Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಚಿನ್ನ: ಶೂಟಿಂಗ್​ನಲ್ಲಿ ಮನೀಶ್- ಸಿಂಗ್​ರಾಜ್​ಗೆ ಪದಕ

ಭಾರತ ದಿನದ ಆರಂಭದಲ್ಲೇ ಎರಡು ಪದಕ ಬಾಜಿದ್ದು, P4​​​ ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್​ರಾಜ್​ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಚಿನ್ನ: ಶೂಟಿಂಗ್​ನಲ್ಲಿ ಮನೀಶ್- ಸಿಂಗ್​ರಾಜ್​ಗೆ ಪದಕ
manish narwal

ಟೋಕಿಯೊದಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ (Tokyo Paralympics) ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರಿದಿದೆ. ಇಂದು ಭಾರತ ದಿನದ ಆರಂಭದಲ್ಲೇ ಎರಡು ಪದಕ ಬಾಜಿದ್ದು, P4​​​ ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್​ರಾಜ್​ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

19 ವರ್ಷ ಪ್ರಾಯದ ಮನೀಶ್ ವಿಶ್ವ ದಾಖಲೆಯ 218.2 ಪಾಯಿಂಟ್​ನೊಂದಿಗೆ ಚಿನ್ನದ ಪದಕ ಗೆದ್ದರು. ಸಿಂಗ್​ರಾಜ್ 216.7 ಪಾಯಿಂಟ್​ನೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ತಮ್ಮದಾಗಿಸಿದರು. ಪ್ಯಾರಾಲಿಂಪಿಕ್ಸ್ 2020 ರಲ್ಲಿ ಇದು ಸಿಂಗ್​ರಾಜ್​ಗೆ ಸಿಗುತ್ತಿರುವ ಎರಡನೇ ಪದಕವಾಗಿದೆ. ಭಾರತೀಯರಿಗೆ ಪ್ರಬಲ ಪೈಪೋಟಿ ನೀಡಿದ್ದ ರಷ್ಯಾದ ಶೂಟರ್​ ಸೆರ್ಗೆ, 196.8 ಅಂಕ ಗಳಿಸುವುದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್​ನಲ್ಲಿ ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್ ಹೆಚ್ 1 ವಿಭಾಗದಲ್ಲಿ ಮನೀಶ್ 533-7x ಮತ್ತು ಸಿಂಗರಾಜ್ 536-4x ಅಂಕಗಳೊಂದಿಗೆ ಫೈನಲ್ ಗೇರಿದ್ದರು. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಗಳಿಕೆ 15ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳಿವೆ.

 

ಇತ್ತ ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪುರುಷರ ಸಿಂಗಲ್ಸ್ ಎಸ್ ಎಲ್ 3 ಸೆಮಿ ಫೈನಲ್ ಪಂದ್ಯದಲ್ಲಿ ಪ್ರಮೋದ ಭಗತ್ ಜಪಾನ್ ನ ಡೈಸುಕೆ ಫುಜಿಹಾರ ಅವರನ್ನು 21-11, 21-16 ರಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು. ಬ್ಯಾಡ್ಮಿಂಟನ್ ನಲ್ಲಿ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಪಾದಾರ್ಪಣೆ ಮಾಡುತ್ತಿರುವುದರಿಂದ, ಭಗತ್ ಈಗಾಗಲೇ ಫೈನಲ್ ಹೆಜ್ಜೆ ಇಟ್ಟಿರುವುದರಿಂದ ದೇಶಕ್ಕೆ ಬೆಳ್ಳಿ ಪದಕದ ಭರವಸೆ ನೀಡಿದ್ದಾರೆ.

Read Full Article

Click on your DTH Provider to Add TV9 Kannada