ಕೊರೊನಾ ಸಂಕಷ್ಟ: IPL ನಷ್ಟ ಸರಿದೂಗಿಸಲು ಖಾಲಿ ಮೈದಾನದಲ್ಲಿ ಆಡಿಸ್ತಾರಾ!?

ಸಾಧು ಶ್ರೀನಾಥ್​

|

Updated on:May 16, 2020 | 10:14 AM

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯದೇ ಇದ್ರೆ, ಬಿಸಿಸಿಐಗಾಗೋ ನಷ್ಟ ಎಷ್ಟು ಅಂತಾ, ಒಬ್ಬೊಬ್ಬರು ಒಂದೊಂದು ಲೆಕ್ಕ ಹಾಕಿ ಹೇಳುತ್ತಿದ್ರು. ಆದ್ರೀಗ ಸ್ವತಃ ಬಿಸಿಸಿಐ ಬಿಗ್​ಬಾಸ್ ಸೌರವ್ ಗಂಗೂಲಿಯೇ, ಈ ಬಾರಿಯ ಐಪಿಎಲ್ ಸೀಸನ್ ನಡೆಯದೇ ಹೋದ್ರೆ, ಬಿಸಿಸಿಐಗಾಗೋ ನಷ್ಟ ಎಷ್ಟು ಅನ್ನೋದನ್ನ ಬಾಯ್ಬಿಟ್ಟಿದ್ದಾರೆ. ಐಪಿಎಲ್​​ನಿಂದ ಬಿಸಿಸಿಐಗೆ ಎಷ್ಟು ನಷ್ಟ? ಕೊರೊನಾ ವೈರಸ್ ಕೋಲಾಹಲದ ಹಿನ್ನೆಲೆಯಲ್ಲಿ ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ 13ನೇ ಆವೃತ್ತಿಯನ್ನ, ಮುಂದಿನ ಆದೇಶದವರೆಗೆ ರದ್ದು ಪಡಿಸಲಾಗಿದೆ. ಏನೇ ಮಾಡಿದ್ರೂ ಈ ಬಾರಿಯ […]

ಕೊರೊನಾ ಸಂಕಷ್ಟ: IPL ನಷ್ಟ ಸರಿದೂಗಿಸಲು ಖಾಲಿ ಮೈದಾನದಲ್ಲಿ ಆಡಿಸ್ತಾರಾ!?

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯದೇ ಇದ್ರೆ, ಬಿಸಿಸಿಐಗಾಗೋ ನಷ್ಟ ಎಷ್ಟು ಅಂತಾ, ಒಬ್ಬೊಬ್ಬರು ಒಂದೊಂದು ಲೆಕ್ಕ ಹಾಕಿ ಹೇಳುತ್ತಿದ್ರು. ಆದ್ರೀಗ ಸ್ವತಃ ಬಿಸಿಸಿಐ ಬಿಗ್​ಬಾಸ್ ಸೌರವ್ ಗಂಗೂಲಿಯೇ, ಈ ಬಾರಿಯ ಐಪಿಎಲ್ ಸೀಸನ್ ನಡೆಯದೇ ಹೋದ್ರೆ, ಬಿಸಿಸಿಐಗಾಗೋ ನಷ್ಟ ಎಷ್ಟು ಅನ್ನೋದನ್ನ ಬಾಯ್ಬಿಟ್ಟಿದ್ದಾರೆ.

ಐಪಿಎಲ್​​ನಿಂದ ಬಿಸಿಸಿಐಗೆ ಎಷ್ಟು ನಷ್ಟ? ಕೊರೊನಾ ವೈರಸ್ ಕೋಲಾಹಲದ ಹಿನ್ನೆಲೆಯಲ್ಲಿ ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ 13ನೇ ಆವೃತ್ತಿಯನ್ನ, ಮುಂದಿನ ಆದೇಶದವರೆಗೆ ರದ್ದು ಪಡಿಸಲಾಗಿದೆ. ಏನೇ ಮಾಡಿದ್ರೂ ಈ ಬಾರಿಯ ಐಪಿಎಲ್ ನಡೆಯೋದೇ ಅನುಮಾನ. ಹೀಗಾಗಿ ಬಿಗ್​ಬಾಸ್ ಸೌರವ್ ಗಂಗೂಲಿ ಐಪಿಎಲ್​​ನಿಂದ ಬಿಸಿಸಿಐ ಸಹಸ್ರಾರು ಕೋಟಿ ನಷ್ಟವಾಗಲಿದೆ ಎಂದಿದ್ದಾರೆ.

ಕಳವಳ ವ್ಯಕ್ತಪಡಿಸಿದ ಗಂಗೂಲಿ: ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, 13ನೇ ಆವೃತ್ತಿ ಈ ವರ್ಷ ರದ್ದಾದ್ರೆ, ಬಿಸಿಸಿಐಗೆ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿಗಳ ನಷ್ಟ ಸಂಭವಿಸಲಿದೆ ಎಂದಿದ್ದಾರೆ. ಹಣಕಾಸಿನ ಸ್ಥಿತಿಯನ್ನು ಗಮನಿಸುತ್ತಿದ್ದೇವೆ. ನಮ್ಮಲ್ಲಿ ಎಷ್ಟು ಹಣವಿದೆ ಎಂದು ತಿಳಿದು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಐಪಿಎಲ್‌ ಟೂರ್ನಿಯನ್ನು ಈ ಬಾರಿ ಆಯೋಜಿಸದೇ ಇದ್ದರೆ ಅದರಿಂದ 4,000 ಕೋಟಿ ರೂಪಾಯಿಗಳ ಭಾರಿ ನಷ್ಟ ಸಂಭವಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

IPL ನಡೆಯದಿದ್ರೆ ಆಟಗಾರರ ವೇತನಕ್ಕೆ ಕತ್ತರಿ? ಇದಕ್ಕೂ ಮುಂಚೆ, ಒಂದು ವೇಳೆ ಐಪಿಎಲ್‌ ನಡೆದ್ರೆ ನಾವು ಆಟಗಾರರ ವೇತನಕ್ಕೆ ಕತ್ತರಿ ಹಾಕದೆ ಎಲ್ಲವನ್ನು ನಿಭಾಯಿಸಲಿದ್ದೇವೆ. ಐಪಿಎಲ್ ನಡೆಯದೇ ಇದ್ದರೆ ಆಟಗಾರರ ವೇತನ ಕಡಿತಗೊಳಿಸೋದಾಗಿ ಗಂಗೂಲಿ ಪರೋಕ್ಷವಾಗಿ ಸುಳಿವು ನೀಡಿದ್ದರು. ಆದರೆ ಆಟಗಾರರ ವೇತನ ಕಡಿತವನ್ನು ತಳ್ಳಿಹಾಕಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಆಟಗಾರರ ವೇತನ ಕಡಿತಗೊಳಿಸುವ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.

ಒಟ್ನಲ್ಲಿ ಗಂಗೂಲಿ ಮಾತಿನ ಅರ್ಥ.. ಹೇಗಾದ್ರೂ ಮಾಡಿ ಐಪಿಎಲ್ ನಡೆಸೋದಾಗಿದೆ. ಯಾಕಂದ್ರೆ ಖಾಲಿ ಮೈದಾನದಲ್ಲಿ ಐಪಿಎಲ್ ಆಯೋಜಿಸಿದ್ರೂ ಬಿಸಿಸಿಐ ನಷ್ಟದಿಂದ ಪಾರಾಗಲಿದೆ. ಹೀಗಾಗಿ ದಾದಾ ಪದೇ ಪದೆ ಬಿಸಿಸಿಐಗೆ ಅಷ್ಟು ಕೋಟಿ ನಷ್ಟವಾಗುತ್ತೆ, ಇಷ್ಟು ಕೋಟಿ ನಷ್ಟವಾಗುತ್ತೆ ಅಂತಾ ಒತ್ತಿ ಒತ್ತಿ ಹೇಳುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada