2023 ರ ಏಷ್ಯನ್ ಗೇಮ್ಸ್‌ನ (Asian Games) ಶೂಟಿಂಗ್‌ನಲ್ಲಿ ಭಾರತದ ಉತ್ತಮ ಆಟ ಮುಂದುವರೆದಿದೆ. ಇಶಾ ಸಿಂಗ್ ಎರಡನೇ ಸ್ಥಾನ ಗಳಿಸಿ ಬೆಳ್ಳಿಯನ್ನು ತಂದುಕೊಟ್ಟರೆ, ಪಾಲಕ್ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್‌ನಲ್ಲಿ ಭಾರತಕ್ಕೆ ಇದು ಡಬಲ್ ಧಮಾಕ ಎನ್ನಬಹುದು. 18 ವರ್ಷದ ಪಾಲಕ್ ಶುಕ್ರವಾರ 241.2 ಗೆಲುವಿನ ಸ್ಕೋರ್‌ನೊಂದಿಗೆ ಚಿನ್ನದ ಪದಕ ತಮ್ಮದಾಗಿಸಿದು. ಹ್ಯಾಂಗ್‌ಝೌನಲ್ಲಿ ಭಾರತಕ್ಕೆ ಸಿಕ್ಕ ಎಂಟನೇ ಚಿನ್ನ ಇದಾಗಿದೆ.
ಇನ್ನು ಸಾಕೇತ್ ಮೈನೇನಿ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಏಷ್ಯನ್ ಗೇಮ್ಸ್ 2023 ರ ಟೆನಿಸ್ ಪುರುಷರ ಡಬಲ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇಂದು ನಡೆದ ಪಂದ್ಯದಲ್ಲಿ, ತೈವಾನ್‌ನ ಜೋಡಿಯಾದ ಜೇಸನ್ ಜಂಗ್ ಮತ್ತು ಯು-ಹ್ಸಿಯು ಹ್ಸು ವಿರುದ್ಧ 6-4, 6-4 ರಿಂದ ಸೋತು ಚಿನ್ನ ಗೆಲ್ಲುವಲ್ಲಿ ಎಡವಿ ಬೆಳ್ಳಿ ತಮ್ಮದಾಗಿಸಿದರು.
ಏಷ್ಯನ್ ಗೇಮ್ಸ್ನಲ್ಲಿ ಮತ್ತೊಂದು ಚಿನ್ನ: ಪುರುಷರ 50m ರೈಫಲ್ನಲ್ಲಿ ಭಾರತಕ್ಕೆ ಬಂಗಾರ
ತೈವಾನ್ ಭಾರತಕ್ಕೆ ಕಠಿಣ ಪೈಪೋಟಿ ನೀಡಿತು. ಒಂದೇ ಒಂದು ಅವಕಾಶವನ್ನು ನೀಡದ ಮಟ್ಟಿಗೆ ಪ್ರಾಬಲ್ಯ ಸಾಧಿಸಿತು. ತೈವಾನ್ ತನ್ನ ಮೊದಲ ಸರ್ವ್‌ಗಳಿಂದ (30 ರಲ್ಲಿ 26) 86.67 ರ ಗೆಲುವಿನ ಶೇಕಡಾವನ್ನು ಹೊಂದಿತ್ತು. ಮತ್ತೊಂದೆಡೆ, ಭಾರತವು 35 ಪಾಯಿಂಟ್‌ಗಳಲ್ಲಿ 31 ಅನ್ನು ಗೆದ್ದುಕೊಂಡಿತು. ಸೆಕೆಂಡ್ ಸರ್ವ್‌ಗಳಲ್ಲಿನ ತೈವಾನ್ ಶೇಕಡಾ 77.78 ಅಂಕಗಳನ್ನು (18 ರಲ್ಲಿ 14) ಗೆದ್ದರೆ ಭಾರತವು 38.09 (21 ರಲ್ಲಿ 8) ಗೆದ್ದಿತಷ್ಟೆ.
ಇಂದು ಮುಂಜಾನೆ ಭಾರತದ ಐಶ್ವರಿ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಅವರ 50 ಮೀಟರ್ ರೈಫಲ್ 3Ps ಪುರುಷರ ತಂಡವು ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಭಾರತವು 1769 ರ ಅತ್ಯುತ್ತಮ ಸ್ಕೋರ್ ಗಳಿಸಿತು. ಕಳೆದ ವರ್ಷ ಪೆರುವಿನಲ್ಲಿ USA ಯ ಹಿಂದಿನ ದಾಖಲೆಯನ್ನು ಎಂಟು ಅಂಕಗಳಿಂದ ಪುಗಟ್ಟಿದ ಸಾಧನೆ ಕೂಡ ಮಾಡಿತು. ಚೀನಾ 1763 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದಕೊಂಡರೆ, ರಿಪಬ್ಲಿಕ್ ಆಫ್ ಕೊರಿಯಾ 1748 ಅಂಕಗಳೊಂದಿಗೆ ಕಂಚಿನ ಪದಕವನ್ನು ಗಳಿಸಿತು. ಸ್ವಪ್ನಿಲ್ ಮತ್ತು ಐಶ್ವರಿ ಇಬ್ಬರೂ ಅರ್ಹತಾ ಈವೆಂಟ್‌ನಲ್ಲಿ ಒಂದೇ ರೀತಿಯ 591 ಸ್ಕೋರ್‌ಗಳನ್ನು ಗಳಿಸಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ