ನಿತಿಷ್ ರಾಣಾ ಅವರ ಕೊವಿಡ್-19 ಟೆಸ್ಟ್ ನೆಗೆಟಿವ್ ಬಂದಿದೆ, ಶೀಘ್ರದಲ್ಲೇ ಅಭ್ಯಾಸ ಶುರುಮಾಡಲಿದ್ದಾರೆ: ಕೆಕೆಆರ್

ಐಪಿಎಲ್ ಟೂರ್ನಿಯಲ್ಲಿ ಇದುವರೆಗೆ 60 ಪಂದ್ಯಗಳನ್ನಾಡಿರುವ ರಾಣಾ, 28.17 ಸರಾಸರಿಯಲ್ಲಿ 1,437 ರನ್ ಗಳಿಸಿದ್ದಾರೆ ಇದರಲ್ಲಿ 11 ಅರ್ಧ ಶತಕ ಸೇರಿವೆ. ಅವರ ಸ್ಟ್ರೈಕ್​ರೇಟ್ 135.36 ಆಗಿದೆ.

ನಿತಿಷ್ ರಾಣಾ ಅವರ ಕೊವಿಡ್-19 ಟೆಸ್ಟ್ ನೆಗೆಟಿವ್ ಬಂದಿದೆ, ಶೀಘ್ರದಲ್ಲೇ ಅಭ್ಯಾಸ ಶುರುಮಾಡಲಿದ್ದಾರೆ: ಕೆಕೆಆರ್
ನಿತಿಷ್ ರಾಣಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 02, 2021 | 12:01 AM

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾನೇಜ್ಮೆಂಟ್ ತನ್ನ ಸ್ಟಾರ್ ಬ್ಯಾಟ್ಸ್​ಮನ್ ನಿತಿಷ್ ರಾಣಾ ಬಗ್ಗೆ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಅವರ ಕೊವಿಡ್-19 ಟೆಸ್ಟ್ ನೆಗೆಟಿವ್ ಬಂದಿದೆ ಎಂದು ಹೇಳಿದೆ. ಕೆಕೆಆರ್ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ರಾಣಾ ಅವರು ಮಾರ್ಚ್​ 21ರಿಂದ ಕೆಕೆಆರ್ ಟ್ರೇನಿಂಗ್ ಶಿಬಿರವನ್ನು ಸೇರಿಕೊಂಡರು ಅದರೆ ಮರದಿನ ಕೊರೊನಾ ವೈರಸ್​ನಿಂದ ಸೋಂಕಿತರಾಗಿದ್ದು ಕಂಡುಬಂತು. ಇಂಡಿಯನ್ ಪ್ರಿಮೀಯರ್​ ಲೀಗ್ ಕೊವಿಡ್​-19 ಶಿಷ್ಟಾಚಾರದ ಪ್ರಕಾರ ಅವರನ್ನು ಟೀಮಿನಿಂದ ಬೇರ್ಪಡಿಸಲಾಗಿತ್ತು.

‘ಮಾರ್ಚ್ 21, 2021 ರಂದು ನಿತಿಷ್ ರಾಣಾ ಅವರು ಮುಂಬೈನ ಹೋಟೆಲ್​ಗೆ ಆಗಮಿಸಿದರು. ಮಾರ್ಚ್ 19ರಂದು ಅವರು ಕೊವಿಡ್​-19 ಟೆಸ್ಟ್ ಮಾಡಿಸಿದ್ದರು ಮತ್ತು ಅದು ನೆಗೆಟಿವ್ ಬಂದಿತ್ತು, ಆ ರಿಪೋರ್ಟ್​ನೊಂದಿಗೆ ಅವರು ಹೋಟೆಲ್​ಗೆ ಆಗಮಿಸಿದ್ದರು, ಆದರೆ ಐಪಿಎಲ್ ಶಿಷ್ಟಾಚಾರದ ಪ್ರಕಾರ ಮಾರ್ಚ್ 22ರಂದು ಅವರನ್ನು ಕ್ವಾರಂಟೈನ್ ಅವಧಿಯಲ್ಲಿ ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ, ಅದು ಪಾಸಿಟಿವ್ ಬಂದಿತ್ತು.

’ಆದರೆ ಈಗ ರಾಣಾ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಆದಗ್ಯೂ ಐಪಿಎಲ್ ಶಿಷ್ಟಾಚಾರದ ಪ್ರಕಾರ ಅವರನ್ನು ಇಂದು (ಗುರುವಾರ) ಮತ್ತೊಮ್ಮೆ ಟೆಸ್ಟ್​ ಮಾಡಿಸಲಾಗಿ ರಿಪೋರ್ಟ್ ನೆಗೆಟಿವ್ ಬಂದಿದೆ. ಅವರು ಇಷ್ಟರಲ್ಲೇ ಟೀಮಿನ ಇತರ ಸದಸ್ಯರೊಂದಿಗೆ ಅಭ್ಯಾಸ ಶುರಮಾಡಲಿದ್ದಾರೆ ಎಂಬ ಭರವಸೆ ನಾವಿಟ್ಟುಕೊಂಡಿದ್ದೇವೆ ಮತ್ತು ಸೀಸನ್ ಆರಂಭವಾಗುವ ಮೊದಲು ಪರಿಪೂರ್ಣವಾದ ಫಿಟ್ನೆಸ್​ಗೆ ವಾಪಸ್ಸಾಗುವರೆಂಬ ನಿರೀಕ್ಷೆ ಸಹ ನಮಗಿದೆ,’ ಎಂದು ಕೆಕೆಅರ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಣಾ ಅವರು ಕಳೆದ ಬಾರಿ ಯುಎಈಯಲ್ಲಿ ನಡೆದ ಐಪಿಎಲ್ ಸೀಸನಲ್ಲಿ ಉತ್ತಮ ಪ್ರದರ್ಶನ ನೀಡಿ ಆಡಿದ 14 ಪಂದ್ಯಗಳಿಂದ 25.14 ಸರಾಸರಿಯಲ್ಲಿ 352 ರನ್ ಬಾರಿಸಿದರು. 87 ಅವರ ಗರಿಷ್ಠ ಸ್ಕೋರ್ ಆಗಿತ್ತು ಮತ್ತು 3 ಅರ್ಧ ಶತಕಗಳನ್ನು ಸಿಡಿಸಿದರು. ಗಮನಾರ್ಹ ಸಂಗತಿಯೆಂದರೆ ಕಳೆದ ನಾಲ್ಕು ಸೀಸನ್​ಗಳಿಂದ ಅವರ ಸತತವಾಗಿ ಪ್ರತಿ ಸೀಸನ್​ನಲ್ಲಿ 300 ಕ್ಕಿಂತ ಹೆಚ್ಚು ರನ್​ ಗಳಿಸುತ್ತಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಇದುವರೆಗೆ 60 ಪಂದ್ಯಗಳನ್ನಾಡಿರುವ ರಾಣಾ, 28.17 ಸರಾಸರಿಯಲ್ಲಿ 1,437 ರನ್ ಗಳಿಸಿದ್ದಾರೆ ಇದರಲ್ಲಿ 11 ಅರ್ಧ ಶತಕ ಸೇರಿವೆ. ಅವರ ಸ್ಟ್ರೈಕ್​ರೇಟ್ 135.36 ಆಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ವಿಜಯ ಹಜಾರೆ ಟ್ರೋಫಿಯಲ್ಲೂ ಮಿಂಚಿದ ರಾಣಾ ದೆಹಲಿ ಪರ 7 ಪಂದ್ಯಗಳನ್ನಾಡಿ 398 ರನ್ ಬಾರಿಸಿದ್ದರು. ಟೂರ್ನಿಯಲ್ಲಿ ಆವರು ಒಂದು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಏಪ್ರಿಲ್ 9 ರಿಂದ ಶುರುವಾಗಲಿರುವ ಈ ಬಾರಿಯ ಐಪಿಎಲ್ ಸೀಸನಲ್ಲಿ ಕೆಕೆಆರ್ ತಂಡ ರಾಣಾ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

ಇದನ್ನೂ ಓದಿ: IPL 2021: ಈ ಬಾರಿ ಆರ್​ಸಿಬಿಗೆ ಕಪ್​ ಗೆಲ್ಲಿಸಿಕೊಡಲಿದ್ದಾರೆ ಈ ಮೂವರು ಯುವ ಕ್ರಿಕೆಟಿಗರು.. ಉತ್ಕೃಷ್ಟವಾಗಿದೆ ಇವರ ಪ್ರದರ್ಶನ!

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು