Wimbledon 2021: 30ನೇ ಗ್ರ್ಯಾನ್‌ಸ್ಲ್ಯಾಮ್‌ ಫೈನಲ್‌ಗೆ ಲಗ್ಗೆಯಿಟ್ಟ ನೊವಾಕ್ ಜೊಕೋವಿಕ್

| Updated By: Vinay Bhat

Updated on: Jul 10, 2021 | 1:10 PM

ಫೈನಲ್‌ನಲ್ಲಿ ಜೊಕೋವಿಕ್ ಗೆದ್ದರೆ 6ನೇ ವಿಂಬಲ್ಡನ್‌, 20ನೇ ಗ್ರ್ಯಾನ್‌ಸ್ಲ್ಯಾಮ್‌ ವಿಜಯ ಸಾಧಿಸಿದ ವಿಶೇಷ ದಾಖಲೆ ನಿರ್ಮಾಣ ಮಾಡಲಿದ್ದಾರೆ.

Wimbledon 2021: 30ನೇ ಗ್ರ್ಯಾನ್‌ಸ್ಲ್ಯಾಮ್‌ ಫೈನಲ್‌ಗೆ ಲಗ್ಗೆಯಿಟ್ಟ ನೊವಾಕ್ ಜೊಕೋವಿಕ್
Novak Djokovic
Follow us on

ಹಾಲಿ ಚಾಂಪಿಯನ್, ಸರ್ಬಿಯಾ ಬಲಿಷ್ಠ ನೊವಾಕ್ ಜೊಕೋವಿಕ್ (Novak Djokovic) ತನ್ನ ವೃತ್ತಿ ಜೀವನದ 30ನೇ ಗ್ರ್ಯಾನ್‌ಸ್ಲ್ಯಾಮ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ 30ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಸಾಧನೆ ಮಾಡಿರುವ ಜೊಕೊವಿಕ್, ದಾಖಲೆಯ 20ನೇ ಕಿರೀಟದ ಹುಡುಕಾಟದಲ್ಲಿದ್ದಾರೆ.

ನಿನ್ನೆ ಜುಲೈ 9 ರಂದು ನಡೆದ ವಿಂಬಲ್ಡನ್ ಸೆಮಿಫೈನಲ್‌ ಕಾದಾಟದಲ್ಲಿ ಕೆನಡಾದ ಡೆನಿಸ್ ಶಪೋವೊಲೊವ್ ಅವರನ್ನು ಸೋಲಿಸುವ ಮೂಲಕ ಜೊಕೋವಿಕ್ ಈ ವಿಶೇಷ ಸಾಧಾನೆ ಮಾಡಿದ್ದಾರೆ.

 

ಸೆಮಿಫೈನಲ್‌ನಲ್ಲಿ ಜೊಕೋವಿಕ್ ಅವರು ಡೆನಿಸ್ ಶಪೋವೊಲೊವ್ ವಿರುದ್ಧ 7-6 (7/3), 7-5, 7-5ರ ಜಯ ಗಳಿಸಿದರು. ವಿಶ್ವ ನಂ. 1 ಜೊಕೋವಿಕ್‌ಗೆ ಇದು 7ನೇ ವಿಂಬಲ್ಡನ್ ಫೈನಲ್‌ ಪಂದ್ಯ. ವಿಂಬಲ್ಡನ್‌ನಲ್ಲಿ ಜೊಕೋವಿಕ್ ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ಫೈನಲ್‌ನಲ್ಲಿ ಜೊಕೋವಿಕ್ ಗೆದ್ದರೆ 6ನೇ ವಿಂಬಲ್ಡನ್‌, 20ನೇ ಗ್ರ್ಯಾನ್‌ಸ್ಲ್ಯಾಮ್‌ ವಿಜಯ ಸಾಧಿಸಿದ ವಿಶೇಷ ದಾಖಲೆ ನಿರ್ಮಾಣ ಮಾಡಲಿದ್ದಾರೆ. 20 ಗ್ರ್ಯಾನ್‌ಸ್ಲ್ಯಾಮ್‌ ಗೆದ್ದರೆ ಈ ದಾಖಲೆ ಪಟ್ಟಿಯಲ್ಲಿರುವ ದಂತಕತೆಗಳಾದ ರೋಜರ್ ಫೆಡರರ್, ರಾಫೆಲ್ ನಡಾಲ್ ಸಾಲಿಗೆ ಜೊಕೋವಿಕ್ ಕೂಡ ಸೇರಿಕೊಳ್ಳಲಿದ್ದಾರೆ.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಬೆರೆಟಿನಿ ಅವರು ಪೋಲೆಂಡ್‌ನ ಹುಬರ್ತ್ ಹುರ್ಕಾಜ್ ಎದುರು 6–3, 6–0, 6–7 (3/7), 6–4ರಲ್ಲಿ ಗೆಲುವು ಸಾಧಿಸಿದರು. ಭಾನುವಾರ ನಡೆಯುವ ಫೈನಲ್‌ನಲ್ಲಿ ಜೊಕೋವಿಕ್ ಅವರು ಮ್ಯಾಟಿಯೊ ಬೆರೆಟಿನಿ ಸವಾಲು ಸ್ವೀಕರಿಸಲಿದ್ದಾರೆ.

IPL 2022 ರಲ್ಲಿ ಧೋನಿ ಆಡದಿದ್ರೆ ನಾನೂ ಕಣಕ್ಕಿಳಿಯಲ್ಲ ಎಂದ CSKಯ ಸ್ಟಾರ್ ಆಟಗಾರ

ಸಿಕ್ಸ್ ಲೈನ್ ಬಳಿ ಸೂಪರ್ ಮ್ಯಾನ್​ನಂತೆ ಹಾರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ: ರೋಚಕ ವಿಡಿಯೋ ಇಲ್ಲಿದೆ