AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಮೊಯೀನ್ ಅಲಿ ಜರ್ಸಿ ಲೋಗೋ ವಿಚಾರಕ್ಕೆ ಸಿಕ್ತು ಬಿಗ್​ ಟ್ವಿಸ್ಟ್​! ಸಿಎಸ್​ಕೆಯಿಂದ ಅಚ್ಚರಿಯ ಹೇಳಿಕೆ

IPL 2021: ಸಿಎಸ್ಕೆ ಅನಾವರಣಗೊಳಿಸಿರುವ ತಂಡದ ಜರ್ಸಿಯಿಂದ ಲೋಗೋವನ್ನು ತೆಗೆದುಹಾಕಲು ಮೊಯಿನ್ ಅಲಿಯಿಂದ ಯಾವುದೇ ಮನವಿ ಮಾಡಲಾಗಿಲ್ಲ

IPL 2021: ಮೊಯೀನ್ ಅಲಿ ಜರ್ಸಿ ಲೋಗೋ ವಿಚಾರಕ್ಕೆ ಸಿಕ್ತು ಬಿಗ್​ ಟ್ವಿಸ್ಟ್​! ಸಿಎಸ್​ಕೆಯಿಂದ ಅಚ್ಚರಿಯ ಹೇಳಿಕೆ
ಮೊಯೀನ್ ಅಲಿ
ಪೃಥ್ವಿಶಂಕರ
|

Updated on: Apr 05, 2021 | 3:21 PM

Share

ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯೀನ್ ಅಲಿ ಅವರು ಭಾನುವಾರ ತಮ್ಮ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ತಮ್ಮ ಜರ್ಸಿಯ ಮೇಲಿರುವ ಆಲ್ಕೋಹಾಲ್ ಕಂಪನಿ ಲೋಗೋವನ್ನು ತೆಗೆಯಿರಿ ಎಂಬ ಮನವಿಗೆ ಒಪ್ಪಿಸ ಸಿಎಸ್​ಕೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತ್ತು ಎಂಬ ವರದಿ ನೆನ್ನೆಯಿಂದ ಸಖತ್​ ಸುದ್ದಿ ಮಾಡಿತ್ತು. ಆದರೆ, ಈಗ ಈ ವಿಷಯದ ಬಗ್ಗೆ ಫ್ರ್ಯಾಂಚೈಸ್ ಸ್ಪಷ್ಟನೆ ನೀಡಿದ್ದು ಶಾಕಿಂಗ್​ ಹೇಳಿಕೆಯನ್ನು ಹೊರಹಾಕಿದೆ. ಅದೆನೆಂದರೆ ಫ್ರ್ಯಾಂಚೈಸ್​ನ ಅಧಿಕಾರಿಯ ಹೇಳಿಕೆಯ ಪ್ರಕಾರ ಮೊಯಿನ್ ಅಲಿ, ಅಂತಹ ಯಾವುದೇ ಮನವಿ ಮಾಡಿಲ್ಲ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಸಿಎಸ್ಕೆ ಅನಾವರಣಗೊಳಿಸಿರುವ ತಂಡದ ಜರ್ಸಿಯಿಂದ ಲೋಗೋವನ್ನು ತೆಗೆದುಹಾಕಲು ಮೊಯಿನ್ ಅಲಿಯಿಂದ ಯಾವುದೇ ಮನವಿ ಮಾಡಲಾಗಿಲ್ಲ ಎಂದು ಸಿಎಸ್ಕೆ ಮುಖ್ಯ ಕಾರ್ಯನಿರ್ವಾಹಕ ಕಾಶಿ ವಿಶ್ವನಾಥನ್ ಭಾನುವಾರ ಐಎಎನ್ಎಸ್​ಗೆ ತಿಳಿಸಿದ್ದಾರೆ. ಸಿಎಸ್‌ಕೆ ಜರ್ಸಿಯಲ್ಲಿ ಎಸ್‌ಎನ್‌ಜೆ 10000 ಕಂಪನಿಯ ಲೋಗೊವನ್ನು ಹಾಕಲಾಗಿದೆ. ಇದು ಆಲ್ಕೋಹಾಲ್ ಬ್ರಾಂಡ್ ಆಗಿದೆ.

ಧೋನಿ ನಾಯಕತ್ವದಲ್ಲಿ ಆಡಲು ಉತ್ಸುಕನಾಗಿದ್ದೇನೆ ಮೂರು ಬಾರಿ ವಿಜೇತ ಸಿಎಸ್ಕೆ ಐಪಿಎಲ್ -2021 ಹರಾಜಿನಲ್ಲಿ ಮೊಯಿನ್ ಅಲಿ ಮೇಲೆ ಭಾರಿ ಹೂಡಿಕೆ ಮಾಡಿದೆ. ಮೊಯಿನ್ ಅಲಿಗೆ ಫ್ರ್ಯಾಂಚೈಸ್ ಏಳು ಕೋಟಿ ರೂ. ನೀಡಿದೆ. ಈ ಆಲ್‌ರೌಂಡರ್ ತಂಡಕ್ಕಾಗಿ ಕೆಲಸ ಮಾಡುತ್ತಾರೆ ಎಂದು ತಂಡ ಆಶಿಸಿದೆ. ಮೊಯಿನ್ ಅಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಸಿಎಸ್‌ಕೆಗೆ ಬಂದಿದ್ದು, ಧೋನಿ ನಾಯಕತ್ವದಲ್ಲಿ ಆಡಲು ಉತ್ಸುಕರಾಗಿದ್ದಾರೆ. ನಾನು ಧೋನಿ ಅಡಿಯಲ್ಲಿ ಆಡಿದ ಆಟಗಾರರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ನಿಮ್ಮ ಆಟವನ್ನು ಹೇಗೆ ಸುಧಾರಿಸುತ್ತಾರೆ ಎಂದು ಅವರು ನನಗೆ ತಿಳಿಸಿದರು. ಶ್ರೇಷ್ಠ ನಾಯಕರು ಇದನ್ನು ಮಾಡುತ್ತಾರೆಂದು ನಾನು ನಂಬುತ್ತೇನೆ. ಧೋನಿ ನಾಯಕತ್ವದಲ್ಲಿ ಪ್ರತಿಯೊಬ್ಬ ಆಟಗಾರನು ಆಡಲು ಬಯಸುತ್ತಿರುವ ಕಾರಣಗಳಲ್ಲಿ ಇದು ಒಂದು ಎಂದು ನಾನು ಭಾವಿಸುತ್ತೇನೆ ಎಂದರು.

ಕಳೆದ ಆವೃತ್ತಿಯಲ್ಲಿ ಪ್ಲೇಆಫ್ ತಲುಪಲಿಲ್ಲ ಸಿಎಸ್ಕೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಅವರು ಮೂರು ಬಾರಿ ಐಪಿಎಲ್ ಗೆದ್ದಿದ್ದಾರೆ. ಕಳೆದ ಆವೃತ್ತಿ ಚೆನ್ನೈಗೆ ಕೆಟ್ಟದ್ದಾಗಿತ್ತು. ತಂಡವು ಪ್ಲೇಆಫ್‌ ಸಹ ತಲುಪಲಿಲ್ಲ ಮತ್ತು ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡಕ್ಕೆ ಪ್ಲೇಆಫ್ ತಲುಪಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ತಂಡ ನಾಲ್ಕನೇ ಐಪಿಎಲ್ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತಿದೆ.