Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಬಿಸಿಸಿಐ ದುರ್ಬಲ ತಂಡವನ್ನು ಶ್ರೀಲಂಕಾಗೆ ಕಳುಹಿಸಿದೆ, ಇದು ನಮಗೆ ಮಾಡಿದ ಅವಮಾನ; ಅರ್ಜುನ ರಣತುಂಗ

IND vs SL: ಇದು ತಮ್ಮ ದೇಶದ ಕ್ರಿಕೆಟ್‌ಗೆ ಮಾಡಿದ ಅವಮಾನ ಮತ್ತು ಇದಕ್ಕಾಗಿ ಶ್ರೀಲಂಕಾ ಮಂಡಳಿಯು ಜವಾಬ್ದಾರಿಯಾಗಿದೆ, ಇದನ್ನು ಟಿವಿ ಮಾರ್ಕೆಟಿಂಗ್‌ಗಾಗಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

IND vs SL: ಬಿಸಿಸಿಐ ದುರ್ಬಲ ತಂಡವನ್ನು ಶ್ರೀಲಂಕಾಗೆ ಕಳುಹಿಸಿದೆ, ಇದು ನಮಗೆ ಮಾಡಿದ ಅವಮಾನ; ಅರ್ಜುನ ರಣತುಂಗ
ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗ
Follow us
ಪೃಥ್ವಿಶಂಕರ
|

Updated on: Jul 02, 2021 | 2:48 PM

ಈ ತಿಂಗಳು ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಮತ್ತು ಟಿ 20 ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಯ ಬಗ್ಗೆ ಘೋಷಣೆಯಾದಾಗಿನಿಂದ, ಚರ್ಚೆಯ ದೊಡ್ಡ ಅಂಶವೆಂದರೆ ಭಾರತ ತಂಡ. ಟೀಮ್ ಇಂಡಿಯಾದ ಈ ಸರಣಿಗೆ ಖ್ಯಾತ ಆಟಗಾರರು ಲಭ್ಯವಿಲ್ಲ, ಏಕೆಂದರೆ ಅವರು ಪ್ರಸ್ತುತ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಬಾರಿಗೆ ಎರಡು ವಿಭಿನ್ನ ಭಾರತೀಯ ತಂಡಗಳು ಒಂದೇ ಸಮಯದಲ್ಲಿ ಎರಡು ದೇಶಗಳೊಂದಿಗೆ ದ್ವಿಪಕ್ಷೀಯ ಸರಣಿಗೆ ಹಾಜರಾಗಲಿವೆ. ಭಾರತದಲ್ಲಿ ಮತ್ತು ವಿಶ್ವ ಕ್ರಿಕೆಟ್‌ನ ಇತರ ದೇಶಗಳಲ್ಲಿ ಭಾರತೀಯ ಮಂಡಳಿಯನ್ನು ಪ್ರಶಂಸಿಸಲಾಗುತ್ತಿರುವಾಗ, ಶ್ರೀಲಂಕಾದಲ್ಲಿ ಮಾತ್ರ ಇದರ ಬಗ್ಗೆ ಅಪಸ್ವರ ಕೇಳಿಬರುತ್ತಿದೆ.

ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಬಹಿರಂಗವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಇದು ಶ್ರೀಲಂಕಾ ಕ್ರಿಕೆಟ್‌ಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಆದರೆ, ರಣತುಂಗ ಭಾರತವನ್ನು ದೂಷಿಸುವ ಬದಲು, ತನ್ನ ಕ್ರಿಕೆಟ್​ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಣತುಂಗಾ ಟೀಂ ಇಂಡಿಯಾವನ್ನು ಎರಡನೇ ದರ್ಜೆಯ ಭಾರತೀಯ ತಂಡ ಎಂದು ಬಣ್ಣಿಸಿದ್ದಾರೆ. ಇದು ತಮ್ಮ ದೇಶದ ಕ್ರಿಕೆಟ್‌ಗೆ ಮಾಡಿದ ಅವಮಾನ ಮತ್ತು ಇದಕ್ಕಾಗಿ ಶ್ರೀಲಂಕಾ ಮಂಡಳಿಯು ಜವಾಬ್ದಾರಿಯಾಗಿದೆ, ಇದನ್ನು ಟಿವಿ ಮಾರ್ಕೆಟಿಂಗ್‌ಗಾಗಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬಿಸಿಸಿಐ ದುರ್ಬಲ ತಂಡವನ್ನು ಕಳುಹಿಸಿದೆ, ಇದು ನಮಗೆ ಮಾಡಿದ ಅವಮಾನ 1996 ರ ವಿಶ್ವಕಪ್‌ನಲ್ಲಿ ಶ್ರೀಲಂಕಾವನ್ನು ಚಾಂಪಿಯನ್ ಮಾಡಿದ ಮಾಜಿ ಅನುಭವಿ ನಾಯಕ ಸುದ್ದಿಗಾರರೊಂದಿಗೆ ಮಾತನಾಡುವಾಗ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಭಾರತ ತಂಡದ ಪ್ರವಾಸದ ಕುರಿತು ಮಾತನಾಡಿದ ರಣತುಂಗ, ಇದು ಎರಡನೇ ದರ್ಜೆಯ ಭಾರತೀಯ ತಂಡ. ಈ ತಂಡ ಇಲ್ಲಿಗೆ ಬರುವುದು ನಮ್ಮ ಕ್ರಿಕೆಟ್‌ಗೆ ಮಾಡಿದ ಅವಮಾನ. ದೂರದರ್ಶನ ಮಾರ್ಕೆಟಿಂಗ್ ಅಗತ್ಯತೆಗಳನ್ನು ಪೂರೈಸಲು ಅವರೊಂದಿಗೆ ಆಡಲು ಒಪ್ಪಿಕೊಂಡಿದ್ದಕ್ಕಾಗಿ ಪ್ರಸ್ತುತ ಆಡಳಿತ ಮಂಡಳಿಯನ್ನು ನಾನು ದೂಷಿಸುತ್ತೇನೆ. ಭಾರತ ತನ್ನ ಅತ್ಯುತ್ತಮ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಿದೆ ಮತ್ತು ದುರ್ಬಲ ತಂಡವನ್ನು ಇಲ್ಲಿಗೆ ಕಳುಹಿಸಲಾಗಿದೆ. ಇದಕ್ಕಾಗಿ ನಾನು ಮಂಡಳಿಯನ್ನು ದೂಷಿಸುತ್ತೇನೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಈ ಸರಣಿಯು ಭವಿಷ್ಯದ ಪ್ರವಾಸ ಕಾರ್ಯಕ್ರಮದ ಭಾಗವಾಗಿದೆ. ಇದು ಕಳೆದ ವರ್ಷವಷ್ಟೇ ಆಡಬೇಕಿತ್ತು, ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ಅದನ್ನು ಮುಂದೂಡಲಾಯಿತು. ಈಗಿನ ಸಮಯದಲ್ಲಂತೂ, ಟೀಮ್ ಇಂಡಿಯಾದ ವೇಳಾಪಟ್ಟಿ ಕಾರ್ಯನಿರತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಇದು ಉಚಿತ ಸಮಯ, ಈ ಸರಣಿಯಲ್ಲಿ ಆಡಬಹುದಿತ್ತು. ಆದ್ದರಿಂದ ಎರಡೂ ಮಂಡಳಿಗಳು ಇದರ ಬಗ್ಗೆ ಒಪ್ಪಿಕೊಂಡಿವೆ.

6 ಆಟಗಾರರು ಒಂದೇ ಒಂದು ಪಂದ್ಯವನ್ನು ಆಡಿಲ್ಲ ಜುಲೈ 13 ರಿಂದ 3 ಏಕದಿನ ಮತ್ತು 3 ಟಿ 20 ಪಂದ್ಯಗಳು ಪ್ರಾರಂಭವಾಗಲಿವೆ. ಈ ಎಲ್ಲಾ ಪಂದ್ಯಗಳು ಕೊಲಂಬೊದಲ್ಲಿ ನಡೆಯಲಿವೆ. ಟೀಂ ಇಂಡಿಯಾದ ನಾಯಕತ್ವವನ್ನು ಹಿರಿಯ ಓಪನರ್ ಶಿಖರ್ ಧವನ್ ವಹಿಸುತ್ತಿದ್ದಾರೆ. ಧವನ್ ಅವರಲ್ಲದೆ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಂಡದಲ್ಲಿ ಅನುಭವಿ ಆಟಗಾರರಾಗಿದ್ದಾರೆ. ಇವರುಗಳಲ್ಲದೆ ಉಳಿದ ಆಟಗಾರರು ಕೆಲವೇ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರಲ್ಲಿ, ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಆರು ಆಟಗಾರರಿದ್ದಾರೆ.

ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್