ಇತ್ತೀಚೆಗಷ್ಟೆ ಮುಕ್ತಾಯಗೊಂಡ ಟೊಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಐತಿಹಾಸಿಕ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಅದರ ವಿಡಿಯೋ ಭರ್ಜರಿ ವೈರಲ್ ಆಗಿದೆ. ಈ ಹೊಸ ಜಾಹೀರಾತಿನಲ್ಲಿ ನೀರಜ್ ಅವರ ನಟನಾ ಕೌಶಲ ಸಾಕಷ್ಟು ಗಮನ ಸೆಳೆದಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ವೇದಿಕೆಯಾಗಿರುವ ಬೆಂಗಳೂರು ಮೂಲದ ‘ಕ್ರೆಡ್’ (Cred) ಕಂಪನಿಯ ಹೊಸ ಜಾಹೀರಾತಿನಲ್ಲಿ 23 ವರ್ಷದ ನೀರಜ್ ಕಾಣಿಸಿಕೊಂಡಿದ್ದಾರೆ. ವಿವಿಧ ಅವತಾರಗಳಲ್ಲಿ ಕಂಪನಿ ಸಿಇಒ, ಟಿವಿ ವರದಿಗಾರ, ಬ್ಯಾಂಕ್ ನೌಕರ, ಸಿನಿಮಾ ನಿರ್ದೇಶಕ ಸಹಿತ ಹಲವು ವೇಷಗಳಲ್ಲಿ ನೀರಜ್ ಚೋಪ್ರಾ ಮಿಂಚಿದ್ದು, ನಟನೆಯಲ್ಲೂ ಅವರು ‘ಚಿನ್ನದ ಎಸೆತ’ವನ್ನೇ ಎಸೆದಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ಡ್ರಾವಿಡ್, ಜಾವಗಲ್ ಶ್ರೀನಾಥ್ ಹಾಗೂ ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವರು ಈ ಮೊದಲು ಇದೇ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಸಾಲಿಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿಕೊಂಡಿದ್ದಾರೆ.
360 Degree Marketing! @cred_club #ad pic.twitter.com/RmjWAXERxm
— Neeraj Chopra (@Neeraj_chopra1) September 19, 2021
ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ ಬೆನ್ನಲ್ಲೇ ನೀರಜ್ ಚೋಪ್ರಾ ಮನೆಮಾತಾಗಿದ್ದರು. ಇದರ ಜತೆಯಲ್ಲೇ ಅವರ ಬ್ರ್ಯಾಂಡ್ ಮೌಲ್ಯವೂ ಸಾಕಷ್ಟು ಹೆಚ್ಚಾಗಿದೆ. ಹಲವು ಕಾರ್ಪೋರೇಟ್ ಕಂಪನಿಗಳು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳಲು ಅವರ ಬೆನ್ನುಬಿದ್ದಿವೆ. ಇದರ ಜೊತೆಗೆ ಒಲಿಂಪಿಕ್ಸ್ ಚಿನ್ನದ ಸಾಧನೆಯ ಬಳಿಕ ಅವರ ಮೊದಲ ಜಾಹೀರಾತು ಬಿಡುಗಡೆಯಾಗಿದೆ.
ನೀರಜ್ ಚೋಪ್ರಾ ಚಿನ್ನದ ಹುಡುಗನಾಗಿ ಮಿಂಚಿದ ಬಳಿಕ ಭಾರತೀಯರು ಹೇಗೆ ಅವರ ಬಗೆಗೆ ಕ್ರೇಜ್ ಆಗಿದ್ದರು ಎಂಬುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದ್ದು, ನೀರಜ್ ಮೇಲೆ ಫಿದಾ ಆಗಿರುವ ಭಾರತದ ವಿವಿಧ ಕ್ಷೇತ್ರಗಳ ಜನರ ಪಾತ್ರಗಳಲ್ಲಿ ಅವರೇ ಕಾಣಿಸಿಕೊಂಡಿದ್ದಾರೆ. ಜಾವೆಲಿನ್ ಹಿಡಿದುಕೊಂಡು ಅವರು ಕ್ರಿಕೆಟ್ ಬ್ಯಾಟ್ ಹಿಡಿದಂತೆ ಬ್ಯಾಟಿಂಗ್ ಮಾಡಿರುವುದು ಕೂಡ ಜಾಹೀರಾತಿನಲ್ಲಿ ಗಮನಸೆಳೆದಿದೆ.
Each time u think that d #Cred adverts cannot outdo themselves they reinvent n hit it out of d park
Also @Neeraj_chopra1 can actually act n has d ability to laugh at himself while cocking a snook at d world
Brilliant
That’ll take him a lot further than any javelin he’s flung
— atul kasbekar (@atulkasbekar) September 20, 2021
ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಇದರೊಂದಿಗೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎನ್ನುವ ಗೌರವಕ್ಕೆ ನೀರಜ್ ಚೋಪ್ರಾ ಪಾತ್ರರಾಗಿದ್ದರು.
Bomb threats: ಇಂಗ್ಲೆಂಡ್ನಲ್ಲಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ
IPL 2021, KKR vs RCB: ಹೀನಾಯ ಪ್ರದರ್ಶನದ ಬಳಿಕ ಕೆಕೆಆರ್ ಸ್ಫೋಟಕ ಬ್ಯಾಟ್ಸ್ಮನ್ಗೆ ಕೊಹ್ಲಿ ಬ್ಯಾಟಿಂಗ್ ಟಿಪ್ಸ್
(Neeraj Chopra Acting Skills In latest Cred advertisement Take Internet By Storm)