Anju Bobby George: ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆಯುವುದು ಗೌರವವಾಗಿದೆ: ಅಂಜು ಬಾಬಿ ಜಾರ್ಜ್

ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಉಪಾಧ್ಯಕ್ಷೆಯಾಗಿರುವ ಅಂಜು ಬಾಬಿ, ಲಿಂಗ ಸಮಾನತೆಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹೀಗಾಗಿಯೇ ವಿಶ್ವ ಅಥ್ಲೆಟಿಕ್ಸ್ ಇವರಿಗೆ 'ವರ್ಷದ ಮಹಿಳೆ' ಪ್ರಶಸ್ತಿ ನೀಡಿ ಗೌರವಿಸಿದೆ.

Anju Bobby George: ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆಯುವುದು ಗೌರವವಾಗಿದೆ: ಅಂಜು ಬಾಬಿ ಜಾರ್ಜ್
Anju Bobby George
Follow us
TV9 Web
| Updated By: Vinay Bhat

Updated on: Dec 28, 2021 | 7:10 AM

ಭಾರತದ ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ (Anju Bobby George) ಅವರನ್ನು ವರ್ಲ್ಡ್ ಅಥ್ಲೆಟಿಕ್ಸ್ (World Athletics) ‘ವರ್ಷದ ಮಹಿಳೆ’ (Women of the Year) ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. 44 ವರ್ಷದ ಅಂಜು ದೇಶದಲ್ಲಿ ಯುವ ಪ್ರತಿಭಾನ್ವೇಷಣೆಯಲ್ಲಿ ತೊಡಗಿಕೊಂಡಿರುವುದಕ್ಕೆ ಮತ್ತು ಲಿಂಗ ಸಮಾನತೆಗೆ ಶ್ರಮಿಸುತ್ತಿರುವುದಕ್ಕಾಗಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯಿಸಿರುವ ಭಾರತದ ಏಕೈಕ ಅಥ್ಲೀಟ್ ಎನಿಸಿದ್ದು, ಇತ್ತೀಚೆಗಷ್ಟೆ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿದರು.

ಈ ಬಗ್ಗ ಅವರು ಮಾತನಾಡಿದ್ದು, “ವಿಶ್ವ ಅಥ್ಲೆಟಿಕ್ಸ್‌ನಿಂದ ‘ವರ್ಷದ ಮಹಿಳೆ’ ಪ್ರಶಸ್ತಿಯನ್ನು ಪಡೆಯುವುದು ಗೌರವವಾಗಿದೆ. ಇದು ಕೇವಲ ನನ್ನ ಪ್ರದರ್ಶನಕ್ಕಾಗಿ ಅಲ್ಲ. ಬದಲಾಗಿ ನಾನು ಕ್ರೀಡೆಗೆ ಏನು ಹಿಂತಿರುಗಿಸುತ್ತಿದ್ದೇನೆ ಎಂಬುದು ಇದೆ. ಬೆಂಗಳೂರಿನಲ್ಲಿರುವ ನನ್ನ ಸ್ಪೋರ್ಟ್ಸ್ ಫೌಂಡೇಶನ್‌ನಿಂದ ನನ್ನ ವಿದ್ಯಾರ್ಥಿಯೊಬ್ಬ ಈಗಾಗಲೇ ವಿಶ್ವ ಮಟ್ಟವನ್ನು ತಲುಪಿದ್ದಾನೆ. ಹೆಮ್ಮೆಯಿದೆ,” ಎಂದು ಅಂಜು ಬಾಬಿ ಜಾರ್ಜ್ ಹೇಳಿದ್ದಾರೆ.

ಭಾರತದಲ್ಲಿ ಕ್ರೀಡೆಯನ್ನು ಮುನ್ನಡೆಸಲು ಅವರ ಪ್ರಯತ್ನಗಳು ಮತ್ತು ಅವರ ಹೆಜ್ಜೆಗಳನ್ನು ಅನುಸರಿಸಲು ಹೆಚ್ಚಿನ ಮಹಿಳೆಯರನ್ನು ಪ್ರೇರೇಪಿಸುವ ಮೂಲಕ ಈ ವರ್ಷದ ಪ್ರಶಸ್ತಿಗೆ  ಅಂಜು ಬಾಬಿ ಹೆಚ್ಚು ಅರ್ಹರಾಗಿದ್ದಾರೆ. ಜಾರ್ಜ್, ಭಾರತದ ಮಾಜಿ ಅಂತಾರಾಷ್ಟ್ರೀಯ ಲಾಂಗ್ ಜಂಪ್ ತಾರೆಯಾಗಿದ್ದೂ ಇನ್ನೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2016 ರಲ್ಲಿ ಅವರು ಯುವತಿಯರಿಗೆ ತರಬೇತಿ ಅಕಾಡೆಮಿಯನ್ನು ತೆರೆದಿದ್ದರು.

ಕೇರಳ ಮೂಲದ ಅಂಜು ಬಾಬಿ ಜಾರ್ಜ್ ಅವರು ಒಂದೇ ಕಿಡ್ನಿಯೊಂದಿಗೆ 2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಲಾಂಗ್ ಜಂಪ್​ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದರು. ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್​ನಲ್ಲಿ ಪದಕ ಪಡೆದ ಭಾರತದ ಮೊದಲ ಮತ್ತು ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅಂಜು ಪಾತ್ರರಾಗಿದ್ದಾರೆ.ಎರಡು ಬಾರಿ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಅಂಜು, ಭಾರತದ ಮಹಿಳಾ ವಿಭಾಗದ ಲಾಂಗ್​ ಜಂಪ್​ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. 2005 ರಲ್ಲಿ IAAF ವಿಶ್ವ ಅಥ್ಲೆಟಿಕ್ಸ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇವರಿಗೆ 2002 ರಲ್ಲಿ ಅರ್ಜುನ ಪ್ರಶಸ್ತಿ, 2003 ರಲ್ಲಿ ಖೇಲ್ ರತ್ನ, ಮತ್ತು 2004 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಉಪಾಧ್ಯಕ್ಷೆಯಾಗಿರುವ ಅಂಜು ಬಾಬಿ, ಲಿಂಗ ಸಮಾನತೆಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಶಾಲಾ ಹೆಣ್ಣುಮಕ್ಕಳಿಗೂ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿಯೇ ವಿಶ್ವ ಅಥ್ಲೆಟಿಕ್ಸ್ ಇವರಿಗೆ ‘ವರ್ಷದ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಿದೆ.

IND vs SA: ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಅನುಮಾನ; ಯಾರಿಗೆ ಸಿಗುತ್ತೆ ಕೊಹ್ಲಿಯಿಂದ ತೆರವಾದ ಸ್ಥಾನ?

(Anju Bobby George said Its an honour to receive Women of the year award from World Athletics)

ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ