Mithali Raj: ಕ್ರಿಕೆಟ್‌ನಲ್ಲಿ 22 ವರ್ಷ ಕಳೆದಿದ್ದೇನೆ ಆದರೆ ರನ್‌ಗಳ ಹಸಿವು ಇನ್ನೂ ಕಡಿಮೆಯಾಗಿಲ್ಲ; ಮಿಥಾಲಿ ರಾಜ್

|

Updated on: Jul 04, 2021 | 3:43 PM

Mithali Raj: ಮಿಥಾಲಿ ಶನಿವಾರ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅವರು ತಮ್ಮ ಅದ್ಭುತ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

Mithali Raj: ಕ್ರಿಕೆಟ್‌ನಲ್ಲಿ 22 ವರ್ಷ ಕಳೆದಿದ್ದೇನೆ ಆದರೆ ರನ್‌ಗಳ ಹಸಿವು ಇನ್ನೂ ಕಡಿಮೆಯಾಗಿಲ್ಲ; ಮಿಥಾಲಿ ರಾಜ್
ಮಿಥಾಲಿ ರಾಜ್
Follow us on

ಪುರುಷರ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಹೊಂದಿರುವ ಸ್ಥಾನಮಾನವನ್ನು, ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಕೂಡ ಹೊಂದಿದ್ದಾರೆ. ಇಬ್ಬರೂ ಆಯಾ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು. ಮಿಥಾಲಿ ಶನಿವಾರ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅವರು ತಮ್ಮ ಅದ್ಭುತ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಇನ್ನೂ ರನ್‌ಗಳ ಬಗೆಗಿನ ಅವರ ಹಸಿವು ಕಡಿಮೆಯಾಗಿಲ್ಲ. ರನ್ ಗಳಿಸುವ ಹಸಿವು 22 ವರ್ಷಗಳ ಹಿಂದೆ ಇದ್ದಂತೆಯೇ ಈಗಲೂ ಇದೆ. ಮುಂದಿನ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ತನ್ನ ಬ್ಯಾಟಿಂಗ್ ಅನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಶನಿವಾರ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಮಿಥಾಲಿ 89 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರು. ಈ ಮೂಲಕ ಭಾರತ ಇಂಗ್ಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತು. ಮಿಲ್ಟನ್ ಕೇಯೆನ್ನಲ್ಲಿ ಜೂನ್ 26, 1999 ರಂದು ಐರ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ ಮಿಥಾಲಿ, ಅದ್ಭುತ ಆಟ ಆಡುತ್ತಿದ್ದಾರೆ.

ಇಷ್ಟು ಸಾಕೆನಿಸಿದೆ
ಈಗ ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ವರ್ಷಗಳು ಕಳೆದಿದ್ದೇನೆ ಆದರೆ ರನ್‌ಗಳ ಹಸಿವು ಇನ್ನೂ ಕಡಿಮೆಯಾಗಿಲ್ಲ. ನನಗೆ ಇನ್ನೂ ಅದೇ ಉತ್ಸಾಹವಿದೆ. ಮೈದಾನಕ್ಕೆ ಬರುವ ಮೂಲಕ ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು. ನನ್ನ ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ, ಸುಧಾರಣೆಗೆ ಇನ್ನೂ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ನಾನು ಅದರ ಮೇಲೆ ಕೆಲಸ ಮಾಡುತ್ತಿದ್ದೇನೆ. ನನ್ನ ಬ್ಯಾಟಿಂಗ್‌ಗೆ ನಾನು ಸೇರಿಸಲು ಬಯಸುವ ಕೆಲವು ಆಯಾಮಗಳಿವೆ.

ಇತರರಿಗೆ ಮಾರ್ಗದರ್ಶನ ನೀಡುವುದು ನನ್ನ ಕರ್ತವ್ಯ
ಮಿಥಾಲಿ 2019 ರಲ್ಲಿಯೇ ಟಿ 20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು ಮತ್ತು 2022 ರ ಮಾರ್ಚ್ 4 ರಿಂದ ಏಪ್ರಿಲ್ 3 ರವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ತನ್ನ ಕೊನೆಯ ಪಂದ್ಯಾವಳಿ ಎಂದು ಅವರು ಈಗಾಗಲೇ ಸೂಚಿಸಿದ್ದಾರೆ. 38 ವರ್ಷದ ಈ ಆಟಗಾರ್ತಿ ಬ್ಯಾಟಿಂಗ್‌ನಲ್ಲಿ ತನ್ನ ಪಾತ್ರವನ್ನು ಮತ್ತು ಇತರ ಆಟಗಾರರಿಗೆ ಮಾರ್ಗದರ್ಶನ ನೀಡುವ ಪಾತ್ರವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ. ಬ್ಯಾಟಿಂಗ್ ಯಾವಾಗಲೂ ತಂಡದಲ್ಲಿ ನನಗೆ ಮುಖ್ಯ ಪಾತ್ರವಾಗಿದೆ. ವರ್ಷಗಳ ಹಿಂದೆ ನನಗೆ ಹಸ್ತಾಂತರಿಸಲಾದ ಪಾತ್ರ ಅದು. ಬ್ಯಾಟಿಂಗ್ ಘಟಕದ ಉಸ್ತುವಾರಿ ವಹಿಸಿಕೊಳ್ಳುವುದು ಮತ್ತು ಇನ್ನಿಂಗ್ಸ್ ಅನ್ನು ಅಲಂಕರಿಸುವುದು ನನ್ನ ಜವಬ್ದಾರಿಯಾಗಿದೆ ಎಂದರು.

ಗುರಿಯನ್ನು ಬೆನ್ನಟ್ಟುವಾಗ ಇತರ ಬ್ಯಾಟ್ಸ್‌ಮನ್‌ಗಳೊಂದಿಗೆ ಉತ್ತಮ ಇನ್ನಿಂಗ್ಸ್ ಕಟ್ಟುವುದು ಅವಶ್ಯಕವಾಗಿರುತ್ತದೆ. ನಾನು ಆಟದ ಮೇಲೆ ಹಿಡಿತ ಸಾಧಿಸುತ್ತೇನೆ. ಇದು ನನಗೆ ಮತ್ತು ತಂಡದ ಇತರ ಯುವತಿಯರಿಗೆ ಪ್ರಯೋಜನವನ್ನು ನೀಡುತ್ತದೆ. ನಾನು ಕ್ರೀಸ್​ನಲ್ಲಿ ಇದಷ್ಟೂ, ತಂಡವನ್ನು ಮುಂದಕ್ಕೆ ಸಾಗಿಸಲು ಸಹಾಯ ಮಾಡಿದ್ದಂತಾಗುತ್ತದೆ ಎಂದರು.

ಹರ್ಮನ್‌ಪ್ರೀತ್ ಕೌರ್ ಶೀಘ್ರದಲ್ಲೇ ಫಾರ್ಮ್‌ಗೆ ಮರಳಲಿದ್ದಾರೆ
ಟಿ 20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಶೀಘ್ರದಲ್ಲೇ ಫಾರ್ಮ್‌ಗೆ ಮರಳಲಿದ್ದಾರೆ ಎಂದು ಮಿಥಾಲಿ ಭರವಸೆ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಾ ಆಟಗಾರನ ಆಟದಲ್ಲೂ ಸಂಭವಿಸುತ್ತದೆ. ಕೆಲವೊಮ್ಮೆ ನೀವು ಫಾರ್ಮ್‌ನಲ್ಲಿಲ್ಲದಿದ್ದರೂ ನೀವು ತಂಡದ ಆಟಗಾರ್ತಿಯಾಗಿ ಪಂದ್ಯ ವಿಜೇತರಾದ ಆಟಗಾರನನ್ನು ಬೆಂಬಲಿಸಬೇಕು. ಅವರು ನಮಗಾಗಿ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ ಎಂದು ನಮಗೆ ತಿಳಿದಿದೆ. ಹೀಗಾಗಿ ಅವರಿಗೆ ಈಗ ತಂಡದ ಬೆಂಬಲ ಅಗತ್ಯವಾಗಿದೆ ಎಂದರು.