ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅದ್ಭುತ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿತು. ಪ್ರಮುಖ ಆಟಗಾರರು ತಂಡದಲ್ಲಿ ಅಲಭ್ಯರಾಗಿದ್ದರು, ಹಲವಾರು ಯುವಕರು ಮತ್ತು ಹೊಸಬರು ಸರಣಿಯನ್ನು 2-1ರಿಂದ ಗೆಲ್ಲಲು ಭಾರತಕ್ಕೆ ತಮ್ಮದೆಯಾದ ಕೊಡುಗೆ ನೀಡಿದರು. ಯುವಕರ ಈ ಸಾಮಥ್ರ್ಯವನ್ನು ಮೆಚ್ಚಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆ ಸಮಯದಲ್ಲಿ ಡೌನ್ ಅಂಡರ್ ಸರಣಿಯಲ್ಲಿ ಪ್ರಾಮುಖ್ಯತೆ ಪಡೆದ ಆರು ಆಟಗಾರರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಈ ಉಡುಗೂರೆ ಪಡೆಯುವ ಆಟಗಾರರಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಹ ಅವರಲ್ಲಿ ಒಬ್ಬರು. ಸಿರಾಜ್ ಅವರು ಇತ್ತೀಚೆಗೆ ತಮ್ಮ ಉಡುಗೊರೆಯನ್ನು ಪಡೆದಿದ್ದಾರೆ. ಜೊತೆಗೆ ಎಸ್ಯುವಿ ಕಾರ್ ನೀಡಿದ ಆನಂದ್ ಮಹೀಂದ್ರಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ.
ಭಾವನಗೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ
ಈ ಬಗ್ಗೆ ಟ್ವೀಟ್ ಮಾಡಿರುವ ಮೊಹಮ್ಮದ್ ಸಿರಾಜ್, ಈ ಕ್ಷಣದ ಖುಷಿ ವರ್ಣಿಸಲು ನನ್ನ ಪದಗಳು ಸೋಲುತ್ತಿವೆ. ನೀವು ನೀಡಿದ ಸೊಗಸಾದ ಥಾರ್ SUV ಗಿಫ್ಟ್‌ಗಾಗಿ ನಾನು ಏನೂ ಹೇಳಲು, ಮಾಡಲು ಆಗುತ್ತಿಲ್ಲ. ಆ ಭಾವನಗೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಈ ಹೊತ್ತು ನಾನು ನಿಮಗೆ ಧನ್ಯವಾದಗಳನ್ನಷ್ಟೇ ಹೇಳಬಲ್ಲೆ’ ಎಂದು ಸಿರಾಜ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸಿರಾಜ್ ಐಪಿಎಲ್ ಅಭ್ಯಾಸದಲ್ಲಿ ನಿರತರಾಗಿರುವುದರಿಂದ ತನ್ನ ಸಹೋದರ ಮತ್ತು ತಾಯಿ ಕಾರನ್ನು ಸ್ವೀಕರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತ ಗೆದ್ದ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಸಿರಾಜ್ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಗಾಯಗಳು ಹೆಚ್ಚಾಗುತ್ತಿದ್ದಂತೆ, ನಾಲ್ಕನೇ ಟೆಸ್ಟ್‌ನಲ್ಲಿ ಸಿರಾಜ್ ಭಾರತದ ಬೌಲಿಂಗ್ ದಾಳಿಯ ನಾಯಕತ್ವ ವಹಿಸಿದ್ದರು. ಜೊಪತೆಗೆ ಎರಡು ಟೆಸ್ಟ್ ಪಂದ್ಯಗಳೆಲ್ಲವೂ ಉತ್ತಮ ಪ್ರದರ್ಶನ ನೀಡಿದರು.
ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅಂತಿಮ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದರೆ, ಸೈನಿ ಅದಕ್ಕೂ ಮೊದಲು ಒಂದು ಟೆಸ್ಟ್ ಮಾತ್ರ ಆಡಿದ್ದರು. ಇದು ಶಾರ್ದುಲ್ ಠಾಕೂರ್ ಅವರ ಎರಡನೇ ಟೆಸ್ಟ್ ಕೂಡ ಆಗಿತ್ತು. ಆದರೆ ಅದು ಕೇವಲ 1.4 ಓವರ್ಗಳನ್ನು ಎಸೆದ ಕಾರಣ ಅವರಿಗೆ ಚೊಚ್ಚಲ ಪಂದ್ಯವಾಗಿತ್ತು. ಗಾಬಾದಲ್ಲಿ ನಡೆದ ಎರಡನೇ ಇನ್ನಿಂಗ್ಸ್‌ನಲ್ಲಿ ಸಿರಾಜ್ ಐದು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.