Pro Kabaddi 2021: ಪ್ರತಿ ಪಂದ್ಯವೂ ರೋಚಕ: ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿದ ಗುಜರಾತ್ ಜೈಂಟ್ಸ್

| Updated By: Vinay Bhat

Updated on: Dec 24, 2021 | 7:16 AM

Gujarat Giants vs Pink Panthers: ಗುಜರಾತ್‌ ಪರ ಗಿರೀಶ್‌ ಮಾರುತಿ 7 ಟ್ಯಾಕಲ್‌ ಅಂಕಗಳ ಮೂಲಕ ಮಿಂಚಿದರು. ರೈಡರ್‌ ರಾಕೇಶ್‌ ನರ್ವಾಲ್‌ ಕೂಡ ಒಂದು ಬೋನಸ್‌ ಸೇರಿದಂತೆ 7 ಅಂಕ ಸಂಪಾದಿಸಿದರು. ಮತ್ತೋರ್ವ ರೈಡರ್‌ ರಾಕೇಶ್‌ ಸುಂಗ್ರೋಯ ಕೂಡ ಗಮನಾರ್ಹ ಪ್ರದರ್ಶನ ನೀಡಿ 6 ಅಂಕ ತಂದುಕೊಟ್ಟರು.

Pro Kabaddi 2021: ಪ್ರತಿ ಪಂದ್ಯವೂ ರೋಚಕ: ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿದ ಗುಜರಾತ್ ಜೈಂಟ್ಸ್
Gujarat Giants vs Pink Panthers
Follow us on

ಪ್ರೊ ಕಬಡ್ಡಿ ಲೀಗ್ (Pro Kabaddi 2021)​ ಎಂಟನೇ ಆವೃತ್ತಿಯ ಎರಡನೇ ದಿನವೂ ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ಗುರುವಾರದ ಮೊದಲ ಮ್ಯಾಚ್​ನಲ್ಲಿ ಪಿಂಕ್ ಪ್ಯಾಂಥರ್ಸ್ (Pink Panthers) ತಂಡ ಹಾಗೂ ಗುಜರಾತ್ ಜೈಂಟ್ಸ್ (Gujarat Giants) ತಂಡ ಮುಖಾಮುಖಿ ಆಯಿತು. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆದ್ದು ಬೀಗಿತು. ರೋಚಕವಾಗಿ ನಡದ ಈ ಸೆಣೆಸಾಟದಲ್ಲಿ 34-27 ಅಂತರದಿಂದ ಗುಜರಾತ್ ಜೈಂಟ್ಸ್ ಗೆಲುವು ಸಾಧಿಸಿತು. ಗಿರೀಶ್‌ ಮಾರುತಿ ಅವರ ಅಮೋಘ ಟ್ಯಾಕಲ್‌ ಪರಾಕ್ರಮದಿಂದ ಗುಜರಾತ್‌ ಜೈಂಟ್ಸ್‌ ಪ್ರೊ ಕಬಡ್ಡಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ.

ಗುಜರಾತ್‌ ಪರ ಗಿರೀಶ್‌ ಮಾರುತಿ 7 ಟ್ಯಾಕಲ್‌ ಅಂಕಗಳ ಮೂಲಕ ಮಿಂಚಿದರು. ರೈಡರ್‌ ರಾಕೇಶ್‌ ನರ್ವಾಲ್‌ ಕೂಡ ಒಂದು ಬೋನಸ್‌ ಸೇರಿದಂತೆ 7 ಅಂಕ ಸಂಪಾದಿಸಿದರು. ಮತ್ತೋರ್ವ ರೈಡರ್‌ ರಾಕೇಶ್‌ ಸುಂಗ್ರೋಯ ಕೂಡ ಗಮನಾರ್ಹ ಪ್ರದರ್ಶನ ನೀಡಿ 6 ಅಂಕ ತಂದುಕೊಟ್ಟರು. ಗಿರೀಶ್‌ ಮಾರುತಿ ಅವರಿಗೆ ಸರಿಸಮನಾಗಿ ಪರ್ವೇಶ್‌ ಭೈಂಸ್ವಾಲಾ ಕೂಡ ಟ್ಯಾಕಲ್‌ನಲ್ಲಿ ಮಿಂಚಿದರು. ಇವರಿಂದ 4 ಅಂಕ ಬಂತು. ಒಂದು ಬೋನಸ್‌ ಅಂಕವಾಗಿತ್ತು. ಅರ್ಧವಿರಾಮದ ವೇಳೆಗೆ ಗುಜರಾತ್ ತಂಡವು 19-17ರಿಂದ ಅಲ್ಪ ಮುನ್ನಡೆ ಸಾಧಿಸಿತ್ತು.

ವಿರಾಮದ ನಂತರದಲ್ಲಿ ಆಟ ಮತ್ತಷ್ಟು ರಂಗೇರಿತು. ಈ ಹಂತದಲ್ಲಿ ಗುಜರಾತ್ ತಂಡ ಎರಡು ಬಾರಿ ಎದುರಾಳಿಯ ಅಂಕಣವನ್ನು ಖಾಲಿ ಮಾಡಿತು. ರಕ್ಷಣಾತ್ಮಕ ತಂತ್ರಗಳಲ್ಲಿ ಮೇಲುಗೈ ಸಾಧಿಸಿತು. ದಾಳಿಯಲ್ಲಿಯೂ ಮುಂಚೂಣಿಯಲ್ಲಿತ್ತು. ಒಂದು ಅಥವಾ ಎರಡು ಪಾಯಿಂಟ್‌ಗಳ ಮುನ್ನಡೆ ಕಾಯ್ದುಕೊಳ್ಳುತ್ತ ಸಾಗಿದ ಗುಜರಾತ್ ತಂಡವು ಅಂತಿಮವಾಗಿ ಏಳು ಪಾಯಿಂಟ್‌ಗಳ ಅಂತರದ ಜಯಗಳಿಸುವಲ್ಲಿ ಯಶಸ್ವಿಯಾಯಿತು.

ಪ್ಯಾಂಥರ್ಸ್ ತಂಡದಲ್ಲಿ ದೀಪಕ್ ನಿವಾಸ್ ಹೂಡಾ ರೇಡಿಂಗ್‌ನಲ್ಲಿ ಮೂರು ಮತ್ತು ಒಂದು ಬೋನಸ್ ಪಾಯಿಂಟ್ ಗಳಿಸಿದರು. ಸಂದೀಪ್ ಧುಳ್ ಮೂರು ಟ್ಯಾಕಲ್ ಪಾಯಿಂಟ್ ಗಳಿಸಿದರು. ನಿತಿನ್ ರಾವಳ್ ಮತ್ತು ಅಮಿತ್ ಹೂಡಾ ತಲಾ ಎರರಡು ಪಾಯಿಂಟ್‌ಗಳ ಕಾಣಿಕೆ ನೀಡಿದರು. ಆದರೆ ಉಳಿದವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ.

ಇನ್ನು ನಿನ್ನೆ ನಡೆದ ಎರಡನೇ ಸೆಣೆಸಾಟದಲ್ಲಿ ದಬಾಂಗ್ ಡೆಲ್ಲಿ ಹಾಗೂ ಪುಣೆರಿ ಪಲ್ತಾನ್ ತಂಡಗಳು ಮುಖಾಮುಖಿ ಆಯಿಯು. ಈ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಪಲ್ತಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 41-30 ಅಂಕಗಳಿಂದ ದಬಾಂಗ್ ಡೆಲ್ಲಿ ತಂಡ ಎದುರಾಳಿಗೆ ಸೋಲುಣಿಸಿದೆ. ಈ ಸೆಣೆಸಾಟದಲ್ಲಿ ಎರಡು ತಂಡಗಳ ರೈಡರ್‌ಗಳು ಕೂಡ ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಡೆಲ್ಲಿ ತಂಡದ ನವೀನ್ ಕುಮಾರ್ 14 ರೈಡ್ ಅಂಕಗಳೊಂದಿಗೆ ಒಟ್ಟು 16 ಅಂಕಗಳನ್ನು ಗಳಿಸಿ ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.

IPL 2022: ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ನಾನು ಶಾಶ್ವತವಾಗಿ ಆಡಲು ಬಯಸುತ್ತೇನೆ; ಶುಭ್​ಮನ್ ಗಿಲ್

(PKL Gujarat Giants register a 34-27 victory over the Jaipur Pink Panthers and Dabang Delhi Patna Pirates register wins)