ಜಮೈಕಾಗೆ ನಾಲ್ಕು ದಿನದ ಭೇಟಿ ನಡೆಸಿರುವ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರಿಗೆ ಕಿಂಗ್ಸ್‌ಟನ್‌ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಜಮೈಕಾಕ್ಕೆ ಭಾರತೀಯ ಅಧ್ಯಕ್ಷರ ಮೊದಲ ಭೇಟಿ ಇದಾಗಿದೆ. ಪತ್ನಿ ಸವಿತಾ ಕೋವಿಂದ್, ಪುತ್ರಿ ಸ್ವಾತಿ ಕೋವಿಂದ್, ಕೇಂದ್ರ ಸಚಿವ ಪಂಕಜ್ ಚೌಧರಿ, ಲೋಕಸಭೆ ಸಂಸದೆ ರಮಾದೇವಿ, ಸತೀಶ್ ಕುಮಾರ್ ಗೌತಮ್ ಮತ್ತು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ರಾಷ್ಟ್ರಪತಿಗಳ ಪ್ರವಾಸದಲ್ಲಿದ್ದಾರೆ. ಈ ನಾಲ್ಕು ದಿನಗಳ ಜಮೈಕಾ ಭೇಟಿ ವೇಳೆ ರಾಮನಾಥ್ ಕೋವಿಂದ್ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೆಲ ಒಪ್ಪಂದಗಳಿಗೆ ಸಹಿ ಕೂಡ ಹಾಕಲಿದ್ದಾರೆ. ಪ್ರಮುಖವಾಗಿ ಈ ಎರಡು ದೇಶಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದವೊಂದು ಆಗುತ್ತಿದ್ದು, ಇದು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಜಮೈಕಾದ (Jamaica) ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳಿಗೆ ಭಾರತದ ಕಡೆಯಿಂದ ಕಿಟ್‌ಗಳ ಉಡುಗೊರೆ ನೀಡಿದ್ದಾರೆ.
ಉಡುಗೊರೆ ಸ್ವೀಕರಿಸಿದ ಬಳಿಕ ಮಾತನಾಡಿದ ಜಮೈಕಾ ಕ್ರಿಕೆಟ್ ಮುಖ್ಯಸ್ಥ ವಿಲ್ಫರ್ಡ್ ಬಿಲ್ಲಿ ಹೆವೆನ್, “ಇದು ವೈಯಕ್ತಿಕವಾಗಿ ನನಗೆ ಮತ್ತು ಜಮೈಕಾದ ಕ್ರಿಕೆಟ್ ಸಹೋದರರಿಗೆ ಹೆಮ್ಮೆಯ ಕ್ಷಣವಾಗಿದೆ. ಭಾರತ ನೀಡಿರುವ 100 ಕ್ರಿಕೆಟ್ ಕಿಟ್‌ಗಳ ಈ ಉಡುಗೊರೆಯಿಂದ ಜಮೈಕಾ ಕ್ರಿಕೆಟ್ ಅಸೋಸಿಯೇಷನ್ ಸಂತೋಷವಾಗಿದೆ,” ಎಂದು ಹೇಳಿದ್ದಾರೆ.
President Ram Nath Kovind presented a symbolic gift of cricket kits to Jamaica Cricket Association, as a mark of cricket cooperation between the two nations.
President of the Jamaica Cricket Association, Wilford Billy Heaven received the same. pic.twitter.com/xn0fI8gAGL
— ANI (@ANI) May 17, 2022
ವೆಸ್ಟ್ ಇಂಡೀಸ್ನಲ್ಲಿರುವ ಹೆಚ್ಚಿನವರು ಕ್ರಿಕೆಟ್ ಪ್ರೇಮಿಗಳಾಗಿದ್ದಾರೆ. ಅನೇಕ ಕ್ರಿಕೆಟ್ ದಿಗ್ಗಜರ ಹೆಸರಿನಲ್ಲಿ ಕೆರಿಬಿಯನ್ನರು ಕೂಡ ಇದ್ದಾರೆ. ಕ್ರಿಸ್ ಗೇಲ್, ಆಂಡ್ರೆ ರಸೆಲ್, ಕೀರೊನ್ ಪೊಲಾರ್ಡ್ರಂತಹ ಸ್ಫೋಟಕ ಆಟಗಾರರು ಇದೇ ದೇಶದವರಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಟವಾಡಿದ್ದಾರೆ.
ರಾಷ್ಟ್ರಪತಿಗೆ ಜಮೈಕಾದಲ್ಲಿ ಭವ್ಯ ಸ್ವಾಗತ:
ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಿಂಗ್ಸ್‌ಟನ್‌ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಇಲ್ಲಿಯ ನಾರ್ಮನ್ ಮ್ಯಾನ್ಲೀ ಇಂಟರ್ನ್ಯಾಷನಲ್ ಏರ್‌ಪೊರ್ಟ್‌ನಲ್ಲಿ ಕೋವಿಡ್ ಸ್ವಾಗತಕ್ಕೆ ಭಾರತೀಯ ಮೂಲದ ಸಮುದಾಯದವರು ಮತ್ತು ಜಮೈಕಾದ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಕೋವಿಂದ್ ಅವರಿಗೆ ಗೌರವ ರಕ್ಷೆ (ಗಾರ್ಡ್ ಆಫ್ ಆನರ್) ಹಾಗೂ 21 ಗನ್ ಸಲ್ಯೂಟ್ ವಂದನೆ ನೀಡಲಾಯಿತು. ಜಮೈಕಾದ ರಕ್ಷಣಾ ಪಡೆಗಳ ಮುಖ್ಯಸ್ಥರು (ಸಿಡಿಎಸ್) ರಾಷ್ಟ್ರಪತಿಗಳನ್ನು ಬರಮಾಡಿಕೊಂಡು ಕರೆದೊಯ್ದರು. ಈ ಸಂದರ್ಭದಲ್ಲಿ ಜಮೈಕಾಗೆ ಭಾರತೀಯ ರಾಯಭಾರಿಯಾಗಿರುವ ಮಸಕುಯ್ ರುಂಗ್‌ಸುಂಗ್ ಮತ್ತವರ ಪತ್ನಿ ಕೂಡ ಅಲ್ಲಿಗೆ ಬಂದು ಕೋವಿಂದ್‌ರನ್ನು ಭೇಟಿ ಮಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ನಾಲ್ಕು ದಿನಗಳ ಜಮೈಕಾ ಭೇಟಿ ವೇಳೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೆಲ ಒಪ್ಪಂದಗಳಿಗೆ ಸಹಿ ಕೂಡ ಹಾಕಲಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.