AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾರ್ ಎಸ್​ಯುವಿ ಕಾರ್​ ಗಿಫ್ಟ್‌: ಈ ಕ್ಷಣದ ಖುಷಿ ವರ್ಣಿಸಲು ನನ್ನ ಪದಗಳು ಸೋಲುತ್ತಿವೆ! ಆನಂದ್ ಮಹೀಂದ್ರಾಗೆ ಸಿರಾಜ್​ ಧನ್ಯವಾದ

ಈ ಕ್ಷಣದ ಖುಷಿ ವರ್ಣಿಸಲು ನನ್ನ ಪದಗಳು ಸೋಲುತ್ತಿವೆ. ನೀವು ನೀಡಿದ ಸೊಗಸಾದ ಥಾರ್ SUV ಗಿಫ್ಟ್‌ಗಾಗಿ ನಾನು ಏನೂ ಹೇಳಲು, ಮಾಡಲು ಆಗುತ್ತಿಲ್ಲ.

ಥಾರ್ ಎಸ್​ಯುವಿ ಕಾರ್​ ಗಿಫ್ಟ್‌: ಈ ಕ್ಷಣದ ಖುಷಿ ವರ್ಣಿಸಲು ನನ್ನ ಪದಗಳು ಸೋಲುತ್ತಿವೆ! ಆನಂದ್ ಮಹೀಂದ್ರಾಗೆ ಸಿರಾಜ್​ ಧನ್ಯವಾದ
ಕಾರನ್ನ ಸ್ವೀಕರಿಸಿದ ಸಿರಾಜ್ ಸಹೋದರ ಹಾಗೂ ತಾಯಿ
ಪೃಥ್ವಿಶಂಕರ
|

Updated on: Apr 05, 2021 | 12:27 PM

Share

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅದ್ಭುತ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿತು. ಪ್ರಮುಖ ಆಟಗಾರರು ತಂಡದಲ್ಲಿ ಅಲಭ್ಯರಾಗಿದ್ದರು, ಹಲವಾರು ಯುವಕರು ಮತ್ತು ಹೊಸಬರು ಸರಣಿಯನ್ನು 2-1ರಿಂದ ಗೆಲ್ಲಲು ಭಾರತಕ್ಕೆ ತಮ್ಮದೆಯಾದ ಕೊಡುಗೆ ನೀಡಿದರು. ಯುವಕರ ಈ ಸಾಮಥ್ರ್ಯವನ್ನು ಮೆಚ್ಚಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆ ಸಮಯದಲ್ಲಿ ಡೌನ್ ಅಂಡರ್ ಸರಣಿಯಲ್ಲಿ ಪ್ರಾಮುಖ್ಯತೆ ಪಡೆದ ಆರು ಆಟಗಾರರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಈ ಉಡುಗೂರೆ ಪಡೆಯುವ ಆಟಗಾರರಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಹ ಅವರಲ್ಲಿ ಒಬ್ಬರು. ಸಿರಾಜ್ ಅವರು ಇತ್ತೀಚೆಗೆ ತಮ್ಮ ಉಡುಗೊರೆಯನ್ನು ಪಡೆದಿದ್ದಾರೆ. ಜೊತೆಗೆ ಎಸ್ಯುವಿ ಕಾರ್​ ನೀಡಿದ ಆನಂದ್ ಮಹೀಂದ್ರಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ.

ಭಾವನಗೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ ಈ ಬಗ್ಗೆ ಟ್ವೀಟ್​ ಮಾಡಿರುವ ಮೊಹಮ್ಮದ್ ಸಿರಾಜ್, ಈ ಕ್ಷಣದ ಖುಷಿ ವರ್ಣಿಸಲು ನನ್ನ ಪದಗಳು ಸೋಲುತ್ತಿವೆ. ನೀವು ನೀಡಿದ ಸೊಗಸಾದ ಥಾರ್ SUV ಗಿಫ್ಟ್‌ಗಾಗಿ ನಾನು ಏನೂ ಹೇಳಲು, ಮಾಡಲು ಆಗುತ್ತಿಲ್ಲ. ಆ ಭಾವನಗೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಈ ಹೊತ್ತು ನಾನು ನಿಮಗೆ ಧನ್ಯವಾದಗಳನ್ನಷ್ಟೇ ಹೇಳಬಲ್ಲೆ’ ಎಂದು ಸಿರಾಜ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಿರಾಜ್​ ಐಪಿಎಲ್ ಅಭ್ಯಾಸದಲ್ಲಿ ನಿರತರಾಗಿರುವುದರಿಂದ ತನ್ನ ಸಹೋದರ ಮತ್ತು ತಾಯಿ ಕಾರನ್ನು ಸ್ವೀಕರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತ ಗೆದ್ದ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಸಿರಾಜ್ ಅಂತರರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಗಾಯಗಳು ಹೆಚ್ಚಾಗುತ್ತಿದ್ದಂತೆ, ನಾಲ್ಕನೇ ಟೆಸ್ಟ್​ನಲ್ಲಿ ಸಿರಾಜ್ ಭಾರತದ ಬೌಲಿಂಗ್ ದಾಳಿಯ ನಾಯಕತ್ವ ವಹಿಸಿದ್ದರು. ಜೊಪತೆಗೆ ಎರಡು ಟೆಸ್ಟ್ ಪಂದ್ಯಗಳೆಲ್ಲವೂ ಉತ್ತಮ ಪ್ರದರ್ಶನ ನೀಡಿದರು.

ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅಂತಿಮ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದರೆ, ಸೈನಿ ಅದಕ್ಕೂ ಮೊದಲು ಒಂದು ಟೆಸ್ಟ್ ಮಾತ್ರ ಆಡಿದ್ದರು. ಇದು ಶಾರ್ದುಲ್ ಠಾಕೂರ್ ಅವರ ಎರಡನೇ ಟೆಸ್ಟ್ ಕೂಡ ಆಗಿತ್ತು. ಆದರೆ ಅದು ಕೇವಲ 1.4 ಓವರ್ಗಳನ್ನು ಎಸೆದ ಕಾರಣ ಅವರಿಗೆ ಚೊಚ್ಚಲ ಪಂದ್ಯವಾಗಿತ್ತು. ಗಾಬಾದಲ್ಲಿ ನಡೆದ ಎರಡನೇ ಇನ್ನಿಂಗ್ಸ್‌ನಲ್ಲಿ ಸಿರಾಜ್ ಐದು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ:ನಟರಾಜನ್​ ಮನೆ ಸೇರಿದ ಥಾರ್ ಎಸ್​ಯುವಿ ಕಾರ್.. ನಾನು ಕೃತಜ್ಞನಾಗಿದ್ದೇನೆ ಸರ್! ಆನಂದ್ ಮಹಿಂದ್ರಾಗೆ ಭಾವನಾತ್ಮಕ ಸಂದೇಶ ಬರೆದ ನಟ್ಟು

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ