ಫುಟ್ಬಾಲ್ ದಂತಕಥೆ ಪೀಲೆ ಸಾರ್ವಕಾಲಿಕ ದಾಖಲೆ ಮುರಿದ ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ
ಫುಟ್ಬಾಲ್ ಜಗತ್ತಿನ ಅನಭಿಶಕ್ತ ದೊರೆ ಲಿಯೋನೆಲ್ ಮೆಸ್ಸಿ ಮಂಗಳವಾರ ಬಾರ್ಸಿಲೋನಾ ಪರ ತನ್ನ 644 ನೇ ಗೋಲು ಗಳಿಸುವ ಮೂಲಕ ಪೀಲೆ ಅವರ ಸಾರ್ವಕಾಲಿಕ ಗೋಲುಗಳ ಮೈಲಿಗಲ್ಲನ್ನು ಮುರಿದಿದ್ದಾರೆ. ಈ ಮೂಲಕ ಫುಟ್ಬಾಲ್ ಆಟದಲ್ಲಿ ತಾನೊಬ್ಬ ಚತುರ ಆಟಗಾರ ಎಂಬುದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ವಲ್ಲಾಡೋಲಿಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾರ್ಸಿಲೋನಾವನ್ನು 3-0 ಗೋಲುಗಳಿಂದ ಗೆಲ್ಲಲು ಸಹಾಯ ಮಾಡಿದ ಮೆಸ್ಸಿ, ಶನಿವಾರ ಪೀಲೆ ಅವರು ಗಳಿಸಿದ್ದ ಸಾರ್ವಕಾಲಿಕ ದಾಖಲೆಯ ಗೋಲುಗಳನ್ನು ಸರಿಗಟ್ಟಿದ್ದರು. 1957-74ರವರೆಗೆ ಸ್ಯಾಂಟೋಸ್ ತಂಡಕ್ಕಾಗಿ ಪೀಲೆ ಅವರು 643 ಗೋಲುಗಳನ್ನು ಬಾರಿಸಿದ್ದರು. 2004 ರಂದು ಫುಟ್ಬಾಲ್ ಜಗತ್ತಿಗೆ ಕಾಲಿರಿಸಿದ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಪರ ಆಡಿದ ಮೊದಲ ಪಂದ್ಯದಿಂದ ಈ ವರೆಗೂ ತಮ್ಮ ವೃತ್ತಿಜೀವನದಲ್ಲಿ 644 ಗೋಲು ಗಳಿಸಿದ್ದಾರೆ.
ಟ್ವಿಟರ್ನಲ್ಲಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ.. ಈ ಸಂತಸದ ವಿಚಾರವನ್ನು ಟ್ವಿಟರ್ನಲ್ಲಿ ಬರೆದುಕೊಂಡಿರುವ ಮೆಸ್ಸಿ ನಾನು ಆಟವಾಡಲು ಪ್ರಾರಂಭಿಸಿದಾಗ ನಾನು ಈ ದಾಖಲೆಯನ್ನು ಮುರಿಯುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನನ್ನ ಸಾಧನೆಯ ಹಾದಿಯಲ್ಲಿ ನನಗೆ ಸಹಾಯ ಮಾಡಿದ ನನ್ನ ತಂಡದ ಸದಸ್ಯರು, ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ಪ್ರತಿದಿನ ನನ್ನನ್ನು ಬೆಂಬಲಿಸುವ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
Ig Messi : (1) When I started playing football, I did not expect that I would break a record like this, especially since it is a number for @Pele … pic.twitter.com/NertBGqYek
— Leo Messi ? (@WeAreMessi) December 22, 2020
Published On - 12:14 pm, Wed, 23 December 20