AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೋಪಿಂಗ್ ಪ್ರಕರಣ: ಪೃಥ್ವಿ ಶಾ ನಂತರ ನಾಲ್ಕು ವರ್ಷ ಕ್ರಿಕೆಟ್​ನಿಂದ ನಿಷೇಧಕ್ಕೊಳಗಾದ ಭಾರತದ ಮೊದಲ ಮಹಿಳಾ ಕ್ರಿಕೆಟಿರ್!

ಹೊಸ ಪ್ರಕರಣದಲ್ಲಿ ಮಧ್ಯಪ್ರದೇಶ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಅನ್ಶುಲಾ ರಾವ್ ಡೋಪಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಇದಕ್ಕಾಗಿ ಅವರನ್ನು ನಾಲ್ಕು ವರ್ಷಗಳ ಕಾಲ ನಿಷೇಧಿಸಲಾಗಿದೆ.

ಡೋಪಿಂಗ್ ಪ್ರಕರಣ: ಪೃಥ್ವಿ ಶಾ ನಂತರ ನಾಲ್ಕು ವರ್ಷ ಕ್ರಿಕೆಟ್​ನಿಂದ ನಿಷೇಧಕ್ಕೊಳಗಾದ ಭಾರತದ ಮೊದಲ ಮಹಿಳಾ ಕ್ರಿಕೆಟಿರ್!
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on: Jun 28, 2021 | 4:11 PM

ಡೋಪಿಂಗ್ ಪ್ರಕರಣದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ತಪ್ಪಿತಸ್ಥರೆಂದು ಸಾಭೀತಾದ ಬಳಿಕ ಸುಮಾರು ಎಂಟು ತಿಂಗಳ ಕಾಲ ಅವರನ್ನು ಕ್ರಿಕೆಟ್​ನಿಂದ ನಿಷೇಧಿಸಲಾಯಿತು. ನಿಷೇಧದಿಂದ ಹಿಂತಿರುಗಿದ ಶಾ ಮತ್ತೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ನಂತರ ವಿಜಯ್ ಹಜಾರೆ ಟ್ರೋಫಿಯಲ್ಲೂ ಛಾಪು ಮೂಡಿಸಿದರು. ಬಳಿಕ ಶಾ ಅವರು ಕೆಮ್ಮಿಗೆ ಸಂಬಂಧಿಸಿದ ಔಷಧಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ನಿಷೇಧಿತ ವಸ್ತುವನ್ನು ಸೇವಿಸಿದ್ದಾರೆ ಎಂದು ಹೇಳಿದರು. ಆದರೆ, ಈಗ ಮತ್ತೊಮ್ಮೆ ಡೋಪಿಂಗ್‌ನ ನೆರಳು ಕ್ರಿಕೆಟ್‌ನಲ್ಲಿ ಸುಳಿದಾಡಲಾರಂಭಿಸಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ವಿರೋಧಿ ಡೋಪಿಂಗ್ ಏಜೆನ್ಸಿ (ನಾಡಾ) ಕಠಿಣ ಕ್ರಮ ಕೈಗೊಂಡಿದೆ.

ನಾಲ್ಕು ವರ್ಷಗಳ ಕಾಲ ನಿಷೇಧಿಸಲಾಗಿದೆ ಹೊಸ ಪ್ರಕರಣದಲ್ಲಿ ಮಧ್ಯಪ್ರದೇಶ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಅನ್ಶುಲಾ ರಾವ್ ಡೋಪಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಇದಕ್ಕಾಗಿ ಅವರನ್ನು ನಾಲ್ಕು ವರ್ಷಗಳ ಕಾಲ ನಿಷೇಧಿಸಲಾಗಿದೆ. ಡೋಪಿಂಗ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದ ಮೊದಲ ಮಹಿಳಾ ಕ್ರಿಕೆಟಿರ್ ಅನ್ಶುಲಾ ರಾವ್. ಅನ್ಶುಲಾ ಮಧ್ಯಪ್ರದೇಶದ ಪರವಾಗಿ ಕ್ರಿಕೆಟ್ ಆಡುತ್ತಾರೆ. ಬಿಸಿಸಿಐ ಆಯೋಜಿಸಿದ್ದ ಅಂಡರ್ -23 ಟಿ 20 ಪಂದ್ಯಾವಳಿಯಲ್ಲಿ ಕೊನೆಯದಾಗಿ ತಮ್ಮ ರಾಜ್ಯವನ್ನು ಪ್ರತಿನಿಧಿಸಿದರು. ಆದಾಗ್ಯೂ, ಅನಾಬೊಲಿಕ್ ಸ್ಟೀರಾಯ್ಡ್ 19-ನೊರಾಂಡ್ರೊಸ್ಟೆರಾನ್ ಎಂಬ ನಿಷೇಧಿತ ವಸ್ತುವನ್ನು ಸೇವಿಸಿರುವುದರಿಂದ ರಾವ್ ತಪ್ಪಿತಸ್ಥರೆಂದು ಕಂಡುಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೇ, 2020 ರಲ್ಲಿ, ಮಾರ್ಚ್ 14 ರಂದು, ಬರೋಡಾದಲ್ಲಿ, ಅವರು ಈ ವಸ್ತುವನ್ನು ಸೇವಿಸಿದ್ದಾರೆ ಎಂದು ಸಾಬೀತಾಗಿದೆ.

ನಿಷೇಧಿತ ವಸ್ತುವಿನ ಸೇವನೆಯ ಬಗ್ಗೆ ಸರಿಯಾದ ವಿವರಣೆ ನೀಡಿಲ್ಲ ನಿಷೇಧಿತ ವಸ್ತುವನ್ನು ಸೇವಿಸಿದಕ್ಕೆ ಮಧ್ಯಪ್ರದೇಶದ ಆಲ್‌ರೌಂಡರ್ ಅನ್ಶುಲಾ ಯಾವುದೇ ಸರಿಯಾದ ಕಾರಣವನ್ನು ನೀಡಲು ಸಾಧ್ಯವಾಗಲಿಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅನ್ಶುಲಾ ಅವರ ಎರಡು ಮಾದರಿಗಳನ್ನು ಪರೀಕ್ಷೆಗಾಗಿ ಬೆಲ್ಜಿಯಂನ ಮಾನ್ಯತೆ ಪಡೆದ ಲ್ಯಾಬ್‌ಗೆ ಕಳುಹಿಸಲಾಗಿದೆ. ಆಂಟಿ-ಡೋಪಿಂಗ್ ಶಿಸ್ತು ಸಮಿತಿಯ ಪ್ರಕಾರ, ಅನ್ಶುಲಾ ಈ ಔಷಧಿಯನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿದ್ದಾರೆ. ತನ್ನ ದೇಹದ ಬಗ್ಗೆ ಕಾಳಜಿ ವಹಿಸುವುದು ಮತ್ತು ಯಾವುದೇ ರೀತಿಯ ನಿಷೇಧಿತ ವಸ್ತುವನ್ನು ಸೇವಿಸದಿರುವುದು ಆಟಗಾರನ ಜವಾಬ್ದಾರಿಯಾಗಿದೆ ಎಂದು ಗೌರಂಗ್ ಕಾಂತ್ ವಿವರಿಸಿದ್ದಾರೆ. ಈ ವಿಷಯದಲ್ಲಿ ಅನ್ಶುಲಾ ಅವರು ನಿಷೇಧಿತ ವಸ್ತು ಪತ್ತೆಯಾದ ಬಗ್ಗೆ ಅವರು ಯಾವುದೇ ವಿವರಣೆಯನ್ನು ನೀಡಿಲ್ಲ. ಆದರೆ ಅದೇ ಸಮಯದಲ್ಲಿ ರಾವ್‌ಗೆ ಆರ್ಥಿಕವಾಗಿ ಸಹಾಯ ಮಾಡಲಿಲ್ಲ ಎಂದು ಸಮಿತಿ ನಾಡಾವನ್ನು ಟೀಕಿಸಿತು.

ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ