Mumbai Falcons: ಫಾರ್ಮುಲಾ ರೀಜನಲ್ ಚಾಂಪಿಯನ್‌ಶಿಪ್: ಮುಂಬೈ ಫಾಲ್ಕನ್ಸ್ ಶುಭಾರಂಭ

2022 Formula Regional Asian Championship: ಇದು ತಂಡಕ್ಕೆ ನಿಜವಾಗಿಯೂ ಉತ್ತಮ ಆರಂಭವಾಗಿದೆ. ಹಲವಾರು ಯಾಂತ್ರಿಕ ಸಮಸ್ಯೆಗಳ ಮೂಲಕ ನಾವು ಉತ್ತಮ ಫಲಿತಾಂಶವನ್ನು ಪಡೆದಿದ್ದೇವೆ.

Mumbai Falcons: ಫಾರ್ಮುಲಾ ರೀಜನಲ್ ಚಾಂಪಿಯನ್‌ಶಿಪ್: ಮುಂಬೈ ಫಾಲ್ಕನ್ಸ್ ಶುಭಾರಂಭ
Mumbai Falcons
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 24, 2022 | 10:15 PM

2022ರ ಫಾರ್ಮುಲಾ ರೀಜನಲ್ ಏಷ್ಯನ್ ಚಾಂಪಿಯನ್‌ಶಿಪ್ (FRAC) ಅಭಿಯಾನವನ್ನು ಮುಂಬೈ ಫಾಲ್ಕನ್ಸ್ ಭರ್ಜರಿಯಾಗಿ ಆರಂಭಿಸಿದೆ. ಯಾಸ್ ಮರೀನಾ ಸರ್ಕ್ಯೂಟ್‌ನಲ್ಲಿ ನಡೆದ ರೀಜನಲ್ ರೇಸಿಂಗ್​ನಲ್ಲಿ ಒಂದು ಗೆಲುವು ಮತ್ತು ಎರಡು ಪೋಡಿಯಂ ಫಿನಿಶ್‌ಗಳೊಂದಿಗೆ ಶುಭಾರಂಭ ಮಾಡಿದೆ. ಅಬುಧಾಬಿಯಲ್ಲಿ ಪ್ರಾರಂಭವಾಗಿರುವ FIA ಯ F3 ರೇಸಿಂಗ್​ನಲ್ಲಿ ಮುಂಬೈ ಫಾಲ್ಕನ್ ಸೇರಿದಂತೆ 8 ತಂಡಗಳ ಭಾಗವಹಿಸಿದ್ದರು. ಮುಂಬೈ ಫಾಲ್ಕನ್ಸ್ ಪರ ಸ್ಪೀಡ್ ಮಾಸ್ಟರ್​ಗಳಾಗಿ ಮಾಂಟೆ ಕಾರ್ಲೋದಿಂದ ಆರ್ಥರ್ ಲೆಕ್ಲರ್ಕ್, ಸ್ವೀಡನ್‌ನ ಡಿನೋ ಬೆಗಾನೋವಿಕ್ ಮತ್ತು ಕೊಲಂಬಿಯಾದ ಸೆಬಾಸ್ಟಿಯನ್ ಮೊಂಟೊಯಾ ಅವರನ್ನು ಒಳಗೊಂಡ ಪ್ರಬಲ ತಂಡ ಕಣಕ್ಕಿಳಿದಿತ್ತು. ಅದರಂತೆ ಮೂರು ರೇಸ್​ನಲ್ಲಿ ಒಂದು ಗೆಲುವು ಮತ್ತು ಎರಡು ಪೋಡಿಯಂ ಫಿನಿಶ್‌ಗಳೊಂದಿಗೆ ಶುಭಾರಂಭ ಮಾಡಿದೆ.

ರೇಸ್ 1: ಮೊದಲ ರೇಸ್​ನಲ್ಲಿ ಕೊಲಂಬಿಯಾದ ಸೆಬಾಸ್ಟಿಯನ್ ಮೊಂಟೊಯಾ ಮುಂಬೈ ಫಾಲ್ಕನ್ ಪರ ಡ್ರೈವ್ ಮಾಡಿದ್ದರು. ಮೊಂಟೊಯಾ, ಮಾಜಿ ಫಾರ್ಮುಲಾ ಒನ್ ಚಾಲಕ ಮತ್ತು ಹಲವು ಬಾರಿ ಇಂಡಿ 500 ವಿಜೇತ ಜುವಾನ್ ಪ್ಯಾಬ್ಲೊ ಮೊಂಟೊಯಾ ಅವರ ಮಗ ಎಂಬುದು ವಿಶೇಷ. ತಂದೆಯಂತೆ ವೇಗ ಹಾಗೂ ನಿಯಂತ್ರಣದೊಂದಿಗೆ ಸಂಚಲನ ಸೃಷ್ಟಿಸಿದ ಮೊಂಟೊಯಾ ಪ್ರತಿಸ್ಪರ್ಧಿಗಳಾದ ಐಸಾಕ್ ಹಡ್ಜರ್ ಮತ್ತು ಪಾಲ್ ಅರಾನ್‌ರಂತಹ ಅನುಭವಿ ಚಾಲಕರಿಗಿಂತ ಮುಂಚಿತವಾಗಿ ತಮ್ಮ ಚೊಚ್ಚಲ ಪಂದ್ಯದ ರೇಸ್ 1 ಗಾಗಿ ಪೋಲ್ ಪಡೆದರು. ಅದರಂತೆ ಸಹ ಆಟಗಾರರಾದ ಆರ್ಥರ್ ಮತ್ತು ಡಿನೋ ಇಬ್ಬರೂ ಅಗ್ರ 6 ರಲ್ಲಿ ರೇಸ್​ ಮುಗಿಸಿದರು. ಆರಂಭದಲ್ಲೇ ವೇಗಕ್ಕೆ ಒತ್ತು ನೀಡಿದ ಮೊಂಟೊಯಾ ಅಂತ್ಯದವರೆಗೆ ಮುನ್ನಡೆ ಕಾಯ್ದುಕೊಂಡರು. ಎರಡು ಬಾರಿ ಸುರಕ್ಷತಾ ಕಾರ್ ಅವಧಿಗಳ ಹೊರತಾಗಿಯೂ, ವೇಗದ ಲ್ಯಾಪ್‌ಗಳೊಂದಿಗೆ ಪ್ಯಾಕ್‌ನ ಉಳಿದ ಸಮಯವನ್ನು ಹೊಂದಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಂತಿಮ ಹಂತದಲ್ಲಿ ಸೇಫ್ಟಿ ಕಾರ್​ ಅಡಿಯಲ್ಲಿ ರೇಸ್​ ಕೊನೆಗೊಳಿಸಿದರು. ಪರಿಣಾಮ ಮೊಂಟೊಯಾ ಮೊದಲ FRAC ರೇಸ್​ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದರು.

ಮುಂಬೈ ಫಾಲ್ಕನ್​ನ ಮತ್ತೋರ್ವ ರೇಸರ್ ಆರ್ಥರ್ ಲೆಕ್ಲರ್ಕ್, ಫೆರಾರಿ ಫಾರ್ಮುಲಾ ಒನ್ ತಾರೆ, ಚಾರ್ಲ್ಸ್ ಲೆಕ್ಲರ್ಕ್ ಅವರ ಕಿರಿಯ ಸಹೋದರ. ಆದರೆ ಗ್ರಿಡ್‌ನಲ್ಲಿ 5 ನೇ ಸ್ಥಾನದಿಂದ ಪ್ರಾರಂಭಿಸಿದ ನಂತರ ಪೋಡಿಯಂ ಫಿನಿಶ್ (P3) ಪಡೆಯುವಲ್ಲಿ ಯಶಸ್ವಿಯಾದರು. P2 ಫಿನಿಶ್‌ಗಾಗಿ ಸಕಲ ಪ್ರಯತ್ನ ಮಾಡಿದರೂ ಕೊನೆಯ ಹಂತದಲ್ಲಿ ಹೈಟೆಕ್ ಗ್ರ್ಯಾಂಡ್ ಪ್ರಿಕ್ಸ್ ಚಾಲಕ ಗೇಬ್ರಿಯಲ್ ಮಿನಿ ಕೆಲವು ಆಕ್ರಮಣಕಾರಿ ಚಾಲನೆಯೊಂದಿಗೆ ಯುವ ರೇಸರನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದರು. ಇನ್ನು ಗ್ರಿಡ್‌ನಲ್ಲಿ 7 ನೇ ಸ್ಥಾನದಿಂದ ಪ್ರಾರಂಭಿಸಿದ ಡಿನೋ ಬೆಗಾನೊವಿಕ್ ಅಂತಿಮವಾಗಿ 5 ನೇ ಸ್ಥಾನವನ್ನು ಪಡೆದುಕೊಂಡರು.

ರೇಸ್ 2: ರಿವರ್ಸ್ ಗ್ರಿಡ್ ನಿಯಮದ ಪ್ರಕಾರ, ಮುಂಬೈ ಫಾಲ್ಕನ್ಸ್ ಡ್ರೈವರ್ ಪ್ಯಾಕ್‌ನ ಮಧ್ಯದಲ್ಲಿ ಮೊಂಟೊಯಾ 10 ನೇ ಸ್ಥಾನದಲ್ಲಿ ಪ್ರಾರಂಭಿಸಿದರೆ, ಲೆಕ್ಲರ್ಕ್ ಮತ್ತು ಬೆಗಾನೋವಿಕ್ ಕ್ರಮವಾಗಿ 8 ಮತ್ತು 6 ನೇ ಸ್ಥಾನದಿಂದ ಡ್ರೈವ್ ಶುರು ಮಾಡಿದ್ದರು. ಆದಾಗ್ಯೂ, ಮೂವರು ಮುಂಭಾಗದ ಪ್ಯಾಕ್ ಅನ್ನು ತಲುಪಲು ಮತ್ತಷ್ಟು ವೇಗಕ್ಕೆ ಒತ್ತು ನೀಡಿದರು. ವೇಗ ಹಾಗೂ ನಿಯಂತ್ರಣದೊಂದಿಗೆ ಗಮನ ಸೆಳೆದ ಲೆಕ್ಲರ್ಕ್ ಭರ್ಜರಿ ಪೈಪೋಟಿ ನೀಡಿದರು. ಪ್ಯಾಕ್‌ನ ಮಧ್ಯದಿಂದ ಉತ್ತಮ ನಿಯಂತ್ರಣ ಹೊಂದಿದ್ದ ಡಿನೋ, ಐದನೇ ಲ್ಯಾಪ್‌ನಲ್ಲಿ ಹೊರಗಿನಿಂದ ಹಿಂದಿಕ್ಕಲು ಪ್ರಯತ್ನಿಸುತ್ತಿರುವಾಗ ಗೇಬ್ರಿಯಲ್ ಮಿನಿಯ ಕಾರಿಗೆ ಡಿಕ್ಕಿಯಾದರು. ಡಿಕ್ಕಿಯ ರಭಸಕ್ಕೆ ಚಾಲಕರಿಬ್ಬರೂ ರೇಸ್‌ನಿಂದ ಹೊರಬಿದ್ದರು. ಇದಾಗ್ಯೂ ಮೊಂಟೊಯಾ ಅದ್ಭುತ ಚಾಲನೆಯ ಮೂಲಕ ಒಂದೇ ಬಾರಿ ಎರಡು ಕಾರುಗಳನ್ನು ಹಿಂದಿಕ್ಕಿದರು. ಕೊಲಂಬಿಯಾದವರು ವಿಸ್ಕರ್ ಅವರ ಜಾಣ್ಮೆಯ ರೇಸ್​ನಿಂದ ಹಿಂದೆ ಉಳಿದರೂ ಮೊಂಟೊಯಾ ನಾಲ್ಕನೇ ಸ್ಥಾನವನ್ನು ಪಡೆದರು. ಈ ಮೂಲಕ P10 ರಿಂದ ಪ್ರಾರಂಭಿಸಿ P4 ನಲ್ಲಿ ಮುಗಿಸುವಲ್ಲಿ ಯಶಸ್ವಿಯಾದರು.

ರೇಸ್ 3: ಅಬುಧಾಬಿ ರೇಸಿಂಗ್ ನಡುವೆ ಪ್ರೇಮಾ ರೇಸ್ ಚಾಲಕ ಅಮ್ನಾ ಅಲ್ ಕ್ಯುಬೈಸಿ ಮತ್ತು ಇವಾನ್ಸ್ ಜಿಪಿ ರೇಸರ್ ಸೆಮ್ ಬೊಲುಕ್ಬಾಸಿ ಅವರು ರೇಸ್ ಅನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ರೆಡ್ ಫ್ಲ್ಯಾಗ್​ ಕಾಣಿಸುತ್ತಿದ್ದಂತೆ ಫಾಲ್ಕನ್ಸ್ ಚಾಲಕರ ವೇಗ ಸ್ವಲ್ಪಮಟ್ಟಿಗೆ ನಿಧಾನವಾಯಿತು. ಆದರೆ ಎಲ್ಲಾ ಅಡೆತಡೆಗಳ ಹೊರತಾಗಿಯೂ ಲೆಕ್ಲರ್ಕ್ ಸ್ವಲ್ಪ ಉತ್ತಮವಾಗಿಯೇ ರೇಸ್ ಮುಂದುವರೆಸಿದ್ದರು. ಆದಾಗ್ಯೂ, ಮೊನೆಗಾಸ್ಕ್ ಚಾಲಕ ಅದ್ಭುತ ಚಾಲನೆಯ ಮೂಲಕ ಚಾಂಪಿಯನ್‌ಶಿಪ್ ಅಂಕಗಳನ್ನು ಪಡೆಯಲು ಯಶಸ್ವಿಯಾದರು. ಇದರಿಂದಾಗಿ ಮೊಂಟೊಯಾ ಮತ್ತು ಬೆಗಾನೊವಿಕ್ ಕ್ರಮವಾಗಿ 10 ಮತ್ತು 11 ನೇ ಸ್ಥಾನ ಪಡೆದರು.

ಫಾರ್ಮುಲಾ 4 ರಲ್ಲಿ ಭಾರತೀಯನ ಪರಾಕ್ರಮ: ಜನವರಿ 20 ರಂದು ಯಾಸ್ ಮರೀನಾ ಸರ್ಕ್ಯೂಟ್‌ನಲ್ಲಿ ಪ್ರಾರಂಭವಾದ ಫಾರ್ಮುಲಾ 4 ಸೀರೀಸ್ ಮೂಲಕ ಭಾರತೀಯ ರೇಸಿಂಗ್ ಸೂಪರ್‌ಸ್ಟಾರ್‌ನ ಉದಯವಾಯಿತು ಎನ್ನಬಹುದು. ಹೌದು, ಸೋಹಿಲ್ ಶಾ ಸದ್ಯದ ಭಾರತದ ಅತ್ಯುತ್ತಮ ರೇಸರ್. ಫಾರ್ಮುಲಾ 4 ಯುಎಇ ಸರಣಿಯಲ್ಲಿನ ಸೀಸನ್-ಓಪನಿಂಗ್ ರೇಸ್‌ನಲ್ಲಿ ಅವರ ಪ್ರದರ್ಶನವು ಅವರ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಬೆಂಗಳೂರು ಮೂಲದ ಸೋಹಿಲ್ 27 ಯುವ F1 ಡ್ರೈವರ್‌ಗಳ ಗ್ರಿಡ್‌ನಲ್ಲಿ ಉತ್ತಮ ಜೂನಿಯರ್ ಫಾರ್ಮುಲಾ ಡ್ರೈವರ್‌ಗಳ ವಿರುದ್ಧ ರೇಸ್ 1 ಮತ್ತು ರೇಸ್ 2 ಗೆ 5 ನೇ ಅರ್ಹತೆ ಗಳಿಸಲು ಉತ್ತಮ ವೇಗವನ್ನು ಪ್ರದರ್ಶಿಸಿದ್ದರು. ಆಕ್ರಮಣಕಾರಿಯಾಗಿ ರೇಸ್ ಪ್ರಾರಂಭಿಸಿದರೂ, 1ನೇ ತಿರುವಿಗೆ ಸಿಲುಕಿದ್ದರು. ಇದಾಗ್ಯೂ ಮುಂಬೈ ಫಾಲ್ಕನ್ಸ್ ತಂಡ ಯುವ ರೇಸರ್ ಸೋಹಿಲ್ ಅಂತಿಮವಾಗಿ 10 ನೇ ಸ್ಥಾನವನ್ನು ಗಳಿಸಿದರು.

ರೇಸ್ 2 ನಲ್ಲಿ ಸೋಹಿಲ್ಆನ್-ಟ್ರ್ಯಾಕ್ ಉಲ್ಲಂಘನೆಯ ನಂತರ P8 ಗೆ ಹಿನ್ನಡೆಯನ್ನು ಎದುರಿಸಿದರು. ಇದಾಗ್ಯೂ ಬೆಂಗಳೂರಿನ ಚಾಲಕ 6ನೇ ಸ್ಥಾನಕ್ಕೆ ತಲುಪುವ ಹಾದಿಯಲ್ಲಿ ಕೆಲವು ಅದ್ಭುತ ಓವರ್‌ಟೇಕಿಂಗ್ ಮಾಡಿದರು. ಆದರೆ ಮತ್ತೊಮ್ಮೆ, ದುರದೃಷ್ಟ ಎಂಬಂತೆ ಪೆನಾಲ್ಟಿ ಮತ್ತು ಪಿಟ್‌ಲೇನ್ ಉಲ್ಲಂಘನೆಯಿಂದಾಗಿ ಅವರನ್ನು 10 ನೇ ಸ್ಥಾನಕ್ಕೆ ಇಳಿಸಲಾಯಿತು. ಇನ್ನು ರೇಸ್​ 3 ರಲ್ಲಿ ಸೋಹಿಲ್ ಶಾ P15 ಮೂಲಕ ರೇಸ್ ಮುಗಿಸಿದರು. ಇದಾಗ್ಯೂ ಗೌರವಾನ್ವಿತ ಸ್ಥಾನದಲ್ಲಿ ಮುಗಿಸಿದ ಯುವ ರೇಸರ್‌ನ ಅದ್ಭುತ ಓವರ್‌ಟೇಕಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

ಮುಂಬೈ ಫಾಲ್ಕನ್ ರೇಸಿಂಗ್ ಟೀಮ್​ನ ಒಟ್ಟಾರೆ ಪ್ರದರ್ಶನದ ಬಗ್ಗೆ ಮಾತನಾಡಿದ ಮುಂಬೈ ಫಾಲ್ಕನ್ಸ್ ಸಿಇಒ ಮೊಯಿದ್ ತುಂಗೇಕರ್ “ಇದು ತಂಡಕ್ಕೆ ನಿಜವಾಗಿಯೂ ಉತ್ತಮ ಆರಂಭವಾಗಿದೆ. ಹಲವಾರು ಯಾಂತ್ರಿಕ ಸಮಸ್ಯೆಗಳ ಮೂಲಕ ನಾವು ಉತ್ತಮ ಫಲಿತಾಂಶವನ್ನು ಪಡೆದಿದ್ದೇವೆ. ಫಾರ್ಮುಲಾ ರೀಜನಲ್‌ ಆಯೋಜನೆಗಾಗಿ ಪ್ರೇಮಾ ಪವರ್​ಟೀಮ್ ಮತ್ತು ಫಾರ್ಮುಲಾ 4 ಗಾಗಿ ಎಕ್ಸ್‌ಸೆಲ್ ಮೋಟಾರ್‌ಸ್ಪೋರ್ಟ್‌ಗೆ ನಾವು ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇವೆ. ಮುಂಬರುವ ರೇಸ್‌ಗಳಲ್ಲಿ ಹೆಚ್ಚಿನ ಯಶಸ್ಸನ್ನು ನಾವು ಎದುರು ನೋಡುತ್ತಿದ್ದೇವೆ.” ಎಂದರು.

2022 ರ ಫಾರ್ಮುಲಾ ಪ್ರಾದೇಶಿಕ ಚಾಂಪಿಯನ್‌ಶಿಪ್ ಮುಂದಿನ ರೇಸ್​ಗಳೂ ಕೂಡ ದುಬೈ ನಡೆಯಲಿದೆ. ದುಬೈ ಆಟೋಡ್ರೋಮ್‌ನಲ್ಲಿನ ಸರ್ಕ್ಯೂಟ್‌ನಲ್ಲಿ ಜನವರಿ 29 ರಿಂದ 30 ರವರೆಗೆ 3 ರೇಸಿಂಗ್ ನಡೆಯಲಿದೆ.

ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(Mumbai Falcons make flying start at 2022 Formula Regional Asian Championship)

Published On - 10:14 pm, Mon, 24 January 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ