ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ (Pro Kabaddi 2022) 75ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ (Bengal Warriors) ಅಬ್ಬರಿಸಿದರೆ, ದಬಾಂಗ್ ಡೆಲ್ಲಿ ವಿರುದ್ಧ ತೆಲುಗು ಪುಣೇರಿ ಪಲ್ಟನ್ ಗೆಲುವು ದಾಖಲಿಸಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮಣಿಂದರ್ ಅವರು ಗಳಿಸಿದ 13 ಪಾಯಿಂಟ್‌ಗಳ ಬಲದಿಂದ ಬೆಂಗಾಲ್ 41-22ರಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು ಗೆದ್ದುಬೀಗಿತು. ಜೈಪುರ್ ತಂಡದ ಅರ್ಜುನ್ ದೇಶ್ವಾಲ್ ಕೂಡ ಸೂಪರ್ ಟೆನ್ ಸಾಧನೆ ಮಾಡಿದರು. ಆದರೆ, ಇತರ ರೇಡರ್‌ಗಳಿಂದ ಮತ್ತು ಟ್ಯಾಕ್ಲಿಂಗ್ ವಿಭಾಗದಿಂದ ಅವರಿಗೆ ನಿರೀಕ್ಷೆಗೆ ತಕ್ಕ ಸಹಕಾರ ಸಿಗಲಿಲ್ಲ. ಬೆಂಗಾಲ್ ಆಲ್‌ರೌಂಡ್ ಆಟದ ಮೂಲಕ ಮಿಂಚಿತು. ಡಿಫೆನ್ಸ್ ವಿಭಾಗದ ರಣ್ ಸಿಂಗ್ 4 ಪಾಯಿಂಟ್ ಗಳಿಸಿದರೆ ವಿಶಾಲ್ ಮಾನೆ ಮತ್ತು ಅಬೋಜರ್ ಮಿಘಾನಿ ತಲಾ 2 ಪಾಯಿಂಟ್ ಕಲೆ ಹಾಕಿದರು.
ಜೈಪುರ್ ಪರ ಮಿಂಚಿದ್ದು ರೈಡರ್‌ಗಳಾದ ಅರ್ಜುನ್ ದೇಶ್ವಾಲ್ (10) ಮತ್ತು ಅಮಿತ್ ನಗರ್ (6) ಮಾತ್ರ. ಕ್ಷೇತ್ರ ರಕ್ಷಣೆಯಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ಹೋಲಿಸಿದ್ರೆ ಜೈಪುರ ಪಿಂಕ್ ಪ್ಯಾಂಥರ್ಸ್ ಹಿಂದೆ ಬಿದ್ದಿದೆ. ಬೆಂಗಾಲ್ ಒಟ್ಟು 10 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ್ರೆ, ಜೈಪುರ ಕೇವಲ 4 ಪಾಯಿಂಟ್ಸ್ ಗಿಟ್ಟಿಸಿತು. ಕ್ಷೇತ್ರ ರಕ್ಷಣೆಯಲ್ಲಿ ಎಡವಿದ ಪಿಂಕ್ ಪ್ಯಾಂಥರ್ಸ್ ಪಂದ್ಯದ ಆರಂಭದಿಂದಲೂ ವಾರಿಯರ್ಸ್ ಅಬ್ಬರದ ಹಿಂದೆ ಬಿದ್ದಿತು. ಅಂತಿಮವಾಗಿ 22-41 ಅಂತರದ ಪಾಯಿಂಟ್ಸ್‌ಗಳಿಂದ ಸೋಲನ್ನ ಕಂಡಿತು.
ಇನ್ನು ಸೋಮವಾರ ರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ 42-25 ಅಂಕಗಳ ಅಂತರದಿಂದ ದಬಂಗ್ ಡೆಲ್ಲಿಯನ್ನು ಮಣಿಸಿತು. ಟ್ಯಾಕಲ್‌ನಲ್ಲಿ ಎಡವಿದ ದಬಾಂಗ್ ಡೆಲ್ಲಿ ಗಳಿಸಿದ್ದು ಕೇವಲ 4 ಪಾಯಿಂಟ್ಸ್. ಆದ್ರೆ ಅದೇ ಪುಣೇರಿ ಪಲ್ಟನ್ 13 ಟ್ಯಾಕಲ್ ಪಾಯಿಂಟ್ಸ್ ಮೂಲಕ ಮುನ್ನಡೆ ಸಾಧಿಸಿತು. ಪುಣೇರಿ ಪಲ್ಟನ್ ಪರ ಮೊಹಿತ್ ಗೊಯತ್ 10, ಅಸ್ಲಾಂ ಇನಾಮ್ದಾರ್ 8, ನಿತಿನ್ ತೋಮರ್ 6 ಪಾಯಿಂಟ್ಸ್ ಪಡೆದ್ರೆ, ಡೆಲ್ಲಿ ಪರ ವಿಜಯ್ ಮಲ್ಲಿಕ್ 8, ನೀರಜ್ ನರ್ವಾಲ್ 6, ಸಂದೂಪ್ ನರ್ವಾಲ್ 5 ಪಾಯಿಂಟ್ಸ್ ಪಡೆದ್ರು.
ಅಂತಿಮವಾಗಿ ಪುಣೇರಿ ಪಲ್ಟನ್ ತಂಡವು ದಬಾಂಗ್ ಡೆಲ್ಲಿ ವಿರುದ್ಧ 42-25 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದ ಸೋಲಿನೊಂದಿಗೆ ಅಗ್ರಸ್ಥಾನದಲ್ಲಿದ್ದ ದಬಾಂಗ್ ಡೆಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಬೆಂಗಳೂರು ಬುಲ್ಸ್ 46 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನಕ್ಕೇರಿದೆ.
Mumbai Falcons: ಫಾರ್ಮುಲಾ ರೀಜನಲ್ ಚಾಂಪಿಯನ್‌ಶಿಪ್: ಮುಂಬೈ ಫಾಲ್ಕನ್ಸ್ ಶುಭಾರಂಭ