PBKS vs RCB, IPL 2021 Match 26 Result: ಹರ್ಪ್ರೀತ್ ಬ್ರರ್ ಬೌಲಿಂಗ್ ಕಮಾಲ್; ಸೋಲುಂಡ ಆರ್ಸಿಬಿ!
RCB vs PBKS Scorecard: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 26ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 34 ರನ್ಗಳ ಗೆಲುವು ದಾಖಲಿಸಿದೆ. ಪಂಜಾಬ್ ಕಿಂಗ್ಸ್ ಪರವಾಗಿ ಹರ್ಪ್ರೀತ್ ಬ್ರರ್ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. 4 ಓವರ್ಗೆ ಕೇವಲ 19 ರನ್ ನೀಡಿ 3 ಮುಖ್ಯ ವಿಕೆಟ್ ಕಬಳಿಸಿದ್ದಾರೆ. ರವಿ ಬಿಶ್ನೊಯಿ 4 ಓವರ್ಗೆ 17 ರನ್ ದಾಖಲಿಸಿ 2 ವಿಕೆಟ್ ಪಡೆದಿದ್ಧಾರೆ. ಆರ್ಸಿಬಿ ಪರ ಯಾವೊಬ್ಬ ದಾಂಡಿಗನೂ ತಂಡ ಗೆಲ್ಲಿಸುವ ಪ್ರದರ್ಶನ ನೀಡಿಲ್ಲ. ಕೊಹ್ಲಿ 35, ಪಾಟೀದಾರ್ 31 ರನ್ ಗಳಿಸಿದ್ದರ ಹೊರತಾಗಿ ಉಳಿದ ಬ್ಯಾಟ್ಸ್ಮನ್ಗಳು ಒಂದಂಕಿ ದಾಟಿಲ್ಲ. ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಎರಡರಲ್ಲೂ ವೈಫಲ್ಯ ಅನುಭವಿಸಿ ಸೋಲೊಪ್ಪಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 180 ರನ್ ಟಾರ್ಗೆಟ್ ನೀಡಿತ್ತು. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅವರು 57 ಬಾಲ್ಗೆ 91 ರನ್ (7 ಬೌಂಡರಿ, 5 ಸಿಕ್ಸರ್) ಕಲೆಹಾಕಿದ್ದರು. ಮೊದಲ ವಿಕೆಟ್ ಬಳಿಕ ಕ್ರಿಸ್ ಗೈಲ್ 46 (24) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ ಹೆಚ್ಚು ಹೊತ್ತು ಉಳಿಯಲಿಲ್ಲ. ಅಂತಿಮವಾಗಿ ಹರ್ಪ್ರೀತ್ ಬ್ರರ್ 25 (17) ರನ್ ಸೇರಿಸಿದ್ದರು. ಉಳಿದಂತೆ ಪಂಜಾಬ್ ಬ್ಯಾಟಿಂಗ್ ಲೈನ್ಅಪ್ ಕುಸಿತ ಕಂಡಿತ್ತು. ಪೂರನ್ ಹಾಗೂ ಶಾರುಖ್ ಖಾನ್ ಸೊನ್ನೆಗೆ ಔಟ್ ಆಗಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಜಾಮಿಸನ್ 2 ವಿಕೆಟ್ ಕಬಳಿಸಿದ್ದರು. ಡೇನಿಯಲ್ ಸ್ಯಾಮ್ಸ್ ಮತ್ತು ಶಹಬಾಜ್ ಅಹಮದ್ ರನ್ ನಿಯಂತ್ರಿಸಿದ್ದರು. ಪಂದ್ಯದ ಸಂಪೂರ್ಣ ವಿವರ ಈ ಕೆಳಗಿದೆ.
LIVE NEWS & UPDATES
-
ಪಂಜಾಬ್ ಕಿಂಗ್ಸ್ಗೆ 34 ರನ್ಗಳ ಗೆಲುವು
ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ 34 ರನ್ ಗೆಲುವು ದಾಖಲಿಸಿದೆ. ತಂಡದ ಪರ ಹರ್ಪ್ರೀತ್ ಬ್ರರ್ ಅದ್ಭುತ ಬೌಲಿಂಗ್ ನಡೆಸಿದ್ದಾರೆ. ಆರ್ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿ ಸೋತಿದೆ.
Challenge accomplished! ✅?#SaddaPunjab #PunjabKings #IPL2021 #PBKSvRCB pic.twitter.com/JMyKacjw0l
— Punjab Kings (@PunjabKingsIPL) April 30, 2021
Some games you win, some games you don’t. What’s important is to keep our spirits high and come back stronger than ever.
Repeat after us, “We’ll be back!” ??#PlayBold #WeAreChallengers #IPL2021 #PBKSvRCB #StayHomeStaySafe #DareToDream pic.twitter.com/9aYUaV1d9x
— Royal Challengers Bangalore (@RCBTweets) April 30, 2021
-
ಆರ್ಸಿಬಿ ಗೆಲ್ಲಲು 6 ಬಾಲ್ಗೆ 47 ರನ್ ಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ 6 ಬಾಲ್ಗೆ 47 ರನ್ ಬೇಕಿದೆ. ತಂಡದ ಮೊತ್ತ 19 ಓವರ್ಗೆ 7 ವಿಕೆಟ್ ಕಳೆದುಕೊಂಡು 133 ರನ್ ಆಗಿದೆ.
-
100 ರನ್ ಗಡಿ ದಾಟಿದ ಆರ್ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 102 ರನ್ ದಾಖಲಿಸಿದೆ. ಕೈಲ್ ಜಾಮಿಸನ್ ಹಾಗೂ ಹರ್ಷಲ್ ಪಟೇಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 18 ಬಾಲ್ಗೆ 78 ರನ್ ಬೇಕಾಗಿದೆ. ಸೂಕ್ತ ವಿಕೆಟ್ಗಳು ಕೂಡ ಉಳಿದಿಲ್ಲದ ಕಾರಣ ಆರ್ಸಿಬಿ ಸೋಲಿನ ದವಡೆಯಲ್ಲಿದೆ.
ಶಹಬಾಜ್ ಅಹಮದ್, ಡೇನಿಯಲ್ ಸ್ಯಾಮ್ಸ್ ಔಟ್
ರವಿ ಬಿಶ್ನೊಯಿ ಬೌಲಿಂಗ್ಗೆ ಹರ್ಪ್ರೀತ್ ಬ್ರರ್ಗೆ ಕ್ಯಾಚ್ ನೀಡಿ ಶಹಬಾಜ್ ಅಹಮದ್ ಔಟ್ ಆಗಿದ್ದಾರೆ. ಇದೇ ಓವರ್ನ ಮತ್ತೊಂದು ಎಸೆತದಲ್ಲಿ ಡೇನಿಯಲ್ ಸ್ಯಾಮ್ಸ್ ಬೌಲ್ಡ್ ಆಗಿದ್ದಾರೆ. ಹರ್ಷಲ್ ಪಟೇಲ್ ಹಾಗೂ ಕೈಲ್ ಜಾಮಿಸನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 16 ಓವರ್ಗೆ ಆರ್ಸಿಬಿ ಮೊತ್ತ 96/7 ಆಗಿದೆ. ತಂಡ ಗೆಲ್ಲಲು 24 ಬಾಲ್ಗೆ 84 ರನ್ ಬೇಕಿದೆ.
Another #RCB batter has been bowled ?
Ravi Bishnoi picks up his second for the night ?#SaddaPunjab #PunjabKings #IPL2021 #PBKSvRCB
— Punjab Kings (@PunjabKingsIPL) April 30, 2021
ರಜತ್ ಪಾಟೀದಾರ್ ಔಟ್
30 ಬಾಲ್ಗೆ 31 ರನ್ ಗಳಿಸಿ ಆಡುತ್ತಿದ್ದ ರಜತ್ ಪಾಟೀದಾರ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಕ್ರಿಸ್ ಜೋರ್ಡನ್ ಬೌಲಿಂಗ್ಗೆ ಪೂರನ್ಗೆ ಕ್ಯಾಚ್ ಕೊಟ್ಟು ಔಟ್ ಆಗಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮುಖ್ಯ 5 ವಿಕೆಟ್ಗಳನ್ನು ಕಳೆದುಕೊಂಡಿದೆ. 15 ಓವರ್ನ ಅಂತ್ಯಕ್ಕೆ ತಂಡದ ಮೊತ್ತ 92 ಆಗಿದೆ. ಆರ್ಸಿಬಿ ಗೆಲ್ಲಲು 30 ಬಾಲ್ಗೆ 88 ರನ್ ಬೇಕಿದೆ.
ಆರ್ಸಿಬಿ ಗೆಲ್ಲಲು 36 ಬಾಲ್ಗೆ 96 ರನ್ ಬೇಕು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು 36 ಬಾಲ್ಗೆ 96 ರನ್ ಬೇಕಾಗಿದೆ. ಪ್ರಮುಖ 4 ವಿಕೆಟ್ ಕಳೆದುಕೊಂಡಿರುವ ಆರ್ಸಿಬಿ ಆತಂಕದ ಸ್ಥಿತಿಯಲ್ಲಿದೆ. ತಂಡದ ಮೊತ್ತ 14 ಓವರ್ಗೆ 84/4 ಆಗಿದೆ. ರಾಯಲ್ ಚಾಲೆಂಜರ್ಸ್ ಪರ ರಜತ್ ಪಾಟೀದಾರ್ ಹಾಗೂ ಶಹಬಾಜ್ ಅಹಮದ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಡಿವಿಲಿಯರ್ಸ್ ವಿಕೆಟ್ ಪತನ
ಆರ್ಸಿಬಿಯ ಮತ್ತೊಂದು ವಿಕೆಟ್ ಪತನವಾಗಿದೆ. 9 ಬಾಲ್ಗೆ 3 ರನ್ ಗಳಿಸಿದ್ದ ಎಬಿ ಡಿವಿಲಿಯರ್ಸ್ ಹರ್ಪ್ರೀತ್ ಬ್ರರ್ಗೆ ವಿಕೆಟ್ ಒಪ್ಪಿಸಿದ್ದಾರೆ. 13 ಓವರ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊತ್ತ 71/4 ಆಗಿದೆ. ಗೆಲ್ಲಲು 42 ಬಾಲ್ಗೆ 109 ರನ್ ಬೇಕಿದೆ.
ಕೊಹ್ಲಿ- ಮ್ಯಾಕ್ಸ್ವೆಲ್ ಬೌಲ್ಡ್!
ಹರ್ಪ್ರೀತ್ ಬ್ರರ್ ಬೌಲಿಂಗ್ ಕಮಾಲ್ ಮಾಡುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ ಬೆನ್ನುಬೆನ್ನಿಗೆ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದ್ದಾರೆ. ವಿರಾಟ್ 35 (34) ಹಾಗೂ ಮ್ಯಾಕ್ಸ್ವೆಲ್ ಗೋಲ್ಡನ್ ಡಕ್ಗೆ ನಿರ್ಗಮಿಸಿದ್ದಾರೆ. ಆರ್ಸಿಬಿ ಪರ ಎಬಿ ಡಿವಿಲಿಯರ್ಸ್ ಮತ್ತು ರಜತ್ ಪಾಟೀದಾರ್ ಕ್ರೀಸ್ನಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಮೊತ್ತ 11 ಓವರ್ಗೆ 62/3 ಆಗಿದೆ. ತಂಡ ಗೆಲ್ಲಲು 54 ಬಾಲ್ಗೆ 118 ರನ್ ಬೇಕಿದೆ.
2⃣ in 2⃣! ??
Harpreet Brar has scalped two big wickets on successive deliveries. ??#RCB lose Virat Kohli & Glenn Maxwell. #VIVOIPL #PBKSvRCB @PunjabKingsIPL
Follow the match ? https://t.co/GezBF86RCb pic.twitter.com/kFsfyF5VtZ
— IndianPremierLeague (@IPL) April 30, 2021
ಆರ್ಸಿಬಿ 62/1 (10 ಓವರ್)
ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 61 ರನ್ ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ರಜತ್ ಬೌಂಡರಿ
ಪಂಜಾಬ್ ಕಿಂಗ್ಸ್ ಇಲ್ಲಿಯವರೆಗೆ ಉತ್ತಮವಾಗಿ ಆಡುತ್ತಿದೆ. ತಂಡದ ವೇಗದ ಬೌಲರ್‌ಗಳು ಇಬ್ಬರೂ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ವೇಗ ಮತ್ತು ನಿಖರ ದಾಳಿಯಿಂದ ಕಟ್ಟಿಹಾಕಿದ್ದಾರೆ. ಕೊಹ್ಲಿಯ ಯಾವುದೇ ಹೊಡೆತಗಳು ಬೌಂಡರಿ ದಾಟಲು ಸಾಧ್ಯವಿಲ್ಲ. ಆದರೆ, ರಜತ್ ಪೈಡಿದಾರ್ ಉತ್ತಮ ಫ್ಲಿಕ್ ಗಳಿಸಿದರು ಮತ್ತು ಮಿಡ್‌ವಿಕೆಟ್‌ನಲ್ಲಿ ನಾಲ್ಕು ರನ್ ಗಳಿಸಿದರು. ಮೆರೆಡಿತ್ ಓವರ್ ಕೂಡ ಉತ್ತಮವಾಗಿತ್ತು.
ಶಮಿ ಬೆಸ್ಟ್ ಬೌಲಿಂಗ್
ಮೊಹಮ್ಮದ್ ಶಮಿ ಸತತ ಎರಡನೇ ಓವರ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದಾರೆ. ಶಮಿ ವಿಶೇಷವಾಗಿ ಕೊಹ್ಲಿಯನ್ನು ತೊಂದರೆಗೊಳಗಾಗಿಸುತ್ತಿದ್ದಾರೆ. ಅವರ ವಿರುದ್ಧ ಕೊಹ್ಲಿಗೆ ಯಾವುದೇ ಬೌಂಡರಿ ಗಳಿಸಲಾಗಲಿಲ್ಲ.
ಪಡಿಕ್ಕಲ್ ಔಟ್
ಬೆಂಗಳೂರಿಗೆ ಮೊದಲ ಹಿನ್ನಡೆ ಬಂದಿದೆ. ಮೆರೆಡಿತ್ ದೇವದತ್ತ ಪಡಿಕ್ಕಲ್ ಅವರನ್ನು ಬಲಿ ಪಡೆದರು. ಮೆರೆಡಿತ್‌ನ ಓವರ್‌ನಲ್ಲಿ, ಪಡಿಕಲ್ ಬ್ಯಾಟಿಂಗ್ ಮಾಡಿ, ಸ್ಟಂಪ್‌ನಿಂದ ತಾನೇ ಜಾಗವನ್ನು ಮಾಡಿಕೊಂಡರು, ಆದರೆ ಮೆರೆಡಿತ್‌ನ ಚೆಂಡಿನ ವೇಗವನ್ನು ತಪ್ಪಿಸಿಕೊಂಡರು ಮತ್ತು ಚೆಂಡು ಆಫ್-ಸ್ಟಂಪ್ ಅನ್ನು ಕಿತ್ತುಹಾಕಿತು. ಇದರ ಮೇಲೆ ಕೊನೆಯ ಎಸೆತದಲ್ಲಿ ಅದೇ ರೀತಿಯಲ್ಲಿ ಪಾಡಿಕ್ಕಲ್ ಪಾಯಿಂಟ್ ಬೌಂಡರಿಯ ಹೊರಗೆ ಸಿಕ್ಸರ್ ಬಾರಿಸಿದರು.
ಕೊಹ್ಲಿ ಬೌಂಡರಿ
ಮೊಹಮ್ಮದ್ ಶಮಿ ಉತ್ತಮ ಓವರ್ ತೆಗೆದುಕೊಂಡಿದ್ದಾರೆ. ಬೌಂಡರಿಯೊಂದಿಗೆ ಓವರ್ ಪ್ರಾರಂಭವಾಯಿತು. ಕೊಹ್ಲಿ ಕ್ರೀಸ್‌ನಿಂದ ಹೊರಬಂದು ಚೆಂಡನ್ನು ನೇರವಾಗಿ ಬೌಲರ್‌ನ ಮೇಲೆ ಆಡಿದರು ಮತ್ತು ನಾಲ್ಕು ರನ್ ಗಳಿಸಿದರು. ಆದರೆ, ಶಮಿ ಇದರ ನಂತರ ಹಿಂತಿರುಗಿ ರನ್ ಗಳಿಸಲು ಕಡಿವಾಣ ಹಾಕಿದರು.
ಪಂಜಾಬ್ ಕಿಂಗ್ಸ್ 179/5 (20 ಓವರ್)
ಪಂಜಾಬ್ ಕಿಂಗ್ಸ್ ತಂಡ 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿದೆ. ಈ ಮೂಲಕ ಆರ್ಸಿಬಿ ಗೆಲ್ಲಲು 180 ರನ್ ಟಾರ್ಗೆಟ್ ನೀಡಿದೆ. ಪಂಜಾಬ್ ಕಿಂಗ್ಸ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟ ಆಡಿದ್ದಾರೆ. 91 ರನ್ ಗಳಿಸಿ ಔಟ್ ಆಗದೆ ಉಳಿದಿದ್ದಾರೆ.
INNINGS BREAK! @PunjabKingsIPL post 1⃣7⃣9⃣/5⃣ on the board against #RCB! @klrahul11 9⃣1⃣*@henrygayle 4⃣6⃣
The @RCBTweets chase shall begin shortly! #VIVOIPL #PBKSvRCB
Scorecard ? https://t.co/GezBF86RCb pic.twitter.com/JBf6Dmjzsv
— IndianPremierLeague (@IPL) April 30, 2021
150 ರನ್ ಪೂರೈಸಿದ ಪಂಜಾಬ್
ಪಂಜಾಬ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 150 ರನ್ ಪೂರೈಸಿದೆ. ಪಂಜಾಬ್ ಮೊತ್ತ 19 ಓವರ್ಗೆ 157 ಆಗಿದೆ. ಕೆ.ಎಲ್. ರಾಹುಲ್ 76 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಹರ್ಪ್ರೀತ್ ಬ್ರರ್ 18 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್ 132/5 (17 ಓವರ್)
17ನೇ ಓವರ್ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 5 ವಿಕೆಟ್ ಕಳೆದುಕೊಂಡು 132 ರನ್ ದಾಖಲಿಸಿದೆ. ಕೆ.ಎಲ್ ರಾಹುಲ್ 64 ರನ್ ಬಾರಿಸಿ ನಾಯಕನ ಆಟವಾಡುತ್ತಿದ್ದಾರೆ. ಹರ್ಪ್ರೀತ್ ಬ್ರರ್ ಮತ್ತೊಂದೆಡೆ ಕ್ರೀಸ್ನಲ್ಲಿದ್ದಾರೆ.
ಶೂನ್ಯಕ್ಕೆ ನಿರ್ಗಮಿಸಿದ ಶಾರುಖ್!
3 ಬಾಲ್ಗೆ ರನ್ ಗಳಿಸದೇ ಶಾರುಖ್ ಖಾನ್ ಔಟ್ ಆಗಿದ್ದಾರೆ. ಚಹಾಲ್ ಬಾಲ್ಗೆ ಬೌಲ್ಡ್ ಆಗಿದ್ದಾರೆ. ಪಂಜಾಬ್ ಕಿಂಗ್ಸ್ 15 ಓವರ್ಗೆ 5 ವಿಕೆಟ್ ಕಳೆದುಕೊಂಡು 119 ರನ್ ದಾಖಲಿಸಿದೆ. ರಾಹುಲ್ 56 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ದೀಪಕ್ ಹೂಡಾ ಔಟ್
ಪಂಜಾಬ್ ತಂಡ ಒಂದರ ಹಿಂದೆ ಒಂದರಂತೆ ವಿಕೆಟ್ ಕಳದುಕೊಳ್ಳುತ್ತಿದೆ. ಹೂಡಾ 9 ಬಾಲ್ಗೆ 5 ರನ್ ಗಳಿಸಿ ನಿರ್ಗಮಿಸಿದ್ದಾರೆ. ರಾಹುಲ್ ಏಕಾಂಗಿ ಹೋರಾಟ ಮುಂದುವರಿದಿದೆ. ಪಂಜಾಬ್ ತಂಡದ ಮೊತ್ತ 14 ಓವರ್ಗೆ 117/4 ಆಗಿದೆ.
ರಾಹುಲ್ ಅರ್ಧಶತಕ
ಪಂಜಾಬ್ ಪರ ನಾಯಕ ರಾಹುಲ್ ಅರ್ಧಶತಕ ಸಿಡಿಸಿದ್ದಾರೆ. 39 ಬಾಲ್ಗೆ 4 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 53 ರನ್ ಪೇರಿಸಿದ್ದಾರೆ. ಪಂಜಾಬ್ ತಂಡ 13 ಓವರ್ಗೆ 3 ವಿಕೆಟ್ ನಷ್ಟಕ್ಕೆ 113 ರನ್ ದಾಖಲಿಸಿದೆ.
#CaptainPunjab doing what he does best! ?
Need a big one, skippa ?#SaddaPunjab #PunjabKings #IPL2021 #PBKSvRCB pic.twitter.com/obUpU0rcBm
— Punjab Kings (@PunjabKingsIPL) April 30, 2021
ಮತ್ತೆ ಸೊನ್ನೆ ಸುತ್ತಿದ ಪೂರನ್!
ನಿಕೊಲಸ್ ಪೂರನ್ ಇಂದು ಕೂಡ ನಿರಾಸೆ ಮೂಡಿಸಿದ್ದಾರೆ. 3 ಬಾಲ್ ಆಟವಾಡಿ ರನ್ ಗಳಿಸದೇ ನಿರ್ಗಮಿಸಿದ್ದಾರೆ. ಜಾಮಿಸನ್ ಬೌಲಿಂಗ್ಗೆ ಶಹಬಾಜ್ ಅಹ್ಮದ್ ಕ್ಯಾಚ್ ಪಡೆದಿದ್ದಾರೆ. ರಾಹುಲ್ ಅರ್ಧಶತಕ ಪೂರೈಸಿದ್ದಾರೆ. ದೀಪಕ್ ಹೂಡಾ ರಾಹುಲ್ಗೆ ಜೊತೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 12 ಓವರ್ಗೆ 3 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ.
ಅಬ್ಬರಿಸುತ್ತಿದ್ದ ಗೈಲ್ ಔಟ್!
ಆರ್ಸಿಬಿ ವಿರುದ್ಧ ಅಬ್ಬರಿಸುತ್ತಿದ್ದ ಕ್ರಿಸ್ ಗೈಲ್ ಔಟ್ ಆಗಿದ್ದಾರೆ. 24 ಬಾಲ್ಗೆ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 46 ರನ್ ಗಳಿಸಿ ಅರ್ಧಶತಕ ವಂಚಿತರಾಗಿದ್ದಾರೆ. ಡೇನಿಯಲ್ ಸ್ಯಾಮ್ಸ್ ಬೌಲಿಂಗ್ಗೆ ಡಿವಿಲಿಯರ್ಸ್ಗೆ ಕ್ಯಾಚ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದ್ದಾರೆ. ಕೆ. ಎಲ್ ರಾಹುಲ್ ಹಾಗೂ ನಿಕೊಲಸ್ ಪೂರನ್ ಕ್ರೀಸ್ನಲ್ಲಿ ಜೊತೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 11 ಓವರ್ಗೆ 2 ವಿಕೆಟ್ ಕಳೆದುಕೊಂಡು 100 ರನ್ ದಾಖಲಿಸಿದೆ.
Wicket!
When in need, dial Daniel.
He never disappoints, does he? Removes a dangerous-looking Gayle.#PlayBold #WeAreChallengers #IPL2021 #PBKSvRCB #StayHomeStaySafe #DareToDream
— Royal Challengers Bangalore (@RCBTweets) April 30, 2021
ಪಂಜಾಬ್ ಕಿಂಗ್ಸ್ 90/1 (10 ಓವರ್)
10ನೇ ಓವರ್ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 91 ರನ್ ದಾಖಲಿಸಿದೆ. ಕೆ.ಎಲ್. ರಾಹುಲ್ 31 ಬಾಲ್ಗೆ 36 ಹಾಗೂ ಗೈಲ್ 23 ಬಾಲ್ಗೆ 46 ರನ್ ಪೇರಿಸಿ ಕ್ರಿಸ್ನಲ್ಲಿದ್ದಾರೆ.
ಪಂಜಾಬ್ ಕಿಂಗ್ಸ್ 70/1 (8 ಓವರ್)
8 ಓವರ್ನ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ಪಂಜಾಬ್ ಪರ ಕ್ರಿಸ್ ಗೈಲ್ 15 ಬಾಲ್ಗೆ 38 ಹಾಗೂ ರಾಹುಲ್ 26 ಬಾಲ್ಗೆ 24 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮತ್ತೆ ಎರಡು ಸಿಕ್ಸರ್
ರಾಯಲ್ ಚಾಲೆಂಜರ್ಸ್ ತಂಡದ ಮಾಜಿ ದಾಂಡಿಗ, ಯೂನಿವರ್ಸಲ್ ಬಾಸ್ ಕ್ರಿಸ್ ಗೈಲ್ ಇಂದು ಆರ್ಸಿಬಿ ವಿರುದ್ಧ ಸಿಡಿದು ನಿಂತಿದ್ದಾರೆ. ಚಹಾಲ್ನ 7ನೇ ಓವರ್‌ನಲ್ಲಿ 2 ಸಿಕ್ಸರ್ ಬಾರಿಸಿದ್ದಾರೆ. ಪಂಜಾಬ್ ಕಿಂಗ್ಸ್ 7 ಓವರ್ಗೆ 1 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ.
ಸಿಡಿದ ಗೈಲ್; 5 ಫೋರ್!
ಆರ್ಸಿಬಿ ವಿರುದ್ಧ ಕ್ರಿಸ್ ಗೈಲ್ ಅಬ್ಬರಿಸಿದ್ದಾರೆ. 8 ಬಾಲ್ಗೆ 5 ಬೌಂಡರಿ ಸಹಿತ 22 ರನ್ ದಾಖಲಿಸಿದ್ದಾರೆ. ತಂಡದ ರನ್ ಗತಿ ಏರಿಕೆಯಾಗಿದೆ. ಪವರ್ಪ್ಲೇ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 49 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಕೈಲ್ ಜಾಮಿಸನ್ ಎಸೆದ ಪವರ್ ಪ್ಲೇನ ಕೊನೆಯ ಓವರ್‌ನಲ್ಲಿ 5 ಬೌಂಡರಿ ದಾಖಲಾಗಿದೆ.
End of powerplay!
4⃣9⃣ runs for @PunjabKingsIPL 1⃣ wicket for @RCBTweets #VIVOIPL #PBKSvRCB
Follow the match ? https://t.co/GezBF86RCb pic.twitter.com/WHCXxDFFGR
— IndianPremierLeague (@IPL) April 30, 2021
ಪಂಜಾಬ್ ಕಿಂಗ್ಸ್ ಮೊದಲ ವಿಕೆಟ್ ಪತನ
ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಭ್ಸಿಮ್ರನ್ ವಿಕೆಟ್ ಪತನವಾಗಿದೆ. ಪ್ರಭ್ಸಿಮ್ರನ್ 7 ಬಾಲ್ಗೆ 7 ರನ್ ಗಳಿಸಿ, ಜಾಮಿಸನ್ ಬಾಲ್ಗೆ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮೊದಲ ವಿಕೆಟ್ ಪತನದ ಬಳಿಕ ಕೆ.ಎಲ್. ರಾಹುಲ್ಗೆ ಕ್ರಿಸ್ ಗೈಲ್ ಜೊತೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ 4 ಓವರ್ಗೆ 1 ವಿಕೆಟ್ ಕಳೆದುಕೊಂಡು 21 ರನ್ ದಾಖಲಿಸಿದೆ.
OUT! ☝️
Kyle Jamieson strikes in his first over. ??#PBKS lose Prabhsimran Singh. #VIVOIPL #PBKSvRCB
Follow the match ? https://t.co/GezBF86RCb pic.twitter.com/TsTY66Cmh1
— IndianPremierLeague (@IPL) April 30, 2021
ಸಿಕ್ಸ್ ಬಾರಿಸಿದ ರಾಹುಲ್
ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಎರಡನೇ ಓವರ್‌ನಲ್ಲಿ ಸಿಕ್ಸರ್ ಸಿಡಿಸಿದ್ದಾರೆ. ಸಿರಾಜ್ ಓವರ್ನ 3ನೇ ಬಾಲ್ನ್ನು ಸಿಕ್ಸ್ಗೆ ಅಟ್ಟಿದ್ದಾರೆ. ಈ ಮೂಲಕ ಪಂಜಾಬ್ ಮೊತ್ತ 2 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 13 ಆಗಿದೆ.
ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ನಾಯಕ ಕೆ.ಎಲ್. ರಾಹುಲ್ ಹಾಗೂ ಪರಬ್ಸಿಮ್ರನ್ ಸಿಂಗ್ ಬ್ಯಾಟಿಂಗ್ಗೆ ಇಳಿದಿದ್ದಾರೆ. ಪಂಜಾಬ್ 1 ಓವರ್ನ ಅಂತ್ಯಕ್ಕೆ 3 ರನ್ ಕಲೆಹಾಕಿದೆ. ಡೇನಿಯಲ್ ಸ್ಯಾಮ್ಸ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.
ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ. ತಂಡದಲ್ಲಿ ಒಂದೇ ಒಂದು ಬದಲಾವಣೆ ಇದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಶಹಬಾಜ್ ಅಹ್ಮದ್ ಅವರನ್ನು ಬದಲಾಯಿಸಲಾಗಿದೆ.
ಅದೇ ಸಮಯದಲ್ಲಿ, ಪಂಜಾಬ್ ತಂಡದಲ್ಲಿ 3 ಬದಲಾವಣೆಗಳಾಗಿವೆ. ಮಾಯಾಂಕ್ ಅಗರ್ವಾಲ್, ಮೊಜೆಸ್ ಹೆನ್ರಿಕ್ಸ್ ಮತ್ತು ಅರ್ಷದಿಪ್ ಸಿಂಗ್ ಅವರನ್ನು ಕೈಬಿಡಲಾಗಿದ್ದು, ಪ್ರಭಾಸಿಮ್ರಾನ್ ಸಿಂಗ್, ಮಂದೀಪ್ ಸಿಂಗ್ ಮತ್ತು ರೈಲಿ ಮೆರೆಡಿತ್ ಅವರನ್ನು ಸೇರಿಸಿಕೊಳ್ಳಲಾಗಿದೆ.
Published On - Apr 30,2021 11:12 PM