RCB vs KKR Postponed: ಆರ್​ಸಿಬಿ vs ಕೆಕೆಆರ್​; ಕೊವಿಡ್ ಭೀತಿಯ ಕಾರಣ ಇಂದಿನ ಐಪಿಎಲ್ ಪಂದ್ಯ ಮುಂದೂಡಿಕೆ ಸಾಧ್ಯತೆ

| Updated By: Digi Tech Desk

Updated on: May 03, 2021 | 1:16 PM

IPL 2021 Today's Match: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಗಳ ನಡುವೆ ಇಂದು ನಡೆಯಬೇಕಿದ್ದ ಐಪಿಎಲ್ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆಯಿದೆ.

RCB vs KKR Postponed: ಆರ್​ಸಿಬಿ vs ಕೆಕೆಆರ್​; ಕೊವಿಡ್ ಭೀತಿಯ ಕಾರಣ ಇಂದಿನ ಐಪಿಎಲ್ ಪಂದ್ಯ ಮುಂದೂಡಿಕೆ ಸಾಧ್ಯತೆ
RCB VS KKR
Follow us on

RCB vs KKR: ಬಯೋ ಬಬಲ್​ನಲ್ಲಿ ಇರುವ ಓರ್ವ ಕ್ರಿಕೆಟ್ ಆಟಗಾರನಿಗೆ ಕೊವಿಡ್ ಸೋಂಕು ದೃಢಪಟ್ಟಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಇಂದು (ಮೇ 3) ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ನಡುವಿನ ಇಂದಿನ ಐಪಿಎಲ್ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಬೇಕಿತ್ತು.

ಕೋಟ್ಯಂತರ ಕ್ರಿಕೆಟ್ ಪ್ರಿಯರ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳ ನಡುವೆ ಸೋಮವಾರ (ಮೇ 3) ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯು (Board of Control for Cricket in India – BCCI) ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಐಪಿಎಲ್ 2021ರ ಸರಣಿಯ 30ನೇ ಪಂದ್ಯವಾಗಿತ್ತು.

ಬಿಸಿಸಿಐ ಈ ನಿರ್ಧಾರಕ್ಕೆ ಬರಲು ಏನು ಕಾರಣ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ ಕೆಕೆಆರ್ ತಂಡದಲ್ಲಿ ಆಟಗಾರರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಇಂದಿನ ಪಂದ್ಯವನ್ನು ಮುಂದೂಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಕ್ರಿಕ್​ಬಜ್ ಜಾಲತಾಣ ವರದಿ ಮಾಡಿದೆ. ಗಾಯಗಳಿಗೆ ಚಿಕಿತ್ಸೆ ಪಡೆಯಲು, ಸ್ಕ್ಯಾನಿಂಗ್ ಮಾಡಿಸಲು ಹೊರಗೆ ಹೋಗಿದ್ದಾಗ ಇವರಿಬ್ಬರಿಗೂ ಸೋಂಕು ಬಂದಿರಬಹುದು ಎಂದು ಹೇಳಲಾಗಿದೆ. ಪಂದ್ಯವನ್ನು ಮುಂದೂಡುವ ಸಂಬಂಧ ಬಿಸಿಸಿಐ ಶೀಘ್ರದಲ್ಲಿಯೇ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಬಿಸಿಸಿಐ ಕಚೇರಿಯಿಂದ ಗುಜರಾತ್ ಕ್ರಿಕೆಟ್ ಮಂಡಳಿಗೆ (Gujarat Cricket Association – GCA) ಈ ಸಂಬಂಧ ಮಾಹಿತಿ ಹೋಗಿದೆ. ಪಂದ್ಯವನ್ನು ಬೇರೊಂದು ದಿನ ಆಯೋಜಿಸುವ ಬಗ್ಗೆ ಸೋಮವಾರ ಮಧ್ಯಾಹ್ನ ತಿಳಿಸಲಾಗುವುದು ಎಂದು ಜಿಸಿಎ ಸದಸ್ಯರು ಹೇಳಿದ್ದಾರೆ.

ಏಳು ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಎರಡು ಪಂದ್ಯಗಳಲ್ಲಿ ಜಯಗಳಿಸಿರುವ ಕೊಲ್ಕತ್ತಾ ನೈಟ್ ರೈರ್ಡಸ್​​ ತಂಡವು 7ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಆಟಗಾರರ ವರ್ಗಾವಣೆ.. ಯಾವ್ಯಾವ ತಂಡದಿಂದ ಎಷ್ಟು ಆಟಗಾರರು ರೇಸ್​ನಲ್ಲಿದ್ದಾರೆ ಗೊತ್ತಾ?

ಇದನ್ನೂ ಓದಿ: IPL 2021: ವಾರ್ನರ್​ಗೆ ಮುಖಭಂಗ! ಮೊದಲು ನಾಯಕತ್ವದಿಂದ ಕೆಳಗಿಳಿಸಿದರು.. ಈಗ ತಂಡದಿಂದಲೇ ಗೇಟ್​ ಪಾಸ್

(KKR vs RCB IPL match has been Cancelled after a couple of KKR players tested positive)

Published On - 12:17 pm, Mon, 3 May 21