PKL Final: ಪ್ರೊ ಕಬಡ್ಡಿ: ಪುಣೇರಿಗೆ ಸೋಲುಣಿಸಿ ಎರಡನೇ ಬಾರಿ ಚಾಂಪಿಯನ್ ಆದ ಜೈಪುರ ಪಿಂಕ್ ಪ್ಯಾಂಥರ್ಸ್

| Updated By: Vinay Bhat

Updated on: Dec 18, 2022 | 9:45 AM

Jaipur vs Puneri: ಮುಂಬೈನ ಎನ್‌ಎಸ್‌ಸಿಐ ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜೈಪುರ ತಂಡವು 33-29 ಅಂಕಗಳ ಅಂತರದಿಂದ ಪುಣೇರಿ ಪಲ್ಟನ್ ತಂಡಕ್ಕೆ ಸೋಲುಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.

PKL Final: ಪ್ರೊ ಕಬಡ್ಡಿ: ಪುಣೇರಿಗೆ ಸೋಲುಣಿಸಿ ಎರಡನೇ ಬಾರಿ ಚಾಂಪಿಯನ್ ಆದ ಜೈಪುರ ಪಿಂಕ್ ಪ್ಯಾಂಥರ್ಸ್
Jaipur PKL Final
Follow us on

ಪ್ರೊ ಕಬಡ್ಡಿ (Pro Kabaddi) ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ 9ನೇ ಆವೃತ್ತಿ ಟ್ರೋಫಿ ಗೆದ್ದುಕೊಂಡಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಜೈಪುರ ತಂಡವು 33-29 ಅಂಕಗಳ ಅಂತರದಿಂದ ಪುಣೇರಿ ಪಲ್ಟನ್ (Jaipur vs Puneri) ತಂಡಕ್ಕೆ ಸೋಲುಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ಮುಂಬೈನ ಎನ್‌ಎಸ್‌ಸಿಐ ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ರೋಚಕ ಕಾದಾಟ ನಡೆಸಿದವು. ಆದರೆ ಅಂತಿಮವಾಗಿ ಸುನಿಲ್ ಕುಮಾರ್ (Sunil Kumar) ನೇತೃತ್ವದ ಜೈಪುರ ತಂಡ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಜೈಪುರ ತಂಡಕ್ಕೆ ಇದು ಎರಡನೇ ಪ್ರಶಸ್ತಿಯಾಗಿದೆ. 2014ರಲ್ಲಿ ನಡೆದ ಟೂರ್ನಿಯ ಮೊದಲ ಆವೃತ್ತಿಯಲ್ಲಿ ತಂಡವು ಚಾಂಪಿಯನ್ ಆಗಿತ್ತು. ಈ ಬಾರಿಯ ಟೂರ್ನಿಯ ಆರಂಭಿಕ ಹಂತದಂದಲೂ ಜೈಪುರ ಪಿಂಕ್ ಪ್ಯಾಂಥರ್ಸ್ ಅದ್ಭುತ ಆಟವನ್ನು ಪ್ರದರ್ಶಿಸುತ್ತಲೇ ಬಂದಿತ್ತು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂತು. ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದ ಪ್ಯಾಂಥರ್ಸ್ ಸೆಮಿಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿತ್ತು. ಈ ಮೂಲಕ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು.

ಇದನ್ನೂ ಓದಿ
INDW vs AUSW: ಹರ್ಮನ್, ರಿಚ್ಚಾ ಹೋರಾಟ ವ್ಯರ್ಥ: ರೋಚಕ ಪಂದ್ಯ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯಾ
ARG vs FRA FIFA Final Live Streaming: ಇಂದು ಅರ್ಜೆಂಟೀನಾ vs ಫ್ರಾನ್ಸ್ ಫಿಫಾ ವಿಶ್ವಕಪ್ ಫೈನಲ್: ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?
FIFA World cup 2022: ಮೊರಾಕ್ಕೊ ವಿರುದ್ಧ ಗೆದ್ದು 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಕ್ರೋವೇಶಿಯಾಗೆ 223 ಕೋಟಿ ರೂ. ಬಹುಮಾನ!
ಬಿಸಿಸಿಐ ವಿರುದ್ಧ ಗುಡುಗಿದ್ದ ರಮೀಜ್ ರಾಜಾಗೆ ಪಿಸಿಬಿ ಮುಖ್ಯಸ್ಥ ಸ್ಥಾನದಿಂದ ಗೇಟ್​ಪಾಸ್..!

ಬೆಂಗಳೂರಿನಲ್ಲಿ ಬಾಂಗ್ಲಾ ತಂಡವನ್ನು ಮಣಿಸಿ ಹ್ಯಾಟ್ರಿಕ್ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ..!

 

ಫೈನಲ್ ಕದನದ ಫಸ್ಟ್ ಹಾಫ್‌ನಲ್ಲಿ ಜೈಪುರ ಹಾಗೂ ಪುಣೇರಿ ಸಮಬಲದ ಹೋರಾಟ ನೀಡುತ್ತಲೇ ಸಾಗಿತು. ರೈಡ್ಸ್ ಪಾಯಿಂಟ್ಸ್‌ನಲ್ಲಿ ಜೈಪುರ ಮುನ್ನಡೆ ಸಾಧಿಸಿದರೆ, ಟ್ಯಾಕಲ್‌ನಲ್ಲಿ ಪುಣೇರಿ ಬಿಗಿ ಹಿಡಿತ ಸಾಧಿಸಿತ್ತು. ಆದರೆ ಮೊದಲಾರ್ಧದ ಅಂತಿಮ ಹಂತದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 14-12 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಈ ಮೂಲಕ 2 ಅಂಕಗಳ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ತೀವ್ರ ಮುಖಾಮುಖಿಯಾದವು. ಪುಣೇರಿ ಪಲ್ಟನ್ ಆಲ್​ ಔಟಾದ ನಂತರ ಜೈಪುರ ಪಿಂಕ್ ಪ್ಯಾಂಥರ್ಸ್ ಎರಡು ಅಂಕ ಗಳಿಸಿತು. ಅದೇ ಲಯದಲ್ಲಿ ಮುಂದೆ ಸಾಗಿದ ಜೈಪುರ 19-17ರಿಂದ ಮುನ್ನಡೆ ಗಳಿಸಿ ಜಯ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು.

ಪುಣೇರಿ ತಂಡವು ಇದೇ ಮೊದಲ ಬಾರಿಗೆ ಫೈನಲ್ ತಲುಪಿತ್ತು. ಆದರೆ ಟ್ರೋಫಿ ಜಯದ ಆಸೆ ಈಡೇರಲಿಲ್ಲ. ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಅರ್ಜುನ್ ದೇಶ್ವಾಲ್ ಜೈಪುರ ತಂಡದ ಯಶಸ್ಸಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ಈ ಆವೃತ್ತಿಯಲ್ಲಿ 290 ರೈಡ್ ಅಂಕಗಳನ್ನು ಪಡೆದುಕೊಂಡ ಅವರು ರೈಡಿಂಗ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:45 am, Sun, 18 December 22