ಮುಂಬೈ: ಟಿವಿ9 ನೆಟ್‌ವರ್ಕ್ ಇತ್ತೀಚೆಗೆ ಆಯೋಜಿಸಿದ್ದ ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್ (News9 Plus Corporate Cup 2023 )ವಿಜೇತರಾದ HDFC ಬ್ಯಾಂಕ್ ತಂಡದ ಆಟಗಾರರು ಖ್ಯಾತ ಫುಟ್‌ಬಾಲ್ ಲೆಜೆಂಡ್ ಲೂಥರ್ ಮ್ಯಾಥ್ಯೂಸ್ (Lothar Matthaus) ಅವರನ್ನು ಭೇಟಿಯಾಗಿದ್ದಾರೆ. ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್ ಟೂರ್ನಿಯಲ್ಲಿ ಜಯ ಸಾಧಿಸುವ ತಂಡಕ್ಕೆ ಜರ್ಮನಿಯ ಬಂಡೆಸ್ಲಿಗಾ ಕ್ಲಬ್ ತಂಡಗಳನ್ನು ಭೇಟಿಯಾಗುವ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮ್ಯೂನಿಚ್ಗೆ ತೆರಳಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್ ತಂಡವು ಬಂಡೆಸ್ಲಿಗಾ ಎಸ್‌ಪೋರ್ಟ್ಸ್ ಕೇಂದ್ರಕ್ಕೆ ಭೇಟಿ ನೀಡಿದೆ. ಅಲ್ಲದೆ ಅಲ್ಲಿ ಬಂಡೆಸ್ಲಿಗಾ ತಂಡಗಳನ್ನು ಒಳಗೊಂಡ ವರ್ಚುವಲ್ ಫುಟ್‌ಬಾಲ್ ಸ್ಪರ್ಧೆಗಳನ್ನು ವೀಕ್ಷಿಸಿದರು.
ಆ ಬಳಿಕ TV9 ನೆಟ್‌ವರ್ಕ್ ಮತ್ತು ಕಾರ್ಪೊರೇಟ್ ಕಪ್ ವಿನ್ನರ್ ತಂಡವು 1991 ರ ಫಿಫಾ ಆಟಗಾರ, 1990 Ballon d’Or ವಿಜೇತ ಜರ್ಮನಿಯ ಲೂಥರ್ ಮ್ಯಾಥ್ಯೂಸ್ ಮತ್ತು ರೋಮನ್ ವೀಡೆನ್‌ಫೆಲ್ಲರ್ ಮತ್ತು ಬೊರುಸ್ಸಿಯಾ ಡಾರ್ಟ್‌ಮಂಡ್ ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಇದೇ ವೇಳೆ ಟಿವಿ9 ನೆಟ್‌ವರ್ಕ್ ತಂಡವು ಲೂಥರ್ ಮ್ಯಾಥ್ಯೂಸ್ ಅವರಿಗೆ ಗಣೇಶನ ಮೂರ್ತಿಯನ್ನು ಕಾಣಿಕೆಯಾಗಿ ನೀಡಿದರು. ಈ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಅವರು ಭಾವುಕರಾದರು. ಅಲ್ಲದೆ ಭಗವಾನ್ ಗಣೇಶನ ಮೂರ್ತಿಯ ಉಡುಗೊರೆಗೆ ಅಪಾರ ಸಂತೋಷವನ್ನು ವ್ಯಕ್ತಪಡಿಸಿದ ಅವರು, ಬೇಯರ್ನ್ ಮ್ಯೂನಿಚ್ ತಂಡದ ಜೆರ್ಸಿಗೆ ಸಹಿ ಮಾಡಿ ರಿಟರ್ನ್ ಗಿಫ್ಟ್ ನೀಡಿದರು.
ವಿಶೇಷ ಎಂದರೆ ಲೂಥರ್ ಮ್ಯಾಥ್ಯೂಸ್ ಭಾರತೀಯ ಫುಟ್‌ಬಾಲ್‌ನಲ್ಲಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಭಾರತವು ಯುವ ಫುಟ್‌ಬಾಲ್ ಸಂಸ್ಕೃತಿಯನ್ನು ಹೊಂದಿದ್ದು, ಅಗತ್ಯವಿದ್ದರೆ ಭಾರತೀಯ ಫುಟ್‌ಬಾಲ್‌ಗೆ ಕೊಡುಗೆ ನೀಡುವುದಾಗಿ ತಿಳಿಸಿದರು. ಹೆಚ್ಚುವರಿಯಾಗಿ, ಅವರು ಭಾರತಕ್ಕೆ ಭೇಟಿ ನೀಡುವ ಮತ್ತು ಅವರ ಅಭಿಮಾನಿಗಳನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು.
ಅಲ್ಲದೆ ಇದೇ ವೇಳೆ ಟಿವಿ9 ಕೈಗೊಂಡಿರುವ ಕಾರ್ಪೋರೇಟ್ ಕ್ಷೇತ್ರದಲ್ಲಿನ ಕ್ರೀಡಾ ಉತ್ತೇಜನವನ್ನು ಶ್ಲಾಘಿಸಿದರು. ಕಾರ್ಪೊರೇಟ್ ಕಪ್ ಹೊಸ ಪ್ರತಿಭೆಗಳನ್ನು ಅನ್ವೇಷಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮುಂಬರುವ ದಿನಗಳಲ್ಲಿ, ಇದು ಹೊಸ ಭರವಸೆ ಹುಟ್ಟುಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಭಾರತದ ಫುಟ್‌ಬಾಲ್ ಬಗ್ಗೆ ಮಾತನಾಡಿದ ರೋಮನ್ ವೀಡೆನ್‌ಫೆಲ್ಲರ್, ಪ್ರಸ್ತುತ ಭಾರತದಲ್ಲಿನ ಫುಟ್‌ಬಾಲ್‌ನ ಮೌಲ್ಯಯುತ ಒಳನೋಟಗಳನ್ನು ಹಂಚಿಕೊಂಡರು. ಅಲ್ಲದೆ ತಂಡದೊಂದಿಗೆ ಪ್ರತ್ಯೇಕ ಚರ್ಚೆಯಲ್ಲಿ ತೊಡಗಿಸಿಕೊಂಡರು.
ಮೇ 7 ರಂದು ನಡೆದ ಕಾರ್ಪೊರೇಟ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಎಚ್‌ಡಿಎಫ್‌ಸಿ ಬ್ಯಾಂಕ್ ತಂಡದ ಸದಸ್ಯರು ಯುರೋಪಿನ ಖ್ಯಾತ ಫುಟ್‌ಬಾಲ್ ಕ್ಲಬ್ ಬೇಯರ್ನ್ ಮ್ಯೂನಿಚ್ ಮತ್ತು ಆರ್‌ಬಿ ಲೈಪ್ಝಿಗ್ ನಡುವಿನ ಬಹು ನಿರೀಕ್ಷಿತ ರೋಮಾಂಚನಕಾರಿ ಪಂದ್ಯವನ್ನು ವೀಕ್ಷಿಸಿದರು. ಇದೇ ವೇಳೆ ಮಹಾರಾಷ್ಟ್ರದ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವ ಗಿರೀಶ್ ಮಹಾಜನ್ ಕೂಡ ಜೊತೆಯಾಗಿದದ್ದು ವಿಶೇಷ.
ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಆಟಗಾರರು ತಮ್ಮ ಅಸಾಧಾರಣ ಸಾಮರ್ಥ್ಯ ಮತ್ತು ಕಾರ್ಯತಂತ್ರದ ಪರಾಕ್ರಮವನ್ನು ಪ್ರದರ್ಶಿಸುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಅಂತಿಮವಾಗಿ ಬೇಯರ್ನ್ ಮ್ಯೂನಿಚ್ ತಂಡವನ್ನು 3-1 ಅಂತರದಿಂದ ಮಣಿಸುವ ಮೂಲಕ ಆರ್‌ಬಿ ಲೈಪ್ಝಿಗ್ ತಂಡ ವಿಜಯಶಾಲಿಯಾದರು. ಇದರೊಂದಿಗೆ ಸತತ 11 ನೇ ಬಾರಿ ಪ್ರಶಸ್ತಿಯನ್ನು ಗೆಲ್ಲುವ ಬೇಯರ್ನ್ ಮ್ಯೂನಿಚ್ ತಂಡ ಕನಸು ಕೂಡ ಕೊನೆಗೊಂಡಿತು.
ಜರ್ಮನಿಯಲ್ಲಿ ನಮ್ಮ ಸಮಯ ನಿಜವಾಗಿಯೂ ವಿದ್ಯುದ್ದೀಕರಣವಾಗಿತ್ತು. ಪ್ರಪಂಚದಾದ್ಯಂತದ ಭಾವೋದ್ರಿಕ್ತ ಫುಟ್‌ಬಾಲ್ ಅಭಿಮಾನಿಗಳೊಂದಿಗೆ ಪಂದ್ಯವನ್ನು ವೀಕ್ಷಿಸುವುದು ವಿಶೇಷ ಅನುಭವವಾಗಿದೆ. ಶ್ರೀ ಲೋಥರ್ ಮ್ಯಾಥಸ್ ಮತ್ತು ರೋಮನ್ ವೀಡೆನ್‌ಫೆಲ್ಲರ್ ಅವರಂತಹ ದಂತಕಥೆಗಳನ್ನು ಭೇಟಿ ಮಾಡುವುದು ನಮ್ಮ ಪ್ರವಾಸದ ಪ್ರಮುಖ ಹೈಲೈಟ್ ಆಗಿತ್ತು. ಟಿವಿ9 ನೆಟ್‌ವರ್ಕ್ ಒದಗಿಸಿರುವ ಇಂತಹದೊಂದು ಅವಕಾಶ ಹೊಸ ಅನುಭವ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಉಪಾಧ್ಯಕ್ಷ ಸುಕೇಶ್ ಶಾಸ್ತ್ರಿ ತಿಳಿಸಿದರು.
ಕಾರ್ಪೊರೇಟ್ ಕ್ಷೇತ್ರವೇ ಸ್ಪರ್ಧಾತ್ಮಕ ಜಗತ್ತು.. ಸದಾ ಸಡಗರದ ಬದುಕು.. ಇದೆಲ್ಲದಕ್ಕೂ ಹೊಸ ವ್ಯಾಖ್ಯಾನವನ್ನು ಹೇಳಿಕೊಟ್ಟಿದೆ ಭಾರತದ ಅತಿದೊಡ್ಡ ಟೆಲಿವಿಷನ್ ನೆಟ್‌ವರ್ಕ್ TV9. ಟಿವಿ9 ನೆಟ್‌ವರ್ಕ್ ನ್ಯೂಸ್ 9 ಪ್ಲಸ್ ಕಾರ್ಪೊರೇಟ್ ಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದೆ. ವಾರಾಂತ್ಯದ ಫುಟ್‌ಬಾಲ್ ಪಂದ್ಯವು ಸಾಮಾನ್ಯವಾಗಿ ಬಹುಮಾನದ ಸುತ್ತ ಸುತ್ತುತ್ತದೆ. ಆದಾಗ್ಯೂ, ಟಿವಿ9ನ ದೂರದೃಷ್ಟಿಯು ವಿಭಿನ್ನ ರೀತಿಯ ಕನಸನ್ನು ಹುಟ್ಟುಹಾಕಿದೆ.
Published On - 10:35 pm, Tue, 30 May 23