Obstructing The Field: ಫೀಲ್ಡಿಂಗ್ಗೆ ಅಡಚಣೆ ಮಾಡಿ ಔಟಾದ ವಿಶ್ವದ ಎಂಟನೇ ಆಟಗಾರ ಶ್ರೀಲಂಕಾದ ಗುಣತಿಲಕ
ಒಬ್ಬ ಬ್ಯಾಟ್ಸ್ಮನ್ ರನ್ ಕದಿಯುವಾಗ ಉದ್ದೇಶಪೂರ್ವವಾಗಿ ಚೆಂಡನ್ನು ಫೀಲ್ಡರ್ ಕೈಗೆ ಸಿಗದಂತೆ ಬ್ಯಾಟ್ನಿಂದಾಗಲೀ ಇಲ್ಲವೇ ಕಾಲಿನಿಂದಾಗಲೀ ದೂರ ತಳ್ಳಿದರೆ ಆಗ ಅ ಬ್ಯಾಟ್ಸ್ಮನ್ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ. ಫೀಲ್ಡರ್ ವಿಕೆಟ್ಗಳತ್ತ ಮಾಡಿದ ಥ್ರೋ ಅನ್ನು ಸಹ ಬ್ಯಾಟ್ಸ್ಮನ್ ಉದ್ದೇಶಪೂರ್ವಕವಾಗಿ ತಡೆದರೆ ಅಗಲೂ ಬ್ಯಾಟ್ಸಮನ್ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ
ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಔಟ್ ಕ್ರಿಕೆಟ್ ಪಂದ್ಯಗಳಲ್ಲಿ ಒಬ್ಬ ಬ್ಯಾಟ್ಸ್ಮನ್ ಔಟಾಗಬಹುದಾದ 10 ವಿಧಗಳಲ್ಲಿ ಒಂದು. ಆದರೆ ಬ್ಯಾಟ್ಸ್ಮನ್ ಹಾಗೆ ಔಟಾಗುವುದು ಬಹಳ ಅಪರೂಪ. ಕ್ರಿಕೆಟ್ ಇತಿಹಾಸದಲ್ಲಿ ಕೇವಲ 8 ಬ್ಯಾಟ್ಸ್ಮನ್ಗಳು ಮಾತ್ರ ಹಾಗೆ ಔಟಾಗಿದ್ದಾರೆ. 8ನೇ ಘಟನೆ ಬುಧವಾರದಂದು ವೆಸ್ಟ್ ಇಂಡೀಸ್ನ ಆ್ಯಂಟಿಗುವಾದಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಸಂಭವಿಸಿದೆ. ಅಂಥ ತೀರ್ಪಿಗೆ ಬಲಿಯಾದ ಆಟಗಾರ ಶ್ರೀಲಂಕಾದ ಆರಂಭ ದನುಷ್ಕಾ ಗುಣತಿಲಕ. ಈ ಘಟನೆ ಸಂಭವಿಸುವ ಮೊದಲು, ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಒಂದು ದಿನದ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡ ಅಧಿಕಾರಯುತ ಸ್ಥಿತಿಯಲ್ಲಿತ್ತು. ಮೊದಲ ವಿಕೆಟ್ಗೆ ಗುಣತಿಲಕ (52) ತಮ್ಮ ನಾಯಕ ದಿಮುತ್ ಕರುಣರತ್ನೆ (55) ಜೊತೆ 105 ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಅದರೆ, ಗುಣತಿಲಕ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ರೂಪದಲ್ಲಿ ಔಟಾಗಿ ಪೆವಲಿಯನ್ಗೆ ಮರಳಿದ ನಂತರ ಶ್ರೀಲಂಕಾ ತಂಡದ ಬ್ಯಾಟಿಂಗ್ ಕುಸಿಯಿತು.
ಒಬ್ಬ ಬ್ಯಾಟ್ಸ್ಮನ್ ರನ್ ಕದಿಯುವಾಗ ಉದ್ದೇಶಪೂರ್ವವಾಗಿ ಚೆಂಡನ್ನು ಫೀಲ್ಡರ್ ಕೈಗೆ ಸಿಗದಂತೆ ಬ್ಯಾಟ್ನಿಂದಾಗಲೀ ಇಲ್ಲವೇ ಕಾಲಿನಿಂದಾಗಲೀ ದೂರ ತಳ್ಳಿದರೆ ಆಗ ಅ ಬ್ಯಾಟ್ಸ್ಮನ್ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ. ಫೀಲ್ಡರ್ ವಿಕೆಟ್ಗಳತ್ತ ಮಾಡಿದ ಥ್ರೋ ಅನ್ನು ಸಹ ಬ್ಯಾಟ್ಸ್ಮನ್ ಉದ್ದೇಶಪೂರ್ವಕವಾಗಿ ತಡೆದರೆ ಅಗಲೂ ಬ್ಯಾಟ್ಸಮನ್ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ
ಶ್ರೀಲಂಕಾದ 232 ರನ್ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ವಿಂಡೀಸ್ 8 ವಿಕೆಟ್ಗಳ ಜಯ ಸಾಧಿಸಿತು. ಆರಂಭ ಆಟಗಾರ ಶಾಯ್ ಹೋಪ್ 133 ಎಸೆತಗಳಲ್ಲಿ 110 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಸರಿ, ಆ ಅಪೂರ್ವ ಘಟನೆಗೆ ವಾಪಸ್ಸು ಹೋಗೋಣ, ಅದು ಜರುಗಿದ್ದು ಶ್ರೀಲಂಕಾ ಇನ್ನಿಂಗ್ಸ್ನ 21ನೇ ಓವರ್ನಲ್ಲಿ. ಆಗ ವಿಂಡೀಸ್ ತಂಡದ ನಾಯಕ ಕೈರನ್ ಪೊಲ್ಲಾರ್ಡ್ ಬೌಲಿಂಗ್ ಮಾಡುತ್ತಿದ್ದರು. ಉತ್ತಮ ಅಂತರದಲ್ಲಿ ಬಂದ ಅವರ ಎಸೆತವೊಂದನ್ನು ಗುಣತಿಲಕ ತಮ್ಮ ಮುಂದೆಯೇ ರಕ್ಷಣಾತ್ಮಕವಾಗಿ ಆಡಿ ರನ್ಗೆ ಕಾಲ್ ಮಾಡಿ ಸ್ವಲ್ಪ ಮುಂದೆ ಓಡಿದರು. ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಪಥುಮ್ ನಿಸ್ಸಾಂಕ ಸಹ ಅವರ ಕರೆಗೆ ಓಗೊಟ್ಟು ಓಡಲಾರಂಭಿದರು. ಆದರೆ ಫಾಲೋ ಥ್ರೂನಲ್ಲಿ ಪೊಲ್ಲಾರ್ಡ್ ವೇಗವಾಗಿ ಚೆಂಡಿನತ್ತ ಓಡಿ ಬರುತ್ತಿರುವದನ್ನು ಗಮನಿಸಿದ ಗುಣತಿಲಕ, ನಿಸ್ಸಾಂಕ ಅವರನ್ನು ವಾಪಸ್ಸು ಕಳಿಸಿ ತಾವು ಹಿಮ್ಮುಖವಾಗಿ ತಮ್ಮ ಕ್ರೀಸಿಗೆ ಮರಳಿದರು. ಆದರೆ ಹಾಗೆ ವಾಪಸ್ಸು ಹೋಗುವಾಗ ಅವರ ಚೆಂಡನ್ನು ತುಳಿದಿದ್ದರಿಂದ ಅದು ಸ್ವಲ್ಪ ದೂರಕ್ಕೆ ಹೋಗಿ ಫೊಲ್ಲಾರ್ಡ್ ಕೈಗೆ ಸಿಗದಂತಾಯಿತು. ಗುಣತಿಲಕ ಉದ್ದೇಶಪೂರ್ವಕವಾಗಿ ಚೆಂಡನ್ನು ದೂರ ಒದ್ದರು, ಅದು ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಅಗಿದೆ, ಹಾಗಾಗಿ ಅವರು ಔಟ್ ಎಂದು ಪರಿಗಣಿಸಿಬೇಕು ಎಂದು ವಿಂಡೀಸ್ ಅಟಗಾರರು ಮಾಡಿದ ಮನವಿಯನ್ನು ಅಂಪೈರ್ಗಳು ಸಮಾಲೋಚನೆ ನಡೆಸಿ ಗುಣತಿಲಕ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಔಟ್ ಎಂದು ಘೋಷಿಸಿದರು.
This doesn't happen often ?
Kieron Pollard feels that Danushka Gunathilaka was obstructing the field and appeals for his dismissal…
The Sri Lankan's aren't happy ? pic.twitter.com/ODmn99elWR
— Cricket on BT Sport (@btsportcricket) March 10, 2021
ಕ್ರಿಕೆಟ್ ಇತಿಹಾಸದಲ್ಲಿ ಕೇವಲ 8 ಜನ ಮಾತ್ರ ಹೀಗೆ ಔಟಾಗಿದ್ದರೆ. ಟೆಸ್ಟ್ ಕ್ರಿಕೆಟ್ನಲ್ಲಿ ಒಮ್ಮೆ ಮಾತ್ರ ಅದು ಸಂಭವಿಸಿದರೆ ಉಳಿದ 7 ಪ್ರಕರಣಗಳು ಒಂದು ದಿನ ಪಂದ್ಯಗಳಲ್ಲಿ ಘಟಿಸಿವೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಆದವರು ಇಂಗ್ಲೆಂಡ್ನ ಲೆನ್ ಹಟ್ಟನ್, ಅದು ನಡೆದದ್ದು 1951ರ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಸರಣಿಯಲ್ಲಿ. ಒಂದು ದಿನ ಪಂದ್ಯಗಳಲ್ಲಿ ಅಬ್ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗಿರುವವರು; ಪಾಕಿಸ್ತಾನದ ರಮೀಜ್ ರಾಜಾ, ಭಾರತದ ಮೊಹಿಂದರ್ ಅಮರನಾಥ್, ಪಾಕಿಸ್ತಾನದವರೇ ಅಗಿರುವ ಇಂಜಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಅನ್ವರ್ ಅಲಿ ಮತ್ತು ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ .
Published On - 7:34 pm, Thu, 11 March 21