ಸೂಪರ್ ಓವರ್​ನಲ್ಲಿ ಕಿಷನ್​ರನ್ನು ಕಳಿಸಲಾರದ್ದು ದೊಡ್ಡ ಬ್ಲಂಡರ್: ಕೆಪಿ, ಗವಾಸ್ಕರ್

ಸೋಮವಾರದಂದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವೆ ಸೂಪರ್ ಓವರ್​ನಲ್ಲಿ ಕೊನೆಗೊಂಡ ಪಂದ್ಯ ನಿಸ್ಸಂದೇಹವಾಗಿಯೂ ಇಂಡಿಯನ್ ಪ್ರಿಮೀಯರ್ ಲೀಗ್ ಎಲ್ಲ ಆವೃತಿಗಳಲ್ಲಿ ಅತ್ಯಂತ ರೋಮಾಂಚಕಾರಿಯಾಗಿ ಕೊನೆಗೊಂಡ ಕೆಲವು ಪಂದ್ಯಗಳಲ್ಲೊಂದು. ಹಾಲಿ ಮತ್ತು ಮಾಜಿ ಆಟಗಾರರೆಲ್ಲ ಇಶಾನ್ ಕಿಷನ್ ಅವರ ಸಿಡಿಲಬ್ಬರದ ಬ್ಯಾಟಿಂಗ್​ನ ಗುಣಗಾನ ಮಾಡುತ್ತ್ತಿದ್ದಾರೆ. ಈ ಆವೃತಿಗಾಗಿ ಕಾಮೆಂಟ್ರಿ ಪ್ಯಾನೆಲ್​ನಲ್ಲಿರುವ ಕೆವಿನ್ ಪೀಟರ್ಸನ್ ಮತ್ತು ಸುನಿಲ್ ಗವಾಸ್ಕರ್ ಅವರು ಕಿಷನ್ ಮೇಲೆ ಪ್ರಶಂಸೆಯ ಸುರಿಮಳೆಗೈಯುತ್ತಲೇ ಅವರು ಸೂಪರ್ ಓವರ್​ನಲ್ಲಿ ಆಡಲು ಬಾರದಿರುವ ಅಥವಾ ಟೀಮ್ ಮ್ಯಾನೇಜ್​ಮಂಟ್ […]

ಸೂಪರ್ ಓವರ್​ನಲ್ಲಿ ಕಿಷನ್​ರನ್ನು ಕಳಿಸಲಾರದ್ದು ದೊಡ್ಡ ಬ್ಲಂಡರ್: ಕೆಪಿ, ಗವಾಸ್ಕರ್

Updated on: Sep 29, 2020 | 8:33 PM

ಸೋಮವಾರದಂದು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವೆ ಸೂಪರ್ ಓವರ್​ನಲ್ಲಿ ಕೊನೆಗೊಂಡ ಪಂದ್ಯ ನಿಸ್ಸಂದೇಹವಾಗಿಯೂ ಇಂಡಿಯನ್ ಪ್ರಿಮೀಯರ್ ಲೀಗ್ ಎಲ್ಲ ಆವೃತಿಗಳಲ್ಲಿ ಅತ್ಯಂತ ರೋಮಾಂಚಕಾರಿಯಾಗಿ ಕೊನೆಗೊಂಡ ಕೆಲವು ಪಂದ್ಯಗಳಲ್ಲೊಂದು. ಹಾಲಿ ಮತ್ತು ಮಾಜಿ ಆಟಗಾರರೆಲ್ಲ ಇಶಾನ್ ಕಿಷನ್ ಅವರ ಸಿಡಿಲಬ್ಬರದ ಬ್ಯಾಟಿಂಗ್​ನ ಗುಣಗಾನ ಮಾಡುತ್ತ್ತಿದ್ದಾರೆ.

ಈ ಆವೃತಿಗಾಗಿ ಕಾಮೆಂಟ್ರಿ ಪ್ಯಾನೆಲ್​ನಲ್ಲಿರುವ ಕೆವಿನ್ ಪೀಟರ್ಸನ್ ಮತ್ತು ಸುನಿಲ್ ಗವಾಸ್ಕರ್ ಅವರು ಕಿಷನ್ ಮೇಲೆ ಪ್ರಶಂಸೆಯ ಸುರಿಮಳೆಗೈಯುತ್ತಲೇ ಅವರು ಸೂಪರ್ ಓವರ್​ನಲ್ಲಿ ಆಡಲು ಬಾರದಿರುವ ಅಥವಾ ಟೀಮ್ ಮ್ಯಾನೇಜ್​ಮಂಟ್ ಕಳಿಸದಿರುವ ಬಗ್ಗೆ ಆಶ್ವರ್ಯ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಸೂಪರ್ ಓವರ್​ನಲ್ಲಿ ಕೊನೆಗೊಂಡ ಇದೇ ಆವೃತಿಯ ಮತ್ತೊಂದು ಮ್ಯಾಚ್​ನಲ್ಲಿ ಕಿಂಗ್ಸ್ ಎಲೆವೆನ್ ತಂಡದ ಥಿಂಕ್​ಟ್ಯಾಂಕ್ ಮಾಡಿದ ತಪ್ಪನ್ನೇ ಮುಂಬೈನವರು ಮಾಡಿದರು ಎಂದು ಇಬ್ಬರು ಆಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿದ ಸೂಪರ್ ಓವರ್​ನಲ್ಲಿ ಆಗಷ್ಟೇ 89 ರನ್ ಗಳಿಸಿ ಔಟಾಗಿ ಬಂದಿದ್ದ ಮಾಯಾಂಕ್ ಅಗರ್​ವಾಲ್ ಅವರನ್ನು ಕಳಿಸುವ ಬದಲು ನಿಕೊಲಾಸ್ ಪೂರನ್ ಅವರನ್ನು ಕಳಿಸಲಾಗಿತ್ತು.

‘‘ಹೌದು, ಅತೀವವಾಗಿ ದಣಿದಿದ್ದ ಮತ್ತು ನಿತ್ರಾಣಗೊಂಡಿದ್ದ ಕಿಷನ್, ಸೂಪರ್ ಓವರ್​ನಲ್ಲಿ ಆಡಲು ಬರಲಿಲ್ಲ. ಮುಂಬೈನ ಲೆಕ್ಕಾಚಾರ ತಪ್ಪಿದ್ದೇ ಅಲ್ಲಿ. ಇದನ್ನು ನಾನು ವಿಷಾದದಿಂದಲೇ ಹೇಳುತ್ತಿದ್ದೇನೆ, ಚಿಕ್ಕ ಬೌಂಡರಿಗಳ ಮೈದಾನಲ್ಲಿ ಎರಡು ನಿಮಿಷಗಳಷ್ಟು ಆಡುವುದು ದೊಡ್ಡ ಸಂಗತಿಯೇನಲ್ಲ. ನಾನು ಕಿಷನ್​ರನ್ನು ಆಡಲು ಕಳಿಸದಿರುವ ನಿರ್ಧಾರದ ಬಗ್ಗೆ ಕಾಮೆಂಟ್ ಮಾಡುತ್ತಿದ್ದೆನೆಯೇ ಹೊರತು ಕಿಷನ್ ಬಗ್ಗೆಯಲ್ಲ. ಮತ್ತೊಂದು ಪಂದ್ಯದಲ್ಲಿ (ಪಂಜಾಬ್ VS ಡಿಸಿ) ಮಾಯಾಂಕ್ ಅಗರ್​ವಾಲ್​ ಅವರನ್ನು ಕಳಿಸದೆ ತಪ್ಪು ಮಾಡಿದ ಪಂಜಾಬ್ ಆ ಗೇಮ್ ಸೋತಿದ್ದು ಎಲ್ಲರಿಗೂ ಗೊತ್ತಿದೆ,’’ ಎಂದು ಪೀಟರ್ಸನ್ ಕಾಮೆಂಟ್ರಿ ಮಾಡುವಾಗ ಹೇಳಿದರು.

ಗವಾಸ್ಕರ್ ಸಹ ಕಿಷನ್ ಸೂಪರ್ ಓವರ್​ನಲ್ಲಿ ಬ್ಯಾಟ್ ಮಾಡಲು ಬರಬೇಕಿತ್ತೆಂದು ಹೇಳಿದರು.

‘‘ಸೂಪರ್ ಓವರ್​ನಲ್ಲಿ ಹೇಗೆ ಆಡುವುದೆಂದು ಪ್ಲ್ಯಾನ್ ಮಾಡಲು ಸಮಯವೇ ಇರೋದಿಲ್ಲ. ಇದು 40-ಓವರ್​ಗಳ ಪಂದ್ಯವಾಗಿದ್ದರೂ ಕಿಷನ್ ಪುನಃ ಕ್ರೀಸಿಗೆ ಹೋಗಿ ಬ್ಯಾಟ್ ಮಾಡಲು ಇಚ್ಛಿಸುತ್ತಿದ್ದರು, ಯಾಕೆಂದರೆ ಫಾರ್ಮ್ ಅನ್ನೋದು ಬಹಳ ವಿಚಿತ್ರವಾದದ್ದು, ಅದು ಬಂದ ಹಾಗೆ ಹೋಗಿಯೂ ಬಿಟ್ಟಿರುತ್ತದೆ. ಆದರೆ ಒಂದು ಮಾತಂತೂ ನಿಜ, ಅದು ಕೇವಲ 6 ಎಸೆತಗಳ ವಿಷಯವಾಗಿದ್ದರಿಂದ ಅವರು (ಕಿಷನ್) ಬ್ಯಾಟ್ ಮಾಡಲು ಬರಬೇಕಿತ್ತೆಂದು ನಾನು ಭಾವಿಸುತ್ತೇನೆ,’’ ಗವಾಸ್ಕರ್ ಹೇಳಿದರು.

ಮ್ಯಾಚ್ ನಂತರ ನಡೆದ ಪ್ರಸೆಂಟೇಷನ್ ಕಾರ್ಯಕ್ರಮದಲ್ಲಿ ಮಾತಾಡಿದ ಮುಂಬೈ ಟೀಮಿನ ನಾಯಕ ರೋಹಿತ್ ಶರ್ಮ, ಕಿಷನ್ ತುಂಬಾ ದಣಿದಿದ್ದರು ಮತ್ತು ತೊಂದರೆಪಡುತ್ತಿರುವಂತೆ ಭಾಸವಾಗಿದ್ದರಿಂದ ಮಾನೇಜ್ಮೆಂಟ್ ಅವರನ್ನು ಕಳಿಸಿದಿರುವ ನಿರ್ಧಾರ ತೆಗೆದುಕೊಂಡಿತು, ಅಂದರು.