ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್ ಯತಿರಾಜ್​ಗೆ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ ಅಭಿನಂದನೆ

| Updated By: Vinay Bhat

Updated on: Sep 05, 2021 | 11:08 AM

Suhas Yathiraj: ಸುಹಾಸ್ ಯತಿರಾಜ್ ಪುರುಷರ ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಅಗ್ರ ಶ್ರೇಯಾಂಕದ ಫ್ರಾನ್ಸ್ ಆಟಗಾರ ಲುಕಾಸ್ ಮಝೂರ್ ಅವರ ವಿರುದ್ಧ ತೀವ್ರ ಹೋರಾಟ ನೀಡಿದ ಹೊರತಾಗಿಯೂ 1-2 ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್ ಯತಿರಾಜ್​ಗೆ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ ಅಭಿನಂದನೆ
ಬೆಳ್ಳಿ ಪದಕ ವಿಜೇತ ಸುಹಾಸ್
Follow us on

ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್​ಎಲ್ 4 ಫೈನಲ್ ಪಂದ್ಯದಲ್ಲಿ ಭಾರತದ ಐಎಎಸ್ ಅಧಿಕಾರಿ ಹಾಗೂ ನೊಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಹೊಸ ಇತಿಹಾಸ ನಿರ್ಮಿಸಿರುವ ಸುಹಾಸ್ ಸಾಧನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿರುವ ಬೊಮ್ಮಾಯಿ, “ಕರ್ನಾಟಕದಲ್ಲಿ ಜನಿಸಿದ ಐಎಎಸ್ ಅಧಿಕಾರಿಯೊಬ್ಬರು ಸೇವೆಯಲ್ಲಿ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಮತ್ತು ನಮ್ಮ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ನಮಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.

 

ಸುಹಾಸ್ ಯತಿರಾಜ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದಿಸಿದ್ದಾರೆ. ಐಎಎಸ್ ಅಧಿಕಾರಿಯೂ ಆಗಿರುವ ಸುಹಾಸ್ ಅವರನ್ನು ಸೇವೆ ಮತ್ತು ಕ್ರೀಡೆ ಎರಡರ ಅತ್ಯುತ್ತಮ ಸಂಗಮ ಎಂದು ಬಣ್ಣಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ “ಸುಹಾಸ್ ಯತಿರಾಜ್ ಕ್ರೀಡಾ ಪ್ರದರ್ಶನದ ಮೂಲಕ ನಮ್ಮ ಇಡೀ ದೇಶದ ಗಮನ ಸೆಳೆದಿದ್ದಾರೆ. ಸೇವೆ ಮತ್ತು ಕ್ರೀಡೆಯ ಅದ್ಭುತ ಸಂಗಮ. ಬ್ಯಾಡ್ಮಿಂಟನ್​ನಲ್ಲಿ ಬೆಳ್ಳಿಯ ಪದಕ ಗೆದ್ದಿರುವ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ” ಎಂದಿದ್ದಾರೆ.

 

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, “ವಿಶ್ವದ ನಂ.1 ಆಟಗಾರನಿಗೆ ತೀವ್ರ ಪೈಪೋಟಿ ನೀಡಿ, ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸುಹಾಸ್ ಯತಿರಾಜ್​ಗೆ ಅಭಿನಂದನೆಗಳು. ನಾಗರಿಕ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತ ಕ್ರೀಡೆಯಲ್ಲೂ ಮಾಡಿರುವ ಸಾಧನೆ ಅಸಾಧಾರಣವಾದುದು” ಎಂದಿದ್ದಾರೆ.

 

ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ ಕನ್ನಡಿಗ ಸುಹಾಸ್ ಯತಿರಾಜ್, ಪುರುಷರ ಬ್ಯಾಡ್ಮಿಂಟನ್ (ಎಸ್ಎಲ್–4) ಫೈನಲ್​ನಲ್ಲಿ ಅಗ್ರ ಶ್ರೇಯಾಂಕದ ಫ್ರಾನ್ಸ್ ಆಟಗಾರ ಲುಕಾಸ್ ಮಝೂರ್ ಅವರ ವಿರುದ್ಧ ತೀವ್ರ ಹೋರಾಟ ನೀಡಿದ ಹೊರತಾಗಿಯೂ 1-2 (21-15, 17-21, 15-21) ಅಂತರದಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಎಲ್.ವೈ.ಸುಹಾಸ್ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು. ಸದ್ಯ ಉತ್ತರಪ್ರದೇಶದ ನೋಯ್ಡಾ ಡಿಸಿ ಆಗಿ ಸುಹಾಸ್ ಸೇವೆ ಸಲ್ಲಿಸುತ್ತಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಐಎಎಸ್ ಅಧಿಕಾರಿ ಸುಹಾಸ್ ಆಗಿದ್ದಾರೆ. ಕರ್ನಾಟಕದ ಹಾಸನದಲ್ಲಿ 1983ರ ಜುಲೈ 2ರಂದು ಹುಟ್ಟಿದ ಸುಹಾಸ್ ಇಂಜಿನಿಯರ್ ಪದವೀಧರರು. ಸುರತ್ಕಲ್ ನ ಎನ್‌ಐಟಿಕೆ ಯಿಂದ ಕಂಪ್ಯೂಟರ್ ಎಂಜಿನಿಯರ್ ಆಗಿ ಪದವಿ ಪಡೆದಿರುವ ಸುಹಾಸ್, ಈ ಹಿಂದೆ ಪ್ರಯಾಗರಾಜ್, ಆಗ್ರಾ, ಅಝಮ್‌ಗಡ, ಜೌನ್‌ಪುರ, ಸೋನ್‌ಭದ್ರಾ ಜಿಲ್ಲೆಗಳ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ.

Virat Kohli: ರೋಹಿತ್ ಶರ್ಮಾ ಶತಕ ಹೊಡೆಯುತ್ತಿದ್ದಂತೆ ವಿರಾಟ್ ಕೊಹ್ಲಿಯ ರಿಯಾಕ್ಷನ್ ವಿಡಿಯೋ ವೈರಲ್

Tokyo Paralympics: ಭಾರತಕ್ಕೆ 5ನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಕೃಷ್ಣ ನಗರ್​ಗೆ ರೋಚಕ ಗೆಲುವು

(Karnatak CM basavaraj bommai Prime Minister Narendra Modi congratulated Suhas Yathiraj on his Tokyo Paralympics silver)