AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PKL 8: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 100ನೇ ಪಂದ್ಯದಲ್ಲಿ ಗೆದ್ದು ಬೀಗಿದ ಜೈಪುರ್‌ ಪಿಂಕ್ ಪ್ಯಾಂಥರ್ಸ್

Pro Kabaddi: ಸೋಮವಾರ ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್‌ ಹೋಟೆಲ್‌ ಆವರಣದಲ್ಲಿ ನಡೆದ ಪಂದ್ಯದಲ್ಲಿ ಜೈಪುರ್‌ ಪಿಂಕ್ ಪ್ಯಾಂಥರ್ಸ್ 36-31ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಜಯ ಗಳಿಸಿತು. ದೀಪಕ್ ನಿವಾಸ್ ಹೂಡಾ 'ಸೂಪರ್‌' ಆಟವಾಡಿ ಜೈಪುರ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 100ನೇ ಪಂದ್ಯ ಎಂಬುದು ವಿಶೇಷವಾಗಿತ್ತು.

PKL 8: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ 100ನೇ ಪಂದ್ಯದಲ್ಲಿ ಗೆದ್ದು ಬೀಗಿದ ಜೈಪುರ್‌ ಪಿಂಕ್ ಪ್ಯಾಂಥರ್ಸ್
Jaipur Pink Panthers defeats Gujarat Giants
TV9 Web
| Edited By: |

Updated on: Feb 08, 2022 | 7:26 AM

Share

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ರೋಚಕ ಘಟ್ಟಕ್ಕೆ ತಲುಪುತ್ತಿದೆ. ಉಭಯ ತಂಡಗಳಿಗೆ ಪ್ರತಿ ಪಂದ್ಯವು ಮಹತ್ವದ್ದೆನಿಸಿವೆ. ಹೀಗಿರುವಾಗ ಸೋಮವಾರ ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್‌ ಹೋಟೆಲ್‌ ಆವರಣದಲ್ಲಿ ನಡೆದ ಪಂದ್ಯದಲ್ಲಿ ಜೈಪುರ್‌ ಪಿಂಕ್ ಪ್ಯಾಂಥರ್ಸ್ 36-31ರಲ್ಲಿ ಗುಜರಾತ್ ಜೈಂಟ್ಸ್ (Jaipur Pink Panthers vs Gujarat Giants) ವಿರುದ್ಧ ಜಯ ಗಳಿಸಿತು. ದೀಪಕ್ ನಿವಾಸ್ ಹೂಡಾ (Deepak Nivas Hooda) ಸೂಪರ್‌ ಆಟವಾಡಿ ಜೈಪುರ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 100ನೇ ಪಂದ್ಯ ಎಂಬುದು ವಿಶೇಷವಾಗಿತ್ತು. ಆರಂಭದಲ್ಲಿ ಉಭಯ ತಂಡಗಳು ಸಮಬಲದ ಪೈಪೋಟಿ ನೀಡಿದವು. ನಂತರ ಜೈಪುರ್‌ ನಿಧಾನಕ್ಕೆ ಆಧಿಪತ್ಯ ಸಾಧಿಸಿತು. ಪಂದ್ಯದ ಆರಂಭದಲ್ಲಿಯೇ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಅರ್ಜುನ್ ದೇಶ್ವಾಲ್ ಮತ್ತು ದೀಪಕ್ ಹೂಡಾ ಯಶಸ್ವಿ ರೈಡ್ ಮಾಡುವ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡರು. ಅತ್ತ ಅಜಯ್ ಕುಮಾರ್ ಮತ್ತು ಪರ್ದೀಪ್ ಕುಮಾರ್ ಉತ್ತಮ ರೈಡ್ ಮೂಲಕ ಗುಜರಾತ್ ಜೈಂಟ್ಸ್ ತಂಡ ನಿಧಾನವಾಗಿ ಖಾತೆ ತೆರೆಯಿತು.

ಆದರೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ರೈಡರ್ಸ್ ಮುಂದೆ ಮಂಕಾದ ಗುಜರಾತ್ ಜೈಂಟ್ಸ್ ಮಧ್ಯಂತರಕ್ಕೆ 1 ನಿಮಿಷ ಬಾಕಿ ಇರುವಾಗ ಆಲ್ ಔಟ್ ಆಯಿತು. ಹೀಗೆ ಮಧ್ಯಂತರಕ್ಕೆ ಸರಿಯಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ ಗುಜರಾತ್ ಜೈಂಟ್ಸ್ ವಿರುದ್ಧ 20 – 14 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿತು. ವಿರಾಮದ ನಂತರವೂ ಪಂದ್ಯ ಮೊದಲಾರ್ಧದ ರೀಯಲ್ಲೇ ಸಾಗಿತು. ಕೊನೆಯ ಹಂತದಲ್ಲಿ ಗುಜರಾತ್ ಸಮಬಲ ಸಾಧಿಸಿತು. ಆದರೆ ಪರಿಸ್ಥಿತಿಯನ್ನು ನಿಭಾಯಿಸಿದ ಜೈಪುರ್‌ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

ಪಂದ್ಯದುದ್ದಕ್ಕೂ ರೇಡಿಂಗ್‌ನಲ್ಲಿ ಮಿಂಚಿದ ದೀಪಕ್ 10 ಟಚ್ ಪಾಯಿಂಟ್ ಗಳಿಸಿದರು. ಒಂದು ಟ್ಯಾಕಲ್ ಪಾಯಿಂಟ್ ಕೂಡ ಅವರ ಪಾಲಾಯಿತು. ರೇಡಿಂಗ್‌ನಲ್ಲಿ ಅರ್ಜುನ್ ದೇಶ್ವಾಲ್ ಕೂಡ ಮಿಂಚಿದರು. ಅವರು 6 ಟಚ್ ಪಾಯಿಂಟ್‌ಗಳೊಂದಿಗೆ ಏಳು ಪಾಯಿಂಟ್ ಕಲೆ ಹಾಕಿದರು. ಸಂದೀಪ್ ಧುಳ್, ದೀಪಕ್ ಸಿಂಗ್ ಮತ್ತು ವಿಶಾಲ್ ಕೂಡ ತಂಡಕ್ಕೆ ಕಾಣಿಕೆ ನೀಡಿದರು. ಗುಜರಾತ್‌ ಜೈಂಟ್ಸ್‌ಗಾಗಿ ರಾಕೇಶ್ ನರ್ವಾಲ್ ಎಂಟು ಪಾಯಿಂಟ್ ಗಳಿಸಿದರು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ ಜೈಪುರ್ ಪಿಂಕ್ ಪ್ಯಾಂಥರ್ಸ್ ಪ್ಲೇ ಆಫ್ ಪ್ರವೇಶಿಸುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯ 101ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವೆ ಸೆಣಸಾಟ ನಡೆದಿದ್ದು, ಪಂದ್ಯ 32 – 32 ಅಂಕಗಳೊಂದಿಗೆ ಡ್ರಾ ಆಯಿತು. ಅಂಕಿತ್ ಬೇನಿವಾಲ್‌ (9 ಪಾಯಿಂಟ್ಸ್) ಮತ್ತು ರಜನೀಶ್‌ (7 ಪಾಯಿಂಟ್ಸ್‌) ಅವರ ಭರ್ಜರಿ ಆಟದ ನೆವಿನಿಂದ ಆರಂಭದಲ್ಲಿ ಮುನ್ನಡೆ ಸಾಧಿಸಿದ ಟೈಟನ್ಸ್ ಜಯದ ಭರವಸೆಯಲ್ಲಿತ್ತು. ಆದರೆ ನಾಯಕ ಮಣಿಂದರ್ ಸಿಂಗ್ (11) ಮತ್ತು ಮನೋಜ್ ಗೌಡ (6) ಅಮೋಘ ಆಟದ ಮೂಲಕ ಬೆಂಗಾಲ್​ಗೆ ತಿರುಗೇಟು ನೀಡಿದರು.

IND vs WI: ಎರಡನೇ ಏಕದಿನ ಪಂದ್ಯಕ್ಕೆ ಇಶಾನ್ ಡೌಟ್.. ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು?

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ