Tokyo Olympic: ಯೂನಿವರ್ಸಿಟಿ ಕೋಟಾದಲ್ಲಿ ಒಲಿಂಪಿಕ್ಸ್​ ಟಿಕೆಟ್ ಪಡೆದ ಈಜುಗಾರ್ತಿ ಮಾನ ಪಟೇಲ್​! ಕ್ರೀಡಾ ಸಚಿವರ ಶ್ಲಾಘನೆ

Tokyo Olympic: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಮಹಿಳೆ ಮತ್ತು ಮೂರನೇ ಭಾರತೀಯ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾನಾಗೆ ವಿಶ್ವವಿದ್ಯಾಲಯದ ಕೋಟಾದಡಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಪ್ರವೇಶ ಸಿಕ್ಕಿದೆ.

Tokyo Olympic: ಯೂನಿವರ್ಸಿಟಿ ಕೋಟಾದಲ್ಲಿ ಒಲಿಂಪಿಕ್ಸ್​ ಟಿಕೆಟ್ ಪಡೆದ ಈಜುಗಾರ್ತಿ ಮಾನ ಪಟೇಲ್​! ಕ್ರೀಡಾ ಸಚಿವರ ಶ್ಲಾಘನೆ
ಮಾನ ಪಟೇಲ್
Follow us
ಪೃಥ್ವಿಶಂಕರ
|

Updated on: Jul 02, 2021 | 4:37 PM

ಭಾರತೀಯ ಮಹಿಳಾ ಈಜುಪಟು ಮಾನ ಪಟೇಲ್ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈಜು ಫೆಡರೇಶನ್ ಆಫ್ ಇಂಡಿಯಾ ಶುಕ್ರವಾರ ಇದನ್ನು ದೃಢಪಡಿಸಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಮಹಿಳೆ ಮತ್ತು ಮೂರನೇ ಭಾರತೀಯ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾನಾಗೆ ವಿಶ್ವವಿದ್ಯಾಲಯದ ಕೋಟಾದಡಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಪ್ರವೇಶ ಸಿಕ್ಕಿದೆ. 21 ವರ್ಷದ ಮನ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಶ್ರೀಹರಿ ನಟರಾಜ ಮತ್ತು ಸಜನ್ ಪ್ರಕಾಶ್ ಅರ್ಹತೆ ಪಡೆದ ನಂತರ ಟೋಕಿಯೊ ಒಲಿಂಪಿಕ್ಸ್​ಗೆ ಟಿಕೆಟ್ ಪಡೆದ ದೇಶದ ಮೂರನೇ ಈಜುಗಾರ್ತಿಯಾಗಿದ್ದಾರೆ. ಸಾಜನ್ ಪ್ರಕಾಶ್ 200 ಮೀಟರ್ ಬಟರ್​​ಫ್ಲೈ ವಿಭಾಗದಲ್ಲಿ ‘ಎ’ ಅಂಕ ಮತ್ತು 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹಾರಿ ನಟರಾಜ್ ಸ್ಥಾನ ಪಡೆದಿದ್ದರು. ಯೂನಿವರ್ಸಿಟಿ ಕೋಟಾವು ಒಂದು ದೇಶದ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಸ್ಪರ್ಧಿಯನ್ನು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.

ಕ್ರೀಡಾ ಸಚಿವರ ಅಭಿನಂದನೆ ಟೋಕಿಯೊಗೆ ಭೇಟಿ ನೀಡಿದ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಶುಕ್ರವಾರ, ಬ್ಯಾಕ್‌ಸ್ಟ್ರೋಕ್ ಈಜುಗಾರ್ತಿ ಮಾನ ಪಟೇಲ್, ಟೋಕಿಯೊ 2020 ಗೆ ಅರ್ಹತೆ ಪಡೆದ ಮೊದಲ ಮಹಿಳೆ ಮತ್ತು ಮೂರನೇ ಭಾರತೀಯ ಈಜುಗಾರ್ತಿ. ಯೂನಿವರ್ಸಿಟಿ ಕೋಟಾ ಮೂಲಕ ಅರ್ಹತೆ ಪಡೆದ ಮನ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

2019 ರ ನಂತರ ಮಾನ ಈ ವರ್ಷ ಪುನರಾಗಮನ ಮಾಡಿದರು ಮಾನ ಒಲಿಂಪಿಕ್ಸ್ ಡಾಟ್ ಕಾಮ್​ಗೆ ನೀಡಿದ ಸಮದರ್ಶನದಲ್ಲಿ, ಇದು ಅದ್ಭುತ ಭಾವನೆ. ನಾನು ಸಹ ಈಜುಗಾರರಿಂದ ಒಲಿಂಪಿಕ್ಸ್ ಬಗ್ಗೆ ಕೇಳಿದ್ದೇನೆ ಮತ್ತು ಅವರನ್ನು ದೂರದರ್ಶನದಲ್ಲಿ ನೋಡಿದ್ದೇನೆ. ಆದರೆ ಈ ಬಾರಿ ಅಲ್ಲಿಗೆ ಬಂದಿರುವುದು, ವಿಶ್ವದ ಅತ್ಯುತ್ತಮ ಸ್ಪರ್ಧೆಗಳೊಂದಿಗೆ ಸ್ಪರ್ಧಿಸಲು ನಾನು ರೋಮಾಂಚನಗೊಂಡಿದ್ದೇನೆ. 21 ವರ್ಷದ ಈಜುಗಾರ್ತಿ 2019 ರಲ್ಲಿ ಪಾದದ ಗಾಯದಿಂದ ಬಳಲುತ್ತಿದ್ದರು ಮತ್ತು ಈ ವರ್ಷದ ಆರಂಭದಲ್ಲಿ ಪುನರಾಗಮನ ಮಾಡಿದರು.

ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ