್ ಪಾಂಡ್ಯ 9 (12) ಕಣದಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ಕೊನೆಯ ಓವರ್ನಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದೆ. ಪ್ರಸಿದ್ಧ್ ಕೃಷ್ಣ ಎಸೆತವನ್ನು ರೋಹಿತ್ ಶರ್ಮಾ ಸಿಕ್ಸರ್ಗೆ ಎತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ಬೆನ್ನುಬೆನ್ನಿಗೆ 2 ವಿಕೆಟ್ ಕಳೆದುಕೊಂಡು ರನ್ ವೇಗ ಕಡಿಮೆ ಮಾಡಿಕೊಂಡಿದೆ. 12 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 91 ರನ್ ದಾಖಲಿಸಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಆಟವಾಡುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್ ಬಳಿಕ ಕ್ರೀಸ್ಗೆ ಇಳಿದ ಇಶಾನ್ ಕಿಶನ್ ಕೂಡ ಔಟ್ ಆಗಿದ್ದಾರೆ. 3 ಬಾಲ್ಗೆ 1 ರನ್ ಅಷ್ಟೇ ನೀಡಿ ನಿರ್ಗಮಿಸಿದ್ದಾರೆ. ಕಮಿನ್ಸ್ ಬಾಲ್ಗೆ ಪ್ರಸಿದ್ಧ್ ಕೃಷ್ಣ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ದಾರೆ.
11 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದುಕೊಂಡು 88 ರನ್ ದಾಖಲಿಸಿದೆ. ಮುಂಬೈ ಪರ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಆಟವಾಡುತ್ತಿದ್ದಾರೆ.
ಶಕೀಬ್ ಅಲ್ ಹಸನ್ ಎಸೆತವನ್ನು ಸಿಕ್ಸರ್ಗೆ ಎತ್ತಲು ಹೊರಟ ಸೂರ್ಯಕುಮಾರ್ ಯಾದವ್, ಶುಬ್ಮನ್ ಗಿಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಯಾದವ್ 36 ಬಾಲ್ಗೆ 56 ರನ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಇಶಾನ್ ಕಿಶನ್, ರೋಹಿತ್ ಶರ್ಮಾಗೆ ಜೊತೆಯಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 10 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 81 ರನ್ಗಳ ಮೊತ್ತ ದಾಖಲಿಸಿದೆ. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಕ್ರೀಸ್ನಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ಕಮಿನ್ಸ್ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ದಾಖಲಿಸಿದ್ದಾರೆ. ಅವರು 33 ಬಾಲ್ನಲ್ಲಿ 50 ರನ್ ಪೇರಿಸಿದ್ದಾರೆ. ಇದರಲ್ಲಿ 2 ಸಿಕ್ಸರ್ 6 ಬೌಂಡರಿ ಸೇರಿದೆ.
ಮುಂಬೈ ಇಂಡಿಯನ್ಸ್ ತಂಡ 8 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 64 ರನ್ ಕಲೆಹಾಕಿದೆ. ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟ ಆರಂಭಿಸಿದ್ದಾರೆ. ಅವರು 27 ಬಾಲ್ಗೆ 40 ರನ್ ಕೂಡಿಸಿದ್ದಾರೆ. 1 ಸಿಕ್ಸರ್, 6 ಬೌಂಡರಿ ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಹಾಗೂ ರೋಹಿತ್ ಶರ್ಮಾ ಅರ್ಧಶತಕದ ಜೊತೆಯಾಟ ನೀಡಿದ್ದಾರೆ.
7 ಓವರ್ ಅಂತ್ಯಕ್ಕೆ ಮುಂಬೈ ತಂಡ 1 ವಿಕೆಟ್ ನಷ್ಟಕ್ಕೆ 48 ರನ್ ಸಂಪಾದಿಸಿದೆ. ಮುಂಬೈ ಪರ ರೋಹಿತ್ ಶರ್ಮಾ 15 ಬಾಲ್ 20 ಹಾಗೂ ಸೂರ್ಯಕುಮಾರ್ ಯಾದವ್ 22 ಬಾಲ್ 25 ರನ್ ಪೇರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 6 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 42 ರನ್ ಕಲೆಹಾಕಿದೆ. ಕೊನೆಯ ಓವರ್ನ್ನು ವೇಗಿ ಕಮಿನ್ಸ್ ಬೌಲ್ ಮಾಡಿದ್ದಾರೆ. 6 ಓವರ್ ಮೂಲಕ ಪವರ್ಪ್ಲೇ ಮುಕ್ತಾಯವಾಗಿದೆ. ಮುಂಬೈ ನಿಧಾನ ಆಟ ಆಡುತ್ತಿದೆ.
ಮುಂಬೈ ಇಂಡಿಯನ್ಸ್ 5 ಓವರ್ಗಳ ಅಂತ್ಯಕ್ಕೆ 37 ರನ್ ಕಲೆಹಾಕಿದೆ. ಆರಂಭಿಕವಾಗಿ ಡಿ ಕಾಕ್ ಔಟ್ ಆದ ಬಳಿಕ ಮುಂಬೈ ನಿಧಾನ ಗತಿಯ ಆಟವನ್ನು ನೆಚ್ಚಿಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡ 4 ಓವರ್ಗೆ 1 ವಿಕೆಟ್ ಕಳೆದುಕೊಂಡು 28 ರನ್ ದಾಖಲಿಸಿದೆ. ಮುಂಬೈ ಪರ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಕಣದಲ್ಲಿದ್ದಾರೆ. ಕೋಲ್ಕತ್ತಾ ಪರ ಕೊನೆಯ ಓವರ್ನ್ನು ಶಕೀಬ್ ಅಲ್ ಹಸನ್ ಬೌಲ್ ಮಾಡಿದ್ದಾರೆ. ಕೋಲ್ಕತ್ತಾ ಪರ ಸ್ಪಿನ್ನರ್ಗಳು ಬೌಲಿಂಗ್ ಆರಂಭಿಸಿದ್ದಾರೆ.
ಕೋಲ್ಕತ್ತಾ ಪರ ಮೂರನೇ ಓವರ್ ಎಸೆದ ಹರ್ಭಜನ್ ಸಿಂಗ್ 3 ಬೌಂಡರಿ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಮುಂಬೈ ಮೊತ್ತ 3 ಓವರ್ಗೆ 1 ವಿಕೆಟ್ ಕಳೆದುಕೊಂಡು 24 ರನ್ ಆಗಿದೆ. ಸೂರ್ಯಕುಮಾರ್ ಯಾದವ್ ಕ್ರೀಸ್ನಲ್ಲಿದ್ದಾರೆ.
ವರುಣ್ ಚಕ್ರವರ್ತಿ ಎಸೆತವನ್ನು ಸಿಕ್ಸರ್ಗೆ ಅಟ್ಟಲು ಯತ್ನಸಿದ ಡಿ ಕಾಕ್ ತ್ರಿಪಾಠಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 6 ಬಾಲ್ಗೆ 2 ರನ್ ನೀಡಿ ನಿರ್ಗಮಿಸಿದ್ದಾರೆ.
2 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 10 ರನ್ ಕಲೆಹಾಕಿ ಮುಖ್ಯ 1 ವಿಕೆಟ್ ಕಳೆದುಕೊಂಡಿದೆ. ಮುಂಬೈ ಪರ ನಾಯಕ ರೋಹಿತ್ ಹಾಗೂ ವಿಕೆಟ್ ಕೀಪರ್ ಡಿ ಕಾಕ್ ಬ್ಯಾಟ್ ಬೀಸುತ್ತಿದ್ದರು. 2ನೇ ಓವರ್ನ ಕೊನೆಯ ಎಸೆತದಲ್ಲಿ ವರುಣ್ ಚಕ್ರವರ್ತಿಗೆ ಡಿ ಕಾಕ್ ವಿಕೆಟ್ ಒಪ್ಪಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ ಮೊದಲ ಬೌಂಡರಿ ಸಿಡಿಸಿದ್ದಾರೆ. ಎರಡನೇ ಓವರ್ನ ಮೊದಲ ಎಸೆತವನ್ನು ಫೋರ್ ಬಾರಿಸಿದ್ದಾರೆ. ವರುಣ್ ಚಕ್ರವರ್ತಿ ಬೌಲಿಂಗ್ ಮಾಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮಾ, ಡಿ ಕಾಖ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಹರ್ಭಜನ್ ಸಿಂಗ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ. 1 ಓವರ್ನ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ ಮುಂಬೈ 3 ರನ್ ಕಲೆಹಾಕಿದೆ.
ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯೊನ್ ಮೋರ್ಗಾನ್ (ನಾಯಕ), ಆಂಡ್ರೆ ರಸ್ಸೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ
ಕೋಲ್ಕತ್ತಾ ಭಾನುವಾರ ಸನ್ರೈಸರ್ಸ್ ವಿರುದ್ಧದ ತಂಡವನ್ನೇ ಇಂದೂ ಉಳಿಸಿಕೊಂಡಿದೆ. ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ಶಕೀಬ್ ಅಲ್ ಹಸನ್ ಇಂದು ಕೋಲ್ಕತ್ತಾ ಪರ 50ನೇ ಪಂದ್ಯ ಆಡುತ್ತಿದ್ದಾರೆ.
ಮುಂಬೈ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯಾಟ 7.30ಕ್ಕೆ ಆರಂಭವಾಗಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡಲಿದೆ. ಇದಕ್ಕೂ ಮೊದಲಿನ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳು ಬೌಲ್ ಮಾಡಲು ಒಲವು ತೋರಿವೆ. ಇಂದೂ ಹಾಗೇ ಆಗಿದೆ.
ಕೋಲ್ಕತ್ತಾ ಹಾಗೂ ಮುಂಬೈ ನಡುವಿನ ಇದುವರೆಗೆ ಆಡಿದ ಪಂದ್ಯಾಟಗಳ ಪೈಕಿ, ಮುಂಬೈ ಇಂಡಿಯನ್ಸ್ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಮುಂಬೈ 21 ಸಲ ಗೆಲುವು ಸಾಧಿಸಿದ್ದರೆ, ಕೋಲ್ಕತ್ತಾ ತಂಡ ಕೇವಲ 6 ಬಾರಿ ಗೆದ್ದಿದೆ. ಇಂದಿನ ಗೆಲುವು ಯಾರಿಗೆ?
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಾಟಕ್ಕೆ ಚೆನ್ನೈನ ಎಮ್.ಎ. ಚಿದಂಬರಂ ಕ್ರೀಡಾಂಗಣ ಸಿದ್ಧವಾಗಿದೆ..
Published On - 11:24 pm, Tue, 13 April 21