ನವೆಂಬರ್ 20 ರಂದು ಆರಂಭವಾದ ಫುಟ್ಬಾಲ್ ವಿಶ್ವಕಪ್ (FIFA World Cup) ಅಂತಿಮ ಹಂತ ತಲುಪಿದೆ. ಡಿಸೆಂಬರ್ 18 ರಂದು ನಡೆಯಲಿರುವ ಫೈನಲ್‌ನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ (argentina vs france) ಕತಾರ್‌ನ ರಾಷ್ಟ್ರೀಯ ದಿನದಂದು ಲುಸೈಲ್ ಕ್ರೀಡಾಂಗಣದಲ್ಲಿ ಟ್ರೋಫಿ ಗೆಲ್ಲಲು ಸೆಣಸಾಡಲಿವೆ. ಸೆಮಿಫೈನಲ್ನಲ್ಲಿ ಕ್ರೊವೇಷ್ಯಾ ತಂಡವನ್ನು ಮಣಿಸಿರುವ ಅರ್ಜೆಂಟೀನಾ ತಂಡ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸ್ಸಿನೊಂದಿಗೆ ಅಖಾಡಕ್ಕಿಳಿಯುತ್ತಿದೆ. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ಹರಿದಾಡುತ್ತಿದ್ದ ಸುದ್ದಿಯಿಂದ ಮೆಸ್ಸಿ (Lionel Messi) ಅಭಿಮಾನಿಗಳು ಕೊಂಚ ಆತಂಕಗೊಂಡಿದ್ದರು. ವಾಸ್ತವವಾಗಿ ಸೆಮಿಫೈನಲ್ ಪಂದ್ಯದಲ್ಲಿ ಇಂಜುರಿಗೊಂಡಿದ್ದ ಮೆಸ್ಸಿ ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಮೆಸ್ಸಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಅಲ್ಲದೆ ಇದು ತನ್ನ ಕೊನೆಯ ವಿಶ್ವಕಪ್ ಪಂದ್ಯ ಎಂಬುದನ್ನು ಸಹ ಮೆಸ್ಸಿ ಖಚಿತಪಡಿಸಿದ್ದಾರೆ.
ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಇದು ಕೊನೆಯ ವಿಶ್ವಕಪ್. ಇದನ್ನು ಸ್ವತಃ ಮೆಸ್ಸಿ ಅವರೇ ಖಚಿತಪಡಿಸಿದ್ದಾರೆ. ವಿಶ್ವಕಪ್ 2022ರ ಫೈನಲ್ ತನ್ನ ಕೊನೆಯ ವಿಶ್ವಕಪ್ ಪಂದ್ಯ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ವಿರುದ್ಧ ಸೆಣಸಲಿದ್ದು, ಭಾನುವಾರ ಕೊನೆಯ ಬಾರಿಗೆ ಮೆಸ್ಸಿ ವಿಶ್ವಕಪ್ ಪಂದ್ಯವನ್ನಾಡಲಿದ್ದಾರೆ.
FIFA World Cup 2022: ಮೆಸ್ಸಿ ತಂಡ ಫಿಫಾ ವಿಶ್ವಕಪ್ ಗೆದ್ದರೆ ಈ 5 ದಾಖಲೆಗಳು ಸೃಷ್ಟಿಯಾಗಲಿವೆ..!
2. ಫೈನಲ್‌ನೊಂದಿಗೆ ಪ್ರಯಾಣದ ಅಂತ್ಯ
ಮೆಸ್ಸಿ ವಿಶ್ವ ಚಾಂಪಿಯನ್ ಆಗಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತಾರೋ ಅಥವಾ ರನ್ನರ್ ಅಪ್ ಆಗುತ್ತಾರೋ ಎಂಬುದು ಈಗ ಕುತೂಹಲಕಾರಿಯಾಗಿದೆ. ವಾಸ್ತವವಾಗಿ, ಅರ್ಜೆಂಟೀನಾ ತನ್ನ ಕೊನೆಯ ವಿಶ್ವಕಪ್ ಫೈನಲ್ ಅನ್ನು 2014 ರಲ್ಲಿ ಆಡಿತ್ತು. ಅಲ್ಲಿ ಜರ್ಮನಿಯು ಮೆಸ್ಸಿ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗುವ ಕನಸಿಗೆ ಬೆಂಕಿ ಹಚ್ಚಿತ್ತು.
3. ಮುಂದಿನ ವಿಶ್ವಕಪ್‌ಗೆ ಬಹಳ ಸಮಯವಿದೆ
ಮುಂದಿನ ವಿಶ್ವಕಪ್‌ನಲ್ಲಿ ಇನ್ನೂ ಸಾಕಷ್ಟು ಸಮಯವಿದೆ. ಹೀಗಾಗಿ ನಾನು ಅಲ್ಲಿಯವರೆಗೂ ಆಡುತ್ತೇನೆ ಎಂಬುದು ಖಾತ್ರಿಯಿಲ್ಲ. ಹೀಗಾಗಿ ಈ ರೀತಿಯಲ್ಲಿ ಪ್ರಯಾಣವನ್ನು ಕೊನೆಗೊಳಿಸುವುದು ಉತ್ತಮ ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ. ಮೆಸ್ಸಿಗೆ ಇದು 5ನೇ ವಿಶ್ವಕಪ್ ಆಗಿದ್ದು, ಇದುವರೆಗಿನ ವಿಶ್ವಕಪ್ ಇತಿಹಾಸದಲ್ಲಿ ಅವರು ಒಟ್ಟು 11 ಗೋಲು ಗಳಿಸಿದ್ದಾರೆ.
4. ಫೈನಲ್‌ನಲ್ಲಿ ಗೆಲುವಿಗಾಗಿ ಹೋರಾಟ
ಭಾನುವಾರ ನಡೆಯುವ ಫೈನಲ್ ಪಂದ್ಯ ತಮ್ಮ ಪಾಲಿಗೆ ಕೊನೆಯದು ಎಂದು ಸ್ವತಃ ಮೆಸ್ಸಿ ಅವರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ”ಅರ್ಜೆಂಟೀನಾ ತಂಡ ಫೈನಲ್ ತಲುಪಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಭಾನುವಾರ ಫೈನಲ್ ಪಂದ್ಯದ ಬಳಿಕ ತಮ್ಮ ಫಿಫಾ ವಿಶ್ವಕಪ್ ಟೂರ್ನಿಯ ಪಯಣ ಅಂತ್ಯವಾಗಲಿದೆ. ವಿಶ್ವಕಪ್ ಗೆಲ್ಲಲು ಈ ಬಾರಿ ನಮಗೆ ಅತ್ಯುತ್ತಮ ಅವಕಾಶವಿದೆ. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಗಳು ಒಳ್ಳೆಯ ಸಂಗತಿ. ಆದರೆ, ಒಂದು ಗುಂಪಾಗಿ ಈ ಟೂರ್ನಿಯಲ್ಲಿ ಸಾಧನೆ ಮಾಡುವುದು ತುಂಬಾ ಮುಖ್ಯ. ಇದು ಅತ್ಯಂತ ಅದ್ಭುತವಾದ ಸಂಗತಿಯಾಗಿರುತ್ತದೆ. ಪ್ರಶಸ್ತಿ ಗೆಲ್ಲಲು ನಮಗೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಕಠಿಣ ಪೈಪೋಟಿ ನೀಡಿದ ಬಳಿಕ ನಮಗೆ ನಮ್ಮ ಕನಸು ನನಸು ಮಾಡಿಕೊಳ್ಳಲು ಅತ್ಯುತ್ತಮ ಅವಕಾಶ ಸಿಕ್ಕಿದೆ,” ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:20 am, Sun, 18 December 22