Obstructing The Field: ಫೀಲ್ಡಿಂಗ್​ಗೆ ಅಡಚಣೆ ಮಾಡಿ ಔಟಾದ ವಿಶ್ವದ ಎಂಟನೇ ಆಟಗಾರ ಶ್ರೀಲಂಕಾದ ಗುಣತಿಲಕ

|

Updated on: Mar 11, 2021 | 7:52 PM

ಒಬ್ಬ ಬ್ಯಾಟ್ಸ್​ಮನ್ ರನ್ ಕದಿಯುವಾಗ ಉದ್ದೇಶಪೂರ್ವವಾಗಿ ಚೆಂಡನ್ನು ಫೀಲ್ಡರ್​ ಕೈಗೆ ಸಿಗದಂತೆ ಬ್ಯಾಟ್​ನಿಂದಾಗಲೀ ಇಲ್ಲವೇ ಕಾಲಿನಿಂದಾಗಲೀ ದೂರ ತಳ್ಳಿದರೆ ಆಗ ಅ ಬ್ಯಾಟ್ಸ್​ಮನ್ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ. ಫೀಲ್ಡರ್ ವಿಕೆಟ್​ಗಳತ್ತ ಮಾಡಿದ ಥ್ರೋ ಅನ್ನು ಸಹ ಬ್ಯಾಟ್ಸ್​ಮನ್​ ಉದ್ದೇಶಪೂರ್ವಕವಾಗಿ ತಡೆದರೆ ಅಗಲೂ ಬ್ಯಾಟ್ಸಮನ್​ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ

Obstructing The Field: ಫೀಲ್ಡಿಂಗ್​ಗೆ ಅಡಚಣೆ ಮಾಡಿ ಔಟಾದ ವಿಶ್ವದ ಎಂಟನೇ ಆಟಗಾರ ಶ್ರೀಲಂಕಾದ ಗುಣತಿಲಕ
ಶಾಯ್ ಹೋಪ್ ಮತ್ತು ಎವಿನ್ ಲೂಯಿಸ್
Follow us on

ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಔಟ್ ಕ್ರಿಕೆಟ್​ ಪಂದ್ಯಗಳಲ್ಲಿ ಒಬ್ಬ ಬ್ಯಾಟ್ಸ್​​ಮನ್​ ಔಟಾಗಬಹುದಾದ 10 ವಿಧಗಳಲ್ಲಿ ಒಂದು. ಆದರೆ ಬ್ಯಾಟ್ಸ್​ಮನ್ ಹಾಗೆ ಔಟಾಗುವುದು ಬಹಳ ಅಪರೂಪ. ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 8 ಬ್ಯಾಟ್ಸ್​ಮನ್​ಗಳು ಮಾತ್ರ ಹಾಗೆ ಔಟಾಗಿದ್ದಾರೆ. 8ನೇ ಘಟನೆ ಬುಧವಾರದಂದು ವೆಸ್ಟ್​ ಇಂಡೀಸ್​ನ ಆ್ಯಂಟಿಗುವಾದಲ್ಲಿರುವ ಸರ್​ ವಿವಿಯನ್ ರಿಚರ್ಡ್ಸ್ ಕ್ರಿಕೆಟ್​ ಮೈದಾನದಲ್ಲಿ ಸಂಭವಿಸಿದೆ. ಅಂಥ ತೀರ್ಪಿಗೆ ಬಲಿಯಾದ ಆಟಗಾರ ಶ್ರೀಲಂಕಾದ ಆರಂಭ ದನುಷ್ಕಾ ಗುಣತಿಲಕ. ಈ ಘಟನೆ ಸಂಭವಿಸುವ ಮೊದಲು, ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಒಂದು ದಿನದ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡ ಅಧಿಕಾರಯುತ ಸ್ಥಿತಿಯಲ್ಲಿತ್ತು. ಮೊದಲ ವಿಕೆಟ್​ಗೆ ಗುಣತಿಲಕ (52) ತಮ್ಮ ನಾಯಕ ದಿಮುತ್ ಕರುಣರತ್ನೆ (55) ಜೊತೆ 105 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಅದರೆ, ಗುಣತಿಲಕ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ರೂಪದಲ್ಲಿ ಔಟಾಗಿ ಪೆವಲಿಯನ್​ಗೆ ಮರಳಿದ ನಂತರ ಶ್ರೀಲಂಕಾ ತಂಡದ ಬ್ಯಾಟಿಂಗ್ ಕುಸಿಯಿತು.

ಒಬ್ಬ ಬ್ಯಾಟ್ಸ್​ಮನ್ ರನ್ ಕದಿಯುವಾಗ ಉದ್ದೇಶಪೂರ್ವವಾಗಿ ಚೆಂಡನ್ನು ಫೀಲ್ಡರ್​ ಕೈಗೆ ಸಿಗದಂತೆ ಬ್ಯಾಟ್​ನಿಂದಾಗಲೀ ಇಲ್ಲವೇ ಕಾಲಿನಿಂದಾಗಲೀ ದೂರ ತಳ್ಳಿದರೆ ಆಗ ಅ ಬ್ಯಾಟ್ಸ್​ಮನ್ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ. ಫೀಲ್ಡರ್ ವಿಕೆಟ್​ಗಳತ್ತ ಮಾಡಿದ ಥ್ರೋ ಅನ್ನು ಸಹ ಬ್ಯಾಟ್ಸ್​ಮನ್​ ಉದ್ದೇಶಪೂರ್ವಕವಾಗಿ ತಡೆದರೆ ಅಗಲೂ ಬ್ಯಾಟ್ಸಮನ್​ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ

ಶ್ರೀಲಂಕಾದ 232 ರನ್ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ವಿಂಡೀಸ್ 8 ವಿಕೆಟ್​ಗಳ ಜಯ ಸಾಧಿಸಿತು. ಆರಂಭ ಆಟಗಾರ ಶಾಯ್ ಹೋಪ್ 133 ಎಸೆತಗಳಲ್ಲಿ 110 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಸರಿ, ಆ ಅಪೂರ್ವ ಘಟನೆಗೆ ವಾಪಸ್ಸು ಹೋಗೋಣ, ಅದು ಜರುಗಿದ್ದು ಶ್ರೀಲಂಕಾ ಇನ್ನಿಂಗ್ಸ್​ನ 21ನೇ ಓವರ್​ನಲ್ಲಿ. ಆಗ ವಿಂಡೀಸ್​ ತಂಡದ ನಾಯಕ ಕೈರನ್ ಪೊಲ್ಲಾರ್ಡ್ ಬೌಲಿಂಗ್ ಮಾಡುತ್ತಿದ್ದರು. ಉತ್ತಮ ಅಂತರದಲ್ಲಿ ಬಂದ ಅವರ ಎಸೆತವೊಂದನ್ನು ಗುಣತಿಲಕ ತಮ್ಮ ಮುಂದೆಯೇ ರಕ್ಷಣಾತ್ಮಕವಾಗಿ ಆಡಿ ರನ್​ಗೆ ಕಾಲ್​ ಮಾಡಿ ಸ್ವಲ್ಪ ಮುಂದೆ ಓಡಿದರು. ನಾನ್​-ಸ್ಟ್ರೈಕರ್ ತುದಿಯಲ್ಲಿದ್ದ ಪಥುಮ್ ನಿಸ್ಸಾಂಕ ಸಹ ಅವರ ಕರೆಗೆ ಓಗೊಟ್ಟು ಓಡಲಾರಂಭಿದರು. ಆದರೆ ಫಾಲೋ ಥ್ರೂನಲ್ಲಿ ಪೊಲ್ಲಾರ್ಡ್​ ವೇಗವಾಗಿ ಚೆಂಡಿನತ್ತ ಓಡಿ ಬರುತ್ತಿರುವದನ್ನು ಗಮನಿಸಿದ ಗುಣತಿಲಕ, ನಿಸ್ಸಾಂಕ ಅವರನ್ನು ವಾಪಸ್ಸು ಕಳಿಸಿ ತಾವು ಹಿಮ್ಮುಖವಾಗಿ ತಮ್ಮ ಕ್ರೀಸಿಗೆ ಮರಳಿದರು. ಆದರೆ ಹಾಗೆ ವಾಪಸ್ಸು ಹೋಗುವಾಗ ಅವರ ಚೆಂಡನ್ನು ತುಳಿದಿದ್ದರಿಂದ ಅದು ಸ್ವಲ್ಪ ದೂರಕ್ಕೆ ಹೋಗಿ ಫೊಲ್ಲಾರ್ಡ್​​ ಕೈಗೆ ಸಿಗದಂತಾಯಿತು. ಗುಣತಿಲಕ ಉದ್ದೇಶಪೂರ್ವಕವಾಗಿ ಚೆಂಡನ್ನು ದೂರ ಒದ್ದರು, ಅದು ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಅಗಿದೆ, ಹಾಗಾಗಿ ಅವರು ಔಟ್​ ಎಂದು ಪರಿಗಣಿಸಿಬೇಕು ಎಂದು ವಿಂಡೀಸ್ ಅಟಗಾರರು ಮಾಡಿದ ಮನವಿಯನ್ನು ಅಂಪೈರ್​ಗಳು ಸಮಾಲೋಚನೆ ನಡೆಸಿ ಗುಣತಿಲಕ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಔಟ್ ಎಂದು ಘೋಷಿಸಿದರು.

ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 8 ಜನ ಮಾತ್ರ ಹೀಗೆ ಔಟಾಗಿದ್ದರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಒಮ್ಮೆ ಮಾತ್ರ ಅದು ಸಂಭವಿಸಿದರೆ ಉಳಿದ 7 ಪ್ರಕರಣಗಳು ಒಂದು ದಿನ ಪಂದ್ಯಗಳಲ್ಲಿ ಘಟಿಸಿವೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆದವರು ಇಂಗ್ಲೆಂಡ್​ನ ಲೆನ್ ಹಟ್ಟನ್, ಅದು ನಡೆದದ್ದು 1951ರ ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಸರಣಿಯಲ್ಲಿ. ಒಂದು ದಿನ ಪಂದ್ಯಗಳಲ್ಲಿ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗಿರುವವರು; ಪಾಕಿಸ್ತಾನದ ರಮೀಜ್ ರಾಜಾ, ಭಾರತದ ಮೊಹಿಂದರ್ ಅಮರನಾಥ್, ಪಾಕಿಸ್ತಾನದವರೇ ಅಗಿರುವ ಇಂಜಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಅನ್ವರ್ ಅಲಿ ಮತ್ತು ಇಂಗ್ಲೆಂಡ್​ನ ಬೆನ್ ಸ್ಟೋಕ್ಸ್ .

ಇದನ್ನೂ ಓದಿ: India vs England Test Series: ಪಂತ್ ಎರಡು ತಿಂಗಳ ಅವಧಿಯಲ್ಲಿ ಎರಡು ಶ್ರೇಷ್ಠ ಇನ್ನಿಂಗ್ಸ್​ಗಳನ್ನಾಡಿದ್ದಾರೆ: ಸಂಜಯ ಮಂಜ್ರೇಕರ್

Published On - 7:34 pm, Thu, 11 March 21