ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಇಬ್ಬರು ಕ್ರೀಡಾಪಟು ವಿದ್ಯಾರ್ಥಿಗಳು ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಧನಲಕ್ಷ್ಮೀ ಹಾಗೂ ಶುಭಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.ಭಾರತ ತಂಡದ 4* 400ಮೀಟರ್ ಮಿಕ್ಸೆಡ್ ರಿಲೇ ತಂಡವನ್ನು ಧನಲಕ್ಷ್ಮಿಹಾಗು ಶುಭಾ ಪ್ರತಿನಿಧಿಸಲಿದ್ದಾರೆ. 2016-17ನೇ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಧನಲಕ್ಷ್ಮಿ ಹಾಗು ಶುಭಾ ವಿದ್ಯಾರ್ಥಿಗಳಾಗಿದ್ದರು.
ಈ ಇಬ್ಬರು ಆಟಗಾರ್ತಿಯರು ಮೂಲತಃ ತಮಿಳುನಾಡಿನ ತಿರುಚಿ ಮೂಲದವರಾಗಿದ್ದಾರೆ. ಆಳ್ವಾಸ್‌ನ ಕ್ರೀಡಾ ವಿಭಾಗದಲ್ಲಿ ದತ್ತ ಶಿಕ್ಷಣದ ಅಡಿ ವ್ಯಾಸಂಗ ಮಾಡಿದ್ದರು. 2016-17ನೇ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿ ಈ ಇಬ್ಬರು ಮಂಗಳೂರು ವಿಶ್ವ ವಿದ್ಯಾಲಯ ಹಾಗೂ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಯಲ ಕೂಟಗಳಲ್ಲಿ ಭಾಗವಹಿಸಿರುವ ಇವರು ಈಗಾಗಲೇ ಅನೇಕ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.
ಆಳ್ವಾಸ್ ವಿದ್ಯಾಸಂಸ್ಥೆಯ ಹಲವಾರು ಕ್ರೀಡಾ ವಿದ್ಯಾರ್ಥಿಗಳು ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಸಾಧನೆ ಮಾಡಿದ್ದು, ಈ ಬಾರಿಯ ಒಲಿಂಪಿಕ್ಸ್‌ಗೆ ಆಯ್ಕೆಯಾದ ಇಬ್ಬರು ಪ್ರತಿಭಾನ್ವಿತ ಕ್ರೀಡಾ ವಿದ್ಯಾರ್ಥಿಗಳಿಗೆ ಡಾ.ಎಂ. ಮೋಹನ್ ಆಳ್ವ ತಲಾ ಒಂದು ಲಕ್ಷ ರುಪಾಯಿ ಪ್ರೋತ್ಸಾಹಧನ ನೀಡಿದ್ದಾರೆ. ಭಾರತ ಮಿಶ್ರ ರಿಲೇಯಲ್ಲಿ ರೇವತಿ ವೀರಮಣಿ, ಶುಭ ವೆಂಕಟೇಶನ್, ಧನಲಕ್ಷ್ಮಿ ಶೇಖರ್, ಶಾರ್ಥಕ್ ಬಾಂಬ್ರಿ, ಅಲೆಕ್ಸ್ ಆಂಟನಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.