ಶ್ರೀಲಂಕಾ ವಿರುದ್ಧ ನಡೆಯುವ ಎಲ್ಲ 6 ಪಂದ್ಯಗಳಲ್ಲಿ ಆಡುವ ಅವಕಾಶ ಸೂರ್ಯಕುಮಾರ್ ಯಾದವ್ಗೆ ನೀಡಬೇಕು: ವಿವಿಎಸ್ ಲಕ್ಷ್ಮಣ
ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಮತ್ತು ಮುಂಬೈ ಡೊಮೆಸ್ಟಿಕ್ ತಂಡದ ಅವಿಭಾಜ್ಯ ಆಂಗವಾಗಿರುವ ಸೂರ್ಯ ಕೇವಲ ಈ ವರ್ಷ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ ಸೀಮಿತ ಓವರ್ ಪಂದ್ಯಗಳ ಸರಣಗಳಿಗೆ ಅವರನ್ನು ಮೊದಲ ಬಾರಿಗೆ ಆಯ್ಕೆ ಮಾಡಲಾಗಿತ್ತು.
ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷಣ ಅವರು ಬಾರತದ ಉದಯೋನ್ಮುಖ ಆಟಗಾರ ಸೂರ್ಯಕುಮಾರ್ ಯಾದವ್ ಅವರ ಪಕ್ಕಾ ಅಭಿಮಾನಿಯಾಗಿರುವಂತಿದೆ. ಅಕ್ಟೋಬರ್ 17ರಿಂದ ಯುಎಈಯಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಭಾರತೀಯ ತಂಡದ ಭಾಗವಾಗಿರಬೇಕು ಎಂದು ಲಕ್ಷ್ಮಣ ಅಭಿಪ್ರಾಯಪಡುತ್ತಾರೆ. ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ ಒಡಿಐ ಮತ್ತು ಟಿ20 ಸರಣಿಗೆ ಮೊದಲು ಮಾತಾಡಿದ ಅವರು ದ್ವೀಪರಾಷ್ಟ್ರದಲ್ಲಿ ಭಾರತ ಆಡುವ ಎಲ್ಲ 6 ಪಂದ್ಯಗಳಲ್ಲೂ ಅವರು ಟೀಮಿನ ಭಾಗವಾಗಿರಬೇಕು ಎಂದಿದ್ದಾರೆ.
ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಮತ್ತು ಮುಂಬೈ ಡೊಮೆಸ್ಟಿಕ್ ತಂಡದ ಅವಿಭಾಜ್ಯ ಆಂಗವಾಗಿರುವ ಸೂರ್ಯ ಕೇವಲ ಈ ವರ್ಷ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ ಸೀಮಿತ ಓವರ್ ಪಂದ್ಯಗಳ ಸರಣಗಳಿಗೆ ಅವರನ್ನು ಮೊದಲ ಬಾರಿಗೆ ಆಯ್ಕೆ ಮಾಡಲಾಗಿತ್ತು. ಆಂಗ್ಲರ ವಿರುದ್ಧ ಭಾರತ ಆಡಿದ ಟಿ20ಐ ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿದ ಸೂರ್ಯ ತಮ್ಮ ಪ್ರತಿಭೆಯನ್ನು ತೋರಿ, ಟ20 ವಿಶ್ವಕಪ್ಗೆ ಟೂರ್ನಿಗೆ ತನ್ನನ್ನು ಕಡೆಗಣಿಸಬಾರದು ಎಂಬ ಸಂದೇಶವನ್ನು ಸೀನಿಯರ್ ಆಯ್ಕೆ ಸಮಿತಿಗೆ ರವಾನಿಸಿದರು.
ಆದರೆ, ಇಂಡಿಯನ್ ಪ್ರಿಮೀಯರ್ ಲೀಗ್ 2021 ರ ಸೀಸನ್ನಲ್ಲಿ ಸೂರ್ಯ ತೋರಿದ ಕಳಪೆ ಬ್ಯಾಟಿಂಗ್ ಪ್ರದರ್ಶನಗಳು ವಿಶ್ವಕಪ್ಗೆ ಅವರನ್ನು ಆರಿಸುವ ಬಗ್ಗೆ ಆಯ್ಕೆ ಮಂಡಳಿಯು ಯೋಚಿಸುವಂಥ ಸ್ಥಿತಿ ನಿರ್ಮಿಸಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂರ್ಯನಿಗೆ ಅವಕಾಶ ನೀಡುತ್ತಾ ಹೋದರೆ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಲಕ್ಷ್ಮಣ ಹೇಳುತ್ತಾರೆ.
‘ತನ್ನ ಸಾಮರ್ಥ್ಯವನ್ನು ಪ್ರೂವ್ ಮಾಡಲು ಸೂರ್ಯನಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಅವರು ಎಲ್ಲ 6 ಪಂದ್ಯಗಳಲ್ಲಿ-ಮೂರು ಒಡಿಐ ಮತ್ತು ಮೂರು ಟ20ಐಗಳಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ. ಯಾಕೆಂದರೆ ಟಿ20 ವಿಶ್ವಕಪ್ನಲ್ಲಿ ಆಡುವ ತಂಡಕ್ಕೆ ಆಯ್ಕೆಯಾಗುತ್ತಾರೆಂಬ ನಂಬಿಕೆ ನನಗಿದೆ,’ ಎಂದು ಸ್ಟಾರ್ ಸ್ಪೋರ್ಟ್ಸ್ ಚ್ಯಾನೆಲ್ನ ಕ್ರಿಕೆಟ್ ಕಾರ್ಯಕ್ರಮವೊಂದರಲ್ಲಿ ಲಕ್ಷ್ಮಣ ಹೇಳಿದರು.
‘ಹಾಗಾಗಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲಿ ಎನ್ನುವುದು ನನ್ನ ಇಚ್ಛೆಯಾಗಿದೆ,’ ಎಂದು ಲಕ್ಷ್ಮಣ ಹೇಳಿದರು.
‘ತಮಗೆ ದೊರೆತ ಅವಕಾಶಗಳನ್ನು ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಷನ್ ಇಬ್ಬರೂ ಸದುಪಯೋಗಪಡಿಸಿಕೊಂಡರು. ಮೂರನೇ ಕ್ರಮಾಂಕದಲ್ಲಿ ಸೂರ್ಯ ಅಡಿದ ರೀತಿ ನನ್ನನ್ನು ರೋಮಾಂಚನಗೊಳಿಸಿತ್ತು,’ ಎಂದು ಲಕ್ಷ್ಮಣ ಹೇಳಿದರು.
‘ಸೂರ್ಯನಲ್ಲಿರುವ ಆತ್ಮವಿಶ್ವಾಸ ನನಗೆ ದಂಗುಬಡಿಸಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ತಾನೆದುರಿಸಿದ ಮೊದಲ ಎಸೆತವನ್ನೇ ಅದೂ ಜೊಫ್ರಾ ಆರ್ಷರ್ ಅವರಂಥ ಕ್ವಾಲಿಟಿ ಬೌಲರ್ನ ಎಸೆತವನ್ನು ಸಿಕ್ಸರ್ಗೆ ಎತ್ತುವುದು ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಪ್ರತಿಭೆಗೆ ಸಾಕ್ಷಿಯಾಗಿದೆ. ಅವರಿಗೆ ಅವಕಾಶಗಳನ್ನು ನೀಡಬೇಕು,’ ಎಂದು ಲಕ್ಷ್ಮಣ ಹೇಳಿದರು.
ಇದನ್ನೂ ಓದಿ: IND vs SL: ಲಂಕಾ ನೆಲದಲ್ಲಿ ಅಭ್ಯಾಸ ಆರಂಭಿಸಿದ ಭಾರತದ ಯುವ ಪಡೆ; ಗುರು ದ್ರಾವಿಡ್, ನಾಯಕ ಧವನ್ ಸಾಥ್
ಇದನ್ನೂ ಓದಿ: IND vs SL: ಜೂ.14 ರಿಂದ ಮುಂಬೈನಲ್ಲಿ ಕ್ವಾರಂಟೈನ್! ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಸಿದ್ಧತೆ ಹೇಗಿದೆ ಗೊತ್ತಾ?
Published On - 1:34 am, Sun, 4 July 21