ಮಹಿಳಾ ಏಷ್ಯಾ ಕಪ್ ಟೂರ್ನಿ 2022ರಲ್ಲಿ (Asia Cup 2022 Hockey) ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು (Indian women’s hockey team) ಚೀನಾ ವಿರುದ್ಧ 2-0 ಗೋಲುಗಳ ಅಂತರದ ಗೆಲುವು ಸಾಧಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಶರ್ಮಿಳಾ ದೇವಿ ಮತ್ತು ಗುರ್ಜಿತ್ ಕೌರ್ ಭಾರತಕ್ಕೆ ಗೋಲು ತಂದುಕೊಟ್ಟರು. 13ನೇ ನಿಮಿಷದಲ್ಲಿ ಶರ್ಮಿಳಾ ದೇವಿ (Sharmila Devi) ಹಾಗೂ 19ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸಿದರು. ಕಳೆದ ಆವೃತ್ತಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿದ್ದ ಭಾರತ ತಂಡ, ಸೆಮಿಫೈನಲ್‌ನಲ್ಲಿ ಕೊರಿಯಾ ಎದುರು ಮುಗ್ಗರಿಸುವ ಮೂಲಕ ಪ್ರಶಸ್ತಿ ಆಸೆ ಕೈಚೆಲ್ಲಿತ್ತು. ಇದೀಗ ಟೂರ್ನಿಯಲ್ಲಿ ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡಿತು. ಮೊದಲಾರ್ಧದಲ್ಲೇ 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಭಾರತೀಯ ವನಿತೆಯರು ಎರಡನೇ ಅವಧಿಯಾಟದಲ್ಲಿ ಯಾವುದೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಪಂದ್ಯದ ಆರಂಭದಿಂದಲೂ ಎರಡೂ ತಂಡಗಳು ಪರಸ್ಪರ ಆಕ್ರಮಣಕಾರಿ ಮತ್ತು ಡಿಫೆಂಡಿಂಗ್ ಕೌಶಲ್ಯ ಪ್ರದರ್ಶಿಸುವುದರೊಂದಿಗೆ ಗೋಲು ಬಾರಿಸಲು ರೋಚಕ ಹೋರಾಟ ನಡೆಸಿದವು. ಸಂಭಾವ್ಯ ಗೋಲು ಗಳಿಸುವ ಅವಕಾಶ ಮತ್ತು ಪೆನಾಲ್ಟಿ ಕಾರ್ನರ್ ಅವಕಾಶ ಗಿಟ್ಟಿಸಿಕೊಂಡಿದ್ದವು. ಆದರೆ ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದವು. ಆರಂಭದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ಗಳು ಲಭಿಸತೊಡಗಿದವು. 13ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಅವರ ಫ್ಲಿಕ್ ಚೀನಾ ಡಿಫೆಂಡರ್‌ಗಳ ಸ್ಟಿಕ್‌ಗೆ ಬಡಿದು ವಾಪಸ್ ಬಂತು. ಶರ್ಮಿಳಾ ದೇವಿ ಚೆಂಡನ್ನು ನಿಯಂತ್ರಿಸಿ ವಾಪಸ್ ಗುರಿಯತ್ತ ತಳ್ಳಿದರು. ಈ ಮೂಲಕ ತಂಡಕ್ಕೆ ಮುನ್ನಡೆ ಲಭಿಸಿತು.
The ? medal comes home! ??
Not the end we envisioned, but, nonetheless, a fighting display from our #TeamInBlue and we end the tournament on a high! ???#IndiaKaGame #WAC2022 pic.twitter.com/bBBvsXC5V5
— Hockey India (@TheHockeyIndia) January 28, 2022
ದ್ವಿತೀಯ ಕ್ವಾರ್ಟರ್‌ನಲ್ಲೂ ಭಾರತ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಯಿತು. ಸತತ ಆಕ್ರಮಣ ನಡೆಸಿದ ತಂಡ ಎದುರಾಳಿಗಳ ರಕ್ಷಣಾ ವಿಭಾಗದಲ್ಲಿ ಆತಂಕ ಸೃಷ್ಟಿಸಿತು. ಅನುಭವಿ ಆಟಗಾರ್ತಿ ಗುರ್ಜಿತ್ ಕೌರ್ (19ನೇ ನಿಮಿಷ) ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿ ತಂಡದ ಗೋಲಿನ ಅಂತರ ಹಿಗ್ಗಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರ ಅಬ್ಬರಕ್ಕೆ ಚೀನಾ ಆಟಗಾರ್ತಿಯರು ಬ್ರೇಕ್ ಹಾಕಿದರು. ಆದರೆ ಫಲ ಕಾಣಲಿಲ್ಲ. ಪಂದ್ಯ ಮುಗಿಯಲು 10 ನಿಮಿಷ ಇದ್ದಾಗ ಚೀನಾಗೆ ಪೆನಾಲ್ಟಿ ಅವಕಾಶ ಲಭಿಸಿತ್ತು. ಆದರೆ ಭಾರತದ ಡಿಫೆಂಡರ್‌ಗಳು ಭದ್ರ ಕೋಟೆಯಂತೆ ನಿಂತು ಚೆಂಡನ್ನು ತಡೆದರು. ಈ ಗೆಲುವಿನೊಂದಿಗೆ 2022 ರ ಮಹಿಳಾ ಏಷ್ಯಾ ಕಪ್‌ನಲ್ಲಿ ಸವಿತಾ ಪಡೆ ಮೂರನೇ ಸ್ಥಾನ ಗಳಿಸಿ, ಕಂಚಿನ ಪದಕ ಪಡೆದುಕೊಂಡಿದೆ.
ಜಪಾನ್‌ಗೆ ಏಷ್ಯಾಕಪ್ ಕಿರೀಟ:
ಅಂತಿಮವಾಗಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಜಪಾನ್ ತಂಡ 4-2 ರಿಂದ ಕೊರಿಯಾ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
Pro Kabaddi: ತಮಿಳ್ ತಲೈವಾಸ್ ವಿರುದ್ಧ ಪ್ರಚಂಡ ಗೆಲುವು ಸಾಧಿಸಿ ಎರಡನೇ ಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್