ಕೋಲ್ಕತಾ ನೈಟ್ ರೈಡರ್ಸ್ ತಂಡವು ಯುವ ಭಾರತದ ವೇಗದ ಬೌಲರ್‌ಗಳನ್ನು ಹೊಂದಿದ್ದು, ಅಂತಹ ಒಬ್ಬ ಯುವ ಬೌಲರ್ಗಳಲ್ಲಿ ಪ್ರಸಿದ್ಧ್ ಕೃಷ್ಣ ಕೂಡ ಒಬ್ಬರು. ಪ್ರಸಿದ್ಧ್ ಕೃಷ್ಣ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಏಕದಿನ ಚೊಚ್ಚಲ ಪಂದ್ಯವನ್ನಾಡಿದರು ಮತ್ತು ಅವರ ಮೊದಲ ಪಂದ್ಯದಲ್ಲಿಯೇ ಅವರು ಎಷ್ಟು ಪ್ರಭಾವಶಾಲಿ ಬೌಲರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿರುವ ಪ್ರಸಿದ್ದ್ ತಮ್ಮ ಮೊದಲ ಓವರ್ನ 3ನೇ ಎಸೆತದಲ್ಲೇ ಅಪಾಯಕಾರಿ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದು ಮಿಂಚಿದ್ದಾರೆ. ಇದರೆ ಸುದ್ದಿ ಇರುವುದು ಈ ಬಗ್ಗೆ ಅಲ್ಲ. ಪಂದ್ಯ ಆರಂಭಕ್ಕೂ ಮುನ್ನ ಸಂದರ್ಶನದಲ್ಲಿ, ಸಂದರ್ಶನಕಾರ ಕೇಳಿದ ಅಷ್ಟೂ ಪ್ರಶ್ನೆಗಳಿಗೂ ಕೃಷ್ಣ ಕನ್ನಡದಲ್ಲಿಯೇ ಉತ್ತರಿಸಿರುವುದು.
ಸಂದರ್ಶನಕಾರ: ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ನೀವು ಬೌಲರ್ ಆಗಿ ಏನನ್ನು ಬದಲಾಯಿಸಿಕೊಂಡಿದ್ದೀರಾ?
ಪ್ರಸಿದ್ಧ್ ಕೃಷ್ಣ: ನನ್ನ ಪ್ರದರ್ಶನ ಹಾಗೆಯೇ ಇದೆ. ಆ ರೀತಿಯ ಉತ್ತಮ ಪ್ರದರ್ಶನ ನೀಡಿದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅದೇ ರೀತಿಯ ಪ್ರದರ್ಶನವನ್ನು ಇಲ್ಲಿಯೂ ನೀಡಬೇಕು ಎಂದುಕೊಂಡಿದ್ದೇನೆ.
ಸಂದರ್ಶನಕಾರ: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೋರ್ಗಾನ್ ಆ ತಂಡದ ನಾಯಕರಾಗಿದ್ದರು. ಅಲ್ಲಿ ನೀವು ಉತ್ತಮ ಪ್ರದರ್ಶನ ನೀಡಿದ್ರಿ. ಆ ಸರಣಿ ಮುಗಿದ ಬಳಿಕ ಮೋರ್ಗಾನ್ ಜೊತೆ ಮಾತುಕತೆ ಮುಂದುವರೆಸಿದ್ದೀರಾ?
ಪ್ರಸಿದ್ಧ್ ಕೃಷ್ಣ: ನಾವಿಬ್ಬರು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿರುವುದರಿಂದ ಅಲ್ಲಿಯೂ ಸಹ ಸಂಭಾಷಣೆಯಲ್ಲಿ ತೊಡಗುತ್ತಿದ್ದೇವು. ಹಾಗೆಯೇ ಇಲ್ಲಿಯೂ ಸಹ ನಮ್ಮಿಬ್ಬರ ನಡುವೆ ಒಳ್ಳೆಯ ಸಂಭಾಷಣೆ ನಡೆಯುತ್ತಿರುತ್ತದೆ.
ಸಂದರ್ಶನಕಾರ: ಕೊನೆಯ ಐಪಿಎಲ್ಗೆ ಹೋಲಿಸಿದರೆ ನೀವು ಒಬ್ಬ ಬೌಲರ್ ಆಗಿ ಕೌಶಲ್ಯದ ವಿಚಾರದಲ್ಲಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿಮ್ಮಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ?
ಪ್ರಸಿದ್ಧ್ ಕೃಷ್ಣ: ಆತ್ಮ ವಿಶ್ವಾಸ ಹೆಚ್ಚಾಗಿದೆ. ಅಲ್ಲದೆ ನನ್ನಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ ಎಂಬುದನ್ನು ನೀವು ಹೇಳಬೇಕು. ಹಾಗಾಗಿ ಅದನ್ನ ನಿಮಗೆ ಬಿಟ್ಟಿದ್ದೀನಿ.
ಸಂದರ್ಶನಕಾರ: ಈ ಐಪಿಎಲ್ನ ಕೊನೆಯ 5 ಪಂದ್ಯಗಳನ್ನು ಕೋಲ್ಕತ್ತಾ ತಂಡ ಬೆಂಗಳೂರಿನಲ್ಲಿ ಆಡಲಿದೆ. ಹೀಗಾಗಿ ನೀವು 100 ಪ್ರತಿಶತ ಪ್ರದರ್ಶನ ನೀಡ್ತಿರ?
ಪ್ರಸಿದ್ಧ್ ಕೃಷ್ಣ: ಖಂಡಿತವಾಗಿಯೂ. ಏಕೆಂದರೆ ನಾನು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ಪಂದ್ಯಗಳನ್ನಾಡುತ್ತಾ ಬಂದಿದ್ದೇನೆ. ಹಾಗಾಗಿ ಕೊನೆಯ 5 ಪಂದ್ಯಗಳನ್ನು ಅಲ್ಲಿ ಆಡುತ್ತಿರುವುದು ನನಗೆ ತುಂಬಾ ಸಹಕಾರಿಯಾಗಲಿದೆ. ಹೀಗಾಗಿ ಒಳ್ಳೆಯ ಪ್ರದರ್ಶನ ನೀಡಲು ಬಯಸುತ್ತೇನೆ.
ಟೀಮ್ ಇಂಡಿಯಾದ ಹೊಸ ಬೌಲಿಂಗ್ ಸೂಪರ್ ಸ್ಟಾರ್.?
ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಕರ್ನಾಟಕದ ವೇಗಿಯ ವಿಶೇಷ ಸಂದರ್ಶನ.?
IPL ಅಲ್ಲಿ @KKRiders ಪರವಾಗಿ ಆಡಲು ಸಜ್ಜಾಗುತ್ತಿರುವ @prasidh43 ಮಾತು..?#VIVOIPL #SRHvKKR pic.twitter.com/Ova2BLVW4f
— Star Sports Kannada (@StarSportsKan) April 11, 2021