‘ನನ್ನ ಟಾರ್ಗೆಟ್ ಟೀಮ್ ಇಂಡಿಯಾ ಅಲ್ಲ.. ಓನ್ಲಿ ಸಚಿನ್ ’?!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್ ಲೋಕವನ್ನ ಆಳಿದ ಅನಭಿಷಿಕ್ತ ದೊರೆ. ಫೀಲ್ಡ್​ನಲ್ಲಿ ಸಚಿನ್ ಹವಾ ಹೇಗಿತ್ತು ಅಂದ್ರೇ, ಎದುರಾಳಿ ತಂಡದ ಆಟಗಾರರು ಮ್ಯಾಚ್​ನಲ್ಲಿ ಭಾರತವನ್ನು ಮಣಿಸೋದಕ್ಕಿಂತ ಸಚಿನ್ ಒಬ್ಬರನ್ನೇ ಹೇಗೆ ಔಟ್​ ಮಾಡಬೇಕು ಅಂತಾ ಪ್ಲಾನ್​ ಹೆಣೆದಿದ್ದೇ ಹೆಚ್ಚು. ಅಷ್ಟರ ಮಟ್ಟಿಗೆ ಸಚಿನ್ ತೆಂಡೂಲ್ಕರ್ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿದ್ದರು. ಮ್ಯಾಚ್​ನಲ್ಲಿ ಸಚಿನ್​ರನ್ನ ಹತ್ತಿಕ್ಕಲು ಡ್ರೆಸ್ಸಿಂಗ್​ ರೂಮ್​ನಲ್ಲಿ ಎದುರಾಳಿ ತಂಡದವರು ಮಾಡಿರುವ ಸ್ಟ್ರಾಟೆಜಿಗಳಿಗೆ ಲೆಕ್ಕವೇ ಇಲ್ಲ. ಇದರ ಒಂದು ಉದಾಹರಣೆಯನ್ನ ಖುದ್ದು […]

‘ನನ್ನ ಟಾರ್ಗೆಟ್ ಟೀಮ್ ಇಂಡಿಯಾ ಅಲ್ಲ.. ಓನ್ಲಿ ಸಚಿನ್ ’?!
ಸಚಿನ್ ತೆಂಡೂಲ್ಕರ್
Follow us
KUSHAL V
|

Updated on: Jul 07, 2020 | 7:34 PM

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್ ಲೋಕವನ್ನ ಆಳಿದ ಅನಭಿಷಿಕ್ತ ದೊರೆ. ಫೀಲ್ಡ್​ನಲ್ಲಿ ಸಚಿನ್ ಹವಾ ಹೇಗಿತ್ತು ಅಂದ್ರೇ, ಎದುರಾಳಿ ತಂಡದ ಆಟಗಾರರು ಮ್ಯಾಚ್​ನಲ್ಲಿ ಭಾರತವನ್ನು ಮಣಿಸೋದಕ್ಕಿಂತ ಸಚಿನ್ ಒಬ್ಬರನ್ನೇ ಹೇಗೆ ಔಟ್​ ಮಾಡಬೇಕು ಅಂತಾ ಪ್ಲಾನ್​ ಹೆಣೆದಿದ್ದೇ ಹೆಚ್ಚು. ಅಷ್ಟರ ಮಟ್ಟಿಗೆ ಸಚಿನ್ ತೆಂಡೂಲ್ಕರ್ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿದ್ದರು.

ಮ್ಯಾಚ್​ನಲ್ಲಿ ಸಚಿನ್​ರನ್ನ ಹತ್ತಿಕ್ಕಲು ಡ್ರೆಸ್ಸಿಂಗ್​ ರೂಮ್​ನಲ್ಲಿ ಎದುರಾಳಿ ತಂಡದವರು ಮಾಡಿರುವ ಸ್ಟ್ರಾಟೆಜಿಗಳಿಗೆ ಲೆಕ್ಕವೇ ಇಲ್ಲ. ಇದರ ಒಂದು ಉದಾಹರಣೆಯನ್ನ ಖುದ್ದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅವರೇ ಬಾಯ್ಬಿಟ್ಟಿದ್ದಾರೆ.

ನಿಮ್ಮ ಪ್ರಕಾರ ಅದ್ಭುತವಾದ ಬ್ಯಾಟಿಂಗ್ ಟೆಕ್ನಿಕ್ ಹೊಂದಿರೋ ಬ್ಯಾಟ್ಸ್​ಮನ್ ಯಾರು ಅನ್ನೋ ಪ್ರಶ್ನೆಗೆ ನಾಸಿರ್ ಹುಸೇನ್ ಮೊದಲಿಗೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಎಂದು ಹೇಳಿದ್ದಾರೆ. ಆದರೆ ನಾನು ಕಂಡ ಶ್ರೇಷ್ಠ ಟೆಕ್ನಿಕ್ ಹೊಂದಿರೋ ಏಕೈಕ ಸಾರ್ವಕಾಲಿಕ ಬ್ಯಾಟ್ಸ್​ಮನ್ ಅಂದ್ರೆ ಅದು ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ.

ಒಟ್ಟಾರೆಯಾಗಿ ನಾನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಬಗ್ಗೆ ಹೇಳಬೇಕಾದರೆ ಖಂಡಿತವಾಗಿಯೂ ಸಚಿನ್ ಅದ್ಭುತವಾದ ಟೆಕ್ನಿಕ್ ಹೊಂದಿರುವವರು. ನಾನು ಇಂಗ್ಲೆಂಡ್ ತಂಡದ ಕ್ಯಾಪ್ಟನ್​ ಆಗಿದ್ದಾಗ, ಸಚಿನ್​ನ ಹೇಗೆ ಪೆವಿಲಿಯನ್​ಗೆ ವಾಪಸ್​ ಕಳಿಸೋದರ ಬಗ್ಗೆ ಡ್ರೆಸ್ಸಿಂಗ್ ರೂಮ್​ನಲ್ಲಿ ಅದೆಷ್ಟು ಮೀಟಿಂಗ್​ಗಳನ್ನ ಮಾಡಿದೀನೋ ನನಗೇ ನೆನಪಿಲ್ಲ ಎಂದು ನಾಸಿರ ಹುಸೇನ್​ ಹಂಚಿಕೊಂಡಿದ್ದಾರೆ.

ಇದಲ್ಲದೇ ವೆಸ್ಟ್ ಇಂಡೀಸ್ ತಂಡದ ಮಾಜಿ ಫಾಸ್ಟ್ ಬೌಲರ್ ಇಯಾನ್ ಬಿಷಪ್ ಕೂಡ ನನ್ನ ವೃತ್ತಿ ಜೀವನದಲ್ಲಿ ಎದುರಿಸಿರುವ ಅತ್ಯಂತ ಟಫ್​ ಬ್ಯಾಟ್ಸ್​ಮನ್ ಅಂದ್ರೆ ಅದು ಸಚಿನ್ ಎಂದಿದ್ದಾರೆ. ಒಟ್ನಲ್ಲಿ, ಪಂದ್ಯದಲ್ಲಿ ಭಾರತವನ್ನ ಸೋಲಿಸೋದಕ್ಕಿಂತ ಸಚಿನ್​ರನ್ನ ಹೇಗೆ ಮಣಿಸಬೇಕು ಅನ್ನೋದರ ಬಗ್ಗೆ ಎದುರಾಳಿ ಟೀಂಗಳು ತಲೆಕೆಡಿಸಿಕೊಳ್ಳುತ್ತಿದ್ದರು ಅನ್ನೋದು ಬಟಾಬಯಲಾಗಿದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ