AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lionel Messi: ಬಾರ್ಸಿಲೋನಾ ಕ್ಲಬ್ ತೊರೆಯಲಿರುವ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ

ಬಾರ್ಸಿಲೋನ ಫುಟ್ಬಾಲ್‌ ಕ್ಲಬ್‌ ಹಾಗೂ ಲಿಯೊನೆಲ್‌ ಮೆಸ್ಸಿ ನಡುವೆ ಒಪ್ಪಂದವಾಗಿದ್ದರೂ ಆರ್ಥಿಕ ಹಾಗೂ ರಚನಾತ್ಮಕ ಅಡೆತಡೆಗಳಿಂದಾಗಿ ಇದು ಅಂತಿಮ ರೂಪ ಪಡೆದಿರಲಿಲ್ಲ ಎಂದು ಕ್ಲಬ್‌ ಹೇಳಿಕೆಯೊಂದರಲ್ಲಿ ತಿಳಿಸಿದೆ.

Lionel Messi: ಬಾರ್ಸಿಲೋನಾ ಕ್ಲಬ್ ತೊರೆಯಲಿರುವ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ
Lionel Messi
TV9 Web
| Updated By: Vinay Bhat|

Updated on: Aug 06, 2021 | 1:05 PM

Share

ಫುಟ್ಬಾಲ್ ಮಾಂತ್ರಿಕ ಲಿಯೋನಲ್ ಮೆಸ್ಸಿ (Lionel Messi) ಬಾರ್ಸಿಲೋನಾ ಫುಟ್ಬಾಲ್ ಕ್ಲಬ್​ನ್ನು ತೊರೆಯಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಲಬ್​, ಆರ್ಥಿಕ ಮತ್ತು ರಚನಾತ್ಮಕ ಅಡೆತಡೆಗಳು ಈ ಬೆಳವಣಿಗೆಗೆ ಕಾರಣ ಎಂದು ತಿಳಿಸಿದೆ. ಬಾರ್ಸಿಲೋನಾ ಎಫ್‌ಸಿ ಫುಟ್ಬಾಲ್ ತಂಡದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ನೂತನ ಒಪ್ಪಂದದ ಬಗೆಗಿನ ಮಾತುಕತೆ ಸರಿಹೋಗದ ಕಾರಣ ಕ್ಲಬ್ ತೊರೆಯುವುದರಲ್ಲಿದ್ದಾರೆ.

ಬಾರ್ಸಿಲೋನ ಫುಟ್ಬಾಲ್‌ ಕ್ಲಬ್‌ ಹಾಗೂ ಲಿಯೊನೆಲ್‌ ಮೆಸ್ಸಿ ನಡುವೆ ಒಪ್ಪಂದವಾಗಿದ್ದರೂ ಆರ್ಥಿಕ ಹಾಗೂ ರಚನಾತ್ಮಕ ಅಡೆತಡೆಗಳಿಂದಾಗಿ ಇದು ಅಂತಿಮ ರೂಪ ಪಡೆದಿರಲಿಲ್ಲ ಎಂದು ಕ್ಲಬ್‌ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಾರ್ಸಿಲೋನಾ ಮತ್ತು ಲಿಯೋನಲ್ ಮೆಸ್ಸಿ ಗುರುವಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆದಿತ್ತು. ಆದರೆ ನೋಂದಣಿಗೆ ಸ್ಪ್ಯಾನಿಷ್ ಲಾಲಿಗಾ ನಿಯಮಗಳು ಅಡ್ಡಿಯಾಗುತ್ತವೆ. ಹೀಗಾಗಿ ಮೆಸ್ಸಿ ಬಾರ್ಸಿಲೋನಾದೊಂದಿಗೆ ಮುಂದುವರೆಯುವುದಿಲ್ಲ. ಈ ಬಗ್ಗೆ ಎರಡೂ ಕಡೆಯವರು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಬಾರ್ಸಿಲೋನಾ ಕ್ಲಬ್‌ನ ಶ್ರೇಷ್ಠ ಕೊಡುಗೆ ನೀಡಿದ ಮೆಸ್ಸಿಯವರಿಗೆ ಹೃದಯಪೂರ್ವಕ ಕೃತಜ್ಞತೆಗಳು, ಮೆಸ್ಸಿಯವರ ಭವಿಷ್ಯದ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಶುಭ ಹಾರೈಸುತ್ತೇವೆ ಎಂದು ಎಫ್​ಸಿಬಾರ್ಸಿಲೋನಾ ಡಾಟ್​ ಕಾಮ್​ ಹೇಳಿದೆ.

“ಒಪ್ಪಂದದ ಮಾತುಕತೆ ಸರಿಹೊಂದದ ಕಾರಣ ಈ ಸಂದರ್ಭದಲ್ಲಿ ಮೆಸ್ಸಿ ಇನ್ನು ಬಾರ್ಸಿಲೋನಾ ಎಫ್‌ಸಿಯಲ್ಲಿ ಉಳಿಯುತ್ತಿಲ್ಲ. ಆಟಗಾರ ಮತ್ತು ಕ್ಲಬ್ ನಡುವಿನ ಒಪ್ಪಂದ ಹೊಂದಲಿಲ್ಲ ಎಂಬ ಬಗ್ಗೆ ಇಬ್ಬರಿಗೂ ವಿಷಾದವಿದೆ,” ಎಂದು ಬಾರ್ಸಿಲೋನಾ ತಿಳಿಸಿದೆ.

ಕಳೆದ ಜೂನ್‌ನಲ್ಲೇ ಲಿಯೋನಲ್ ಮೆಸ್ಸಿ ಬೇರೆ ಕ್ಲಬ್‌ಗೆ ಹೋಗಲು ಯೋಚಿಸಿದ್ದರು. ಆದರೆ ಬಾರ್ಸಿಲೋನಾ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ 34ರ ಹರೆಯದ ಮೆಸ್ಸಿ ಕ್ಲಬ್ ತೊರೆಯಬೇಕಾದ ಸಂದರ್ಭ ಬಂದಿದೆ.

Tokyo Olympics: ಸೋತು ಕಣ್ಣೀರಿಟ್ಟರೂ ಭಾರತೀಯರ ಮನ ಗೆದ್ದ ಮಹಿಳಾ ಹಾಕಿ ತಂಡ: ಪ್ರಧಾನಿ ಮೋದಿಯಿಂದ ಶಹಬ್ಬಾಶ್ ಗಿರಿ

Tokyo Olympics: ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಭಜರಂಗ್‌ ಪುನಿಯ: ಪದಕದ ನಿರೀಕ್ಷೆಯಲ್ಲಿ ಭಾರತ

(Argentina striker Lionel Messi will leave Barcelona)