ಎಬಿಡಿಯೊಂದಿಗೆ ಅನನ್ಯ ಸ್ನೇಹವನ್ನು ಆನಂದಿಸುತ್ತಿರುವ ಕೊಹ್ಲಿ

|

Updated on: Oct 01, 2020 | 6:48 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಆಡುವ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಎ ಬಿ ಡಿ ವಿಲಿಯರ್ಸ್ ನಡುವಿನ ಸ್ನೇಹ ಮತ್ತು ಬಾಂಧವ್ಯ ಇಂದು ನಿನ್ನೆಯದಲ್ಲ, ಸುಮಾರು ಒಂದು ದಶಕದ ಅವಧಿಯಿಂದ ಜಾರಿಯಲ್ಲಿರುವ ಅವಿನಾಭಾವ ಸಂಬಂಧವದು. ಅವರಿಬ್ಬರು ಬೆಂಗಳೂರು ತಂಡಕ್ಕೆ 2011 ರಿಂದ ಆಡುತ್ತಿದ್ದಾರೆ. ಐಪಿಎಲ್​ನಲ್ಲಿ ಆರ್​ಸಿಬಿ ಎರಡು ಬಾರಿ ಫೈನಲ್ ತಲುಪಿದೆ ಮತ್ತು ಕೊಹ್ಲಿ–ಎಬಿಡಿ ಮಧ್ಯೆ ಮೈದಾನದಲ್ಲಿ ಹಲವಾರು ಯಶಸ್ವೀ ಜೊತೆಯಾಟಗಳು ಬಂದಿವೆಯಾದರೂ ಈ ಚಾಂಪಿಯನ್ ಬ್ಯಾಟ್ಸ್​ಮನ್​ಗಳು ಟೀಮಿಗೆ ಪ್ರಶಸ್ತಿ ಗೆದ್ದುಕೊಡಲು ವಿಫಲರಾಗಿದ್ದಾರೆ. ಈ […]

ಎಬಿಡಿಯೊಂದಿಗೆ ಅನನ್ಯ ಸ್ನೇಹವನ್ನು ಆನಂದಿಸುತ್ತಿರುವ ಕೊಹ್ಲಿ
Follow us on

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಆಡುವ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಎ ಬಿ ಡಿ ವಿಲಿಯರ್ಸ್ ನಡುವಿನ ಸ್ನೇಹ ಮತ್ತು ಬಾಂಧವ್ಯ ಇಂದು ನಿನ್ನೆಯದಲ್ಲ, ಸುಮಾರು ಒಂದು ದಶಕದ ಅವಧಿಯಿಂದ ಜಾರಿಯಲ್ಲಿರುವ ಅವಿನಾಭಾವ ಸಂಬಂಧವದು. ಅವರಿಬ್ಬರು ಬೆಂಗಳೂರು ತಂಡಕ್ಕೆ 2011 ರಿಂದ ಆಡುತ್ತಿದ್ದಾರೆ.

ಐಪಿಎಲ್​ನಲ್ಲಿ ಆರ್​ಸಿಬಿ ಎರಡು ಬಾರಿ ಫೈನಲ್ ತಲುಪಿದೆ ಮತ್ತು ಕೊಹ್ಲಿಎಬಿಡಿ ಮಧ್ಯೆ ಮೈದಾನದಲ್ಲಿ ಹಲವಾರು ಯಶಸ್ವೀ ಜೊತೆಯಾಟಗಳು ಬಂದಿವೆಯಾದರೂ ಈ ಚಾಂಪಿಯನ್ ಬ್ಯಾಟ್ಸ್​ಮನ್​ಗಳು ಟೀಮಿಗೆ ಪ್ರಶಸ್ತಿ ಗೆದ್ದುಕೊಡಲು ವಿಫಲರಾಗಿದ್ದಾರೆ. ಈ ವೈಫಲ್ಯ ಅವರಿಬ್ಬರನ್ನು ಸದಾ ಕಾಡುತ್ತಿರಬಹುದು. ಪ್ರತಿಸಲ ಅವರು ಟ್ರೋಫಿ ಗೆಲ್ಲುವ ಛಲ ತೊಡುತ್ತಾರೆ ಆದರೆ ಗುರಿ ಮಾತ್ರ ಇನ್ನೂ ಮರೀಚಿಕೆಯಾಗಿದೆ.

ಕೊವಿಡ್-19 ಸೋಂಕಿನಿಂದ ಇಡೀ ಪ್ರಪಂಚವೇ ತತ್ತರಿಸಿರುವ ಪ್ರಸಕ್ತ ವರ್ಷದಲ್ಲಿ ಈಗಾಗಲೇ ಆರಂಭವಾಗಿರುವ ಕ್ರೀಡಾ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುತ್ತಿವೆ, ಮೈದಾನಗಳಲ್ಲಿ ಪ್ರೇಕ್ಷಕರಿಲ್ಲವೆನ್ನುವುದು ಬೇರೆ ಮಾತು. ಆದರೆ ಫ್ರೆಂಚ್ ಓಪನ್ ಟೂರ್ನಿಯಲ್ಲಿ ವಿರಳ ಸಂಖ್ಯೆಯ ನೋಡುಗರಿಗೆ ಅವಕಾಶ ಕಲ್ಪಿಸಲಾಗಿದೆ. ಇಂಥ ಹಿನ್ನೆಲೆಯಲ್ಲಿ ಈ ಮಾಂತ್ರಿಕ ಬ್ಯಾಟ್ಸ್​ಮನ್​ಗಳು ಆರ್​ಸಿಬಿಗೆ 13ನೇ ಅವೃತಿಯ ಪ್ರಶಸ್ತಿ ಗೆದ್ದುಕೊಡುವರೆ ಎಂಬ ನಿರೀಕ್ಷೆ ದಟ್ಟವಾಗಿದೆ.

ಕೊಹ್ಲಿ ಮತ್ತು ಎಬಿಡಿಗೆ ಅದು ಸಾಧ್ಯವಾಗಬಹುದು ಇಲ್ಲವೇ ಪುನಃ ನಿರಾಶೆ ಎದುರಾದರೂ ಆಶ್ಚರ್ಯಪಡಬೇಕಿಲ್ಲ. ಯಾಕೆಂದರೆ, ಕ್ರಿಕೆಟ್ ಯಾವತ್ತಿಗೂ ಅಮೋಘ ಅನಿಶ್ಚಿತತೆಗಳ ಆಟ, ಇಲ್ಲಿ ಭವಿಷ್ಯವಾಣಿ ಮಾಡುವುದು ಕೆಲವು ಸಲ ಮೂರ್ಖತನ ಅನಿಸಿಕೊಳ್ಳತ್ತದೆ.

ಆದರೆ, ಕೊಹ್ಲಿ ತನ್ನ ಮತ್ತು ಎಬಿಡಿ ನಡುವಿನ ಸ್ನೇಹವನ್ನು ಎಂದಿನಂತೆ ಆನಂದಿಸುತ್ತಿದ್ದಾರೆ. ಇನ್ಸ್​ಸ್ಟಾಗ್ರಾಮ್​ನಲ್ಲಿ ತಮ್ಮಿಬ್ಬರ ಫೊಟೊವೊಂದನ್ನು ಶೇರ್ ಮಾಡಿ ಮನಮುಟ್ಟುವಂಥ ಕೆಲ ಸಾಲುಗಳನ್ನು ಬರೆದಿದ್ದಾರೆ.

‘‘ಕ್ರೀಡೆಯೊಂದಿಗಿನ ನಿಮ್ಮ ಪಯಣದಲ್ಲಿ ಅತ್ಯಂತ ವಿಶೇಷವಾದ ಅನುಭೂತಿಯೆಂದರೆ ನಿಮ್ಮ ಜೊತೆಯಾಟಗಾರರೊಂದಿಗಿನ ಸ್ನೇಹ ಮತ್ತು ಅವರೊಂದಿಗೆ ಪರಸ್ಪರ ಹಂಚಿಕೊಳ್ಳುವ ಗೌರವಾದರಗಳು. ಕ್ರೀಡೆ ಬಹಳ ಸುಂದರ’’ ಅಂತ ಕೊಹ್ಲಿ ಬರೆದಿದ್ದಾರೆ.