ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Aug 18, 2020 | 2:57 PM

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ. ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​ ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ […]

ಧೋನಿ ನಿವೃತ್ತಿ ಸುದ್ದಿಗೆ ಮನನೊಂದು ಆ ಪಾಕ್ ಅಭಿಮಾನಿ ಮಾಡಿದ್ದೇನು ಗೊತ್ತಾ?
Follow us on

ದೆಹಲಿ: ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಕ್ಯಾಪ್ಟನ್​ ಕೂಲ್​ MS ಧೋನಿ ತಮ್ಮ ನಿವೃತ್ತಿಯನ್ನ ಘೋಷಿಸಿದ್ದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ಮತ್ತು ಆಘಾತ ಉಂಟುಮಾಡಿದೆ. ಅಚ್ಚರಿಯೆಂದರೆ, ಧೋನಿಯ ಎಲ್ಲಾ ಫ್ಯಾನ್​ಗಳಲ್ಲಿ ಅವರ ನಿವೃತ್ತಿಯ ಸುದ್ದಿ ಕೇಳಿ ಅತಿ ಹೆಚ್ಚು ದುಃಖ ತಂದಿರುವುದು ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹುಟ್ಟಿದ ಅವರ ಕಟ್ಟಾ ಅಭಿಮಾನಿಗೆ.

ರಾಂಚಿಯಲ್ಲಿ ಧೋನಿಯನ್ನ ಭೇಟಿ ಮಾಡಲು ಸಜ್ಜಾದ ಬಷೀರ್​
ಹೌದು, ಪಾಕಿಸ್ತಾನದ ಕರಾಚಿ ಮೂಲದ ಮೊಹಮ್ಮದ ಬಷೀರ್​ ಅಥವಾ ಚಾಚಾ ಶಿಕಾಗೋ ಎಂದೇ ಫೇಮಸ್​ ಆಗಿರುವ ಈ ಧೋನಿ ಅಭಿಮಾನಿಗೆ ಅವರ ನೆಚ್ಚಿನ ಆಟಗಾರ ನಿವೃತ್ತಿಯಾಗಿದ್ದು ತೀವ್ರ ನೋವುಂಟು ಮಾಡಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಬಷೀರ್​ ಮತ್ತೆಂದೂ ಇಂಡಿಯಾ- ಪಾಕಿಸ್ತಾನ ನಡುವಿನ ಪಂದ್ಯಾವಳಿಗಳನ್ನು ನೋಡುವುದಿಲ್ಲವಂತೆ. ಹಾಗಂತ ತಾವೂ ಮ್ಯಾಚ್ ನೋಡೋದಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಜೊತೆಗೆ, ಆ ಮ್ಯಾಚ್​ಗಳನ್ನ ನೋಡಲು ವಿದೇಶಕ್ಕೆ ಸಹ ಹೋಗುವುದಿಲ್ಲವಂತೆ. ಅದರ ಬದಲಾಗಿ, ಈ 65 ವರ್ಷದ ಧೋನಿ ಅಭಿಮಾನಿ, ತನ್ನ ಫೇವರೇಟ್​ ಆಟಗಾರನನ್ನ ಕೊನೇ ಬಾರಿ ಧೋನಿಯ ತವರೂರಾದ ರಾಂಚಿಯಲ್ಲಿ ಭೇಟಿ ಮಾಡಲು ಬಯಸಿದ್ದಾರೆ.

ಅಮೆರಿಕಾದ ಶಿಕಾಗೋನಲ್ಲಿ ರೆಸ್ಟೋರೆಂಟ್​ ನಡೆಸುವ ಪಾಕ್​ ಸಂಜಾತ ಬಷೀರ್​ಗೂ ಕ್ಯಾಪ್ಟನ್​ ಕೂಲ್​ ನಡುವಿನ ಬಾಂಧವ್ಯ ಶುರುವಾಗಿದ್ದು ಮೊಹಾಲಿಯಲ್ಲಿ ನಡೆದ 2011ರ ವಿಶ್ವ ಕಪ್​ನ ಇಂಡಿಯಾ-ಪಾಕಿಸ್ತಾನ ನಡುವಿನ ಸೆಮಿಫೈನಲ್​ ಮ್ಯಾಚ್​ ವೇಳೆ.

ಪಂದ್ಯ ನೋಡಲು ಟಿಕೆಟ್​ಗಾಗಿ ಹಂಬಲಿಸುತ್ತಿದ್ದ ಬಷೀರ್​ಗೆ ಧೋನಿ ಅಂದು ಮ್ಯಾಚ್​ನ ಟಿಕೆಟ್​ ಕೊಡಿಸಿದ್ದರಂತೆ. ಅಂದಿನಿಂದ ಶುರುವಾದ ಧೋನಿ ಮೇಲಿನ ಅಗಾಧ ಅಭಿಮಾನವನ್ನ ಬಷೀರ್​ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಪಾಕ್​ ಛೀಮಾರಿಗೂ ಬಷೀರ್​ ಡೋಂಟ್​ ಕೇರ್​
ಧೋನಿಯ ಮೇಲಿನ ಈ ಹುಚ್ಚು ಅಭಿಮಾನದಿಂದ ಬಷೀರ್​ ಇತರೆ ಪಾಕಿಸ್ತಾನದ ಫ್ಯಾನ್ಸ್​ ಹಲವಾರು ಬಾರಿ ಛೀಮಾರಿ ಹಾಕಿದ್ದಾರಂತೆ. ಬಷೀರ್​ನ ದೇಶದ್ರೋಹಿ ಅಂತಾ ಕರೆದಿದ್ದು ಉಂಡು. ಆದರೆ, ಇದ್ಯಾವುದಕ್ಕೂ ಬಷೀರ್​ ಡೋಂಟ್​ ಕೇರ್​. ನನಗೆ ಎರಡೂ ದೇಶಗಳಂದರೆ ಪ್ರೀತಿ. ಆದರೆ, ಅದಕ್ಕಿಂತ ಮಿಗಿಲಾದದ್ದು ಮಾನವ ಕುಲ ಎಂದು ಹೇಳಿದ್ದಾರೆ.