ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಪಡೆದಿರುವ ಭಾರತೀಯರು ಮತ್ತು ಅವರು ಪ್ರತಿನಿಧಿಸಲಿರುವ ಕ್ರೀಡೆಯ ವಿವರ ಇಲ್ಲಿದೆ

|

Updated on: Jul 06, 2021 | 9:10 PM

ಇದುವರೆಗೆ ನಡೆದಿರುವ 31 ಒಲಂಪಿಕ್ಸ್ ಕ್ರಿಡಾಕೂಟಗಳಲ್ಲಿ ಬಾರತ ಕೇವಲ 28 ಪದಕಗಳನ್ನು ಮಾತ್ರ ಗೆದ್ದಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಅತ್ಯುತ್ತಮ ಸಾಧನೆ 2012 ಲಂಡನ್ ಒಲಂಪಿಕ್ಸ್​ನಲ್ಲಿ ಬಂದಿತ್ತು. ನಿಮಗೆ ನೆನೆಪಿರಬಹುದು, ಆಗ ಭಾರತದ ಅಥ್ಲೀಟ್​ಗಳು 6 ಪದಕಗಳನ್ನು ಗೆದ್ದಿದ್ದರು

ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಪಡೆದಿರುವ ಭಾರತೀಯರು ಮತ್ತು ಅವರು ಪ್ರತಿನಿಧಿಸಲಿರುವ ಕ್ರೀಡೆಯ ವಿವರ ಇಲ್ಲಿದೆ
ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿರುವವರು
Follow us on

ಕೋವಿಡ್-19 ಪಿಡುಗಿನಿಂದ ಒಂದು ವರ್ಷ ಮುಂದೂಡಲ್ಪಟ್ಟ ಟೊಕಿಯೊ ಒಲಂಪಿಕ್ಸ್ ಈ ತಿಂಗಳು ಆರಂಭವಾಗಲಿದೆ. ವಿಶ್ವದ ಅತ್ಯುನ್ನತ ಮತ್ತು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಈ ಬಾರಿ ಭಾರತೀಯ ಅಥ್ಲೀಟ್​ ಮತ್ತು ಇತರ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲುವ ನಿರೀಕ್ಷೆಯನ್ನು ದೇಶದ ಕ್ರೀಡಾ ಪ್ರೇಮಿಗಳು ಇಟ್ಟುಕೊಂಡಿದ್ದಾರೆ. ಅಥ್ಲೆಟಿಕ್ಸ್ ಮತ್ತು ವೇಟ್​ಲಿಫ್ಟಿಂಗ್​ನಲ್ಲಿ ಭಾರತ ಪದಕಗಳನ್ನು ಗೆಲ್ಲಬಹುದು ಎಂದು ಕ್ರೀಡಾ ಪರಿಣಿತರು ಹೇಳುತ್ತಿದ್ದಾರೆ. ಇದುವರೆಗೆ ನಡೆದಿರುವ 31 ಒಲಂಪಿಕ್ಸ್ ಕ್ರಿಡಾಕೂಟಗಳಲ್ಲಿ ಬಾರತ ಕೇವಲ 28 ಪದಕಗಳನ್ನು ಮಾತ್ರ ಗೆದ್ದಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಅತ್ಯುತ್ತಮ ಸಾಧನೆ 2012 ಲಂಡನ್ ಒಲಂಪಿಕ್ಸ್​ನಲ್ಲಿ ಬಂದಿತ್ತು. ನಿಮಗೆ ನೆನೆಪಿರಬಹುದು, ಆಗ ಭಾರತದ ಅಥ್ಲೀಟ್​ಗಳು 6 ಪದಕಗಳನ್ನು ಗೆದ್ದಿದ್ದರು. ಓಕೆ, ಈ ಬಾರಿಯ ಕ್ರೀಡಾಕೂಟದಲ್ಲಿ ಬಾಗವಹಿಸಲು ಅರ್ಹತೆ ಪಡೆದಿರುವ ಭಾರತಯ ಕ್ರೀಡಾಪಟುಗಳ ಹೆಸರು ಮತ್ತು ಅವರು ಪ್ರತಿನಿಧಿಸುವ ಕ್ರೀಡೆಯ ವಿವರ ಕೆಳಗಿನಂತಿದೆ.

ಆರ್ಚರಿ

ಪುರುಷರ ವೈಯಕ್ತಿಕ ಸ್ಫರ್ಧೆ

ಅತನು ದಾಸ್
ತರುಣ್​ದೀಪ್ ರಾಯ್
ಪ್ರವೀಣ್​ ಯಾದವ್

ಪುರುಷರ ತಂಡ

ಅತನು ದಾಸ್
ತರುಣ್​ದೀಪ್ ರಾಯ್
ಪ್ರವೀಣ್​ ಯಾದವ್

ಮಹಿಳೆಯರ ವೈಯಕ್ತಿಕ ಸ್ಫರ್ಧೆ

ದೀಪಿಕಾ ಕುಮಾರಿ
ಮಿಕ್ಸೆಡ್ ಟೀಮ್
ದೀಪಿಕಾ ಕುಮಾರಿ
ಅತನು ದಾಸ್

ಅಥ್ಲೆಟಿಕ್ಸ್

ಇದುವರೆಗೆ ಭಾರತದ 19 ಅಥ್ಲೀಟ್​ಗಳು ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದಾರೆ. ಅವರ ವಿವರ ಕೆಳಗಿನಂತಿದೆ

ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು:

ಪುರುಷರ 400 ಮೀಟರ್ ಹರ್ಡಲ್ಸ್

ಎಮ್ ಪಿ ಜಬೀರ್

4 X 400 ಮೀಟರ್ ರೀಲೇ

ಮುಹಮ್ಮದ್ ಅನಾಸ ಅಹಿಯಾ
ನೋಹ ನಿರ್ಮಲ್ ಟಾಮ್
ಅಮೋಜ್ ಜೇಕಬ್
ಅರೋಕ್ಯ ರಾಜೀವ್
ನಾಗನಾಥನ್ ಪಂಡಿ

ಪುರುಷರ 20ಕಿಮೀ ರೇಸ್ ನಡಿಗೆ

ಸಂದೀಪ್ ಕುಮಾರ್
ರಾಹುಲ್ ರೊಹಿಲಾ
ಇರ್ಫಾನ್ ಕೊಳುತ್ತುಮ್ ತೋಡಿ

ಪುರುಷರ 50ಕಿಮೀ ರೇಸ್ ನಡಿಗೆ

ಗುರುಪ್ರೀತ್ ಸಿಂಗ್

ಪರುಷರ 3000 ಮೀ ಸ್ಟೀಪಲ್​ಚೇಸ್

ಅವಿನಾಷ್ ಸಬ್ಲೆ

ಮಹಿಳೆಯರ 100 ಮೀ ಓಟ

ದ್ಯುತೀ ಚಾಂದ್

ಮಹಿಳೆಯರ 200 ಮೀ ಓಟ

ದ್ಯುತೀ ಚಾಂದ್

ಮಹಿಳೆಯರ 20ಕಿಮೀ ರೇಸ್ ನಡಿಗೆ

ಪ್ರಿಯಾಂಕಾ ಗೋಸ್ವಾಮಿ
ಭಾವನಾ ಜಾಟ್

ಮಿಕ್ಸೆಡ್ 4×400 ರೀಲೆ

ಸಾರ್ಥಕ್ ಭಾಂಬ್ರಿ
ಅಲೆಕ್ಸ್ ಅಂತೋಣಿ

ವಿ ರೇವತಿ
ಸುಭಾ ವೆಂಕಟೇಶನ್
ಧನಲಕ್ಷ್ಮಿ ಶೇಖರ್

ಫೀಲ್ಡ್ ಸ್ಪರ್ಧೆಗಳು

ಪುರುಷರ ಜಾವೆಲಿನ್ ಥ್ರೋ

ನೀರಜ್ ಚೋಪ್ರಾ
ಶಿವ್ ಪಾಲ್ ಸಿಂಗ್

ಪುರುಷರ ಲಾಂಗ್ ಜಂಪ್

ಮುರಳಿ ಸ್ರೀಶಂಕರ್

ಪುರುಷರ ಶಾಟ್​ ಪುಟ್

ತಜಿಂದರ್​ಪಾಲ್​ ಸಿಂಗ್ ತೂರ

ಮಹಿಳೆಯರ ಡಿಸ್ಕಸ್ ಥ್ರೋ

ಕಮಲ್ ಪ್ರೀತ್ ಕೌರ್
ಸೀಮಾ ಪುನಿಯಾ

ಮಹಿಳೆಯರ ಜಾವೆಲಿನ್ ಎಸೆತ

ಅನ್ನು ರಾಣಿ

ಬ್ಯಾಡ್ಮಿಂಟನ್

ಭಾರತದ ನಾಲ್ವರು  ಪುರುಷ ಶಟ್ಲರ್​ಗಳು ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದು ಮೂರು ವಿಭಾಗಳಲ್ಲಿ ದೇಶವನ್ನು ಪತ್ರಿನಿಧಿಸಲಿದ್ದಾರೆ

ಪುರುಷರ ಸಿಂಗಲ್ಸ್

ಸಾಯಿ ಬಿ ಪ್ರಣೀತ್

ಪುರುಷರ ಡಬಲ್ಸ್

ಸಾತ್ವಿಕ್​ಸಾಯಿರಾಜ್ ರಾಂಕಿರೆಡ್ಟಿ
ಚಿರಾಗ್ ಶೆಟ್ಟಿ

ಮಹಿಳೆಯರ ಸಿಂಗ್ಸಲ್

ಪಿವಿ ಸಿಂಧೂ

ಬಾಕ್ಸಿಂಗ್

ಈ ಈವೆಂಟ್​ನಲ್ಲಿ ಭಾರತ ಇದುವರೆಗಿನ ಅತಿದೊಡ್ಡ ತಂಡವನ್ನು ಕಳಿಸುತ್ತಿದೆ. ಒಟ್ಟು ಒಂಭತ್ತು ಬಾಕ್ಸರ್​ಗಳು ಟೊಕಿಯೊ ಒಲಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದ್ದಾರೆ

ಪುರುಷರ 52 ಕೆಜಿ- ಫ್ಲೈವೇಟ್​

ಅಮಿತ್ ಪಂಗಲ್

ಪುರುಷರ 53 ಕೆಜಿ- ಲೈಟ್​ವೇಟ್

ಮನೀಶ್ ಕೌಶಿಕ್

ಪುರುಷರ 69 ಕೆಜಿ- ವೆಲ್ಟರ್​ವೇಟ್

ವಿಕಾಸ್ ಕ್ರಿಷನ್

ಪುರುಷರ 75 ಕೆಜಿ- ಮಿಡ್ಲ್​ವೇಟ್

ಆಶಿಷ್ ಕುಮಾರ್

ಪುರುಷರ +91 ಕೆಜಿ ವಿಭಾಗ-ಸುಪರ್ ಹೆವಿವೇಟ್

ಸತೀಷ್ ಕುಮಾರ

ಮಹಿಳೆಯರ 51 ಕೆಜಿ- ಫ್ಲೈವೇಟ್

ಮೇರಿ ಕೋಮ್

ಮಹಿಳೆಯರ 60 ಕೆಜಿ-ಲೈಟ್​ವೇಟ್​

ಸಿಮ್ರನ್​ಜಿತ್ ಕೌರ್

ಮಹಿಳೆಯರ 69ಕೆಜಿ-ವೆಲ್ಟರ್​ವೇಟ್

ಲವ್ಲೀನಾ ಬೊರ್ಗೊಹೇನ್

ಮಹಿಳೆಯರ 75 ಕೆಜಿ-ಮಿಡ್ಲ್​ವೇಟ್

ಪೂಜಾ ರಾಣಿ

ಈಕ್ವೆಸ್ಟ್ರಿಯನ್

ಏಷ್ಯನ್ ಗೇಮ್ಸ್​ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಈಕ್ವೆಸ್ಟ್ರಿಯನ್ ಪೌದ್ ಮಿರ್ಜಾ ಅವರು ಅಧಿಕೃತವಾಗಿ ಟೊಕಿಯೊ ಒಲಂಪಿಕ್ಸ್ ಭಾಗವಹಿಸಲು ಅರ್ಹತೆ ಪಡೆದ ಭಾರತೀಯನೆನಿಸಿಕೊಂಡಿದ್ದು ಎರಡು ದಶಕಗಳ ಅವಧಿಯಿಂದ ಈ ಈವೆಂಟ್​ನಲ್ಲಿ ಭಾರತ ಎದುರಿಸುತ್ತಿದ್ದ  ಬರವನ್ನು ನೀಗಿಸಿದ್ದಾರೆ.

ಫೆನ್ಸಿಂಗ್

ಈ ವರ್ಷದ ಮಾರ್ಚ್​ನಲ್ಲಿ ತಮಿಳುನಾಡಿನ ಸಿಎ ಭವಾನಿ ದೇವಿ ಅವರು ಒಲಂಪಿಕ್ಸ್​ನ ಈ ಈವೆಂಟ್​ನಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿದ ಮೊಟ್ಟ ಮೊದಲ ಭಾರತೀಯಳೆನಿಸಿಕೊಂಡರು. ಅವರು ಅಡ್ಜಸ್ಟೆಡ್ ಅಫೀಸಿಯಲ್ ಱಂಕಿಂಗ್ ಮೂಲಕ ಅರ್ಹತೆ ಗಿಟ್ಟಿಸಿದರು.

ಮಹಿಳೆಯರ ಸಬ್ರೆ

ಸಿಎ ಭವಾನಿ ದೇವಿ

ಗಾಲ್ಫ್

ಇದುವರೆಗೆ ಕೇವಲ ಮೂವರು ಭಾರತೀಯರು ಅರ್ಹತೆ ಗಿಟ್ಟಿಸಿದ್ದಾರೆ. 60 ಅರ್ಹ ಆಟಗಾರರ ಪಟ್ಟಿಯ ಮೂಲಕ ಅವರಿ ಪ್ರವೇಶ ಪಡೆದಿದ್ದಾರೆ

ಪುರುಷರ ವೈಯಕ್ತಿಕ ಸ್ಪರ್ಧೆ

ಅನಿರ್ಬನ್ ಲಹಿರಿ
ಉದಯನ್ ಮಾನೆ

ಮಹಿಳೆಯರ ವೈಯಕ್ತಿಕ ಸ್ಪರ್ಧೆ

ಆದಿತಿ ಅಶೋಕ್

ಜಿಮ್ನಾಸ್ಟಿಕ್ಸ್

2019 ರ ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್​ಶಿಪ್ಸ್​ನಲ್ಲಿ ಕಂಚಿನ ಪದಕ ಪಡೆದ ಪ್ರಣಿತಿ ನಾಯಕ್ ಅವರು ಕಾಂಟಿನೆಂಟಲ್ ಕೋಟಾ ಮೂಲಕ ಟೋಕಿಯೊ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಹಾಕಿ
ನವೆಂಬರ್ 2, 2019ರಲ್ಲಿ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಎಫ್​ಐಎಚ್ ಅರ್ಹತಾ ಸುತ್ತಿ ಮೂಲಕ ಒಲಂಪಿಕ್ಸ್​ಗೆ ಪ್ರವೇಶ ಪಡೆದಿವೆ. ತಂಡಗಳು ಇಂತಿವೆ:

ಪುರುಷರ ಹಾಕಿ:

ಗೋಲ್ ಕೀಪರ್ ಪಿ ಆರ್ ಶ್ರೀಜೇಷ್
ಡಿಫೆಂಡರ್​ಗಳು: ಹರ್ಮನ್​ಪ್ರೀತ್ ಸಿಂಗ್, ರುಪಿಂದರ್ ಪಾಲ್ ಸಿಂಗ್ , ಸುರೇಂದರ ಕುಮಾರ್, ಅಮಿತ್ ರೋಹಿದಾಸ್, ಬೀರೆಂದ್ರ ಲಾಕ್ರಾ
ಮಿಡ್​ಫೀಲ್ಡರ್​ಗಳು: ಹಾರ್ದಿಕ್ ಸಿಂಗ್, ಮನ್​ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಟ ಶರ್ಮ, ಸುಮಿತ್
ಫಾರ್ವರ್ಡ್ಸ್: ಶಂಶೇರ್ ಸಿಂಗ್, ದಿಲ್ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮಂದೀಪ್ ಸಿಂಗ್,
ಸ್ಟ್ಯಾಂಡ್​ಬೈಗಳು: ಕ್ರಿಷನ್ ಪಾಠಕ್ (ಗೋಲ್​ಕೀಪರ್), ವರುಣ್ ಕುಮಾರ್ (ಡಿಫೆಂಡರ್) ಮತ್ತು ಸಿಮ್ರನ್ಜಿತ್ ಸಿಂಗ್ (ಮಿಡ್​ಫೀಲ್ಡರ್)

ಮಹಿಳೆಯರ ಹಾಕಿ

ಗೋಲ್ ಕೀಪರ್: ಸವಿತಾ

ಡಿಫೆಂಡರ್​ಗಳು: ದೀಪ್​ಗ್ರೇಸ್ ಎಕ್ಕಾ, ನಿಕ್ಕಿ ಪ್ರಧಾನ, ಗುರ್ಜಿತ್ ಕೌರ್, ಉದಿತಾ

ಮಿಡ್​ಫೀಲ್ಡರ್​ಗಳು: ನಿಶಾ, ನೇಹಾ, ಸುಶೀಲಾ ಚಾನು ಪುಕ್ರಂಭಮ್, ಮೊನಿಕಾ, ನವಜೋತ್ ಕೌರ್, ಸಲೀಮಾ ಟೆತೆ,
ಫಾರ್ವರ್ಡ್ಸ್: ರಾಣಿ, ನವ್ನೀತ್ ಕೌರ್, ಲಾಲ್​ರೆಮ್ಸಿಯಾಮಿ, ವಂದನಾ ಕಟಾರಿಯಾಮ ಶರ್ಮಿಲಾ ದೇವಿ,
ಸ್ಟ್ಯಾಂಡ್​ಬೈ: ಈ ರಜನಿ

ಜುಡೋ

ಸುಶೀಲಾ ದೇವಿ ಅವರು ಟೊಕಿಯೊ ಒಲಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿರುವ ಏಕಮಾತ್ರ ಇಂಡಿಯನ್ ಜೊಡೋಕಾ ಆಗಿದ್ದಾರೆ

ರೋಯಿಂಗ್

ಈ ಈವೆಂಟ್​ನಲ್ಲಿ ಭಾಹವಹಿಸಲು ಭಾರತ ಇಬ್ಬರು ರೋವರ್​ಗಳನ್ನು ಕಳಿಸುತ್ತಿದ್ದು ಇವರು ಜೋಡಿಯಾಗೆ ಒಂದೇ ಕೆಟೆಗಿರಿಯಲ್ಲಿ ಭಾಗವಹಿಸಲಿದ್ದಾರೆ

ಪುರುಷರ ಲೈಟ್​ವೇಟ್​ ಡಬಲ್ ಸ್ಕಲ್ಸ್

ಅರ್ಜುನ್ ಲಾಲ್
ಅರವಿಂದ್ ಸಿಂಗ್

ಸೇಲಿಂಗ್

ಭಾರತದ ಸೇಲರ್​ಗಳು 2018ರಲ್ಲಿ ನಡೆದ ವಿಶ್ವ ಸೇಲಿಂಗ್ ಚಾಂಪಿಯನ್​ಶಿಪ್ಸ್ ಮೂಲಕ ಕೆಳಗೆ ಹೇಳಿರುವ ಸ್ಪರ್ಧೆಗಳಿಗೆ ಅರ್ಹತೆ ಪಡೆದಿದ್ದಾರೆ.

ಪುರುಷರ ಲೇಸರ್

ವಿಷ್ಟು ಸರವಣನ್

ಪುರುಷರ 49 ಈಆರ್

ಕೆಸಿ ಗಣಪತಿ
ವರುಣ್ ಠಕ್ಕರ್

ಮಹಿಳೆಯರ ಲೇಸರ್

ನೇತ್ರಾ ಕುಮಣನ್

ಶೂಟಿಂಗ್

ಶೂಟಿಂಗ್ ಈ ಸ್ಪರ್ಧೆಗಳಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳ ನಿರೀಕ್ಷೆಯಿದೆ. ವಿಶ್ವ ದರ್ಜೆಯ 15 ಭಾರತೀಯ ಶೂಟರ್​ಗಳು ವಿವಿಧ ಶೂಟಿಂಗ್ ಸ್ಫರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಪುರುಷರ 10 ಮೀ ಏರ್ ರೈಫಲ್

ದಿವ್ಯಾಂಶ್ ಸಿಂಗ್ ಪನ್ವರ್
ದೀಪಕ್ ಕುಮಾರ್

ಮಹಿಳೆಯರ 10 ಮೀ ಏರ್ ರೈಫಲ್

ಅಪೂರ್ವಿ ಚಂದೇಲಾ

ಎಲಾವೆನಿಲ್ ವಲಾರಿವನ್

ಪುರುಷರ 10 ಮೀ ಏರ್ ಪಿಸ್ಟಲ್

ಸೌರಭ್ ಚೌಧುರಿ
ಅಭಿಷೇಕ್ ವರ್ಮಾ

ಮಹಿಳೆಯರ10 ಮೀ ಏರ್ ಪಿಸ್ಟಲ್

ಮನು ಭಾಕರ್
ಯಶಸ್ವಿನಿ ಸಿಂಗ್ ದೆಸ್ವಾಲ್

ಪುರುಷರ 50 ಮೀ ರೈಫಲ್ 3 ಪೊಸಿಷನ್

ಸಂಜೀವ ರಜಪೂತ್
ಐಶ್ವರಿ ಪ್ರತಾಪ್ ಸಿಂಗ್ ತೋಮರ್

ಮಹಿಳೆಯರ50 ಮೀ ರೈಫಲ್ 3 ಪೊಸಿಷನ್

ಅಂಜುಮ್ ಮೌದ್ಗೀಲ್
ತೇಜಸ್ವಿನಿ ಸಾವಂತ್

ಮಹಿಳೆಯರ 25 ಮೀ ಪಿಸ್ಟಲ್

ಮನು ಭಾಕರ್
ರಾಹಿನ ಸರ್ನೊಬತ್

ಪುರುಷರ ಸ್ಕೀಟ್

ಅಂಗದ್ ಬಾಜ್ವಾ
ಮೈರಜ್ ಅಂಗದ್ ಖಾನ್

ಮಿಕ್ಟೆಡ್​ ಟೀಮ್ 10 ಮೀ ಏರ್​ ರೈಫಲ್

ದಿವ್ಯಾಂಶ್ ಸಿಂಗ್ ಪನ್ವರ್ ಮತ್ತು ಎಲಾವೆನಿಲ್ ವಲಾರಿವನ್
ದೀಪಕ್ ಕುಮಾರ್ ಮತ್ತು ಅಂಜುಮ್ ಮೌದ್ಗೀಲ್

ಮಿಕ್ಸೆಡ್​ ಟೀಮ್ 10 ಮೀ ಏರ್​ ಪಿಸ್ಟಲ್

ಸೌರಭ್ ಚೌಧುರಿ ಮತ್ತು ಮನು ಭಾಕರ್
ಅಭಿಷೇಕ್ ವರ್ಮ ಮತ್ತು ಯಶಸ್ವಿನಿ ಸಿಂಗ್ ದೆಸ್ವಾಲ್

ಈಜು

ಮೊದಲ ಬಾರಿಗೆ ಭಾರತೀಯ ಸ್ವಿಮ್ಮರ್​ಗಳು ಒಲಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ

ಪುರುಷರ 100 ಮೀ ಬ್ಯಾಕ್​ಸ್ಟ್ರೋಕ್

ಶ್ರೀಹರಿ ನಟರಾಜ್

ಪುರುಷರ 200 ಮೀ ಬಟರ್​ಫ್ಲೈ

ಸಾಜನ್ ಪ್ರಕಾಶ್

ಮಹಿಳೆಯರ 100 ಮೀ ಬ್ಯಾಕ್​ಸ್ಟ್ರೋಕ್

ಮಾನಾ ಪಟೇಲ್

ಟೇಬಲ್ ಟೆನಿಸ್

ಭಾರತದ ನಾಲ್ವರು ಆಟಗಾರರು ಅರ್ಹತೆ ಗಿಟ್ಟಿಸಿದ್ದಾರೆ

ಪುರುಷರ್ ಸಿಂಗಲ್ಸ್

ಸಾತಿಯಾ ಜ್ಞಾನಶೇಖರನ್
ಅಚಂತಾ ಶರತ್ ಕಮಾಲ್

ಮಹಿಳೆಯರ ಸಿಂಗಲ್ಸ್

ಮನಿಕಾ ಬಾತ್ರಾ
ಸರಿತಾ ಮುಖರ್ಜಿ

ಮಿಕ್ಸೆಡ್ ಡಬಲ್ಸ್

ಅಚಂತಾ ಶರತ ಕಮಾಲ್
ಮನಿಕಾ ಬಾತ್ರಾ

ಟೆನ್ನಿಸ್

ಇದುವರಗೆ ಭಾರತದ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಮಾತ್ರ ಅರ್ಹತೆ ಗಿಟ್ಟಿಸಿದ್ದಾರೆ

ವೇಟ್​ಲಿಫ್ಟಿಂಗ್

ಕೇವಲ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಮಾತ್ರ ಅರ್ಹತೆ ಗಿಟ್ಟಿಸಿದ್ದಾರೆ.

ಕುಸ್ತಿ

ಈ ಸ್ಪರ್ಧೆಗಳಲ್ಲಿ ಭಾರತದ 7 ಕುಸ್ತಪಟುಗಳು ಅರ್ಹತೆ ಗಿಟ್ಟಿಸಿದ್ದಾರೆ

ಪುರುಷರ 57 ಕೆಜಿ

ರವಿಕುಮಾರ ದಹಿಯಾ

ಪುರುಷರ 65 ಕೆಜಿ

ಬಜರಂಗ ಪುನಿಯಾ

ಪುರುಷರ 86 ಕೆಜಿ

ದೀಪಕ್ ಪುನಿಯಾ

ಮಹಿಳೆಯರ 50 ಕೆಜಿ

ಸೀಮಾ ಬಿಸ್ಲಾ

ಮಹಿಳೆಯರ 53 ಕೆಜಿ

ವಿನೇಶ್ ಫೋಗಟ್

ಮಹಿಳೆಯರ 57 ಕೆಜಿ

ಅನ್ಷು ಮಲ್ಲಿಕ್

ಮಹಿಳೆಯರ 62 ಕೆಜಿ

ಸೋನಮ್ ಮಲ್ಲಿಕ್

ಇದನ್ನೂ ಓದಿ: Tokyo Olympic: ಯೂನಿವರ್ಸಿಟಿ ಕೋಟಾದಲ್ಲಿ ಒಲಿಂಪಿಕ್ಸ್​ ಟಿಕೆಟ್ ಪಡೆದ ಈಜುಗಾರ್ತಿ ಮಾನ ಪಟೇಲ್​! ಕ್ರೀಡಾ ಸಚಿವರ ಶ್ಲಾಘನೆ

Published On - 6:15 pm, Tue, 6 July 21