ಸತತ ಮೂರನೇ ಗೆಲುವಿನತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿತ್ತ

| Updated By: ಸಾಧು ಶ್ರೀನಾಥ್​

Updated on: Oct 05, 2020 | 6:09 PM

13ನೇ ಅವೃತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಮೂರನೇ ವಾರಕ್ಕೆ ಕಾಲಿಟ್ಟಾಗಿದೆ. ಈ ಸೀಸನ್​ನ 19ನೇ ಪಂದ್ಯ ಇವತ್ತು ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಗಳು ತಮ್ಮ ಹಿಂದಿನ ಮ್ಯಾಚ್​ಗಳನ್ನು ಗೆದ್ದಿರುವುದರಿಂದ ಆತ್ಮವಿಶ್ವಾಸದಿಂದ ಬೀಗುತ್ತಿವೆ. ಬೆಂಗಳೂರು ಟೀಮು ಎರಡು ಕಾರಣಗಳಿಗೆ ಜಾಸ್ತಿ ಉತ್ಸುಕತೆ ತೋರುತ್ತಿದೆ. ಒಂದು ಇಂದಿನ ಪಂದ್ಯವೇನಾದರೂ ಕೊಹ್ಲಿಯ ಪಡೆ ಗೆದ್ದಲ್ಲಿ ಸತತ ಮೂರು ಗೆಲುವುಗಳನ್ನು ದಾಖಲಿಸಿದಂತಾಗುತ್ತದೆ ಮತ್ತು ಎರಡನೆಯ ಕಾರಣವೆಂದರೆ ಕೊಹ್ಲಿ ಖುದ್ದು ಬ್ಯಾಟಿಂಗ್ ಫಾರ್ಮ್​ಗೆ […]

ಸತತ ಮೂರನೇ ಗೆಲುವಿನತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಿತ್ತ
ವಿರಾಟ್ ಕೊಹ್ಲಿ
Follow us on

13ನೇ ಅವೃತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಮೂರನೇ ವಾರಕ್ಕೆ ಕಾಲಿಟ್ಟಾಗಿದೆ. ಈ ಸೀಸನ್​ನ 19ನೇ ಪಂದ್ಯ ಇವತ್ತು ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಗಳು ತಮ್ಮ ಹಿಂದಿನ ಮ್ಯಾಚ್​ಗಳನ್ನು ಗೆದ್ದಿರುವುದರಿಂದ ಆತ್ಮವಿಶ್ವಾಸದಿಂದ ಬೀಗುತ್ತಿವೆ. ಬೆಂಗಳೂರು ಟೀಮು ಎರಡು ಕಾರಣಗಳಿಗೆ ಜಾಸ್ತಿ ಉತ್ಸುಕತೆ ತೋರುತ್ತಿದೆ. ಒಂದು ಇಂದಿನ ಪಂದ್ಯವೇನಾದರೂ ಕೊಹ್ಲಿಯ ಪಡೆ ಗೆದ್ದಲ್ಲಿ ಸತತ ಮೂರು ಗೆಲುವುಗಳನ್ನು ದಾಖಲಿಸಿದಂತಾಗುತ್ತದೆ ಮತ್ತು ಎರಡನೆಯ ಕಾರಣವೆಂದರೆ ಕೊಹ್ಲಿ ಖುದ್ದು ಬ್ಯಾಟಿಂಗ್ ಫಾರ್ಮ್​ಗೆ ಮರಳಿರುವುದು.

[yop_poll id=”5″]

ಹೈದರಾಬಾದ್​ ವಿರುದ್ಧ ಸೋತ ನಂತರ, ಕೆಕೆಆರ್ ಮೇಲೆ ಜಯ ಸಾಧಿಸಿದ ಶ್ರೇಯಸ್ ಅಯ್ಯರ್ ಅವರ ಡೆಲ್ಲಿ ಸಹ ಭಾರಿ ಜೋಶ್​ನಲ್ಲಿದೆ. ಟಾಪ್ ಆರ್ಡರ್​ನಲ್ಲಿ ಶಿಖರ್ ಧವನ್ ಬಿಟ್ಟರೆ ಉಳಿದವರೆಲ್ಲ ರನ್ ಗಳಿಸುತ್ತಿದ್ದಾರೆ. ಅಯ್ಯರ್ ಮತ್ತು ಪೃಥ್ವಿ ಶಾ ಎದುರಾಳಿ ಬೌಲರ್​ಗಳನ್ನು ಸದೆಬಡೆಯುತ್ತಿದ್ದರೆ, ಬಿರುಸಿನ ಹೊಡೆತಗಳ ಆಟಗಾರ ಶಿಮ್ರನ್ ಹೆಟ್ಮೆಯರ್ ಸನ್ ರೈಸರ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಬಾಲನ್ನು ಚೆನ್ನಾಗಿ ಕನೆಕ್ಟ್ ಮಾಡುತ್ತಿದ್ದರು.

ಇದನ್ನೂ ಓದಿ: IPL 2020: RCB vs DC Live Score

ವಿಕೆಟ್​ಕೀಪರ್ಬ್ಯಾಟ್ಸ್​ಮನ್ ರಿಷಭ್ ಪಂತ್ ಕೊಲ್ಕತಾ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 38 ರನ್​ಗಳನ್ನು ಬಾರಿಸಿ ತಮ್ಮ ಖ್ಯಾತಿಗೆ ತಕ್ಕ ಆಟವಾಡಿದರು. ಅದರರ್ಥ ಪಂತ್ ಕಳಪೆ ಫಾರ್ಮ್​ನಲ್ಲೇನೂ ಇಲ್ಲ. ಅಯ್ಯರ್ , ಕೊಲ್ಕತಾ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ (ಅಜೇಯ 88) ಆಡಿದರು. ಅಲ್​ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಬ್ಯಾಟ್​ನಿಂದ ಉಪಯುಕ್ತ ಕಾಣಿಕೆಗಳನ್ನು ನೀಡುವ ಜೊತೆಗೆ ಬೌಲಿಂಗ್ ವಿಭಾಗವನ್ನೂ ಬಲಪಡಿಸುತ್ತಿದ್ದಾರೆ. ಆಜಿಂಕ್ಯಾ ರಹಾನೆಯನ್ನು ಆಡಿಸುವ ನಿರ್ಧಾರ ಡೆಲ್ಲಿ ಟೀಮ್ ಮ್ಯಾನೇಜ್ಮೆಮೆಂಟ್ ಮಾಡುತ್ತಿಲ್ಲ. ಇವತ್ತಿನ ಪಂದ್ಯದಲ್ಲಿ ಅವರು ಧವನ್ ಜಾಗಕ್ಕೆ ಬರುವ ನಿರೀಕ್ಷೆಯಿದೆ. ರವಿಚಂದ್ರನ್ ಅಶ್ವಿನ್ ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ ನಿಜ, ಆದರೆ ಅವರ ಬ್ಯಾಟಿಂಗ್ ಶೈಲಿ ಟಿ20 ಆವೃತಿಗೆ ಹೊಂದುವುದಿಲ್ಲ. ಹಾಗಾಗೇ, ಅವರ ಕಾಂಟ್ರಿಬ್ಯೂಷನ್ ಬೌಲಿಂಗ್​ಗೆ ಮಾತ್ರ ಸೀಮಿತ

ಕಗಿಸೊ ರಬಾಡ, ಇಶಾಂತ್ ಶರ್ಮ (ಇವತ್ತು ಆಡಿದಲ್ಲಿ), ಆನ್ರಿಖ್ ನೊರೆ, ಮೊಹಿತ್​ ಶರ್ಮ, ಹರ್ಷಲ್ ಪಟೇಲ್ ಮತ್ತು ಸ್ಟಾಯ್ನಿಸ್ ಮೊದಲಾದವರು ವೇಗದ ಬೌಲಿಂಗ್ ವಿಭಾಗವನ್ನು ನಿಭಾಯಿಸಿದರೆ, ಅಶ್ವಿನ್ ಜೊತೆ, ಅಕ್ಸರ್ ಪಟೇಲ್ ಮತ್ತು ಅಮಿತ್ ಮಿಶ್ರಾ ಸ್ಪಿನ್ ಬೌಲಿಂಗ್ ನೋಡಿಕೊಳ್ಳುತ್ತಾರೆ 

ರಾಜಸ್ತಾನ ರಾಯಲ್ಸ್ ವಿರುದ್ಧ ಕಳಂಕರಹಿತ ಬ್ಯಾಟಿಂಗ್ ಪ್ರದರ್ಶನ ನೀಡಿ ಆಕರ್ಷಕ ಆಜೇಯ ಶತಕ ಬಾರಿಸಿದ ಕೊಹ್ಲಿ ಎದುರಾಳಿಗಳ ಪಾಳೆಯದಲ್ಲಿ ಅದಾಗಲೇ ನಡುಕ ಹುಟ್ಟಿಸಿದ್ದಾರೆ. ಯಾಕೆಂದರೆ ಕೊಹ್ಲಿ ಒಮ್ಮೆ ಸ್ಪರ್ಶ ಕಂಡುಕೊಂಡರೆ ಅವರನ್ನು ತಡೆಯುವುದು ಕಷ್ಟ. ಅಲ್ಲದೆ ಇವತ್ತಿನ ಪಂದ್ಯದಲ್ಲಿ ಅವರು ಕೆಲ ದಾಖಲೆಗಳನ್ನು ಸ್ಥಾಪಿಸುವ ಇಲ್ಲವೇ ಸರಿಗಟ್ಟುವ ಹೊಸ್ತಿಲಲ್ಲಿದ್ದಾರೆ. ಆರಂಭದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 3, ಮತ್ತು 14 ರನ್ ಗಳಿಸಿ ತಮ್ಮ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ್ದ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ 9.000 ರನ್ ಕ್ಲಬ್ ಸೇರಲು ಕೇವಲ 110 ರನ್ ಗಳಿಸಬೇಕಿದೆ. ಇದುವರೆಗೆ ಅವರು 5 ಶತಕ61 ಅರ್ಧಶತಕಗಳೊಂದಿಗೆ 41.05 ಸರಾಸರಿಯಲ್ಲಿ 8,990 ರನ್ ಬಾರಿಸಿದ್ದಾರೆ. ಕೊಹ್ಲಿ 9,000 ರನ್ ದಾಟಿದರೆ, ಆ ದಾಖಲೆ ಮಾಡಿದ ವಿಶ್ವದ ಏಳನೇ ಬ್ಯಾಟ್ಸ್​ಮನ್ ಅನಿಸಿಕೊಳ್ಳಲಿದ್ದ್ದಾರೆ, ಬಾರತೀಯರ ಪೈಕಿ ಮೊದಲಿಗರಾಗಲಿದ್ದಾರೆ.

ಹಾಗೆಯೇ, ಕೊಹ್ಲಿ ಐಪಿಎಲ್​ನಲ್ಲಿ ಇದುವರೆಗೆ 5,502 ರನ್ ಗಳಿಸಿದ್ದು, 192 ಸಿಕ್ಸ್​ರ್​ಗಳನ್ನು ಬಾರಿಸಿದ್ದಾರೆ. ಇನ್ನೂ 8 ಸಿಕ್ಸ್​ರ್​ಗಳು ಅವರ ಬ್ಯಾಟ್​ನಿಂದ ಸಿಡಿದರೆ, ಅಂಥ ದಾಖಲೆಯನ್ನು ಹೊಂದಿರುವ ನಾಲ್ಕನೇ ಭಾರತೀಯ ಆಟಗಾರನಾಗಲಿದ್ದಾರೆ. ರೊಹಿತ್ ಶರ್ಮ, ಸುರೇಶ್ ರೈನಾ ಮತ್ತು ಎಮ್​ಎಸ್ ಧೋನಿ ಇತರ ಮೂವರು.

ಆರನ್ ಫಿಂಚ್ ಹೊರತುಪಡಿಸಿ, ಬೆಂಗಳೂರು ತಂಡದ ಟಾಪ್ ಆರ್ಡರ್ ಕ್ಲಿಕ್ಕಾಗುತ್ತಿದೆ. ಯುವ ಆಟಗಾರ ದೇವದತ್ ಪಡಿಕ್ಕಲ್ ಫ್ಯಾನ್ ಫಾಲೊಯಿಂಗ್ ಪ್ರತಿ ಪಂದ್ಯದಿಂದ ಹೆಚ್ಚುತ್ತಿದೆ. ಮಾಜಿ ಆಟಗಾರರನ್ನೆಲ್ಲ ಇಂಪ್ರೆಸ್ ನೀಳಕಾಯದ ಈ ಎಡಗೈ ಆಟಗಾರನನ್ನು ಟೀಮ್ ಇಂಡಿಯಾ ಭವಿಷ್ಯದ ಆಟಗಾರ ಅಂತ ಬಿಂಬಿಸಲಾಗುತ್ತಿದೆ. . ಚೊಚ್ಚಲು ಐಪಿಎಲ್ ಸೀಸನ್ ಆಡುತ್ತಿರುವ ಆವರು 4 ಪಂದ್ಯಗಳಲ್ಲಿ 3 ಅರ್ಧ ಶತಕಗಳೊಂದಿಗೆ 174 ರನ್ ಗಳಿಸಿದ್ದಾರೆ.

360 ಡಿಗ್ರಿ ಬ್ಯಾಟ್ಸ್​ಮನ್ ಎಬಿ ಡಿ ವಿಲಿಯರ್ಸ್ ಬಗ್ಗೆ ದೂರುವಂಥದ್ದೇನೂ ಇಲ್ಲ. ಟೀಮಿನಲ್ಲಿ ಅವರ ಉಪಸ್ಥಿತಿಯೇ ಒಂದು ಸ್ಟೇಟ್​ಮೆಂಟ್. ಇದುವರೆಗೆ ಆಡಿಲ್ಲದಿರುವ ಪಾರ್ಥೀವ್ ಪಟೇಲ್ ಇಂದು ಗುರ್ಕೀರತ್ ಸಿಂಗ್ ಮನ್ ಅವರ ಸ್ಥಾನದಲ್ಲಿ ಅವಕಾಶ ಪಡೆಯಬಹುದು. ಹಾಗೆಯೇ, ಟೂರ್ನಿ ಆರಂಭವಾದಾಗಿನಿಂದ ಬೆಂಚ್ ಬಿಸಿ ಮಾಡುತ್ತಿರುವ ಕ್ರಿಸ್ ಮೊರಿಸ್ ಮತ್ತು ಮೊಯೀನ್ ಅಲಿ ಇವತ್ತು ಆಡಬಹುದು. ಆಲ್​ರೌಂಡರ್ ಶಿವಮ್ ದುಬೆಗೆ ಬ್ಯಾಟಿಂಗ್​ನಲ್ಲಿ ಅವಕಾಶಗಳು ಸಿಗುತ್ತಿಲ್ಲ.

ನವದೀಪ್ ಸೈನಿ ಡೆತ್ ಓವರ್​ಗಳಲ್ಲಿ ಆಸಾಧಾರಣ ಬೌಲಿಂಗ್ ಪ್ರದರ್ಶನಗಳನ್ನು ನೀಡಿ ಕೊಹ್ಲಿಯ ವಿಶ್ವಾಸ ಗೆದ್ದಿದ್ದಾರೆ. ಆಫೀ ವಾಷಿಂಗ್ಟನ್ ಸುಂದರ್ ಬಗ್ಗೆ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಮೆಚ್ಚುಗೆಯ ಮಾತುಗಳನ್ನಾಡಿ ಅವರು ಭರತದ ಟೀಮಿಗೆ ಆಡುವ ದಿನಗಳು ದೂರವಿಲ್ಲ ಎಂದಿದ್ದಾರೆ. ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪ್ರತಿ ಪಂದ್ಯದಲ್ಲೂ ಮ್ಯಾಚ್ ವಿನ್ನರ್ ಎನಿಸುತ್ತಿದ್ದಾರೆ.

Published On - 4:53 pm, Mon, 5 October 20