ಐಪಿಎಲ್ ಟೂರ್ನಿ 2021ರ 25 ಪಂದ್ಯಗಳು ನಡೆದಿವೆ. 26ನೇ ಪಂದ್ಯವು ಇಂದು (ಏಪ್ರಿಲ್ 30) ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಡೆಯಲಿದೆ. ಈ ಮಧ್ಯೆ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಎರಡು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳ ನಡುವೆ ಮೊದಲ ಮೂರು ಸ್ಥಾನಕ್ಕೆ ಪೈಪೋಟಿ ಜೋರಾಗಿವೆ. ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಸ್ಕೋರ್ ಮಾಡಿರುವ ಆಟಗಾರರಿಗೆ ಆರೆಂಜ್ ಕ್ಯಾಪ್ ಮತ್ತು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ನಿನ್ನೆಯ (ಏಪ್ರಿಲ್ 29) ಪಂದ್ಯದ ಬಳಿಕ ಈ ಪಟ್ಟಿಯಲ್ಲಿ ಏನೇನು ಬದಲಾವಣೆಗಳು ಆಗಿವೆ ಎಂಬ ಮಾಹಿತಿ ಇಲ್ಲಿದೆ.
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಯಾರಿದ್ದಾರೆ?
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ 44.42 ರನ್ ಸರಾಸರಿಯಲ್ಲಿ, ಒಟ್ಟು 311 ರನ್ ದಾಖಲಿಸಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಫಫ್ ಡುಪ್ಲೆಸಿಸ್ 67.50 ಸರಾಸರಿಯಲ್ಲಿ 270 ರನ್ ದಾಖಲಿಸಿ ಎರಡನೇ ಸ್ಥಾನ ಹೊಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತೋರ್ವ ಆರಂಭಿಕ ದಾಂಡಿಗ ಪೃಥ್ವಿ ಶಾ 38.42 ಸರಾಸರಿಯಲ್ಲಿ 268 ರನ್ ದಾಖಲಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ನಂತರದ ಎರಡು ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಇದ್ದಾರೆ. ಇವರಿಬ್ಬರು ಕೂಡ ತಲಾ 240 ಹಾಗೂ 229 ರನ್ ದಾಖಲಿಸಿ ಆಡುತ್ತಿದ್ದಾರೆ.
ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಯಾರಿದ್ದಾರೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ಹರ್ಷಲ್ ಪಟೇಲ್ 24 ಓವರ್ ಬೌಲಿಂಗ್ ಮಾಡಿ 17 ವಿಕೆಟ್ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ 13 ವಿಕೆಟ್ ಮೂಲಕ ಎರಡನೇ ಸ್ಥಾನದಲ್ಲಿ ಇದ್ದಾರೆ. ಮುಂಬೈ ತಂಡದ ರಾಹುಲ್ ಚಹರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಸ್ ಮಾರಿಸ್ ತಲಾ 11 ವಿಕೆಟ್ ಪಡೆದು ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನ ರಶೀದ್ ಖಾನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಯಾಟ್ ಕಮ್ಮಿನ್ಸ್ ತಲಾ 9 ವಿಕೆಟ್ ಕಬಳಿಸಿ 5 ಮತ್ತು 6ನೇ ಸ್ಥಾನದಲ್ಲಿ ಇದ್ದಾರೆ.
ಇಂದಿನ (ಏಪ್ರಿಲ್ 30) ಪಂದ್ಯವು ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಡೆಯಲಿದೆ. ಈ ಮೂಲಕ ವಿಕೆಟ್ ಗಳಿಸುವಿಕೆಯ ವೇಗ ಹೆಚ್ಚಿಸಿ ಮುಂದುವರಿಯಲು ಹರ್ಷಲ್ ಪಟೇಲ್‌ಗೆ ಅವಕಾಶವಿದೆ. ಜೊತೆಗೆ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಕೂಡ ಉತ್ತಮ ರನ್ ಪೇರಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೇಲಿನ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.
ಇದನ್ನೂ ಓದಿ: IPL 2021 Points Table: ಪಾಯಿಂಟ್ಸ್ ಟೇಬಲ್ ಟಾಪ್ ಸ್ಥಾನದಲ್ಲಿದೆ ಚೆನ್ನೈ; ಇಂದಿನ ಪಂದ್ಯದ ಬಳಿಕ ಏನು ಬದಲಾವಣೆ ಆಗಬಹುದು?
Rashmika Mandanna: ‘ಈ ಸಲ ಕಪ್ ನಮ್ದೇ’ ಎಂದ ರಶ್ಮಿಕಾ ಮಂದಣ್ಣಗೆ ಆರ್ಸಿಬಿ ಫ್ಯಾನ್ಸ್ ಫಿದಾ
Published On - 4:44 pm, Fri, 30 April 21