IND vs SL: ಜೂ.14 ರಿಂದ ಮುಂಬೈನಲ್ಲಿ ಕ್ವಾರಂಟೈನ್! ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಸಿದ್ಧತೆ ಹೇಗಿದೆ ಗೊತ್ತಾ?

IND vs SL: ಜುಲೈ 2 ರಿಂದ ಗುಂಪುಗಳಾಗಿ ಭಾರತ ತಂಡದ ಆಟಗಾರರು ಅಭ್ಯಾಸವನ್ನು ನಡೆಸಲಿದ್ದಾರೆ. ನಂತರ ಜುಲೈ 12ಕ್ಕೆ ತಂಡದ ಎಲ್ಲಾ ಆಟಗಾರರು ಒಟ್ಟಿಗೆ ತರಬೇತಿಯಲ್ಲಿ ಭಾಗವಹಿಸಿಲಿದ್ದಾರೆ.

IND vs SL: ಜೂ.14 ರಿಂದ ಮುಂಬೈನಲ್ಲಿ ಕ್ವಾರಂಟೈನ್! ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾದ ಸಿದ್ಧತೆ ಹೇಗಿದೆ ಗೊತ್ತಾ?
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Jun 12, 2021 | 3:50 PM

ಶಿಖರ್ ಧವನ್ ನೇತೃತ್ವದ ಭಾರತದ ವೈಟ್ ಬಾಲ್ ಸ್ಕ್ವಾಡ್ ಜೂನ್ 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ಯಾರೆಂಟೈನ್ ಆಗಲಿದೆ. ಶ್ರೀಲಂಕಾ ವಿರುದ್ಧದ ಆರು ಪಂದ್ಯಗಳ ಸರಣಿಗಾಗಿ ಕೊಲಂಬೊಗೆ ಹಾರಾಟ ನಡೆಸುವ ಮೊದಲು ಪರ್ಯಾಯ ದಿನಗಳಲ್ಲಿ ಆರು ಆರ್ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಲಿದೆ ಎಂದು ವರದಿಯಾಗಿದೆ. ಲಂಕಾ ಪ್ರವಾಸ ಜುಲೈ 13 ರಿಂದ ಪ್ರಾರಂಭವಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗಾಗಿ ಪ್ರಸ್ತುತ ಯುನೈಟೆಡ್ ಕಿಂಗ್‌ಡಂನಲ್ಲಿರುವ ಮೊದಲ ತಂಡದಂತೆಯೇ ಲಂಕಾ ಪ್ರವಾಸಕ್ಕೆ ಪ್ರಕಟವಾಗಿರುವ ತಂಡಕ್ಕೂ ಎಲ್ಲಾ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಗಳು ಒಂದೇ ಆಗಿರುತ್ತವೆ ಎಂದು ತಿಳಿದುಬಂದಿದೆ.

ಹೋಟೆಲ್‌ನಲ್ಲಿ ಮೂರು ದಿನಗಳ ಕ್ವಾರಂಟೈನ್‌ ನಾವು ಇಂಗ್ಲೆಂಡ್‌ನಲ್ಲಿ ಅನುಸರಿಸಿದಂತೆ ಎಲ್ಲಾ ನಿಯಮಗಳು ಈ ತಂಡಕ್ಕೂ ಅನ್ವಯವಾಗುತ್ತವೆ. ಮನೆಯಲ್ಲಿರುವ ಆಟಗಾರರು ಚಾರ್ಟರ್ ಫ್ಲೈಟ್ ಮತ್ತು ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಕೆಲವು ಫ್ಲೈ ಬಿಸಿನೆಸ್ ವರ್ಗದ ಮೂಲಕ ಮುಂಬೈಗೆ ಬರಲಿದ್ದಾರೆ ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 13 ರಿಂದ ಪ್ರಾರಂಭವಾಗಲಿದ್ದು, ಕೊಲಂಬೊಕ್ಕೆ ತೆರಳಿದ ನಂತರ ತಂಡದ ಆಟಗಾರರು ಅಲ್ಲಿನ ಹೋಟೆಲ್‌ನಲ್ಲಿ ಮೂರು ದಿನಗಳ ಕ್ವಾರಂಟೈನ್‌ ಮುಗಿಸಿದ ಬಳಿಕ ಟೀಮ್ ಇಂಡಿಯಾ, ಶ್ರೀಲಂಕಾ ಕ್ರಿಕೆಟ್‌ ಮಾರ್ಗಸೂಚಿಗಳ ಅನ್ವಯ ತರಬೇತಿ ಆರಂಭಿಸಲಿದೆ.

ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ತರಬೇತಿ ಯೋಜನೆಯ ಮಾಹಿತಿಯನ್ನು ಎಸ್‌ಎಲ್‌ಸಿ ಶುಕ್ರವಾರ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದೆ. ಜುಲೈ 2 ರಿಂದ ಗುಂಪುಗಳಾಗಿ ಭಾರತ ತಂಡದ ಆಟಗಾರರು ಅಭ್ಯಾಸವನ್ನು ನಡೆಸಲಿದ್ದಾರೆ. ನಂತರ ಜುಲೈ 12ಕ್ಕೆ ತಂಡದ ಎಲ್ಲಾ ಆಟಗಾರರು ಒಟ್ಟಿಗೆ ತರಬೇತಿಯಲ್ಲಿ ಭಾಗವಹಿಸಿಲಿದ್ದಾರೆ.

ಮೊದಲ ಬಾರಿಗೆ ನಾಯಕತ್ವ; ಧವನ್ ಹೇಳಿದ್ದೇನು? ಮೊದಲ ಬಾರಿಗೆ ಟೀಮ್ ಇಂಡಿಯಾ ಮುನ್ನಡೆಸುವ ಅವಕಾಶ ಸಿಕ್ಕಿರುವುದರಿಂದ ಶಿಖರ್ ಧವನ್ ಖುಷಿಯಾಗಿದ್ದಾರೆ. ಈ ಖುಷಿಯನ್ನು ಗಬ್ಬರ್​ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ 20 ಮಂದಿಯ ಭಾರತೀಯ ತಂಡವನ್ನು ಧವನ್ ಮುನ್ನಡೆಸಲಿದ್ದಾರೆ. ದೇಶವನ್ನು ಮುನ್ನಡೆಸುವ ಅವಕಾಶಕ್ಕೆ ನಾನು ವಿನಮ್ರನಾಗಿದ್ದೇನೆ. ನಿಮ್ಮೆಲ್ಲಾ ಶುಭಹಾರೈಕೆಗಳಿಗೆ ನನ್ನ ಧನ್ಯವಾದಗಳು’ ಎಂದು ಧವನ್ ತನ್ನ ಅಧಿಕೃತ ಟ್ವಿಟರ್, ಫೇಸ್ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಧವನ್ ಭಾರತ ಪರ 34 ಟೆಸ್ಟ್‌, 142 ಏಕದಿನ ಮತ್ತು 64 ಟಿ20ಐ ಪಂದ್ಯಗಳನ್ನಾಡಿದ್ದಾರೆ.

13 ಜುಲೈನಿಂದ ಪ್ರವಾಸ ಆರಂಭ ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಆತಿಥೇಯ ರಾಷ್ಟ್ರದ ವಿರುದ್ಧ 3 ಏಕದಿನ ಮತ್ತು 3 ಟಿ 20 ಪಂದ್ಯಗಳ ಸರಣಿಯನ್ನು ಆಡಲಿದೆ. ಏಕದಿನ ಪಂದ್ಯಗಳು ಜುಲೈ 13 ರಿಂದ ಪ್ರಾರಂಭವಾಗಲಿದ್ದು, ಟಿ 20 ಸರಣಿ ಜುಲೈ 21 ರಿಂದ ಪ್ರಾರಂಭವಾಗಲಿದೆ. ಏಕದಿನ ಪಂದ್ಯಗಳು ಜುಲೈ 13, 16 ಮತ್ತು 18 ರಂದು ನಡೆಯಲಿದೆ. ಟಿ 20 ಪಂದ್ಯಗಳು ಜುಲೈ 21, 23 ಮತ್ತು 25 ರಂದು ನಡೆಯಲಿದೆ. ಕೊರೊನಾ ವೈರಸ್ ದೃಷ್ಟಿಯಿಂದ, ಎಲ್ಲಾ ಪಂದ್ಯಗಳನ್ನು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು.

ಆಟಗಾರರ ಪಟ್ಟಿ ಹೀಗಿದೆ ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್ ಪಡಿಕ್ಕಲ್, ರುತುರಾಜ್ ಗೈಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಎಸ್ ಸ್ಯಾಮ್ಸನ್ (ವಿಕೆಟ್ ಕೀಪರ್), ಯಜ್ವೇಂದ್ರ ಚಹಲ್, ರಾಹುಲ್ ಚಹರ್ , ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವ್​ದೀಪ್ ಸೈನಿ, ಚೇತನ್ ಸಕರಿಯಾ

ನೆಟ್ ಬೌಲರ್ ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್

ಇದನ್ನೂ ಓದಿ:ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾದ ಓಪನರ್ಸ್​ ಯಾರು? ಮಧ್ಯಮ ಕ್ರಮಾಂಕದಲ್ಲಿ ಯಾರಿಗಿದೆ ಅವಕಾಶ?

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?