ಭಾರತದ ಫುಟ್ಬಾಲ್ ಮಾಂತ್ರಿಕ ಸುನಿಲ್ ಛೆತ್ರಿಗೆ ಕೊರೊನಾ ವೈರಸ್ ಪಾಸಿಟಿವ್
ಪ್ರಖ್ಯಾತ ಫುಟ್ಬಾಲ್ ಆಟಗಾರ ಮತ್ತು ಭಾರತೀಯ ಸಾಕರ್ ಟೀಮಿನ ನಾಯಕ ಸುನಿಲ್ ಛೆತ್ರಿ ಅವರು ಕೊವಿಡ್-19 ಸೋಂಕಿಗೊಳಗಾಗಿದ್ದಾರೆ. ಸೋಂಕು ತಗುಲಿರುವುದನ್ನು ಖುದ್ದು ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಆದರೆ ತಮ್ಮ ಆರೋಗ್ಯ ಚೆನ್ನಾಗಿದೆ ಮತ್ತು ಸೋಕಿನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿರುವ ಅವರು ಆದಷ್ಟು ಬೇಗ ಫುಟ್ಬಾಲ್ ಮೈದಾನಕ್ಕೆ ಮರಳುವುದಾಗಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ‘ಖುಷಿಯಿಂದ ಹೇಳಿಕೊಳ್ಳುವ ಸುದ್ದಿ ಇದಲ್ಲ. ನನಗೆ ಕೊವಿಡ್-19 ಪಾಸಿಟಿವ್ ಎಂದು ಗೊತ್ತಾಗಿದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಅದಷ್ಟು ಬೇಗ ಫುಟ್ಬಾಲ್ […]
ಪ್ರಖ್ಯಾತ ಫುಟ್ಬಾಲ್ ಆಟಗಾರ ಮತ್ತು ಭಾರತೀಯ ಸಾಕರ್ ಟೀಮಿನ ನಾಯಕ ಸುನಿಲ್ ಛೆತ್ರಿ ಅವರು ಕೊವಿಡ್-19 ಸೋಂಕಿಗೊಳಗಾಗಿದ್ದಾರೆ. ಸೋಂಕು ತಗುಲಿರುವುದನ್ನು ಖುದ್ದು ಅವರೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಆದರೆ ತಮ್ಮ ಆರೋಗ್ಯ ಚೆನ್ನಾಗಿದೆ ಮತ್ತು ಸೋಕಿನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿರುವ ಅವರು ಆದಷ್ಟು ಬೇಗ ಫುಟ್ಬಾಲ್ ಮೈದಾನಕ್ಕೆ ಮರಳುವುದಾಗಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
‘ಖುಷಿಯಿಂದ ಹೇಳಿಕೊಳ್ಳುವ ಸುದ್ದಿ ಇದಲ್ಲ. ನನಗೆ ಕೊವಿಡ್-19 ಪಾಸಿಟಿವ್ ಎಂದು ಗೊತ್ತಾಗಿದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಅದಷ್ಟು ಬೇಗ ಫುಟ್ಬಾಲ್ ಮೈದಾನಕ್ಕೆ ವಾಪಸ್ಸಾಗುತ್ತೇನೆ, ಎಂದು ಛೆತ್ರಿ ಟ್ವೀಟ್ ಮಾಡಿದ್ದಾರೆ.
‘ಯಾವಾಗಲೂ ಜಾಗರೂಕರಾಗಿರಿ ಮತ್ತು ಸುರಕ್ಷತೆ ಬಗ್ಗೆ ಮುನ್ನಚ್ಚೆರಿಕೆ ಕ್ರಮಗಳನ್ನು ನಿರ್ಲಕ್ಷ್ಯ ಮಾಡಬೇಡಿ ಅಂತ ಹೇಳಲು ಇದಕ್ಕಿಂತ ಒಳ್ಳೆ ಸಮಯ ಮತ್ತೊಂದಿಲ್ಲ,’ ಅಂತಲೂ ಅವರು ಹೇಳಿದ್ದಾರೆ.
In a not-so-happy update, I've tested positive for COVID-19. In better news, I feel fine as I continue my recovery from the virus and should be back on a football pitch soon. No better time to keep reminding everyone to continue taking all the safety precautions always.
— Sunil Chhetri (@chetrisunil11) March 11, 2021
ಪುಟ್ಬಾಲ್ ಪ್ರಿಯರಿಗೆ ಗೊತ್ತಿರುವ ಹಾಗೆ ಛೆತ್ರಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) 7ನೇ ಸೀಸನ್ನಲ್ಲಿ ಬೆಂಗಳುರು ಎಫ್ಸಿ ಪರ ಆಡಿದ್ದರು. ಆದರೆ ಈ ಬಾರಿಯ ಸೀಸನ್ ಬೆಂಗಳೂರು ತಂಡಕ್ಕೆ ಒಳ್ಳೆಯದಾಗಿರಲಿಲ್ಲ. ಲೀಗ್ ಹಂತದಲ್ಲಿ ಅದು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಾರ್ಚ್ 25 ಮತ್ತು 29ರಂದು ಕ್ರಮವಾಗಿ ಓಮನ್ ಮತ್ತು ಯುಎಈ ಜೊತೆ ಸ್ನೇಹಪರ ಪಂಧ್ಯಗಳನ್ನು ಆಡಲಿರುವ ಭಾರತ ತಂಡಕ್ಕೆ ಕಳೆದ ವಾರ ಪ್ರಕಟಿಸಿರುವ 35 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಛೆತ್ರಿ ಅವರ ಹೆಸರು ಕೂಡ ಇದೆ.
ಸಾಕರ್ಗೆ ಸಂಬಂಧಿಸಿದಂತೆ ಹೇಳುವುದಾದರೆ ಛೆತ್ರಿ ನಿಸ್ಸಂದೇಹವಾಗಿ ಭಾರತದ ಸೂಪರ್ ಸ್ಟಾರ್. 2017-18 ಸಾಲಿನ ಐಎಸ್ಎಲ್ ಸೀಸನ್ನಲ್ಲಿ ಅವರು ಅಪ್ರತಿಮ ಪ್ರದರ್ಶನಗಳನ್ನು ನೀಡಿ ‘ಹಿರೋ ಆಫ್ ದಿ ಲೀಗ್’ ಪ್ರಶಸ್ತಿಗೆ ಪಾತ್ರರಾಗಿದ್ದರು. ಹಾಗೇಯೇ, 2017 ಸಾಲಿಗೆ, ‘ಎಐಎಫ್ಎಫ್ ಪ್ಲೇಯರ್ ಅಫ್ ದಿ ಈಯರ್,’ ಪ್ರಶಸ್ತಿಯನ್ನೂ ಅವರಿಗೆ ನೀಡಲಾಗಿತ್ತು.
ಇದನ್ನೂ ಓದಿ: ಫುಟ್ಬಾಲ್ ದಂತಕಥೆ ಪೀಲೆ ಸಾರ್ವಕಾಲಿಕ ದಾಖಲೆ ಮುರಿದ ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ