AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್ ಅಭ್ಯಾಸ ಪಂದ್ಯಕ್ಕಾಗಿ ಗುವಾಹಟಿಗೆ ಬಂದ ಟೀಮ್ ಇಂಡಿಯಾ: ವಿಡಿಯೋ ನೋಡಿ

Team India touch down Guwahati: ವಿಶ್ವಕಪ್‌ನ ಆರಂಭಿಕ ಪಂದ್ಯಕ್ಕೂ ಮುನ್ನ ರೋಹಿತ್ ಪಡೆ ಎರಡು ಅಭ್ಯಾಸ ಪಂದ್ಯಗಳನ್ನು ಆಡಲು ಸಜ್ಜಾಗಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ ಮತ್ತು ಅಕ್ಟೋಬರ್ 3 ರಂದು ನೆದರ್ಲೆಂಡ್ಸ್ ವಿರುದ್ಧ ತಮ್ಮ ಅಂತಿಮ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ವಿಶ್ವಕಪ್ ಅಭ್ಯಾಸ ಪಂದ್ಯಕ್ಕಾಗಿ ಗುವಾಹಟಿಗೆ ಬಂದ ಟೀಮ್ ಇಂಡಿಯಾ: ವಿಡಿಯೋ ನೋಡಿ
Kohli, Rohit and Bumrah
Vinay Bhat
| Edited By: |

Updated on:Sep 29, 2023 | 2:58 PM

Share

ಐಸಿಸಿ ಏಕದಿನ ವಿಶ್ವಕಪ್ (ICC World Cup) ಅಭ್ಯಾಸ ಪಂದ್ಯಗಳಿಗೆ ಮುನ್ನ ಟೀಮ್ ಇಂಡಿಯಾ ಗುವಾಹಟಿಗೆ ಆಗಮಿಸಿದೆ. ಭಾರತೀಯ ಆಟಗಾರರು ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಭಾರತ ತಂಡಕ್ಕೆ ಜೈಕಾರ ಹಾಕಿದರು. ಗಾಯಗೊಂಡಿರುವ ಅಕ್ಷರ್ ಪಟೇಲ್ ಬದಲಿಗೆ ಅಂತಿಮ ವಿಶ್ವಕಪ್ ತಂಡದಲ್ಲಿ ಸೇರ್ಪಡೆಗೊಂಡಿರುವ ರವಿಚಂದ್ರನ್ ಅಶ್ವಿನ್ ಕೂಡ ಮೆನ್ ಇನ್ ಬ್ಲೂ ಜೊತೆ ಗುವಾಹಟಿಗೆ ಪ್ರಯಾಣ ಬೆಳೆಸಿದರು.

ಏತನ್ಮಧ್ಯೆ, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಇಂದು ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್‌ನ ಆರಂಭಿಕ ಪಂದ್ಯಕ್ಕೂ ಮುನ್ನ ರೋಹಿತ್ ಪಡೆ ಎರಡು ಅಭ್ಯಾಸ ಪಂದ್ಯಗಳನ್ನು ಆಡಲು ಸಜ್ಜಾಗಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ ಮತ್ತು ಅಕ್ಟೋಬರ್ 3 ರಂದು ನೆದರ್ಲೆಂಡ್ಸ್ ವಿರುದ್ಧ ತಮ್ಮ ಅಂತಿಮ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಇದು ತಿರುವನಂತಪುರಂನಲ್ಲಿ ನಡೆಯಲಿದೆ.

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅತ್ಮೀಯ ಸ್ವಾಗತ ಸಿಕ್ಕಿದ್ದರೂ ಭಾರತವನ್ನು ಶತ್ರು ರಾಷ್ಟ್ರವೆಂದ ಪಿಸಿಬಿ ಅಧ್ಯಕ್ಷ

ಟೀಮ್ ಇಂಡಿಯಾ ಗುವಾಹಟಿಗೆ ಆಗಮಿಸಿದ ವಿಡಿಯೋ:

ಅತ್ತ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ನಿನ್ನೆ ಸಂಜೆ ಮುಂಬೈಗೆ ಬಂದಿಳಿದು ಮಧ್ಯರಾತ್ರಿ ಗುವಾಹಟಿ ತಲುಪಿದೆ. ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳು ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಲಿವೆ ಎಂದು ವರದಿಯಾಗಿದೆ.

ಅಕ್ಷರ್ ಜಾಗಕ್ಕೆ ಅಶ್ವಿನ್

2023 ರ ವಿಶ್ವಕಪ್‌ಗೆ ಮುಂಚಿತವಾಗಿ ಟೀಮ್ ಇಂಡಿಯಾ ದೊಡ್ಡ ಬದಲಾವಣೆ ಮಾಡಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಗಾಯದಿಂದ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ವಿಫಲರಾದ ಕಾರಣ ರವಿಚಂದ್ರನ್ ಅಶ್ವಿನ್ ಅವರನ್ನು ಇವರ ಜಾಗಕ್ಕೆ ಸೇರಿಸಲಾಗಿದೆ. ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಆದರು. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.

2023ರ ವಿಶ್ವಕಪ್‌ಗೆ ಭಾರತ ತಂಡ

ಬ್ಯಾಟರ್ಸ್: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್.

ವಿಕೆಟ್ ಕೀಪರ್ಸ್: ಇಶಾನ್ ಕಿಶನ್, ಕೆಎಲ್ ರಾಹುಲ್.

ಸೀಮ್ ಆಲ್‌ ರೌಂಡರ್ಸ್: ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶಾರ್ದೂಲ್ ಠಾಕೂರ್.

ಸ್ಪಿನ್ ಆಲ್ ರೌಂಡರ್ಸ್: ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್.

ಸೀಮರ್‌ಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಸ್ಪಿನ್ನರ್: ಕುಲ್ದೀಪ್ ಯಾದವ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:24 am, Fri, 29 September 23