RCB vs PBKS Predicted Playing 11: ಪಂಜಾಬ್ ಕಿಂಗ್ಸ್- ರಾಯಲ್ ಚಾಲೆಂಜರ್ಸ್ ಸಂಭಾವ್ಯ ಆಟಗಾರರು ಯಾರ್ಯಾರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 6 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಸೋತಿದೆ. 5 ಪಂದ್ಯಗಳಲ್ಲಿ ಗೆದ್ದ ವಿಶ್ವಾಸ ತಂಡದ ಜೊತೆಗಿದೆ. 6 ಪಂದ್ಯಗಳಲ್ಲಿ ಕೇವಲ 2 ಆಟ ಗೆದ್ದಿರುವ ಪಂಜಾಬ್ ಕಿಂಗ್ಸ್ ಸೋಲಿನ ಸುಳಿಯಿಂದ ಹೊರಬರುವ ಉತ್ಸಾಹದಲ್ಲಿದೆ.
ಐಪಿಎಲ್ 2021 ಟೂರ್ನಿಯ 26ನೇ ಪಂದ್ಯವು ಇಂದು (ಏಪ್ರಿಲ್ 30) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಅಂಕಪಟ್ಟಿಯಲ್ಲಿ ಟಾಪ್ 3ನೇ ಸ್ಥಾನದಲ್ಲಿ ಇರುವ ಆರ್‌ಸಿಬಿ, ಕೊನೆಯಿಂದ ಮೂರನೇ ಸ್ಥಾನದಲ್ಲಿ ಇರುವ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣೆಸಾಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 6 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಸೋತಿದೆ. 5 ಪಂದ್ಯಗಳಲ್ಲಿ ಗೆದ್ದ ವಿಶ್ವಾಸ ತಂಡದ ಜೊತೆಗಿದೆ. 6 ಪಂದ್ಯಗಳಲ್ಲಿ ಕೇವಲ 2 ಆಟ ಗೆದ್ದಿರುವ ಪಂಜಾಬ್ ಕಿಂಗ್ಸ್ ಸೋಲಿನ ಸುಳಿಯಿಂದ ಹೊರಬರುವ ಉತ್ಸಾಹದಲ್ಲಿದೆ.
ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ ಆರಂಭಿಕ ಆಟದ ಅಬ್ಬರ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸಿಗಲಿದೆ. ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ನಂತರದ ಬ್ಯಾಟಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಆರ್‌ಸಿಬಿಗೆ ವರವಾಗಿದೆ. ಬೌಲಿಂಗ್ ವಿಚಾರಕ್ಕೆ ಬಂದರೆ, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಮೇಲೆ ಕೊಹ್ಲಿ ಪಡೆ ನಂಬಿಕೆ ಇರಿಸಿಕೊಂಡಿದೆ. ಕ್ರಿಶ್ಚಿಯನ್ ಹಾಗೂ ಜಾಮಿಸನ್ ಕೂಡ ಉತ್ತಮ ದಾಳಿ ಮಾಡುವ ನಿರೀಕ್ಷೆ ಇದೆ. ಗೆಲುವಿನ ನಗೆ ಬೀರುತ್ತಾ ಮುಂದುವರಿಯುತ್ತಿರುವ ಆರ್‌ಸಿಬಿ ತಂಡದಲ್ಲಿ ಆಟಗಾರರ ಬದಲಾವಣೆ ನಿರೀಕ್ಷೆ ಇಲ್ಲ.
ಪಂಜಾಬ್ ಕಿಂಗ್ಸ್ ಕೂಡ ಸದೃಢ ಬ್ಯಾಟಿಂಗ್ ಆರ್ಡರ್ ಹೊಂದಿದೆ. ಆದರೆ, ಕೆಲವು ದಾಂಡಿಗರು ಫಾರ್ಮ್ ಕಳೆದುಕೊಂಡಿರುವುದು ಪಂಜಾಬ್ ತಂಡಕ್ಕೆ ನಷ್ಟ ತಂದಿದೆ. ರಾಹುಲ್ ಮತ್ತು ಮಯಾಂಕ್ ಉತ್ತಮ ಆರಂಭ ನೀಡಿದರೂ ಕೂಡ ಕ್ರಿಸ್ ಗೈಲ್, ನಿಕೊಲಸ್ ಪೂರನ್, ದೀಪಕ್ ಹೂಡಾ ಅದನ್ನು ಮುಂದುವರಿಸುವ ಬಗ್ಗೆ ಖಚಿತತೆ ಇಲ್ಲವಾಗಿದೆ. ಬೌಲಿಂಗ್ ವಿಭಾಗದಲ್ಲಿ ಶಮಿ ಅಥವಾ ರಿಚರ್ಡ್‌ಸನ್ ಮಿಂಚಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ದೇವದತ್ ಪಡಿಕ್ಕಲ್ 2) ವಿರಾಟ್ ಕೊಹ್ಲಿ (ನಾಯಕ) 3) ರಜತ್ ಪಾಟಿದಾರ್ 4) ಗ್ಲೆನ್ ಮ್ಯಾಕ್ಸ್‌ವೆಲ್ 5) ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್) 6) ವಾಷಿಂಗ್ಟನ್ ಸುಂದರ್ 7) ಡಾನ್ ಕ್ರಿಶ್ಚಿಯನ್ 8) ಕೈಲ್ ಜಾಮಿಸನ್ 9) ಹರ್ಷಲ್ ಪಟೇಲ್ 10) ಯುಜ್ವೇಂದ್ರ ಚಹಾಲ್ 11) ಮೊಹಮ್ಮದ್ ಸಿರಾಜ್
ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಕೆ.ಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್) 2) ಮಾಯಾಂಕ್ ಅಗರ್ವಾಲ್ 3) ಕ್ರಿಸ್ ಗೈಲ್ 4) ನಿಕೋಲಸ್ ಪೂರನ್ 5) ದೀಪಕ್ ಹೂಡಾ 6) ಮೊಯಿಸಸ್ ಹೆನ್ರಿಕ್ಸ್ 7) ಶಾರುಖ್ ಖಾನ್ 8) ಜೈ ರಿಚರ್ಡ್ಸನ್ 9) ಮೊಹಮ್ಮದ್ ಶಮಿ 10) ಅರ್ಷ್‌ದೀಪ್ ಸಿಂಗ್ 11) ರವಿ ಬಿಶ್ನೊಯಿ
ಇದನ್ನೂ ಓದಿ: IPL 2021 Points Table: ಪಾಯಿಂಟ್ಸ್ ಟೇಬಲ್ ಟಾಪ್ ಸ್ಥಾನದಲ್ಲಿದೆ ಚೆನ್ನೈ; ಇಂದಿನ ಪಂದ್ಯದ ಬಳಿಕ ಏನು ಬದಲಾವಣೆ ಆಗಬಹುದು?
Published On - 5:47 pm, Fri, 30 April 21