ಈ ಐಪಿಎಲ್ ದಾಖಲೆಗಳು ನಿಮಗೆ ಗೊತ್ತಾ?
ಕ್ರೀಡೆ ಯಾವುದೇ ಆಗಿರಲಿ, ಅದು ದಾಖಲೆಗಳಿಗೆ ಮತ್ತು ಹಲವು ಅಪರೂಪದ ದಾಖಲೆಗಳಿಗೆ ಹೊರತಾಗಿರಲಾರದು. ಕ್ರಿಕೆಟ್ನಲ್ಲಿ ಇದುವರೆಗೆ ಸಂಭವಿಸಿರುವ ದಾಖಲೆಗಳನ್ನು ಬರೆದರೆ ಅದೊಂದು ಬೃಹತ್ ಪ್ರಮಾಣದ ಪುಸ್ತಕವಾಗಿಬಿಡುತ್ತದೆ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲೂ ಹಲವಾರು ದಾಖಲೆಗಳು ಬರೆಯಲ್ಪಟ್ಟಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ನಿಮಗೆ ಗೊತ್ತಿದೆ, ಮೊನ್ನಯಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ಆರಂಭ ಆಟಗಾರ ಶಿಖರ್ ಧವನ್ ಐಪಿಎಲ್ನಲ್ಲಿ 5,000 ರನ್ ಗಳಿಸಿದ ಹಿರಿಮೆಗೆ ಪಾತ್ರರಾದರು. ಈ 5,000 ಕ್ಲಬ್ನಲ್ಲಿ ಅದಾಗಲೇ 4 ಜನ ಸದಸ್ಯರಿದ್ದಾರೆ. ಇದುವರೆಗೆ 188 ಪಂದ್ಯಗಳನ್ನಾಡಿರುವ ರಾಯಲ್ […]
ಕ್ರೀಡೆ ಯಾವುದೇ ಆಗಿರಲಿ, ಅದು ದಾಖಲೆಗಳಿಗೆ ಮತ್ತು ಹಲವು ಅಪರೂಪದ ದಾಖಲೆಗಳಿಗೆ ಹೊರತಾಗಿರಲಾರದು. ಕ್ರಿಕೆಟ್ನಲ್ಲಿ ಇದುವರೆಗೆ ಸಂಭವಿಸಿರುವ ದಾಖಲೆಗಳನ್ನು ಬರೆದರೆ ಅದೊಂದು ಬೃಹತ್ ಪ್ರಮಾಣದ ಪುಸ್ತಕವಾಗಿಬಿಡುತ್ತದೆ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲೂ ಹಲವಾರು ದಾಖಲೆಗಳು ಬರೆಯಲ್ಪಟ್ಟಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ನಿಮಗೆ ಗೊತ್ತಿದೆ, ಮೊನ್ನಯಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ಆರಂಭ ಆಟಗಾರ ಶಿಖರ್ ಧವನ್ ಐಪಿಎಲ್ನಲ್ಲಿ 5,000 ರನ್ ಗಳಿಸಿದ ಹಿರಿಮೆಗೆ ಪಾತ್ರರಾದರು. ಈ 5,000 ಕ್ಲಬ್ನಲ್ಲಿ ಅದಾಗಲೇ 4 ಜನ ಸದಸ್ಯರಿದ್ದಾರೆ. ಇದುವರೆಗೆ 188 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿನ ನಾಯಕ ವಿರಾಟ್ ಕೊಹ್ಲಿ 5,827 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಚೆನೈ ಸೂಪರ್ ಕಿಂಗ್ಸ್ಗೆ ಆಡುವ ಸುರೇಶ್ ರೈನಾ 197 ಪಂದ್ಯಗಳಿಂದ 5,158 ರನ್ ಶೇಖರಿಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಕ್ಯಾಪ್ಟನ್ ಡೇವಿಡ್ ವಾರ್ನರ್ ಕೇವಲ 138 ಪಂದ್ಯಗಳಿಂದ 5,142 ರನ್ ಬಾರಿಸಿದ್ದಾರೆ. ಧವನ್ 171 ಪಂದ್ಯಗಳಲ್ಲಿ, 5,050 ರನ್ ಕಲೆ ಹಾಕಿದ್ದಾರೆ.
ನಿಮಲ್ಲಿ ಆಶ್ವರ್ಯ ಹುಟ್ಟಿಸಬಹುದಾದ ಒಂದು ದಾಖಲೆಯಿದೆ. ಅದೇನು ಗೊತ್ತಾ? ಈಗ ಜಾರಿಯಲ್ಲಿರುವ 13ನೇ ಐಪಿಎಲ್ ಅವೃತ್ತಿಯನ್ನು ಬಿಟ್ಟು ಉಳಿದ 12 ಆವೃತ್ತಿಗಳಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರು ಮಾತ್ರ ‘ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್’ ಗೌರವಕ್ಕೆ ಪಾತ್ರರಾಗಿದ್ದಾರೆ–ಸಚಿನ್ ತೆಂಡೂಲ್ಕರ್ (ಮುಂಬೈ ಇಂಡಿಯನ್ಸ್) 2010ರಲ್ಲಿ ಮತ್ತು ವಿರಾಟ್ ಕೊಹ್ಲಿ (ಆರ್ಸಿಬಿ) 2016ರಲ್ಲಿ.
ಹಾಗೆಯೇ, ಸುನಿಲ್ ನರೈನ್, ಆಂದ್ರೆ ರಸ್ಸೆಲ್ ಮತ್ತು ಶೇನ್ ವಾಟ್ಸನ್ ಮಾತ್ರ ಎರಡೆರಡು ಬಾರಿ ‘ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್‘ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಬೌಲರ್ಗಳು ದಂಡನೆಗೊಳಗಾಗುವುದು ನಿಜ. ಆದರೆ ಅತಿಹೆಚ್ಚು ದಂಡನೆಗೊಳಗಾದ ಬೌಲರ್ ಯಾರು ಗೊತ್ತಾ? ಬೇಸಿಲ್ ಥಂಪಿ. 2018ರಲ್ಲಿ ಎಸ್ ಆರ್ ಹೆಚ್ ಪರ ಆಡಿದ ಥಂಪಿ, ಆರ್ಸಿಬಿ ವಿರುದ್ಧ 4 ಓವರ್ಗಳಲ್ಲಿ 70 ರನ್ ಚಚ್ಚಿಸಿಕೊಂಡಿದ್ದರು.
ಐಪಿಎಲ್ನಲ್ಲಿ ಮೊಟ್ಟಮೊದಲ ಪಂದ್ಯ ಮತ್ತು 500 ನೇ ಪಂದ್ಯ ಆಡಿದ ಖ್ಯಾತಿ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರದ್ದು. ಅವರು ಮೊದಲ ಪಂದ್ಯವನ್ನು ರಾಜಸ್ತಾನ ರಾಯಲ್ಸ್ ಪರ ಆಡಿ 500ನೇ ಪಂದ್ಯವನ್ನು ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು.
ಈ ಟೂರ್ನಿಯಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದಿರುವ ದಾಖಲೆ ಸಿಎಸ್ಕೆ ನಾಯಕ ಮಹೇಂದ್ರಸಿಂಗ್ ಧೋನಿ ಅವರ ಹೆಸರಲ್ಲಿದೆ. ಈ ಆವೃತ್ತಿಗೆ ಮುಂಚೆ ಅವರು 174 ಪಂದ್ಯಗಳಲ್ಲಿ ನಾಯಕತ್ವ ವಹಿಸಿ 104 ಪಂದ್ಯಗಳನ್ನು ಗೆದ್ದಿದ್ದರು.
ಹಾಗೆಯೇ, ಐಪಿಎಲ್ನಲ್ಲಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಮಾತ್ರ ಮೂರು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅವರು ಡೆಕ್ಕನ್ ಚಾರ್ಜರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಪುಣೆ ವಾರಿಯರ್ಸ್ಗೆ ಆಡುವಾಗ ಹ್ಯಾಟ್ರಿಕ್ ಅವರು ಸಾಧನೆ ಮಾಡಿದ್ದಾರೆ.
ಅಂದಹಾಗೆ, ಟೂರ್ನಿಯಲ್ಲಿ ಅತಿಹೆಚ್ಚು ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಗೆದ್ದಿದೆ. 2019ರ ಸೀಸನ್ವರೆಗೆ ಆಡಿದ 187 ಪಂದ್ಯಗಳಲ್ಲಿ 107ರಲ್ಲಿ ಜಯಿಸಿದೆ. ಅತಿಹೆಚ್ಚು ಪಂದ್ಯಗಳನ್ನು ಸೋತಿರುವ ಅಪಖ್ಯಾತಿ ಡೆಲ್ಲಿ ಕ್ಯಾಪಿಟಲ್ಸ್ನದ್ದು. 177 ರಲ್ಲಿ ಅದು 97 ಸೋತಿದೆ.
2019ರ ಸೀಸನ್ವರೆಗೆ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ಬಾಲ್ಗಳನ್ನು ಎಸೆದಿರುವ ಖ್ಯಾತಿ ಹರ್ಭಜನ್ ಸಿಂಗ್ ಅವರ ಹೆಸರಿಗಿದೆ. ಭಜ್ಜಿ 1294 ಡಾಟ್ಬಾಲ್ಗಳನ್ನು ಎಸೆದಿದ್ದಾರೆ.
ಕೊನೆಯದಾಗಿ, ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಎಸೆತ ಬೌಲ್ ಮಾಡಿರುವವರು ಡೆಲ್ಲಿ ಕ್ಯಾಪಿಟಲ್ಸ್ನ ಌನ್ರಿಕ್ ನೊರ್ಕಿಯ. ಅವರ ಒಂದು ಎಸೆತದ ವೇಗ 156.60 ಕಿಮೀ/ಗಂಟೆ ದಾಖಲಾಗಿದೆ.