
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಬ್ಯಾಡ್ಮಿಂಟನ್ನಲ್ಲಿ ಕನ್ನಡಿಗ ಸುಹಾಸ್ ಅವರು ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ನಾಳೆ ಫ್ರಾನ್ಸ್ನ ಲೂಕಸ್ ಮಜೂರ್ ವಿರುದ್ಧ ಫೈನಲ್ ಹಣಾಹಣಿ ಕಾದಾಟ ನಡೆಸಲಿದ್ದು, ಈ ಮೂಲಕ ಪದಕವನ್ನು ಖಚಿತ ಪಡಿಸಿದ್ದಾರೆ.
ಎಲ್.ವೈ.ಸುಹಾಸ್ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು. ಸದ್ಯ ಉತ್ತರಪ್ರದೇಶದ ನೋಯ್ಡಾ ಡಿಸಿ ಆಗಿ ಸುಹಾಸ್ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಪುರುಷರ ಬ್ಯಾಡ್ಮಿಂಟನ್ ಎಸ್ಎಲ್4 ವಿಭಾಗದಲ್ಲಿ ಸೆಮಿಫೈನಲ್ ಮುಖಾಮುಖಿಯಲ್ಲಿ ಯತಿರಾಜ್, ಎದುರಾಳಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು. ಒಟ್ಟು 31 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಐಎಎಸ್ ಅಧಿಕಾರಿ ಸುಹಾಸ್ ಆಗಿದ್ದಾರೆ. ಈ ಮೊದಲು ಬ್ಯಾಡ್ಮಿಂಟನ್ ಪುರುಷರ ಎಸ್ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್ಗೆ ಪ್ರವೇಶಿಸಿದ್ದಾರೆ. ಏತನ್ಮಧ್ಯೆ ಬ್ಯಾಡ್ಮಿಂಟನ್ ಪುರುಷರ ಎಸ್ಎಲ್3 ಸೆಮಿಫೈನಲ್ ಪಂದ್ಯದಲ್ಲಿ ಮನೋಜ್ ಸರ್ಕಾರ್ ಸೋಲು ಅನುಭವಿಸಿದ್ದಾರೆ. ಆದರೂ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.
ಇನ್ನೂ ಟೋಕಿಯೊದಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರಿದಿದೆ. ಇಂದು ಭಾರತ ದಿನದ ಆರಂಭದಲ್ಲೇ ಎರಡು ಪದಕ ಬಾಜಿದ್ದು, P4 ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್ರಾಜ್ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.
19 ವರ್ಷ ಪ್ರಾಯದ ಮನೀಶ್ ವಿಶ್ವ ದಾಖಲೆಯ 218.2 ಪಾಯಿಂಟ್ನೊಂದಿಗೆ ಚಿನ್ನದ ಪದಕ ಗೆದ್ದರು. ಸಿಂಗ್ರಾಜ್ 216.7 ಪಾಯಿಂಟ್ನೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ತಮ್ಮದಾಗಿಸಿದರು. ಪ್ಯಾರಾಲಿಂಪಿಕ್ಸ್ 2020 ರಲ್ಲಿ ಇದು ಸಿಂಗ್ರಾಜ್ಗೆ ಸಿಗುತ್ತಿರುವ ಎರಡನೇ ಪದಕವಾಗಿದೆ. ಭಾರತೀಯರಿಗೆ ಪ್ರಬಲ ಪೈಪೋಟಿ ನೀಡಿದ್ದ ರಷ್ಯಾದ ಶೂಟರ್ ಸೆರ್ಗೆ, 196.8 ಅಂಕ ಗಳಿಸುವುದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳಿವೆ.
Rohit Sharma: ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ-ಉಮೇಶ್ ಯಾದವ್
(Indias Suhas Yathiraj enter final of mens singles class SL4 badminton event in Tokyo Paralympics)
Published On - 10:46 am, Sat, 4 September 21