KPL ಬೆಟ್ಟಿಂಗ್: KSCA ಸದಸ್ಯ ಶಿಂಧೆ ಅರೆಸ್ಟ್, ಡಿ.7ರವರೆಗೆ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ನಗರದ ಸಿಸಿಬಿ ಪೊಲೀಸರು KSCA ಸದಸ್ಯ, ಮಾಜಿ ರಣಜಿ ಆಟಗಾರ ಸುಧೀಂದ್ರ ಶಿಂಧೆಯನ್ನು ಅರೆಸ್ಟ್ ಮಾಡಿದ್ದಾರೆ. ಸುಧೀಂದ್ರ ಶಿಂಧೆ, ಬೆಳಗಾವಿ ಪ್ಯಾಂಥರ್ಸ್ ತಂಡದ ನಿರ್ದೇಶಕ ಮತ್ತು ಕೋಚ್ ಆಗಿದ್ದ. ಈತ ತಂಡದ ಮಾಲೀಕ ಅಲಿ ಜತೆ ಶಾಮೀಲಾಗಿ ಮ್ಯಾಚ್‌ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಎಂಬ ಗುರುತರ ಆರೋಪ ಕೇಳಿಬಂದಿದೆ. 2 ದಿನದ ಹಿಂದೆ ಇಂದಿರಾ ನಗರದಲ್ಲಿರುವ ಸುಧೀಂದ್ರ ಶಿಂಧೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.  ಶಿಂಧೆ […]

KPL ಬೆಟ್ಟಿಂಗ್: KSCA ಸದಸ್ಯ ಶಿಂಧೆ ಅರೆಸ್ಟ್, ಡಿ.7ರವರೆಗೆ ಪೊಲೀಸ್ ಕಸ್ಟಡಿಗೆ
ಸಾಧು ಶ್ರೀನಾಥ್​

Updated on: Dec 04, 2019 | 3:51 PM

ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ನಗರದ ಸಿಸಿಬಿ ಪೊಲೀಸರು KSCA ಸದಸ್ಯ, ಮಾಜಿ ರಣಜಿ ಆಟಗಾರ ಸುಧೀಂದ್ರ ಶಿಂಧೆಯನ್ನು ಅರೆಸ್ಟ್ ಮಾಡಿದ್ದಾರೆ.

ಸುಧೀಂದ್ರ ಶಿಂಧೆ, ಬೆಳಗಾವಿ ಪ್ಯಾಂಥರ್ಸ್ ತಂಡದ ನಿರ್ದೇಶಕ ಮತ್ತು ಕೋಚ್ ಆಗಿದ್ದ. ಈತ ತಂಡದ ಮಾಲೀಕ ಅಲಿ ಜತೆ ಶಾಮೀಲಾಗಿ ಮ್ಯಾಚ್‌ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದ ಎಂಬ ಗುರುತರ ಆರೋಪ ಕೇಳಿಬಂದಿದೆ.

2 ದಿನದ ಹಿಂದೆ ಇಂದಿರಾ ನಗರದಲ್ಲಿರುವ ಸುಧೀಂದ್ರ ಶಿಂಧೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.  ಶಿಂಧೆ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ನಿನ್ನೆ ಸುಧೀಂದ್ರ ಸಿಸಿಬಿ ಎದುರು ವಿಚಾರಣೆಗೆ ಸಹ ಹಾಜರಾಗಿದ್ದ. ಈ ವೇಳೆ ಪೊಲೀಸರ ಪ್ರಶ್ನೆಗೆ ಶಿಂಧೆ ಉತ್ತರ ನೀಡದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಡಿಸೆಂಬರ್​ 7ರವರೆಗೆ ಪೊಲೀಸ್ ಕಸ್ಟಡಿಗೆ:

ಮಧ್ಯಾಹ್ನದ ಬಳಿಕ ಸಿಸಿಬಿ ಪೊಲೀಸರು ಆರೋಪಿಯನ್ನು 1ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್​ ಅವರಣದಲ್ಲಿ ಆರೋಪಿಯು ಕಣ್ಣೀರು ಹಾಕಿದ್ದು ಕಂಡುಬಂತು. ಆರೋಪಿಯನ್ನು ಡಿಸೆಂಬರ್​ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

Published On - 9:27 am, Wed, 4 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us