ಪಂದ್ಯದ ಬಳಿಕ ಗಂಟೆಗಟ್ಟಲೇ ಮಾತಿಗಿಳಿಯುತ್ತಿದ್ದರು: ಧೋನಿ ಸ್ನೇಹ ಸಂಪಾದಿಸಿದ್ದ ಆ ಕ್ರಿಕೆಟಿಗ ಯಾರು?
ಧೋನಿ ಮತ್ತು ಫಾಫ್ ಕೇವಲ 5 ಅಥವಾ 10 ನಿಮಿಷ ಮಾತಾನಾಡಿ ಸುಮ್ಮನಾಗುತ್ತಿರಲಿಲ್ಲ. ಕೆಲವೊಮ್ಮೆ ಅವರು ಒಂದು ಗಂಟೆ ಮತ್ತು ಕೆಲವೊಮ್ಮೆ ಎರಡು ಗಂಟೆಗಳ ಕಾಲ ಮಾತನಾಡುತ್ತಿರುತ್ತಾರೆ
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಈಗ ಒಂದು ದೊಡ್ಡ ರಹಸ್ಯ ಬಹಿರಂಗವಾಗಿದೆ. ಎಂಎಸ್ ಧೋನಿ ಕಳೆದ ವರ್ಷವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಈಗ ಮಹೀ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಅಭಿಮಾನಿಗಳನ್ನು ಆಟದ ಮೂಲಕ ರಂಜಿಸುತ್ತಿದ್ದಾರೆ. ಧೋನಿ ತಮ್ಮ ನಾಯಕತ್ವದಲ್ಲಿ ಮೂರು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಏತನ್ಮಧ್ಯೆ, ಧೋನಿ ತಂಡದ ಪ್ರಮುಖ ಆಟಗಾರ ಧೋನಿಯ ಬಗ್ಗೆ ದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾನೆ. ಆ ರಹಸ್ಯವೆಂದರೆ ಪಂದ್ಯದ ನಂತರ, ಧೋನಿ ಎರಡು ಗಂಟೆಗೂ ಅಧಿಕ ಸಮಯ ಮಾತಾನಾಡುತ್ತಿದ್ದ ವ್ಯಕ್ತಿ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ.
ವಾಸ್ತವವಾಗಿ, ಈ ವಿಚಾರವನ್ನು ಐಪಿಎಲ್‌ನಲ್ಲಿ ಧೋನಿ ತಂಡದ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರ ರುತುರಾಜ್ ಗೈಕ್ವಾಡ್ ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ತಂಡದ ಮಾಜಿ ನಾಯಕ ಮತ್ತು ಸಿಎಸ್‌ಕೆ ಓಪನರ್ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಧೋನಿ ಗಂಟೆಗಟ್ಟಲೆ ಮಾತುಕತೆ ನಡೆಸಿದ್ದರು ಎಂದು ರುತುರಾಜ್ ಹೇಳಿದರು. ಗೈಕ್ವಾಡ್ ಪ್ರಕಾರ, ಧೋನಿ ಮತ್ತು ಫಾಫ್ ತುಂಬಾ ಆಪ್ತ ಗೆಳೆಯರಾಗಿದ್ದಾರೆ. ಇಬ್ಬರೂ ಪರಸ್ಪರ ಗೌರವಿಸುತ್ತಾರೆ ಮತ್ತು ಅನೇಕ ವಿಷಯಗಳ ಬಗ್ಗೆ ಪರಸ್ಪರ ಮಾತನಾಡುತ್ತಾರೆ. ಅವರ ವೃತ್ತಿಜೀವನದ ಈ ಹಂತದಲ್ಲಿಯೂ ಸಹ ಇಬ್ಬರೂ ಸಾಕಷ್ಟು ಚರ್ಚಿಸುತ್ತಾರೆ ಎಂದು ವಿವರಿಸಿದರು.
ಇಬ್ಬರು ಮಾತಿಗಿಳಿದರೆ ಸಮಯದ ಮಿತಿ ಇರುತ್ತಿರಲಿಲ್ಲ ಧೋನಿ ಮತ್ತು ಫಾಫ್ ಕೇವಲ 5 ಅಥವಾ 10 ನಿಮಿಷ ಮಾತಾನಾಡಿ ಸುಮ್ಮನಾಗುತ್ತಿರಲಿಲ್ಲ. ಕೆಲವೊಮ್ಮೆ ಅವರು ಒಂದು ಗಂಟೆ ಮತ್ತು ಕೆಲವೊಮ್ಮೆ ಎರಡು ಗಂಟೆಗಳ ಕಾಲ ಮಾತನಾಡುತ್ತಿರುತ್ತಾರೆ ಎಂದಿದ್ದಾರೆ. ಇಬ್ಬರೂ ಸಹ ಅಭ್ಯಾಸದ ನಂತರ ಪ್ರತಿದಿನ ಮಾತನಾಡುತ್ತಾರೆ. ಕೆಲವೊಮ್ಮೆ ಮಹಿ ಭಾಯ್ ಸ್ವತಃ ಫಾಫ್ ಹತ್ತಿರ ಹೋಗಿ ಮಾತಿಗಿಳಿಯುತ್ತಾರೆ. ಐಪಿಎಲ್‌ನ ಈ ಋತುವಿನಲ್ಲಿ ಚೆನ್ನೈ ಆಡಿದ ಏಳು ಪಂದ್ಯಗಳಲ್ಲಿ, ಫಾಫ್ ಡು ಪ್ಲೆಸಿಸ್ ಸತತ ನಾಲ್ಕು ಅರ್ಧಶತಕಗಳ ಸಹಾಯದಿಂದ 320 ರನ್ ಗಳಿಸಿದ್ದಾರೆ. ಈ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಚೆನ್ನೈ ಗೆದ್ದಿದೆ. ಅದೇ ಸಮಯದಲ್ಲಿ, ಗೈಕ್ವಾಡ್ ಈ ಋತುವಿನಲ್ಲಿ ಎರಡು ಬಾರಿ ಫಾಫ್ ಜೊತೆ ಶತಕದ ಪಾಲುದಾರಿಕೆಯನ್ನು ಗಳಿಸಿದ್ದಾರೆ. 25 ವರ್ಷದ ಗೈಕ್ವಾಡ್ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡು ಅರ್ಧಶತಕಗಳ ಸಹಾಯದಿಂದ ಏಳು ಪಂದ್ಯಗಳಲ್ಲಿ 196 ರನ್ ಗಳಿಸಿದರು.